PM Modi Road Show In Kalaburagi Live: ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

| Updated By: Rakesh Nayak Manchi

Updated on: May 04, 2023 | 7:00 AM

Karnataka Assembly Polls Breaking News Live Updates: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ. ರಾಜ್ಯ ರಾಜಕೀಯದಲ್ಲಿ ಅನೇಕ ವಿದ್ಯಾಮಾನಗಳು ನಡೆಯುತ್ತಿದ್ದು, ಈ ಕುರಿತಾದ ಕ್ಷಣ ಕ್ಷಣದ ಮಾಹಿತಿ ಟಿವಿ9 ಡಿಜಿಟಲ್​​ನಲ್ಲಿ...

PM Modi Road Show In Kalaburagi Live: ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ
ಕಲಬುರಗಿಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

LIVE NEWS & UPDATES

  • 04 May 2023 07:00 AM (IST)

    Karnataka Election 2023 Live: ಪ್ರಿಯಾಂಕ್ ಖರ್ಗೆ, ಬಸನಗೌಡ ಪಾಟೀಲ್‌ ಯತ್ನಾಳ್​ಗೆ ನೋಟಿಸ್

    ಪ್ರಧಾನಿ ಮೋದಿ ವಿರುದ್ಧ ನಾಲಾಯಕ್ ಪದ ಬಳಕೆ ಹಿನ್ನೆಲೆ ಪ್ರಿಯಾಂಕ್ ಖರ್ಗೆಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ಇಂದು ಸಂಜೆ 5ರೊಳಗೆ ನೋಟಿಸ್‌ಗೆ ಉತ್ತರಿಸುವಂತೆ ಸೂಚನೆ ನೀಡಲಾಗಿದೆ. ಇನ್ನು ಮತ್ತೊಂದೆಡೆ ಸೋನಿಯಾ ಗಾಂಧಿ ವಿರುದ್ಧ ವಿಷಕನ್ಯೆ ಪದ ಬಳಕೆ ಹಿನ್ನೆಲೆ ಶಾಸಕ ಯತ್ನಾಳ್‌ಗೆ ಚುನಾವಣಾ ಆಯೋಗದಿಂದ ನೋಟಿಸ್ ನೀಡಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆ ಹಿನ್ನೆಲೆ ನೋಟಿಸ್ ಜಾರಿಯಾಗಿದ್ದು ಇಂದು ಸಂಜೆ 5 ರೊಳಗೆ ನೋಟಿಸ್‌ಗೆ ಉತ್ತರಿಸಲು ಸೂಚಿಸಲಾಗಿದೆ.

  • 03 May 2023 06:06 PM (IST)

    PM Modi Speech Live: ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಮುಂದೂಡಿಕೆ

    ಬೆಂಗಳೂರು: ನಾಳೆ ಕನಕಪುರ ಕ್ಷೇತ್ರದಲ್ಲಿ ನಿಗದಿಯಾಗಿದ್ದ ಕೇಂದ್ರ ಸಚಿವ ಅಮಿತ್ ಶಾ ಚುನಾವಣಾ ಪ್ರಚಾರ ಮುಂದೂಡಿಕೆ ಆಗಿದೆ. ಮೇ 8ರಂದು ಕನಕಪುರದಲ್ಲಿ ಅಮಿತ್ ಶಾ ಪ್ರಚಾರ ಸಾಧ್ಯತೆ ಇದೆ. ನಾಳೆ ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ ಪರ ಪ್ರಚಾರ ನಡೆಸಬೇಕಿತ್ತು.


  • 02 May 2023 09:24 PM (IST)

    Karnataka Election 2023 Live: ಈ ಬಾಲಕನಿಗೆ ಮೋದಿಯ ಕಾರ್ಯದರ್ಶಿಯಾಗುವ ಆಸೆಯಂತೆ

    ಕಲಬುರಗಿ: ನಗರದ ಡಿ.ಆರ್ ಮೈದಾನದಲ್ಲಿ ಇಂದು ಪ್ರಧಾನಿ ಮೋದಿ ಅವರು ಪೊಲೀಸ್ ಸಿಬ್ಬಂದಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಮಕ್ಕಳಿಗೆ ಮುಂದೆ ನೀವು ಏನಾಗಬಯಸುತ್ತೀರಿ ಅಂತ ಪ್ರಶ್ನಿಸಿದರು.  ಈ ವೇಳೆ ಬಾಲಕನೊಬ್ಬ, ನಿಮ್ಮ ಕಾರ್ಯದರ್ಶಿ ಆಗುತ್ತೇನೆ ಅಂತ ಹೇಳಿದ್ದಾನೆ. ಆಗ ಯಾಕೆ, ಪ್ರಧಾನಿ ಆಗಲು ಬಯಸಲ್ವಾ ಅಂತ ಮೋದಿ ಪಶ್ನಿಸಿದ್ದಾರೆ. ಈ ವೇಳೆ ಮಕ್ಕಳು ನಕ್ಕರು. ಪ್ರಧಾನಿ ಮೋದಿ ಜೊತೆ ಮಾತನಾಡಿ ಖುಷಿ ಪಟ್ಟ ಮಕ್ಕಳು.

  • 02 May 2023 09:14 PM (IST)

    Karnataka Election 2023 Live: ಕಾಂಗ್ರೆಸ್ ನಡೆ ಖಂಡಿಸಿ ಬಜರಂಗದಳ ಕಾರ್ಯಕರ್ತರಿಂದ ಪ್ರತಿಭಟನೆ

    ಮಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರಕ್ಕೆ ಆಕ್ರೋಶಗೊಂಡಿರುವ ಕಾರ್ಯಕರ್ತರು, ಕಾಂಗ್ರೆಸ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆ ಬಳಿ ಇರುವ ಜಿಲ್ಲಾ ಕಾಂಗ್ರೆಸ್ ಕಚೇರಿ ಪಕ್ಕದಲ್ಲೇ ‘ಕೈ’ ಪ್ರಣಾಳಿಕೆ ಪ್ರತಿಗೆ ಬೆಂಕಿ ಹಚ್ಚಿ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿಯಿತು. ಪ್ರತಿಭಟನೆಯಲ್ಲಿ 50 ಕ್ಕೂ ಹೆಚ್ಚು ಭಜರಂಗದಳ ಕಾರ್ಯಕರ್ತರು ಭಾಗಿಯಾದರು.

  • 02 May 2023 08:50 PM (IST)

    Karnataka Election 2023 Live: ಕಾಂಗ್ರೆಸ್​ಗೆ ತಾಕತ್ ಇದ್ರೆ ಬಜರಂಗದಳ ನಿಷೇಧ ಮಾಡಲಿ: ಕಟೀಲ್

    ಮಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರವಾಗಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕಾಂಗ್ರೆಸ್​ಗೆ ತಾಕತ್ ಇದ್ದರೆ ಬಜರಂಗದಳ ನಿಷೇಧ ಮಾಡಲಿ ಎಂದರು. ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮುತ್ತಾತ ನೆಹರೂ, ಅಜ್ಜಿ ಇಂದಿರಾ ಗಾಂಧಿಯವರು ಆರ್​ಎಸ್​ಎಸ್​ ನಿಷೇಧ ಮಾಡಲು ಹೊರಟಿದ್ದರು. ಆಗ ಇಡೀ ದೇಶದಲ್ಲಿ ಆರ್​ಎಸ್​ಎಸ್​ ಹಾಗೂ ಹಿಂದೂ ಸಂಘಟನೆಗಳು ದೇಶಾದ್ಯಂತ ಬಲವಾಗಿ ಬೆಳೆಯಲು ಕಾರಣವಾಯಿತು. ಜನರ ಭಾವನೆಗಳನ್ನು ಪ್ರಶ್ನೆ ಮಾಡುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದರು.


  • 02 May 2023 06:37 PM (IST)

    Karnataka Election 2023 Live: ಮೋದಿಗೆ ಮೋದಿ ಪ್ರತಿಮೆ ನೀಡಲು ಕಾಯುತ್ತಿರುವ ಕಲಾವಿದ

    ಕಲಬುರಗಿ: ಶಿಲ್ಪ ಕಲಾವಿದ ವಿಶ್ವೇಶ್ವರಯ್ಯ ಎಂಬವರು ಪ್ರಧಾನಿ ಮೋದಿ ಅವರಿಗೆ ಮೋದಿ ಪ್ರತಿಮೆ ನೀಡಲು ಕಾದುನಿಂತಿದ್ದಾರೆ. ಬಂಬು ಬಜಾರ್ ಬಳಿ ಪ್ರಧಾನಿ ಮೋದಿ ಪ್ರತಿಮೆ ಹಿಡಿದು ನಿಂತಿದ್ದು, ಅವಕಾಶ ಸಿಕ್ಕರೆ ಮೋದಿ ಅವರಿಗೆ ಪ್ರತಿಮೆ ನೀಡಲು ಮುಂದಾಗಿದ್ದಾರೆ. ಎರಡು ಅಡಿ ಎತ್ತರದ ಪ್ರತಿಮೆ ನೀಡುವ ಆಸೆ ವ್ಯಕ್ತಪಡಿಸಿದ್ದಾರೆ.

  • 02 May 2023 06:23 PM (IST)

    Karnataka Election 2023 Live: ಪ್ರಧಾನಿ ಮೋದಿ ನೋಡಲು ಅಕ್ಕಮಹಾದೇವಿ ವೇಷಭೂಷಣದಲ್ಲಿ ಬಂದ ಬಾಲಕಿ

    ಕಲಬುರಗಿ ನಗರದಲ್ಲಿ ಪ್ರಧಾನಿ ಮೋದಿ ರೋಡ್ ಶೋ ನಡೆಸುತ್ತಿರುವ ಹಿನ್ನೆಲೆ ಜಗಮೆಚ್ಚಿದ ನಾಯಕನನ್ನು ನೋಡಲು ಪುಟಾಣಿ ಮಕ್ಕಳು ಕೂಡ ಕಾದುಕುಳಿತಿದ್ದಾರೆ. ಪ್ರಧಾನಿ ಮೋದಿ ಅವರನ್ನು ಹತ್ತಿರದಿಂದ ನೋಡಬಹುದು ಅಂತ ಅಕ್ಕಮಹಾದೇವಿ ವೇಷಭೂಷಣದಲ್ಲಿ ಕಾಕಡೆ ಚೌಕ್ ನಿನಾಸಿ ಹತ್ತು ವರ್ಷದ ಬಾಲಕಿ ಸಹನಾ ಆಗಮಿಸಿದ್ದಾಳೆ.

  • 02 May 2023 06:15 PM (IST)

    Karnataka Election 2023 Live: ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಆರಂಭ

    ಕಲಬುರಗಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಆರಂಭಗೊಂಡಿದೆ. ನಗರದ ಕೆಎಂಎಫ್, ಹುಮ್ನಾಬಾದ್‌ ರಿಂಗ್ ರಸ್ತೆ, ನಗರೇಶ್ವರ ಹೈಸ್ಕೂಲ್, ಹುಮ್ನಾಬಾದ್ ಬೇಸ್, ಕಿರಾಣಾ ಬಜಾರ್, ಬಾಂಡೇ ಬಜಾರ್, ಸೂಪರ್ ಮಾರ್ಕೆಟ್‌, ಅನ್ನಪೂರ್ಣ ಕ್ರಾಸ್, ಜಗತ್ ವೃತ್ತ, ವಲ್ಲಭಭಾಯಿ ಪಟೇಲ್ ವೃತ್ತದವರೆಗೆ ರೋಡ್ ಶೋ ನಡೆಯಲಿದೆ. ಸುಮಾರು 5 ಕಿ.ಮೀ. ರೋಡ್ ಶೋ ನಡೆಯಲಿದೆ.

  • 02 May 2023 06:08 PM (IST)

    Karnataka Election 2023 Live: ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ: ಅಣ್ಣಾಮಲೈ

    ಬೆಂಗಳೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಬಜರಂಗದಳ ನಿಷೇಧಿಸುವ ವಿಚಾರವಾಗಿ ಮಾತನಾಡಿದ ರಾಜ್ಯ BJP ಚುನಾವಣಾ ಸಹ ಉಸ್ತುವಾರಿ ಅಣ್ಣಾಮಲೈ, ಯಾವುದೇ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್​​ ಅಧಿಕಾರಕ್ಕೆ ಬರಲ್ಲ. ಆ ಪಕ್ಷದವರು ಮೊದಲು ನಿಷೇಧಿತ ಪಿಎಫ್​ಐ ಸಂಘಟನೆಯ ಹಿನ್ನೆಲೆ ತಿಳಿದುಕೊಳ್ಳಲಿ ಎಂದರು. ನಿಷೇಧಿತ ಪಿಎಫ್​ಐ ಸಂಘಟನೆ ಮೇಲೆ ಹಲವು ಪ್ರಕರಣಗಳು ಇವೆ. ಕರ್ನಾಟಕ, ಕೇರಳದಲ್ಲಿ ಪಿಎಫ್​ಐ ವಿರುದ್ಧ ಹಲವು ಹತ್ಯೆ ಕೇಸ್​ಗಳಿವೆ. ಪಿಎಫ್​ಐ ಮೇಲೆ UAPA ಅಡಿ ಕೇಸ್​ ದಾಖಲಿಸಿ NIA ತನಿಖೆ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಪಿಎಫ್​ಐ ಸಂಘಟನೆ ನಿಷೇಧಿಸಲಾಗಿದೆ. ಇಂತಹ ಸಂಘಟನೆ ಜೊತೆ ಬಜರಂಗದಳ ಹೋಲಿಕೆ ಮಾಡಿರುವುದು ಖಂಡನೀಯ. ಕಾಂಗ್ರೆಸ್ 30-40 ಸ್ಥಾನ ಗೆಲ್ಲುವ ವಿಶ್ವಾಸ ಇತ್ತು, ಈಗ ಅದೂ ಬರಲ್ಲ ಎಂದರು.

  • 02 May 2023 05:59 PM (IST)

    Karnataka Election 2023 Live: ಬಾಗಲಕೋಟೆ ಕ್ಷೇತ್ರದಲ್ಲಿ ಕಿಚ್ಚ ಸುದೀಪ್ ಅಬ್ಬರದ ಪ್ರಚಾರ

    ಬಾಗಲಕೋಟೆ: ಕ್ಷೇತ್ರದಲ್ಲಿ ನಟ ಕಿಚ್ಚ ಸುದೀಪ್ ಅಬ್ಬರದ ರೋಡ್ ಶೋ ನಡೆಸಿದರು. ಬಾಗಲಕೋಟೆ ಬಿಜೆಪಿ ಅಭ್ಯರ್ಥಿ, ಶಾಸಕ ವೀರಣ್ಣ ಚರಂತಿಮಠ ಪರವಾಗಿ ಮತಬೇಟೆ ನಡೆಸಿದರು. ಈ ವೇಳೆ ನೆಚ್ಚಿನ ನಟನನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನರು ಹರಿದು ಬಂದಿದ್ದರು. ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ರೋಡ್ ಶೋ ವೇಳೆ ಕಿಚ್ಚ ಘೋಷಣೆಗಳು ಮೊಳಗಿದವು. ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರಿಗೆ ಮತ ನೀಡುವಂತೆ ಸುದೀಪ್ ಮನವಿ ಮಾಡಿದರು.

  • 02 May 2023 05:34 PM (IST)

    Karnataka Election 2023 Live: ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ, ಭಜರಂಗದಳ ಬ್ಯಾನ್ ಆಗಲ್ಲ: ಸಿಎಂ ಬೊಮ್ಮಾಯಿ

    ಗದಗ: ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ, ಹೀಗಾಗಿ ಭಜರಂಗದಳ ಬ್ಯಾನ್ ಮಾಡುವ ಪ್ರಶ್ನೆಯೇ ಇಲ್ಲಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಶಿರಹಟ್ಟಿ ಪಟ್ಟಣದಲ್ಲಿ ಮಾತನಾಡಿದ ಅವರು, ಬ್ಯಾನ್ ಮಾಡುವ ಅಧಿಕಾರ ರಾಜ್ಯ ಸರ್ಕಾರಕ್ಕೆ ಇಲ್ಲ, ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ. ಸಾಮಾಜಿಕವಾಗಿ, ಧಾರ್ಮಿಕವಾಗಿ ಕೆಲಸ ಮಾಡುವ ಸಂಘ ಭಜರಂಗದಳವಾಗಿದೆ. ಪಿಎಫ್ಐ ಈ‌ ದೇಶದ ವಿರೋಧಿ ಕೆಲಸ ಮಾಡಿದೆ, ಭಯೋತ್ಪಾದನೆ ‌ಮಾಡಿದೆ. ಸಾಕಷ್ಟು ಕೇಸ್​ಗಳು ಅವರ ಮೇಲೆ ಇದೆ, ಪುರಾವೆಗಳು ಇವೆ. ಅದಕ್ಕೆ ಭಜರಂಗದಳವನ್ನು ಕಾಂಗ್ರೆಸ್​ನವರು ಹೊಲಿಸುವುದು ಸರಿಯಲ್ಲ ಎಂದರು. ಕುಡಿಯುವ ನೀರು ಕೋಡುತ್ತೇವೆ ಅಂತಾ ಕಾಂಗ್ರೆಸ್ ಹೇಳಿದೆ, ನಾವು ನೀರು ಕೊಟ್ಟಿದ್ದೇವೆ. ಹೆಣ್ಣು ಮಕ್ಕಳಿಗೆ ಪಾಸ್ ಕೊಡುತ್ತೇವೆ ಅಂತಾರೆ, ನಾವು ಆಗಲೇ ಕೊಟ್ಟಿದ್ದೇವೆ. 75 ಯೂನಿಟ್ ವಿದ್ಯುತ್ ನೀಡಿದ್ದೇವೆ, ಎಲ್ಲಾ ನಿಗಮಗಳನ್ನು ಮಾಡಿದ್ದೇವೆ ಎಂದರು.

  • 02 May 2023 04:55 PM (IST)

    Karnataka Election 2023 Live: ಕಾಂಗ್ರೆಸ್ ಪ್ರಣಾಳಿಕೆ ಮುಂದಿಟ್ಟು ಸಿದ್ದರಾಮಯ್ಯಗೆ ತೇಜಸ್ವಿ ಸೂರ್ಯ ಪ್ರಶ್ನೆ

    ಬೆಂಗಳೂರು: ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಮಾತೃಭಾಷೆ ಅಕಾ ಕನ್ನಡದಲ್ಲಿ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣವನ್ನು ಪರಿಚಯಿಸುವ ಭರವಸೆ ನೀಡುವ ಹೊಸ NEP 2020 ಅನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ; ಹಿಂದಿನ ಇಂದಿರಾ ಮತ್ತು ರಾಜೀವ್ ಗಾಂಧಿಯವರ NEPಗಳು 3 ಭಾಷಾ ನೀತಿಯ ಮೂಲಕ ಹಿಂದಿಯೇತರ ರಾಜ್ಯಗಳ ಮೇಲೆ ಹಿಂದಿಯನ್ನು ಹೇರಿದ್ದರು; ಹಿಂದಿಯನ್ನು ಕನ್ನಡಿಗರ ಮೇಲೆ ಹೇರಲು ಕಾಂಗ್ರೆಸ್ ಮುಂದಾಗಿದೆ, ಕನ್ನಡದ ಸ್ವಯಂ ಘೋಷಿತ ಚಾಂಪಿಯನ್ ಸಿದ್ದರಾಮಯ್ಯ ದಯವಿಟ್ಟು ಈ ಎರಡು ಮಾನದಂಡಗಳನ್ನು ವಿವರಿಸಿ ಎಂದು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ.

  • 02 May 2023 04:51 PM (IST)

    Karnataka Election 2023 Live: ”ನಾನೊಬ್ಬ ಬಜರಂಗಿ” ಬಜರಂಗದಳ ಬ್ಯಾನ್​ ಬಗ್ಗೆ ಭರವಸೆ ನೀಡಿದ ಕಾಂಗ್ರೆಸ್ ವಿರುದ್ಧ ಬಿಜೆಪಿ ಪ್ರೊಫೈಲ್ ಪಿಕ್ಚರ್ ಅಭಿಯಾನ

    ಬೆಂಗಳೂರು: ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ವಿರುದ್ಧ ಕ್ರಮದ ಕುರಿತು ಘೋಷಣೆ ಹಿನ್ನೆಲೆ ಬಿಜೆಪಿ ಖಂಡಿಸುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪ್ರೊಫೈಲ್ ಪಿಕ್ಚರ್ ಬದಲಿಸುವ ಮೂಲಕ ವಿರೋಧ ವ್ಯಕ್ತಪಡಿಸುತ್ತಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಡಾ. ಅಶ್ವಥ್ ನಾರಾಯಣ, ಸಂಸದ ಪ್ರತಾಪಸಿಂಹ, ಬಿಜೆಪಿ ಯುವ ಮೋರ್ಛಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಇನ್ನಿತರರು ಫೇಸ್ ಬುಕ್ ಪ್ರೊಫೈಲ್ ಪಿಕ್ಚರ್ ಬದಲಾವಣೆ ಮಾಡಿ ನಾನೊಬ್ಬ ಬಜರಂಗಿ ಎಂಬ ಪ್ರೊಫೈಲ್ ಪಿಕ್ಚರ್ ಅಳವಡಿಸಿಕೊಂಡಿದ್ದಾರೆ. ಬಿಎಲ್ ಸಂತೋಷ್ ಕೂಡ ಪೋಸ್ಟ್ ಮಾಡಿದ್ದಾರೆ.

  • 02 May 2023 04:18 PM (IST)

    Karnataka Election 2023 Live: ಮನೆಮನೆಗೆ ಹೋಗುವಂತೆ ಜನರಿಗೆ ಮನವಿ ಮಾಡಿದ ಮೋದಿ

    ರಾಯಚೂರು: ನಾನು ಹೇಳುವ ಒಂದು ಕೆಲಸ ಮಾಡುತ್ತೀರಾ ಎಂದು ರಾಯಚೂರು ಜನರಿಗೆ ಪ್ರಧಾನಿ ಮೋದಿ ಮನವಿ ಮಾಡಿದರು. ಬಿಜೆಪಿ ಸಮಾವೇಶದಲ್ಲಿ ಹಲವು ಬಾರಿ ಇದೇ ರೀತಿ ಪ್ರಶ್ನಿಸಿ, ಪ್ರತಿಯೊಬ್ಬರು ಮನೆಮನೆಗೆ ತೆರಳಿ ರಾಯಚೂರಿಗೆ ಮೋದಿ ಬಂದಿದ್ದರು, ಅವರು ನಿಮ್ಮ ಆಶೀರ್ವಾದ ಕೇಳಿದರು ಎಂದು ಹೇಳಿದ್ದಾಗಿ ಹೇಳುವಂತೆ ಮನವಿ ಮಾಡಿದರು.

  • 02 May 2023 04:14 PM (IST)

    Karnataka Election 2023 Live: ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರ ಅಹಂಕಾರ ತುಂಬಿ ತುಳುಕುತ್ತಿದೆ: ಮೋದಿ ವಾಗ್ದಾಳಿ

    ರಾಯಚೂರು: ರಾಜ್ಯದಲ್ಲಿ ಕಾಂಗ್ರೆಸ್​ ನಾಯಕರ ಅಹಂಕಾರ ತುಂಬಿ ತುಳುಕುತ್ತಿದೆ, ಕಾಂಗ್ರೆಸ್​ನವರು ಅಶ್ಲೀಲ ಪದಗಳ ಮೂಲಕ ನಿಂದಿಸುತ್ತಿದ್ದಾರೆ. ಈ ಮೂಲಕ ಕರ್ನಾಟಕದ ಗೌರವವನ್ನು ಹಾಳು ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಧಾನಿ ಮೋದಿ ಆಕ್ರೋಶ ಹೊರಹಾಕಿದರು. ಕಾಂಗ್ರೆಸ್​ ಹೈಕಮಾಂಡ್ ನಾಯಕರನ್ನು ಸಂತಸಪಡಿಸಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಮೋದಿಗೆ ವಿಷಸರ್ಪ ಎಂದು ಹೇಳುತ್ತಾರೆ, ಎಐಸಿಸಿ ಖರ್ಗೆ ಪುತ್ರ ಕೂಡ ನನಗೆ ನಾಲಾಯಕ್ ಎಂದಿದ್ದಾರೆ. ದೊಡ್ಡ ಪರಂಪರೆ ಹೊಂದಿದ ಕರ್ನಾಟಕದ ಗೌರವ ಹಾಳು ಮಾಡ್ತಿದ್ದಾರೆ. ನಾನು ಅವರ ಬೈಗುಳಗಳಿಗೆ ಯಾವುದೇ ಉತ್ತರ ನೀಡುವುದಿಲ್ಲ, ಬರುವ ಚುನಾವಣೆಯಲ್ಲಿ ಕರ್ನಾಟಕದ ಜನರೇ ಉತ್ತರ ನೀಡುತ್ತಾರೆ ಎಂದು ಟೀಕಿಸಿದರು.

  • 02 May 2023 04:11 PM (IST)

    Karnataka Election 2023 Live: ಭಾರತೀಯರ ಸುರಕ್ಷತೆಗೆ ಹೆಚ್ಚು ಆದ್ಯತೆ ನೀಡಿದ್ದೇವೆ: ಮೋದಿ

    ರಾಯಚೂರು: ಬಿಜೆಪಿ ಸರ್ಕಾರವು ಭಾರತೀಯರ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.  ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ಸುರಕ್ಷಿತವಾಗಿ ತಂದಿದ್ದೇವೆ. ಸಂಕಷ್ಟದಲ್ಲಿ ಸಿಲುಕಿದ್ದ ಪ್ರತಿ ಭಾರತೀಯರನ್ನು ಬಿಜೆಪಿ ಕರೆತಂದಿದೆ. ಸಾವಿರಾರು ಕೋಟಿ ಖರ್ಚು ಮಾಡಿ ಉಚಿತ ವ್ಯಾಕ್ಸಿನ್ ನೀಡಿದ್ದೇವೆ ಎಂದರು.

  • 02 May 2023 04:08 PM (IST)

    Karnataka Election 2023 Live: ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್​ನಿಂದ ರೈತರಿಗೆ ಮೋಸ: ಮೋದಿ

    ರಾಯಚೂರು:  ಸಾಲಮನ್ನಾ ಮಾಡುವುದಾಗಿ ಕಾಂಗ್ರೆಸ್​ನಿಂದ ರೈತರಿಗೆ ಮೋಸ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್​ನವರು ರೈತರ ಯಾವುದೇ ಸಾಲಮನ್ನಾ ಮಾಡಲಿಲ್ಲ. ಚುನಾವಣೆ ವೇಳ ಸುಳ್ಳು ಭರವಸೆ ನೀಡಿ ಜನರಿಗೆ ಮೋಸ ಮಾಡುತ್ತಾರೆ ಎಂದು ವಾಗ್ದಾಳಿ ನಡೆಸಿದರು.

  • 02 May 2023 04:05 PM (IST)

    Karnataka Election 2023 Live: ಬಡವರ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಶ್ರೀಮಂತರಾಗಿದ್ದಾರೆ: ಮೋದಿ

    ರಾಯಚೂರು: ಬಡವರ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಶ್ರೀಮಂತರಾಗಿದ್ದಾರೆ ಎಂದು ಹೇಳಿದ ಪ್ರಧಾನಿ ಮೋದಿ, ಕಾಂಗ್ರೆಸ್ ಪಕ್ಷ ದೇಶದ ಬಡವರಿಗೆ ಯಾವುದೇ ಯೋಜನೆಗಳನ್ನು ತರಲಿಲ್ಲ. ಆದರೆ ಬಿಜೆಪಿ ಸರ್ಕಾರ ಜಲಶಕ್ತಿ, ಸಹಕಾರ ಸಚಿವಾಲಯವನ್ನು ಸ್ಥಾಪಿಸಿದೆ. ಸಹಕಾರಿ ಇಲಾಖೆ ಅಭಿವೃದ್ಧಿಗಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ಇಡೀ ದೇಶದಲ್ಲಿ ಅಭಿವೃದ್ಧಿವ ವೇಗ ಹೆಚ್ಚುತ್ತಿದೆ. ಗ್ರಾಮೀಣ ಭಾಗದ ಮಹಿಳೆಯರ ಕಲ್ಯಾಣಕ್ಕಾಗಿ ಯೋಜನೆ ಜಾರಿ ಮಾಡಲಾಗಿದೆ ಎಂದರು.

  • 02 May 2023 03:58 PM (IST)

    Karnataka Election 2023 Live: ಜೆಡಿಎಸ್, ಕಾಂಗ್ರೆಸ್​ನಿಂದ ಕನ್ನಡಿಗರಿಗೆ ಮೋಸ: ಪ್ರಧಾನಿ ಮೋದಿ

    ರಾಯಚೂರು: ಕಾಂಗ್ರೆಸ್, ಜೆಡಿಎಸ್​ನವರಿಗೆ ಕರ್ನಾಟಕದ ಅಭಿವೃದ್ಧಿ ಬೇಕಾಗಿಲ್ಲ. ಕಾಂಗ್ರೆಸ್, ಜೆಡಿಎಸ್ ಎರಡೂ​ ಕುಟುಂಬವಾದಿ ಪಕ್ಷಗಳು, ತಮ್ಮ ಕುಟುಂಬವನ್ನು ಮಾತ್ರ ಬೆಳೆಸುತ್ತಾರೆ, ಜನಸಾಮಾನ್ಯರನ್ನು ಅಲ್ಲ. ಕನ್ನಡಿಗರಿಗೆ ಜೆಡಿಎಸ್, ಕಾಂಗ್ರೆಸ್ ಎರಡೂ ಪಕ್ಷಗಳಿಂದ ದ್ರೋಹ ಮಾಡಿವೆ ಎಂದು ಹೇಳಿದ ಪ್ರಧಾನಿ ಮೋದಿ, ಡಬಲ್​ ಇಂಜಿನ್ ಬಿಜೆಪಿಯನ್ನು ವೋಟ್​ ನೀಡುವಂತೆ ಮನವಿ ಮಾಡಿ ಕರ್ನಾಟಕದ ಜತೆ ದೇಶದ ಸರ್ವಾಂಗೀಣ ಅಭಿವೃದ್ಧಿ ಮಾಡುತ್ತೇವೆ ಎಂದರು.

  • 02 May 2023 03:56 PM (IST)

    Karnataka Election 2023 Live: ಎಲ್ಲ ಕ್ಷೇತ್ರಗಳ ವಿಕಾಸದ ದೃಷ್ಟಿಯಿಂದ ಪ್ರಣಾಳಿಕೆ ಬಿಡುಗಡೆ: ಮೋದಿ

    ಕರ್ನಾಟಕ ಬಿಜೆಪಿ ಘಟಕ ನಿನ್ನೆ ಪ್ರಣಾಳಿಕೆ ಬಿಡುಗಡೆ ಮಾಡಿದೆ, ಅನ್ನ, ಅಭಯ, ಅಭಿವೃದ್ಧಿ, ಆದಾಯ, ಅಕ್ಷರ, ಆರೋಗ್ಯಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಎಲ್ಲ ಕ್ಷೇತ್ರಗಳ ವಿಕಾಸದ ದೃಷ್ಟಿಯಿಂದ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ರಾಯಚೂರಿನ ಜನರು ದಶಕಗಳಿಂದ ರೈಲುಗಾಗಿ ಬೇಡಿಕೆ ಇಡುತ್ತಿದ್ದಾರೆ. ಈ ಬೇಡಿಕೆಯನ್ನು ಬಿಜೆಪಿ ಸರ್ಕಾರ ಈಡೇರಿಸುತ್ತಿದೆ. ರಾಜ್ಯದಲ್ಲಿ ಹೆದ್ದಾರಿಗಳು ನಿರ್ಮಾಣಗೊಳ್ಳುತ್ತಿವೆ.  ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಶ್ರಮಿಸಿದೆ ಎಂದರು.

  • 02 May 2023 03:52 PM (IST)

    Karnataka Election 2023 Live: ಕಾಂಗ್ರೆಸ್​ ನಾಯಕರ ಸುಳ್ಳುಗಳಿಗೆ ಬಲಿಯಾಗಬೇಡಿ: ಮೋದಿ

    ಡಬಲ್ ಇಂಜಿನ್ ಬಿಜೆಪಿ ಸರ್ಕಾರಕ್ಕೆ ಅಧಿಕಾರ ನೀಡಿ ಎಂದು ಮನವಿ ಮಾಡಿದ ಪ್ರಧಾನಿ ಮೋದಿ, ಕಾಂಗ್ರೆಸ್​ ಯಾವ ಉದ್ದೇಶವಿಟ್ಟುಕೊಂಡು ವೋಟ್ ಕೇಳುತ್ತಿದೆ? ಕೊನೆಯ ಚುನಾವಣೆ ನೆಪದಲ್ಲಿ ‘ಕೈ’ ನಾಯಕರು ವೋಟ್ ಕೇಳುತ್ತಿದ್ದಾರೆ. ರಾಜ್ಯದ ಜನರ ಬಳಿ ಕೊನೆಯ ಚುನಾವಣೆ ಎಂದು ಸುಳ್ಳು ಹೇಳುತ್ತಿದ್ದಾರೆ. ಕರ್ನಾಟಕದ ಜನರು ಕಾಂಗ್ರೆಸ್​ ನಾಯಕರ ಸುಳ್ಳುಗಳಿಗೆ ಬಲಿಯಾಗಬೇಡಿ ಎಂದು ಹೇಳಿದರು.

  • 02 May 2023 03:51 PM (IST)

    Karnataka Election 2023 Live: ಕರ್ನಾಟಕ ನಂ.1 ಮಾಡಲು ಕರ್ನಾಟಕಕ್ಕೆ ಮತ ನೀಡಿ: ಪ್ರಧಾನಿ ಮೋದಿ

    ಕಾಂಗ್ರೆಸ್​, ಜೆಡಿಎಸ್​ಗೆ ಟಾಂಗ್ ನೀಡಿದ ಮೋದಿ

    ರಾಯಚೂರು: ಕರ್ನಾಟಕ ರಾಜ್ಯವನ್ನು ನಂಬರ್ 1 ಮಾಡಲು ಬಿಜೆಪಿಗೆ ಮತ ನೀಡಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಒಂದು ಕುಟುಂಬಕ್ಕೆ ವೋಟ್ ಹಾಕುವಂತೆ ಮನವಿ ಮಾಡುತ್ತಿದೆ ಎಂದು ಟಾಂಗ್ ನೀಡಿದರು. ಈ ಬಾರಿಯ ಕರ್ನಾಟಕದ ಜನರ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ ಆಗಿರಲಿದೆ ಎಂದು ಪುನರುಚ್ಚರಿಸಿದರು.

  • 02 May 2023 03:47 PM (IST)

    Karnataka Election 2023 Live: ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

    ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ಬಿಜೆಪಿ ಚುನಾವಣಾ ಸಮಾವೇಶದಲ್ಲಿ ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ಮಳೆ ಬಂದಿದ್ದರಿಂದ ನಿಮಗೆ ಸಾಕಷ್ಟು ಸಮಸ್ಯೆಯಾಗಿದೆ. ಮಳೆ ನಡುವೆಯೂ ನೀವು ನನಗೆ ಪ್ರೀತಿ, ಆಶೀರ್ವಾದ ನೀಡುತ್ತಿದ್ದೀರಿ ನಿಮ್ಮೆಲ್ಲರಿಗೂ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

  • 02 May 2023 03:39 PM (IST)

    Karnataka Election 2023 Live: ಸಿಂಧನೂರು ಬಿಜೆಪಿ ಸಮಾವೇಶಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ರಾಯಚೂರು: ಜಿಲ್ಲೆಯ ಸಿಂಧನೂರಿನಲ್ಲಿ ನಡೆಯುತ್ತಿರುವ ಬಿಜೆಪಿ ಚುನಾವಣಾ ಸಮಾವೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ವೇದಿಕೆಯಲ್ಲಿದ್ದ ಬಿಜೆಪಿ ಮುಖಂಡರು ಮೋದಿ ಅವರನ್ನು ಸ್ವಾಗತಿಸಿದರು. ನಂತರ ಜನರತ್ತ ಕೈಬೀಸಿದ ಪ್ರಧಾನಿ ಮೋದಿ, ಬಳಿಕ ವೇದಿಕೆ ಮೇಲಿರುವ ಮುಖಂಡರಿಗೆ ನಮಸ್ಕರಿಸಿದರು. ಬಳಿಕ ರಾಯಚೂರು ಜಿಲ್ಲಾ ಬಿಜೆಪಿ ಘಟಕದಿಂದ ಪ್ರಧಾನಿ ಮೋದಿಗೆ ಸನ್ಮಾನ ಮಾಡಲಾಯಿತು.

  • 02 May 2023 03:34 PM (IST)

    Karnataka Election 2023 Live: ಹೋರಾಟಗಾರರ ಮೇಲೆ ಲಾಠಿಚಾರ್ಜ್​ ಮಾಡಿಸಿದ ಕಾಂಗ್ರೆಸ್​ಗೆ ವೋಟ್ ಹಾಕುತ್ತೀರಾ?: ಸಿಎಂ ಬೊಮ್ಮಾಯಿ ಪ್ರಶ್ನೆ

    ಧಾರವಾಡ: ಮಹದಾಯಿ ಯೋಜನೆಯ ಹೋರಾಟಕ್ಕೆ ಕಾಂಗ್ರೆಸ್ ಅಡ್ಡಿಪಡಿಸಿತ್ತು. ಹೋರಾಟ ನಡೆಸಿದ್ದ ರೈತರ ಮೇಲೆ ಕಾಂಗ್ರೆಸ್​​ ಗುಂಡು ಹಾರಿಸಿತ್ತು, ಹೋರಾಟಗಾರರ ಮೇಲೆ ಲಾಠಿಚಾರ್ಜ್​ ಮಾಡಿಸಿದ್ದು ಕೂಡ ಇದೇ ಕಾಂಗ್ರೆಸ್ ಎಂದು ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹೇಳೀದ್ದಾರೆ. ಅಲ್ಲದೆ, ಇಂತಹ ಪಕ್ಷಕ್ಕೆ ನೀವು ಮತ ಹಾಕುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಮಹದಾಯಿ ಯೋಜನೆಗೆ ಡಿಪಿಆರ್​​ಗೆ ಮೋದಿ ಸರ್ಕಾರ ಅನುಮತಿ ನೀಡಿದೆ. ಮಹದಾಯಿ ಯೋಜನೆಗೆ ಟೆಂಡರ್​ ಕೂಡ ಮಾಡಿದ್ದೇವೆ. ಚುನಾವಣೆ ಬಳಿಕ ಯೋಜನೆಯ ಕಾಮಗಾರಿ ಆರಂಭವಾಗಲಿದೆ ಎಂದರು.

  • 02 May 2023 03:00 PM (IST)

    Karnataka Election 2023 Live: ಕರ್ನಾಟಕದಲ್ಲಿ ಇಂತಹ ಭ್ರಷ್ಟ ಸರ್ಕಾರ ಯಾವತ್ತೂ ಬಂದಿರಲಿಲ್ಲ: ಅಶೋಕ್​ ಗೆಹ್ಲೋಟ್​

    ಮಂಗಳೂರು: ಕರ್ನಾಟಕದಲ್ಲಿ ಇಂತಹ ಭ್ರಷ್ಟ ಸರ್ಕಾರ ಯಾವತ್ತೂ ಬಂದಿರಲಿಲ್ಲ ಎಂದು ಮಂಗಳೂರಿನಲ್ಲಿ ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ ಹೇಳಿದ್ದಾರೆ. ದೇಶದಲ್ಲಿ ಕರ್ನಾಟಕ ರಾಜ್ಯದ ಹೆಸರಿಗೆ ಬಿಜೆಪಿ ಕಳಂಕ ತಂದಿದೆ, 40 ಪರ್ಸೆಂಟ್ ಸರ್ಕಾರ ಎಂದು ದೇಶದಲ್ಲೇ ಗುರುತಿಸಲಾಗುತ್ತಿದೆ. ಬಿಜೆಪಿಯ ಪ್ರಣಾಳಿಕೆಯಲ್ಲಿ ಅಭಿವೃದ್ಧಿ ಪರವಾದ ಅಂಶಗಳು ಇಲ್ಲ. ಕರ್ನಾಟಕದ ಜನರು ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ. ಈ ಬಾರಿ ರಾಜ್ಯದಲ್ಲಿ ಬಹುಮತದ ಕಾಂಗ್ರೆಸ್ ಸರ್ಕಾರ ಬರಲಿದೆ ಎಂದರು.

  • 02 May 2023 02:40 PM (IST)

    Karnataka Election 2023 Live: 7 ಬಾರಿ ಸ್ನೇಹಿತರೇ 1 ಬಾರಿ ಸಹೋದರ ಸಹೋದರಿಯರೇ ಎಂದ ಪ್ರಧಾನಿ ಮೋದಿ

    ವಿಜಯನಗರ: ಹೊಸಕೋಟೆಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕಾಂಗ್ರೆಸ್​ ವಿರುದ್ಧ ರೈತ ಅಸ್ತ್ರ ಪ್ರಯೋಗಿಸಿದರು. ಮತ್ತು ಭಾಷಣದ ಉದ್ದಕ್ಕೂ 7 ಬಾರಿ ಸ್ನೇಹಿತರೇ ಎಂದು ಕನ್ನಡದಲ್ಲಿ ಹೇಳಿದರು. ಮತ್ತು ಕೊನೆಗೆ ಸಹೋದರ ಸಹೋದರಿಯರೇ ಎಂದು ಕನ್ನಡದಲ್ಲಿ ಹೇಳಿ ಭಾಷಣ ಮುಗಿಸಿದರು.

  • 02 May 2023 02:35 PM (IST)

    Karnataka Election 2023 Live: ಕಾಂಗ್ರೆಸ್​ ಹೇಳುವುದೊಂದು ಮಾಡುವುದು ಒಂದು, ಬರೀ ಸುಳ್ಳಿನ ಆಶ್ವಾಸನೆ ನೀಡುತ್ತಿದೆ

    ವಿಜಯನಗರ: ಭಾರತ ಅಭಿವೃದ್ದಿಯಾಗಬೇಕಾದರೇ ನಿಮ್ಮ ಒಂದು ಮತ ಬಹಳ ಅಮುಲ್ಯವಾಗಿದೆ. ನೀವು ಈಗ ನೋಡುತ್ತಿದ್ದೀರಿ. ಕಾಂಗ್ರೆಸ್​ ರಾಜ್ಯದಲ್ಲಿ ಗ್ಯಾರೆಂಟಿಗಳ ಕಂತೆ ​ ಹಿಡಿದುಕೊಂಡು ಕುಂತಿದೆ. ಯಾವ ಪಕ್ಷಕ್ಕೆ ತನ್ನ ಅಸ್ತಿತ್ವದ ಬಗ್ಗೆ ಗೊತ್ತಿಲ್ಲವೋ ಆ ಪಕ್ಷ ಸುಳ್ಳಿನ ಗ್ಯಾರೆಂಟಿಗಳನ್ನ ಮಾತ್ರ ನೀಡುತ್ತದೆ. ಕಾಂಗ್ರೆಸ್​ ಬಡತನ ಮುಕ್ತ ಆಶ್ವಾಸನೆ ನೀಡಿತು ಆದರೆ ಬಡತನ ಮುಕ್ತವಾಗಿಲ್ಲ. ಆದರೆ ಕಾಂಗ್ರೆಸ್​ ನಾಯಕರು ಮಾತ್ರ ಶ್ರೀಮಂತರಾಗುತ್ತಿದ್ದಾರೆ. ಕಾಂಗ್ರೆಸ್​ ಬಡಜನರ, ರೈತರ ಬಗ್ಗೆ ಬಹಳ ಮಾತನಾಡುತ್ತದೆ ಆದರೆ ಅದು ಹೇಳುವುದೊಂದು ಮಾಡುವುದೊಂದು.

  • 02 May 2023 02:29 PM (IST)

    Karnataka Election 2023 Live: ಕರ್ನಾಟಕವನ್ನು ದೇಶದಲ್ಲೇ ನಂಬರ್​ ಒನ್​ ರಾಜ್ಯ ಮಾಡುತ್ತೇವೆ

    ವಿಜಯನಗರ: ಕೊರೊನಾ ರೋಗವನ್ನು ಭಾರತ ಸಮರ್ಥವಾಗಿ ಎದುರಿಸಿತು. ಇದು ಜಗತ್ತನ್ನೇ ಹುಬ್ಬೇರಿಸುವಂತೆ ಮಾಡಿತು. ಸದ್ಯ ಭಾರತ ಆರ್ಥಿಕ ಕ್ಷೇತ್ರದಲ್ಲಿ 5ನೇ ಸ್ಥಾನದಲ್ಲಿದೆ. ಮುಂದಿನ ಕೆಲವೇ ವರ್ಷಗಳಲ್ಲಿ 3ನೇ ಸ್ಥಾನಕ್ಕೆ ಬರುತ್ತದೆ. ಇದನ್ನು ನಾವು ಸಾಧಿಸಬೇಕು ಎಂದರೇ ನಮಗೆ ಬಹಳ ದೊಡ್ಡ ಸಹಾಯ ಮಾಡುವುದು ಕರ್ನಾಟಕ. ನಾವು ಕರ್ನಾಟಕವನ್ನು ದೇಶದಲ್ಲೇ ನಂಬರ್​ ಒನ್​ ರಾಜ್ಯ ಮಾಡುತ್ತೇವೆ. ಎಲ್ಲ ಕ್ಷೇತ್ರಗಳಿಗು ಉತ್ತೇಜನ ನೀಡುತ್ತೇವೆ. ಆದರೆ ನಾವು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಮತ್ತು ಜೆಡಿಎಸ್​​ ಅವರ ಮೋಸಕ್ಕೆ ಒಳಗಾಗಬಾರದು.

  • 02 May 2023 02:21 PM (IST)

    Karnataka Election 2023 Live: ರೈತರ ಡಬಲ್​ ಇಂಜಿನ್​ ಸರ್ಕಾರದಿಂದ ಡಬಲ್​ ಲಾಭವಾಗುತ್ತಿದೆ

    ವಿಜಯನಗರ: ರಾಜ್ಯದಲ್ಲಿನ ಬಿಜೆಪಿ ಸರ್ಕಾರದಿಂದ ರೈತರ ಖಾತೆಗೆ 4 ಸಾವಿರ ಹಣ ಹಾಕಲಾಗುತ್ತಿದೆ. ಕೇಂದ್ರ ಸರ್ಕಾರದಿಂದ 6 ಸಾವಿರ ಹಣ ನೇರವಾಗಿ ರೈತರ ಖಾತೆಗೆ ಜಮ ಆಗುತ್ತಿದೆ. ರೈತರ ಡಬಲ್​ ಇಂಜಿನ್​ ಸರ್ಕಾರದಿಂದ ಡಬಲ್​ ಲಾಭವಾಗುತ್ತಿದೆ.

  • 02 May 2023 02:15 PM (IST)

    Karnataka Election 2023 Live: ಪಿಎಂ ಕಿಸಾನ್​ ಯೋಜನೆಯಿಂದ 11 ಕೋಟಿ ರೈತರಿಗೆ ಲಾಭ

    ವಿಜಯನಗರ: ಪಿಎಂ ಕಿಸಾನ್​ ಯೋಜನೆಯಿಂದ 11 ಕೋಟಿ ರೈತರಿಗೆ ಲಾಭವಾಗಿದೆ. ಕಳೆದ ವರ್ಷದಲ್ಲಿಇಲ್ಲಿಯವರೆಗೆ ನಾವು ಎರಡುವರೆ ಲಕ್ಷ ಕೋಟಿ ರೂ. ಹಣ ನೀಡಿದ್ದೇವೆ. ಕರ್ನಾಟಕದಲ್ಲಿ 18 ಸಾವಿರ ಕೋಟಿ ಹಣವನ್ನು ಈ ನಿಧಿ ಮೂಲಕ ನೀಡಿದ್ದೇವೆ. ರಾಜ್ಯದಲ್ಲಿ ಬಡವರಿರಲಿ, ಅಥವಾ ರೈತರಾಗಲಿ ಮತ್ತು ಸಮಾಜದ ಎಲ್ಲ ವರ್ಗದ ಜನರಿಗೆ ನಾವು ಲಾಭವನ್ನು ತಲುಪಿಸಿದ್ದೇವೆ. ಆದ್ದರಿಂದ ಈ ಎಲ್ಲ ವರ್ಗದ ಜನರ ಆಸೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ.

     

  • 02 May 2023 02:10 PM (IST)

    Karnataka Election 2023 Live: ಬಡವರ, ದುರ್ಬಲರ ಕಲ್ಯಾಣಕ್ಕೆ ಡಬಲ್​ ಇಂಜಿನ್​ ಸರ್ಕಾರ ಪರಿಶ್ರಮಿಸುತ್ತಿದೆ

    ವಿಜಯನಗರ: ಡಬಲ್​ ಇಂಜಿನ್​ ಸರ್ಕಾರದಿಂದ ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿದೆ. ಪಿಎಂ ಫಸಲ್​ ಬೀಮಾ ಯೋಜನೆ ರೈತರ ಪಾಲಿಗೆ ಶ್ರೀರಕ್ಷೆಯಾಗಿದೆ. ಈ ಯೋಜನೆಯಿಂದ ಶೇ 70ರಷ್ಟು ಎಸ್​​ಸಿ, ಎಸ್​​ಟಿ ಮತ್ತು ಒಬಿಸಿ ಮತ್ತು ಹಿಂದುಳಿದ ರೈತರಿಗೆ ಉಪಯೋಗವಾಗಿದೆ. ಬಡವರ, ದುರ್ಬಲರ ಕಲ್ಯಾಣಕ್ಕೆ ಡಬಲ್​ ಇಂಜಿನ್​ ಸರ್ಕಾರ ಪರಿಶ್ರಮಿಸುತ್ತಿದೆ.

  • 02 May 2023 02:06 PM (IST)

    Karnataka Election 2023 Live: ಗುಲಾಮಗಿರಿ ಮಾನಸಿಕತೆಯಿಂದ ಕಾಂಗ್ರೆಸ್​ಗೆ ಹಂಪಿ ಬಗ್ಗೆ ಗರ್ವವಿಲ್ಲ

    ವಿಜಯನಗರ: ಗುಲಾಮಗಿರಿ ಮಾನಸಿಕತೆಯಿಂದ ಕಾಂಗ್ರೆಸ್​ಗೆ ಹಂಪಿಯ ಪರಂಪರೆ ಬಗ್ಗೆ ಗರ್ವವಿಲ್ಲ.  ಇದರಿಂದ ಹಂಪಿಯ ಬಗ್ಗೆ ಮತ್ತು ಪರಂಪರ ಬಗ್ಗೆ ಗೌರವ ಕೊಡಲಿಲ್ಲ. ಆದರೆ ರಾಜ್ಯದಲ್ಲಿನ ಬಿಜೆಪಿ ಸರ್ಕಾರ ಹಂಪಿ, ಬದಾಮಿ, ಐಹೊಳೆ, ಪಟ್ಟದಕಲ್ಲು ಪ್ರವಾಸೋದ್ಯಮಕ್ಕೆ ಸಾಕಷ್ಟು ಉತ್ತೇಜನ ನೀಡಿದೆ. ಇದರಿಂದ ಯುವಕರಿಗೆ ಸಾಕಷ್ಟು ಅನುಕೂಲವಾಗಲಿದ್ದು, ಮತ್ತು ಸ್ವ ಉದ್ಯೋಗಕ್ಕೆ ಉತ್ತೇಜನ ಸಿಗುತ್ತದೆ.

  • 02 May 2023 02:01 PM (IST)

    Karnataka Election 2023 Live: ವಿಜಯನಗರದಲ್ಲಿ 70 ಕ್ಕೂ ಹೆಚ್ಚು ಹಳೆಯ ಕೆರೆಗಳ ನವೀಕರಣ ಮಾಡುತ್ತಿದ್ದೇವೆ

    ವಿಜಜಯನಗರ: ಕಾಂಗ್ರೆಸ್ ದಶಕಗಳ ಆಡಳಿತದಲ್ಲಿ ನಗರ ಮತ್ತು ಗ್ರಾಮೀಣ ಪ್ರದೇಶದ ಮಧ್ಯೆ ಕಂದಕ ನಿರ್ಮಾಣವಾಗಿತ್ತು. ಆದರೆ ಈಗ ನಾವು ನಗರ ಮತ್ತು ಗ್ರಾಮಗಳನ್ನು ಸಮಾನವಾಗಿ ಕಾಣುತ್ತಿದ್ದೇವೆ. ನಗರದಲ್ಲಿ ದೊರೆಯುವ ಸೌಲಭ್ಯಗಳನ್ನು ಗ್ರಾಮೀಣ ಪ್ರದೇಶದಲ್ಲೂ ಸಿಗುವಂತೆ ಮಾಡುತ್ತಿದ್ದೇವೆ. ಇದರಿಂದ ನಗರ ಮತ್ತು ಗ್ರಾಮೀಣ ಪ್ರದೇಶದ ನಡುವೆ ಇದ್ದ ಅಂತರ ಕಡಿಮೆಯಾಗುತ್ತಿದೆ. ರೈತರಿಗೆ ಬೇಕಾದ ಜಮೀನು ಮತ್ತು ನೀರಾವರಿ ವ್ಯವಸ್ಥೆಯನ್ನು ಈ ಭಾಗದಲ್ಲಿ 70 ಕ್ಕೂ ಹೆಚ್ಚು ಹಳೆಯ ಕೆರೆಗಳ ನವೀಕರಣ ಮಾಡುತ್ತಿದ್ದೇವೆ. ಕೃಷಿ ಕಾಲೇಜ್​ ಆರಂಭಿಸಿದ್ದೇವೆ. ಇದರಿಂದ ಯುವ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ.

  • 02 May 2023 01:56 PM (IST)

    Karnataka Election 2023 Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

    ವಿಜಯನಗರ: ಪುರಾಣಗಳಲ್ಲಿ ಈ ಪ್ರದೇಶದ ಬಗ್ಗೆ ಬರೆಯಲಾಗಿದೆ. ಮತ್ತು ಅತಿ ಪುರಾತನವಾದ ಜಿಲ್ಲೆಯಾಗಿದೆ.  ನೀವು ಹೊಸ ಜಿಲ್ಲೆ ಬಯಸಿದ್ದೀರಿ. ಬಿಜೆಪಿ ಸರ್ಕಾರ ನೀಡಿತು. ಇದರಿಂದ ಈಗ ಸಾಕಷ್ಟು ಅಭಿವೃದ್ದಿಯಾಗುತ್ತಿದೆ. ಅದಕ್ಕೆ ಈಗ ವಿಜಯನಗರ ಹೇಳುತ್ತಿದೆ ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರವೆಂದು ಹೇಳಿದರು.

  • 02 May 2023 01:53 PM (IST)

    Karnataka Election 2023 Live: ಶ್ರೀ ಕೃಷ್ಣದೇವರಾಯರನ್ನು ನೆನೆದ ಪ್ರಧಾನಿ ಮೋದಿ

    ವಿಜಯನಗರ: ವಿಜಯನಗರದ ಇತಿಹಾಸ ಭಾರತದ ಗೌರವ. ಶ್ರೀ ಕೃಷ್ಣದೇವರಾಯರು ಈ ಕ್ಷೇತ್ರವನ್ನು ಸಾಕಷ್ಟು ಅಭಿವೃದ್ಧಿ ಮಾಡಿದರು. ಜಗತ್ತಿನಲ್ಲೇ ಕರ್ನಾಟಕದ ಹೆಸರು ಮಿಂಚುವಂತೆ ಮಾಡಿದರು. ದೇಶದವೇ ವಿಜಯನಗರ ಸಾಮ್ರಾಜ್ಯದಿಂದ ಪ್ರೇರಣೆ ಹೊಂದುತ್ತಿದೆ. ನಮ್ಮ ಮಹರಾಜರು ಹಾಕಿಕೊಟ್ಟ ದಾರಿಯಲ್ಲಿ ನಾವು ಸಾಗಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರು.

  • 02 May 2023 01:49 PM (IST)

    Karnataka Election 2023 Live: ಕಾಂಗ್ರೆಸ್​ನವರಿಗೆ ಹುನುಮಂತನನ್ನು ಕಂಡರೆ ಆಗುತ್ತಿಲ್ಲ

    ವಿಜಯನಗರ: ಕಾಂಗ್ರೆಸ್​ನವರು ಶ್ರೀ ರಾಮಚಂದ್ರನನ್ನು ಬಂಧಿಸಿದ್ದರು. ಈಗ ಹನುಮನನ್ನು ಬಂಧಿಸಲು ಹೊರಟಿದ್ದಾರೆ. ಕಾಂಗ್ರೆಸ್​ನವರಿಗೆ ಹುನುಮಂತನನ್ನು ಕಂಡರೆ ಆಗುತ್ತಿಲ್ಲ. ಕರ್ನಾಟಕವನ್ನು ದೇಶದಲ್ಲೇ ನಂಬರ್​ ಒನ್​​ ರಾಜ್ಯ ಮಾಡಲು ನಾವು ಆಂಜನೇಯನ ಆಶಿರ್ವಾದ ಪಡೆಯಲು ಬಂದಿದ್ದೇನೆ.

  • 02 May 2023 01:45 PM (IST)

    Karnataka Election 2023 Live: ಕಾಂಗ್ರೆಸ್​ ಹನುಮನನ್ನು ಕೂಡಿಹಾಕಲು ಹೊರಟಿದೆ

    ವಿಜಯಪುರ: ಕಾಂಗ್ರೆಸ್​ ಹನುಮನನ್ನು ಕೂಡಿಹಾಕಲು ಹೊರಟಿದೆ. ಕಾಂಗ್ರೆಸ್​​ನವರಿಂದ ಹುನುಮಭಕ್ತರಿಗೆ ತೊಂದರೆ ಆಗುತ್ತಿದೆ. ನಿನ್ನೆ ರಾಜ್ಯ ಬಿಜೆಪಿ ಸಂಕಲ್ಪ ಪತ್ರ ಬಿಡುಗಡೆ ಮಾಡಿತು. ಇದು ವಿಕಾಸದ ಪ್ರಣಾಳಿಕೆಯಾಗಿದೆ.

  • 02 May 2023 01:43 PM (IST)

    Karnataka Election 2023 Live: ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

    ವಿಜಯನಗರ: ಕನ್ನಡದಲ್ಲಿ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ. ವಿಜಯನಗರ ಸಾಮ್ರಾಜ್ಯದ ಜನತೆಗೆ ನನ್ನ ನಮಸ್ಕಾರಗಳು. ಹಂಪಿ ಶ್ರೀ ವಿರೂಪಾಕ್ಷ ಸ್ವಾಮಿ, ಉಗ್ರನರಸಿಂಹ ಸ್ವಾಮಿ, ಹುಲಿಗೆಮ್ಮ ದೇವಿಗೆ ನಮಸ್ಕರಿಸಿದರು. ಹನುಮಜನ್ಮ ಭೂಮಿಗೆ ಆಗಮಿಸಿದ್ದು ನನ್ನ ಪುಣ್ಯ.

  • 02 May 2023 01:39 PM (IST)

    Karnataka Election 2023 Live: ವಿಜಯನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ವಿಜಯನಗರ: ಚುನಾವಣಾ ಪ್ರಚಾರದ ಮೂರನೇ ದಿನದ, ಎರಡನೇ  ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಭಾಗವಹಿಸುತ್ತಿದ್ದು, ಈ ಸಂಬಂಧ ಜಿಲ್ಲೆಯ  ಹೊಸಪೇಟೆಗೆ ಆಗಮಿಸಿದ್ದಾರೆ.

  • 02 May 2023 01:06 PM (IST)

    Karnataka Election 2023 Live: ಕಾಂಗ್ರೆಸ್​ ಮುಕ್ತ ಕರ್ನಾಟಕ ಮಾಡುವಂತೆ ಅಮಿತ್ ಶಾ ಕರೆ

    ಮೈಸೂರು: ಕಾಂಗ್ರೆಸ್​ ಮುಕ್ತ ಕರ್ನಾಟಕ ಮಾಡಿ. ವರುಣಾ ಜನರು ಸಿದ್ದರಾಮಯ್ಯಗೆ ಮತ ನೀಡಬೇಡಿ. ವಿ ಸೋಮಣ್ಣ ಅವರನ್ನು ಗೆಲ್ಲಿಸಿದರೇ, ವರುಣಾವನ್ನು ಇಡೀ ರಾಜ್ಯದಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡುತ್ತಾರೆ. ಕಮಲದ ಬಟನ್​ ಮೇಲೆ ಒತ್ತಿ. ನರೇಂದ್ರ ಮೋದಿಯವರನ್ನು 2024ರಲ್ಲಿ ಮತ್ತೊಮ್ಮೆ ಪ್ರಧಾನಿ ಮಾಡಿ.

  • 02 May 2023 01:01 PM (IST)

    Karnataka Election 2023 Live: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೇ ಲಿಂಗಾಯತರಿಗೆ ನೀಡಿದ ಮೀಸಲಾತಿ ಹಿಂಪಡೆಯುತ್ತದೆ

    ಮೈಸೂರು: ಕಾಂಗ್ರೆಸ್​ ಅಧಿಕಾರಕ್ಕೆ ಬಂದರೇ ಲಿಂಗಾಯತರಿಗೆ ನೀಡಿದ ಮೀಸಲಾತಿ ಹಿಂಪಡೆಯುತ್ತದೆ. ದಲಿತರಿಗೆ ನೀಡಲಾದ ಮೀಸಲಾತಿಯನ್ನು ತೆಗೆಯಗುತ್ತಾರೆ. ಅವರಿಗೆ ತುಷ್ಟಿಕರಣ ಹೊರತು ಮತ್ತೇನು ಕಾಣಿಸುವುದಿಲ್ಲ.

  • 02 May 2023 01:00 PM (IST)

    Karnataka Election 2023 Live: ಸಿದ್ದರಾಮಯ್ಯ ಅವರ ಕಾಲದಲ್ಲಿ ಮಂಡ್ಯದ ಮೈ ಶುಗರ್​ ಕಾರ್ಖಾನೆ ಮುಚ್ಚಿತು

    ಮೈಸೂರು: ಸಿದ್ದರಾಮಯ್ಯ ಅವರೆ ನೀವು ಯಾಕೆ ಪದೇ ಪದೇ ಕ್ಷೇತ್ರ ಬದಲಾಯಿಸುತ್ತೀರಿ. ವರುಣಾ ಮತದಾರರೇ ನಿವೃತ್ತಿ ಹೊಂದುವ ನಾಯಕ ಬೇಕಾ ಅಥವಾ ಭವಿಷ್ಯದ ಬಗ್ಗೆ ಯೋಜಿಸುವ ನಾಯಕ ಬೇಕಾ. ಸಿದ್ದರಾಮಯ್ಯ ಅವರ ಕಾಲದಲ್ಲಿ ಮಂಡ್ಯದ ಮೈ ಶುಗರ್​ ಕಾರ್ಖಾನೆ ಮುಚ್ಚಿತು.

  • 02 May 2023 12:58 PM (IST)

    Karnataka Election 2023 Live: ಸಿದ್ದರಾಮಯ್ಯ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ.

    ಮೈಸೂರು: ಸಿದ್ದರಾಮಯ್ಯ ಅವರು ಲಿಂಗಾಯತರಿಗೆ ಅಪಮಾನ ಮಾಡಿದ್ದಾರೆ. ಆದರೆ ಬಿಜೆಪಿ ಬಿಎಸ್​ ಯಡಿಯೂರಪ್ಪ ಮತ್ತು ಬಸವರಾಜ್​ ಬೊಮ್ಮಾಯಿಯವರನ್ನು ಮುಖ್ಯಮಂತ್ರಿ ಮಾಡಿದೆ. ಸಿದ್ದರಾಮಯ್ಯ ಅವರು ಲಿಂಗಾಯತರು ಭಷ್ಟಾಚಾರಿಗಳು ಎನ್ನುವ ಮೂಲಕ ಲಿಂಗಾಯತ ಸಮುದಾಯಕ್ಕೆ ಅಪಮಾನ ಮಾಡಿದ್ದಾರೆ. ಕಾಂಗ್ರೆಸ್​ನವರು ಈ ಹಿಂದೆ ನಿಜಲಿಂಗಪ್ಪ ಮತ್ತು ವಿರೇಂದ್ರ ಪಾಟೀಲ್​​ ಅವರನ್ನು ಅಧಿಕಾರದಿಂದ ಕೆಳಗೆ ಇಳಿಸಿ ಅಪಮಾನ ಮಾಡಿತು.

  • 02 May 2023 12:55 PM (IST)

    Karnataka Election 2023 Live: ಕರ್ನಾಟಕವನ್ನು ಅಭಿವೃದ್ದಿ ಮತ್ತು ಸುರಕ್ಷಿತ ರಾಜ್ಯ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ.

    ಮೈಸೂರು: ಕರ್ನಾಟಕವನ್ನು ಅಭಿವೃದ್ದಿ ಮತ್ತು ಸುರಕ್ಷಿತ ರಾಜ್ಯ ಮಾಡುವ ಏಕೈಕ ವ್ಯಕ್ತಿ ಪ್ರಧಾನಿ ನರೇಂದ್ರ ಮೋದಿ. ಸಿದ್ದರಾಮಯ್ಯ ಮತ್ತೆ ಅಧಿಕಾರಕ್ಕೆ ಬಂದರೇ ಪಿಎಫ್​ಐ ನಿಷೇಧವನ್ನು ಹಿಂಡೆಯುತ್ತಾರೆ. ಕಾಂಗ್ರೆಸ್​ ರಾಜ್ಯವನ್ನು ಎಟಿಎಂ ಮಾಡಲು ಹೊರಟಿದೆ. ಸಿದ್ದರಾಮಯ್ಯ ಅವರ ಸರ್ಕರ ಅತ್ಯಂತ ಭ್ರಷ್ಟ ಸರ್ಕಾರ.

  • 02 May 2023 12:36 PM (IST)

    Karnataka Election 2023 Live: ತವರು ಊರಿನಲ್ಲಿ ಸಿಎಂ ಬೊಮ್ಮಾಯಿ ಅಬ್ಬರದ ಪ್ರಚಾರ

    ಧಾರವಾಡ: ಜಿಲ್ಲೆಯ ಕುಂದಗೋಳ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ರೋಡ್ ಶೋ ರೋಡ್ ಶೋ ನಡೆಸಿದ್ದಾರೆ. ಕುಂದಗೋಳ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಂ.ಆರ್.ಪಾಟೀಲ್ ಪರ ಮತಯಾಚಿಸುತ್ತಿದ್ದಾರೆ.

  • 02 May 2023 12:30 PM (IST)

    Karnataka Election 2023 Live: ವರುಣಾದಲ್ಲಿ ಬಿಜೆಪಿ ಸಮಾವೇಶ; ಅಮಿತ್​ ಶಾ ಭಾಗಿ

    ಮೈಸೂರು: ವರುಣಾ ಕ್ಷೇತ್ರದಲ್ಲಿ ಬಿಜೆಪಿ ಸಾರ್ವಜನಿಕ ಸಭೆ ನಡೆಯುತ್ತಿದ್ದು, ಕೇಂದ್ರ ಗೃಹ ಅಮಿತ್​ ಶಾ ಭಾಗವಹಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ,
    ಟಿ.ನರಸೀಪುರದ ಅಭ್ಯರ್ಥಿ ಡಾ.ರೇವಣ್ಣ, ನಂಜನಗೂಡು ಅಭ್ಯರ್ಥಿ ಹರ್ಷವರ್ಧನ್ ಭಾಗಿಯಾಗಿದ್ದಾರೆ.  ಮುಖಂಡರಾದ ರೇವಣ ಸಿದ್ದಯ್ಯ, ಶಶಿಕುಮಾರ್, ಎಂ.ಶಿವಣ್ಣ, ಬಿ.ಎನ್.ಸದಾನಂದ, ಅಪ್ಪಣ್ಣ,‌ ಸಿ.ರಮೇಶ್, ಕಾ.ಪು.ಸಿದ್ದಲಿಂಗಸ್ವಾಮಿ ಸೇರಿ ಪ್ರಮುಖರು ಪಾಲ್ಗೊಂಡಿದ್ದಾರೆ.

  • 02 May 2023 12:18 PM (IST)

    Karnataka Election 2023 Live: ಬೂತ್​​ ಮಟ್ಟದಿಂದ ಪಕ್ಷವನ್ನು ಗೆಲ್ಲಿಸಲು ಟಾಸ್ಕ್​ ನೀಡಿದ ಪ್ರಧಾನಿ ಮೋದಿ

    ಚಿತ್ರದುರ್ಗ: ಮೇ 10 ರಂದು ಕಮಲದ ಗುರುತಿಗೆ ಮತ ಹಾಕಿ. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ನೀವು ಪ್ರತಿ ಮನೆ ಮನೆ ಮನೆಗೂ ಹೋಗಿ, ಪ್ರತಿಯೊಬ್ಬ ವ್ಯಕ್ತಿಯನ್ನು ಭೇಟಿಯಾಗಿ ಬಿಜೆಪಿಗೆ ಮತ ಹಾಕಿ ಅಂತ ಹೇಳ್ತಿರಾ? ಬೂತ್​ ಮಟ್ಟವನ್ನು ಗೆಲ್ಲಿಸುವಂತೆ ಕೆಲಸ ಮಾಡಿ. ಪ್ರತಿ ಪ್ರತಿ ಮನೆ ಮನೆಗೂ ಹೋಗಿ ನಮಸ್ಕಾರ ಅಂತ ಹೇಳಿ. ನಂತರ ದೆಹಲಿಯಿಂದ ಮೋದಿಜಿ ಅವರು ಬಂದಿದ್ದರು. ನಿಮಗೆ ನಮಸ್ಕಾರ ತಿಳಿಸಿ ಅಂದ್ರು ಅಂತ ಹೇಳಿ. ನಿಮ್ಮ ಆಶಿರ್ವಾದ ನನಗೆ ಶಕ್ತಿ ಬರುತ್ತದೆ. ಇದರಿಂದ ನನಗೆ ಹೆಚ್ಚಿನ ಕೆಲಸ ಮಾಡಲು ಆಗುತ್ತದೆ.

  • 02 May 2023 12:14 PM (IST)

    Karnataka Election 2023 Live: ಕಾಂಗ್ರೆಸ್​ ನಿಜಲಿಂಗಪ್ಪ ಅವರಿಗೆ ಅಪಮಾನ ಮಾಡಿದೆ

    ಚಿತ್ರದುರ್ಗ: ಕಾಂಗ್ರೆಸ್​ ನಿಜಲಿಂಗಪ್ಪ ಅವರಿಗೆ ಅಪಮಾನ ಮಾಡಿದೆ. ಕಾಂಗ್ರೆಸ್ ಸಮಾಜದ ಜನರಲ್ಲಿ ಆಂತಕ ಸೃಷ್ಟಿ ಸಿದೆ. ಕಾಂಗ್ರೆಸ್​ ನನಗೆ 90ಕ್ಕೂ ಹೆಚ್ಚು ಬಾರಿ ನಿಂದನೆ ಮಾಡಿದೆ.

  • 02 May 2023 12:13 PM (IST)

    Karnataka Election 2023 Live: ಕಾಂಗ್ರೆಸ್​ನ ಸುಳ್ಳಿನ ಗ್ಯಾರೆಂಟ್​​ ನೀಡುತ್ತಿದೆ

    ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬರುವುದಿಲ್ಲವೆಂದು ಸ್ವತಃ ಕಾಂಗ್ರೆಸ್​ ನಾಯಕರಿಗೆ ಗೊತ್ತಿದೆ. ಹೀಗಾಗಿ ಸುಳ್ಳಿನ ಗ್ಯಾರೆಂಟಿಗಳನ್ನು ನೀಡುತ್ತಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಬಿಜೆಪಿಯ ಎಲ್ಲ ಯೋಜನೆಗಳನ್ನು ನಾಶ ಮಾಡುತ್ತವೆ.

  • 02 May 2023 12:10 PM (IST)

    Karnataka Election 2023 Live: ಕಾಂಗ್ರೆಸ್​ನ ವಾರಂಟಿ ಮುಕ್ತಾಯವಾಗಿದೆ 

    ಚಿತ್ರದುರ್ಗ: ಕಾಂಗ್ರೆಸ್​ನ ವಾರಂಟಿ ಇಲ್ಲದ ಗ್ಯಾರೆಂಟಿ ಕಾರ್ಡ್​​ ಸುಳ್ಳಿನ ಕಾರ್ಡ್​​ ಆಗಿದೆ. ದೇಶದಲ್ಲಿ ಕಾಂಗ್ರೆಸ್​ನ ಆಯಸ್ಸು ಮುಗಿದೆ. 2012 ರಲ್ಲೂ ಗುಜರಾತ್​ನಲ್ಲಿ ಮಾದರಿ ನಿರ್ಮಾಣ ಮಾಡಿಕೊಡುತ್ತೇವೆ ಎಂದು ಸುಳ್ಳಿನ ಗ್ಯಾರೆಂಟಿ ನೀಡಿತ್ತು. ಕಾಂಗ್ರೆಸ್​ನ ವಾರಂಟಿ ಮುಕ್ತಾಯವಾಗಿದೆ.

  • 02 May 2023 12:06 PM (IST)

    Karnataka Election 2023 Live: ಕಾಂಗ್ರೆಸ್​ ಮೊದಲಿನಿಂದಲೂ ಆತಂಕವಾದಿಗಳ ತುಷ್ಟಿಕರಣ ಮಾಡುತ್ತಿದೆ

    ಚಿತ್ರದುರ್ಗ: ಕಾಂಗ್ರೆಸ್​ ಮೊದಲಿನಿಂದಲೂ ಆಂತಕವಾದಿಗಳ ತುಷ್ಟಿಕರಣ ಮಾಡುತ್ತಿದೆ. ಆತಂಕವಾದಿಗಳು ಸತ್ತಾಗ ಕಾಂಗ್ರೆಸ್​ ನಾಯಕರು ಕಣ್ಣೀರು ಹಾಕಿದ್ದರು. ರಾಜ್ಯದಲ್ಲೂ ಕಾಂಗ್ರೆಸ್​ ನಾಯಕರು ಆತಂಕವಾದಿಗಳ ಬೆಂಬಲಿಗೆ ನಿಲ್ಲುತ್ತದೆ.

  • 02 May 2023 12:01 PM (IST)

    Karnataka Election 2023 Live: ಆದಿವಾಸಿ ಮಕ್ಕಳಿಗಾಗಿ 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳು ಆರಂಭ

    ಚಿತ್ರದುರ್ಗ: ಬಿಜೆಪಿ ಸರ್ಕಾರ ಬಡವರ ಮಕ್ಕಳಿಗಾಗಿ ಮೆಡಿಕಲ್​ ಕಾಲೇಜಿನ ಮತ್ತು ಇಂಜನೀಯರಿಂಗ್​ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯುವಂತೆ ವ್ಯವಸ್ಥೆ ಮಾಡುತ್ತಿದ್ದೇವೆ. ಇದರಿಂದ ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುತ್ತದೆ. ರೈತ ಮಕ್ಕಳಿಗೆ ರೈತ ನಿಧಿ ಯೋಜನೆ ಜಾರಿಗೆ ತಂದಿದ್ದೇವೆ. ಆದಿವಾಸಿ ಮಕ್ಕಳಿಗಾಗಿ 400 ಕ್ಕೂ ಹೆಚ್ಚು ಏಕಲವ್ಯ ಶಾಲೆಗಳನ್ನು ಆರಂಭಿಸಿದ್ದೇವೆ. ಆದಿವಾಸಿಗಳ ವಿಕಾಸಕ್ಕೆ ಬಜೆಟ್​ನಲ್ಲಿ ಒಂದು ಕಾಲು ಲಕ್ಷ ಕೋಟಿ ಹಣವನ್ನು ಮೀಸಲಿಟ್ಟಿದ್ದೇವೆ.

  • 02 May 2023 11:59 AM (IST)

    Karnataka Election 2023 Live: ಕೇಂದ್ರ ಸರ್ಕಾರದಿಂದ ನರ್ಸಿಂಗ್​ ಕಾಲೇಜ್​ ಆರಂಭ

    ಚಿತ್ರದುರ್ಗ: ಕಾಂಗ್ರೆಸ್​ ಯಾವತ್ತು ಕೂಡ ಬಿಜೆಪಿಯ ಅಭಿವೃದ್ಧಿ ಬಗ್ಗೆ ಕಲ್ಪನೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಬಿಜೆಪಿ ಸರ್ಕಾರ ಕೇವಲ 9 ವರ್ಷಗಳಲ್ಲಿ ಸಾಕಷ್ಟು ಮೆಡಿಕಲ್​ ಕಾಲೇಜ್​ ಪ್ರಾರಂಭಿಸಿದ್ದೇವೆ. ಚಿತ್ರದುರ್ಗದಲ್ಲೂ ಕೂಡ ಮೆಡಿಕಲ್​​ ಕಾಲೇಜ್​ ಆರಂಭ ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದ ನರ್ಸಿಂಗ್​ ಕಾಲೇಜ್​ ಆರಂಭ ಮಾಡಿದ್ದೇವೆ.

  • 02 May 2023 11:56 AM (IST)

    Karnataka Election 2023 Live: ಎಲ್ಲ ಸಮುದಾಯಕ್ಕೂ ಉತ್ತಮ ಯೋಜನೆಗಳನ್ನು ನೀಡಿದ್ದೇವೆ

    ಚಿತ್ರದುರ್ಗ: ಎಸ್​ಸಿ, ಎಸ್​​ಟಿ ವರ್ಗಕ್ಕೆ ಮತ್ತು ಒಬಿಸಿ ಸಮುದಾಯಕ್ಕೆ ಡಬಲ್​ ಇಂಜಿನ್​ ಸರ್ಕಾರದ ಅಡಿ ಅನೇಕ ಯೋಜನೆ ನೀಡಿದ್ದೇವೆ. ಆದಿವಾಸಿಗಳಿಗೆ ಅನೇಕ ಉತ್ತಮ ಯೋಜನೆ ನೀಡಿದ್ದೇವೆ. ಬಂಜಾರ ಮತ್ತು ಲಂಬಾಣಿ ಸಮುದಾಯದವರಿಗೆ ಹಕ್ಕುಪತ್ರ ನೀಡಿದ್ದೇವೆ. ಭೂಮಿ ಇಲ್ಲದವರಿಗೆ ಭೂಮಿ ನೀಡಿದ್ದೇವೆ. ಮಕ್ಕಳಿಗೆ ಸ್ಕಾಲರ್​ಶಿಪ್​ ನೀಡಿದ್ದೇವೆ.

  • 02 May 2023 11:53 AM (IST)

    Karnataka Election 2023 Live: 7 ಸುತ್ತಿನ ಕೋಟೆ ರೀತಿ 7 ಸುರಕ್ಷಾ ಕೋಟೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ

    ಚಿತ್ರದುರ್ಗ: 7 ಸುತ್ತಿನ ಕೋಟೆ ರೀತಿ 7 ಸುರಕ್ಷಾ ಕೋಟೆ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.  ಮೊದಲನೆಯದು ಪಿಎಂ ಆವಾಸ್​ ಯೋಜನೆ, ಗ್ಯಾಸ್​​, ನೀರು. ಎರಡನೇ ಯೋಜನೆ ಪ್ರತಿ ಮನೆಗು ರೇಷನ್​​​, ಮೂರನೆ ಯೋಜನೆ ಆಯುಷ್​ ಮಾನ್​ ಭಾರತ್​ ಯೋಜನೆ. ನಾಲ್ಕನೇದು ಮುದ್ರಾ ಯೋಜನೆ, ಐದನೇ ಯೋಜನೆ ಬೀಮಾ ಯೋಜನೆ, ಆರನೇ ಯೋಜನೆ ಮಹಿಳೆಯರಿಗೆ ಸುರಕ್ಷೆ, ಏಳನೇದಾಗಿ ಜನದನ್​ ಯೋಜನೆ ಜಾರಿಗೆ ತಂದಿದ್ದೇವೆ.

  • 02 May 2023 11:49 AM (IST)

    Karnataka Election 2023 Live: ಕರ್ನಾಟಕದಲ್ಲಿ 9 ಕೈಗಾರಿಕಾ ಪ್ರದೇಶ ಸ್ಥಾಪನೆ

    ಚಿತ್ರದುರ್ಗಾ: ಕಾಂಗ್ರೆಸ್​ ಮತ್ತು ಜೆಡಿಎಸ್​ ಆಡಳಿತದಲ್ಲಿ ಯೋಜನೆಗಳು ನಿದಾನಗತಿಯಲ್ಲಿ ನಡೆಯುತ್ತಿತ್ತು. ಡಬಲ್​ ಇಂಜಿನ್​ ಸರ್ಕರ ಅಧಿಕಾರಕ್ಕೆ ಬಂದಮೇಲೆ ರೈಲು, ರಸ್ತೆ, ಏರ್ಪೋಟ್​​ ನಿರ್ಮಾಣಕ್ಕೆ ವೇಗ ನೀಡಿದ್ದೇವೆ.  ಕರ್ನಾಟಕದಲ್ಲಿ 9 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಚಿತ್ರದುರ್ಗದಲ್ಲೂ 1 ಕೈಗಾರಿಕಾ ಪ್ರದೇಶ ಸ್ಥಾಪನೆ ಮಾಡುತ್ತೇವೆ. ಇದರಿಂದ ಯುವಕರಿಗೆ ಕೆಲಸ ದೊರೆಯುತ್ತದೆ.

  • 02 May 2023 11:46 AM (IST)

    Karnataka Election 2023 Live: ಕೈ-ತೆನೆ ಅಪರ​ ಭದ್ರಾ ಯೋಜನೆಯನ್ನು ನಿರ್ಲಕ್ಷಿಸಿದ್ದವು

    ಚಿತ್ರದುರ್ಗ: ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ದುರಾಡಳಿತಕ್ಕೆ ಉದಾಹರಣೆ ಅಪರ್​ ಭದ್ರಾ ಯೋಜನೆಯನ್ನು ನಿರ್ಲಕ್ಷಿಸಿದ್ದವು. ನಾವು ಇದಕ್ಕೆ ಚಾಲನೆ ನೀಡಿದ್ದೇವೆ. ಇದರಿಂದ ಚಿತ್ರದುರ್ಗ ಜಿಲ್ಲೆಗೆ ನೀರು ಒದಗಿಸುತ್ತದೆ. ಮುಂದಿನ ದಿನಗಳಲ್ಲಿ ವಾಣಿವಿಲಾಸ ಜಲಾಶಯವನ್ನು ಅಭಿವೃದ್ದಿ ಮಾಡುತ್ತೇವೆ.

  • 02 May 2023 11:44 AM (IST)

    Karnataka Election 2023 Live: ಕಾಂಗ್ರೆಸ್​-ಜೆಡಿಎಸ್​ ವಿರುದ್ಧ ಪ್ರಧಾನಿ ಮೋದಿ ವಾಗ್ದಾಳಿ

    ಚಿತ್ರದುರ್ಗ: ಕಾಂಗ್ರೆಸ್​ ಮತ್ತು ಜೆಡಿಎಸ್​ ಬಾಹ್ಯದಿಂದ ಬೇರೆ ಬೇರೆ ಪಕ್ಷಗಳಂತೆ ಕಂಡರೂ, ಆಂತರಿಕವಾಗಿ ಒಂದೇಯಾಗಿವೆ. ಎರಡು ಪಕ್ಷಗಳು ಕುಟುಂಬ ರಾಜಕಾರಣ, ಭ್ರಷ್ಟಾಚಾರ ಮಾಡುತ್ತಿವೆ. ಸಮಾಜವನ್ನು ಒಡೆಯುತ್ತಿವೆ. ಎರಡು ಪಕ್ಷಗಳ ಪ್ರಾಮುಖ್ಯತೆ ರಾಜ್ಯದ ಅಭಿವೃದ್ದಿಯಲ್ಲ.

  • 02 May 2023 11:41 AM (IST)

    Karnataka Election 2023 Live: ರಾಜ್ಯ ಬಿಜೆಪಿ ಘಟಕ್ಕೆ ಅಭಿನಂದಿಸಿದ ಪ್ರಧಾನಿ ಮೋದಿ

    ಚಿತ್ರದುರ್ಗ: ಕರ್ನಾಟಕ ಬಿಜೆಪಿ ಘಟಕಕ್ಕೆ ನಾನು ಅಭಿನಂದನೆ ತಿಳಿಸುತ್ತೇನೆ. ನಿನ್ನೆ (ಮೇ.02) ಪ್ರಣಾಳಿಕೆ ಬಿಡುಗಡೆ ಮಾಡಿದರು. ಇದು ಮಾದರಿಯಾದಂತಹ ಪ್ರಣಾಳಿಕೆಯಾಗಿದೆ. ಪ್ರಣಾಳಿಕೆಯು ಮಹಿಳೆಯ ಸಬಲೀಕರಣ, ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವಂತಹ ಪ್ರಣಾಳಿಕೆಯಾಗಿದೆ.

  • 02 May 2023 11:38 AM (IST)

    Karnataka Election 2023 Live: ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ

    ಚಿತ್ರದುರ್ಗ: ಈ ಸದ್ದು ಬಹಳ ದೂರು ದೂರುತನಕ ಕೇಳಬೇಕು. ಈ ಬಾರಿಯ ನಿರ್ಧಾರ ಬಹುಮತದ ಬಿಜೆಪಿ ಸರ್ಕಾರ. ಆಜಾದಿ ಕಾ ಅಮೃತ್​ ಮಹೋತ್ಸವದಲ್ಲಿ ಇದು ಕರ್ನಾಟಕದ ಮೊದಲ ಚುನಾವಣೆಯಾಗಿದೆ. ರಾಜ್ಯವನ್ನು ದೇಶದಲ್ಲೇ ನಂಬರ್​​ ಒನ್​ ಮಾಡುವ ಚುನಾವಣೆ. ಮುಂದಿನ 25 ವರ್ಷಗಳಲ್ಲಿ ರಾಜ್ಯ ಸಾಕಷ್ಟು ಅಭಿವೃದ್ಧಿಯಾಗುತ್ತದೆ.

  • 02 May 2023 11:35 AM (IST)

    Karnataka Election 2023 Live: ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

    ಚಿತ್ರದುರ್ಗ: ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ

  • 02 May 2023 11:33 AM (IST)

    Karnataka Election 2023 Live: ತಮಟೆ ಬಾರಿಸುವ ಮೂಲಕ ಸಮಾವೇಶ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ

    ಚಿತ್ರದುರ್ಗ: ತಮಟೆ ಬಾರಿಸುವ ಮೂಲಕ ಸಮಾವೇಶ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ.

  • 02 May 2023 11:12 AM (IST)

    Karnataka Election 2023 Live: ವರುಣಾ ಕ್ಷೇತ್ರದತ್ತ ಹೊರಟ ಅಮಿತ್​ ಶಾ

    ಶಿವಮೊಗ್ಗ: ನಗರದ ಐಬಿ ಹೆಲಿಪ್ಯಾಡ್​ನಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೆಲಿಕಾಪ್ಟರ್​​ನಲ್ಲಿ ವರುಣಾ ಕ್ಷೇತ್ರದತ್ತ ಪಯಣ ಬೆಳಸಿದ್ದಾರೆ.

  • 02 May 2023 10:45 AM (IST)

    Karnataka Election 2023 Live: ಚಿತ್ರದುರ್ಗಕ್ಕೆ ಆಗಮಿಸಿದ ಪ್ರಧಾನಿ ಮೋದಿ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಕುದಾಪುರ ಬಳಿಯ ಡಿಆರ್​​ಡಿಒ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

  • 02 May 2023 10:05 AM (IST)

    Karnataka Congress Manifesto 2023: ಕಾಂಗ್ರೆಸ್​ನ “ಸರ್ವ ಜನಾಂಗದ ಶಾಂತಿಯ ತೋಟ” ಪ್ರಣಾಳಿಕೆ ಮುಖ್ಯಾಂಶಗಳು

    • ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ ಉಚಿತ ವಿದ್ಯುತ್​
    • ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ
    • ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ.
    • ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು
    • ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ
    • ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
    • ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ
    • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ
    • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ
    • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
    • ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ
    • ಬಿಸಿಯೂಟ ನೌಕರರ ಮಾಸಿಕ ಗೌರವಧನ 6 ಸಾವಿರ ರೂ.ಗೆ ಹೆಚ್ಚಳ
    • ರಾತ್ರಿ ಪಾಳಿಯ ಪೊಲೀಸ್​ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ
    • ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
    • ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
    • ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ
    • ಪ್ರತಿ ಜಿಲ್ಲೆಯಲ್ಲೂ ಸುಸಜ್ಜಿತ ಸೈಬರ್ ಪೊಲೀಸ್ ಠಾಣೆಗಳ ನಿರ್ಮಾಣ
    • ಕನಕಪುರದಲ್ಲಿ ವಿಶ್ವದರ್ಜೆಯ ವಿಧಿವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
    • ತಾಲೂಕು ಪಂಚಾಯತ್​, ಗ್ರಾಮ ಪಂಚಾಯತ್​ಗಳಿಗೆ ಬಜೆಟ್​ನಲ್ಲಿ ಅನುದಾನ ಹೆಚ್ಚಳ
    • ಪ್ರತಿ ಗ್ರಾಮ ಪಂಚಾಯತ್​ನಲ್ಲಿ ಹೈಸ್ಪೀಡ್​ ವೈಫೈ ಹಾಟ್​​ಸ್ಪಾಟ್​ ಸ್ಥಾಪನೆ
    • ಪ್ರತಿ ವಿಭಾಗಕ್ಕೆ ಒಂದರಂತೆ ಕೃಷಿ ಬೆಲೆ ಆಯೋಗ ಸ್ಥಾಪನೆ
    • ದ್ರಾಕ್ಷಿ ಬೆಳೆಗಾರರಿಗೆ ಸಬ್ಸಿಡಿ ಒದಗಿಸಲು 500 ಕೋಟಿ ರೂ.
    • ರಬ್ಬರ್ ಕೃಷಿಗಾಗಿ 25 ಕೋಟಿ ರೂ. ವಿಶೇಷ ಪ್ಯಾಕೇಜ್​
    • ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ
    • SC-ST ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ಧ
    • ಕರ್ನಾಟಕ ಕಾಫಿ ಉತ್ತೇಜನಕ್ಕಾಗಿ ಕಾಫಿ ಕರ್ನಾಟಕ ಬ್ರ್ಯಾಂಡ್​ ಸೃಷ್ಟಿ
    • ಸಾವಯವ ಕೃಷಿ ಉತ್ತೇಜನಕ್ಕಾಗಿ 2,500 ಕೋಟಿ ರೂ. ಹೂಡಿಕೆ
    • ಪ್ರತಿ ಲೀಟರ್ ಹಾಲಿನ ಸಬ್ಸಿಡಿ 5 ರೂ.ನಿಂದ 7 ರೂ.ಗೆ ಏರಿಕೆ
  • 02 May 2023 09:50 AM (IST)

    Karnataka Congress Manifesto 2023: ಪ್ರಣಾಳಿಕೆ ಬಿಡುಗಡೆಗೆ ಸಾಂಸ್ಕೃತಿಕ ಟಚ್

    ಪ್ರಣಾಳಿಕೆ ಬಿಡುಗಡೆಗೆ ಸಾಂಸ್ಕೃತಿಕ ಟಚ್ ನೀಡಲಾಗಿದೆ. ವೀಳ್ಯದೆಲೆ ಅಡಿಕೆ, ಅರಿಶಿನ, ಕುಂಕುಮ ಇಟ್ಟು ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಪ್ರಣಾಳಿಕೆ ಪುಸ್ತಕಕ್ಕೆ ಕನ್ನಡದ ಬಾವುಟದ ಬಣ್ಣ ಹಚ್ಚಲಾಗಿದೆ.

  • 02 May 2023 09:47 AM (IST)

    Karnataka Congress Manifesto 2023: ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್​ ಬದ್ಧತೆ’

    ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್​ ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಜನರ ಜತೆ ಚರ್ಚಿಸಿದ ಬಳಿಕ ಪ್ರಣಾಳಿಕೆ ತಯಾರು ಮಾಡಿದ್ದೇವೆ. ಬೆಂಗಳೂರಿನ ಸಮಸ್ಯೆಗಳ ಗುರಿತಿಸಲು ಅನೇಕ ಸಂಸ್ಥೆಗಳ ಸಲಹೆ ಪಡೆದಿದ್ದೇವೆ. ನಮ್ಮ ಮುಖಂಡರ ಜತೆಗೂ ಚರ್ಚಿಸಿ ಪ್ರಣಾಳಿಕೆ ತಯಾರಿಸಿದ್ದೇವೆ. ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್​ ಬದ್ಧತೆ’. ಈ ಘೋಷ ವಾಕ್ಯದೊಂದಿಗೆ ಪ್ರಣಾಳಿಕೆ ತಯಾರು ಮಾಡಿದ್ದೇವೆ. ಮುಂದಿನ 25 ವರ್ಷಗಳ ದೂರದೃಷ್ಟಿ ಇಟ್ಟುಕೊಂಡು ಪ್ರಣಾಳಿಕೆ ತಯಾರಿ ಮಾಡಿದ್ದೇವೆ ಎಂದರು.

  • 02 May 2023 09:45 AM (IST)

    Karnataka Congress Manifesto 2023: ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ

    ಬೆಂಗಳೂರಿನಲ್ಲಿ ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿದ್ದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, CLP ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​​, ಡಾ.ಜಿ.ಪರಮೇಶ್ವರ್​ ಉಪಸ್ಥಿತರಿದ್ದಾರೆ.

  • 02 May 2023 09:09 AM (IST)

    Karnataka Election 2023 Live: ಕಾಂಗ್ರೆಸ್ಸಿಗರು ಮುಕ್ತ ಮನಸ್ಸಿನಿಂದ ನೋಡಿದರೇ ಬಿಜೆಪಿಯ ಸಾಧನೆಗಳು ಕಾಣುತ್ತೆ.

    ಚಿಕ್ಕಮಗಳೂರು: ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನರಿಗಾಗಿ ಇಡೀ ಬದುಕನ್ನು ಮೀಸಲಿಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವ ಮೇಲೆ ಜನರು ವಿಶ್ವಾಸ ಇಟ್ಟಿದ್ದಾರೆ. ಡಬಲ್ ಇಂಜಿನ್ ಸರ್ಕಾರದ ಕೊಡುಗೆ ರಾಜ್ಯದ ಜನರಿಗೆ ಗೊತ್ತು. ರಾಜ್ಯದ ರೈಲ್ವೆ ಯೋಜನೆಗೆ ಕೇಂದ್ರ ಸರ್ಕಾರ ಅನುದಾನ ನೀಡಿದೆ. ಕಾಂಗ್ರೆಸ್ಸಿಗರು ಮುಕ್ತ ಮನಸ್ಸಿನಿಂದ ನೋಡಿದರೇ ಸಾಧನೆಗಳು ಕಾಣುತ್ತೆ. ರಷ್ಯಾ-ಉಕ್ರೇನ್ ಯುದ್ಧ ವೇಳೆ ವಿದ್ಯಾರ್ಥಿಗಳನ್ನು ಕರೆತರಲಾಯ್ತು. ನಂಬಿಕೆಯ ಆಧಾರದಲ್ಲಿ ಮೋದಿ ಬಂದಾಗ ಜನರು ಸೇರುತ್ತಾರೆ. ಕಾಂಗ್ರೆಸ್ಸಿಗರು ಹತಾಶೆಯಿಂದ ಪ್ರಧಾನಿ ಮೋದಿ ಟೀಕೆ ಮಾಡುತ್ತಾರೆ. ಶಾಸಕ ಪ್ರಿಯಾಂಕ್ ಖರ್ಗೆ ಅವರು ತಂದೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಾರೆ. ಪ್ರಧಾನಿ ಮೋದಿ ರಾಜ್ಯಕ್ಕೆ ಬಂದ ಮೇಲೆ ಸರ್ವೆ ವರದಿ ಗಮನಿಸಿದ್ದೇನೆ. ಕರ್ನಾಟಕದಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ಕ್ರಾಸ್ ಮಾಡುತ್ತೆ ಎಂದು ಬಿಜೆಪಿ ನಾಯಕ ಸಿ.ಟಿ.ರವಿ ಹೇಳಿದ್ದಾರೆ.

  • 02 May 2023 08:49 AM (IST)

    Karnataka Election 2023 Live: ತೀರ್ಥಹಳ್ಳಿಯಲ್ಲಿ ರಾಹುಲ್​ ಗಾಂಧಿ ಪ್ರಚಾರ, ಶಿವರಾಜ್​ಕುಮಾರ್​ ಸಾಥ್​​

    ಶಿವಮೊಗ್ಗ: ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್ ಪರ ಕಾಂಗ್ರೆಸ್​ ರಾಹುಲ್ ಗಾಂಧಿ ಪ್ರಚಾರ ನಡೆಸಲಿದ್ದಾರೆ. ರಾಹುಲ್ ಗಾಂಧಿಯವರಿಗೆ ನಟ ಶಿವರಾಜ್​ ಕುಮಾರ್​​ ಸಾಥ್ ನೀಡಲಿದ್ದಾರೆ. ಹಾಗೇ ಗೀತಾ ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಸೇರಿದಂತೆ ಹಲವು ಮುಖಂಡರು ಭಾಗಿಯಾಗುವ ನಿರೀಕ್ಷೆ ಇದೆ.

  • 02 May 2023 08:45 AM (IST)

    Karnataka Election 2023 Live: ಇಂದು ತುಮಕೂರು ಜಿಲ್ಲಗೆ ದೊಡ್ಡಗೌಡರ ಎಂಟ್ರಿ

    ತುಮಕೂರು: ಇಂದು (ಮೇ.02) ಚಿಕ್ಕನಾಯಕನಹಳ್ಳಿ ಹಾಗೂ ಗುಬ್ಬಿ ಜೆಡಿಎಸ್ ಅಭ್ಯರ್ಥಿಗಳ ಪರ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡರು ಮತಯಾಚಿಸಲಿದ್ದಾರೆ.  ಚಿಕ್ಕನಾಯಕನಹಳ್ಳಿ ಜೆಡಿಎಸ್ ಅಭ್ಯರ್ಥಿ ಸುರೇಶ್ ಬಾಬು ಪರ ಪ್ರಚಾರ ಮಾಡಲಿದ್ದಾರೆ.

  • 02 May 2023 08:07 AM (IST)

    Karnataka Election 2023 Live: ಚಿಂತಾಮಣಿಯಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ ಶೋ

    ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ಕ್ಷೇತ್ರದಲ್ಲಿ ಇಂದು (ಮೇ.02) ಪ್ರಿಯಾಂಕಾ ಗಾಂಧಿ ಒಂದೂವರೆ ಕಿ.ಮೀ. ರೋಡ್​ಶೋ ನಡೆಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರೋಡ್​ಶೋ ಆರಂಭವಾಗಲಿದ್ದು, ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್​ ಪರ ಮತಯಾಚಿಸಲಿದ್ದಾರೆ.

  • 02 May 2023 08:00 AM (IST)

    Karnataka Election 2023 Live: ಬೆಣ್ಣೆ ನಗರಿಯಲ್ಲಿ ರಾಹುಲ್ ಗಾಂಧಿ ಪ್ರಚಾರ

    ದಾವಣಗೆರೆ:  ಜಿಲ್ಲೆಯ ಹರಿಹರದಲ್ಲಿ ರಾಹುಲ್‌ ಗಾಂಧಿ ಪ್ರಚಾರ ನಡೆಸಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆ ದಾವಣಗೆರೆ ಜಿಲ್ಲೆಯ ಹರಿಹರ ನಗರದ ಗಾಂಧಿ ಮೈದಾನದಲ್ಲಿ ಪ್ರಚಾರ ಭಾಷಣ ಮಾಡಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಜಿಲ್ಲೆಯ 7 ಕ್ಷೇತ್ರಗಳ ಅಭ್ಯರ್ಥಿಗಳು ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಜೊತೆಗೆ ಕಾಫಿನಾಡು ಚಿಕ್ಕಮಗಳೂರು ನಗರದಲ್ಲಿ ರಾಹುಲ್ ಗಾಂಧಿ ರೋಡ್ ಶೋ ನಡೆಸಲಿದ್ದಾರೆ. ಹೆಚ್.ಡಿ.ತಮ್ಮಯ್ಯ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್ ವೆರೆಗೂ ರೋಡ್ ಶೋ ನಡೆಸಿ ಆಜಾದ್ ಪಾರ್ಕ್ ನಲ್ಲಿ ಬಹಿರಂಗ ಭಾಷಣ ಮಾಡಲಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ಕ್ಷೇತ್ರದಲ್ಲಿ ಪ್ರಿಯಾಂಕಾ ಗಾಂಧಿ ರೋಡ್​ಶೋ ನಡೆಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಡಾ.ಎಂ.ಸಿ.ಸುಧಾಕರ್​ ಪರ ಮತಯಾಚನೆ ಮಾಡಲಿದ್ದಾರೆ.

  • 02 May 2023 07:22 AM (IST)

    Karnataka Election 2023 Live: ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಘರ್ಜನೆ

    ಚಾಮರಾಜನಗರ: ಇಂದು (ಮೇ.02) ಚಾಮರಾಜನಗರ ಜಿಲ್ಲೆಯಲ್ಲಿ ಕೇಂದ್ರ ಸಚಿವ ಅಮಿತ್ ಶಾ ಪ್ರಚಾರ ನಡೆಸಲಿದ್ದಾರೆ. ಹನೂರು, ಕೊಳ್ಳೇಗಾಲ ಬಿಜೆಪಿ ಅಭ್ಯರ್ಥಿಗಳ ಪರ ಮತಬೇಟೆ ಮಾಡಲಿದ್ದಾರೆ. ಹನೂರಿನ ಆರ್.ಎಸ್.ದೊಡ್ಡಿ ಬಳಿಯ ಮೈದಾನದಲ್ಲಿ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿದ್ದು ಹನೂರು ಬಿಜೆಪಿ ಅಭ್ಯರ್ಥಿ ಪ್ರೀತನ್ ನಾಗಪ್ಪ ಪರ ಮತಯಾಚನೆ ಮಾಡಲಿದ್ದಾರೆ. ಬಳಿಕ ಕೊಳ್ಳೇಗಾಲ ಕ್ಷೇತ್ರದ ಸಂತೇಮರಹಳ್ಳಿಯಲ್ಲಿ ಕೊಳ್ಳೇಗಾಲ ಅಭ್ಯರ್ಥಿ ಎನ್.ಮಹೇಶ್ ಪರ ಮತಯಾಚಿಸಲಿದ್ದಾರೆ. ಹಾಗೂ ಸಿದ್ದರಾಮಯ್ಯ ಮಣಿಸಲು ಕೇಂದ್ರ ಸಚಿವ ಅಮಿತ್ ಶಾ ರಣತಂತ್ರ ಹೆಣೆದಿದ್ದು ಬೆಳಗ್ಗೆ 11 ಗಂಟೆಗೆ ವರುಣ ಕ್ಷೇತ್ರದ ಹೊಸಕೋಟೆ ಬಳಿ ಸಮಾವೇಶ ನಡೆಸಲಿದ್ದಾರೆ. ಮಾಜಿ ಸಿಎಂ ಯಡಿಯೂರಪ್ಪ, ಸಂಸದ ವಿ.ಶ್ರೀನಿವಾಸ್​ ಪ್ರಸಾದ್​​ ಭಾಗಿಯಾಗಲಿದ್ದಾರೆ.

  • 02 May 2023 07:11 AM (IST)

    Karnataka Election 2023 Live: ಕಾಫಿನಾಡು ಚಿಕ್ಕಮಗಳೂರಿಗೆ ಇಂದು ರಾಹುಲ್​​​ ಗಾಂಧಿ ಆಗಮನ

    ಚಿಕ್ಕಮಗಳೂರು: ಇಂದು (ಮೇ.02) ಕಾಫಿನಾಡಿಗೆ ಕಾಂಗ್ರೆಸ್​ ನಾಯಕ ರಾಹುಲ್ ಗಾಂಧಿ ಆಗಮಿಸಲಿದ್ದಾರೆ. ಚಿಕ್ಕಮಗಳೂರು ನಗರದಲ್ಲಿ ರೋಡ್ ಶೋ ನಡೆಸಿ, ಅಭ್ಯರ್ಥಿ ಹೆಚ್.ಡಿ.ತಮ್ಮಯ್ಯ ಅವರ ಪರ ಮತಯಾಚನೆ ಮಾಡಲಿದ್ದಾರೆ. ಕೆಇಬಿ ಸರ್ಕಲ್ ನಿಂದ ಅಜಾದ್ ಪಾರ್ಕ್ ಸರ್ಕಲ್​ವೆರೆಗೂ ರೋಡ್ ಶೋ ನಡೆದು, ಕೊನೆಗೆ ಆಜಾದ್ ಪಾರ್ಕ್​ನಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗುತ್ತಾರೆ. ರೋಡ್ ಶೋ ನಲ್ಲಿ 20 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಭಾಗವಹಿಸುವ ಸಾಧ್ಯತೆ ಇದ್ದು, ಬಿಜೆಪಿ ಭದ್ರಕೋಟೆಯಲ್ಲಿ ಶಕ್ತಿ ಪ್ರದರ್ಶನ ಮಾಡಲಿದ್ದಾರೆ.

  • 02 May 2023 06:58 AM (IST)

    Karnataka Election 2023 Live: ಇಂದು ರಾಜ್ಯಕ್ಕೆ ಮತ್ತೆ ಪ್ರಧಾನಿ ಮೋದಿ ಆಗಮನ

    ಚಿತ್ರದುರ್ಗ: ಪ್ರಧಾನಿ ನರೇಂದ್ರ ಮೋದಿಯವರು ಏಪ್ರಿಲ್ 29 ಮತ್ತು 30ರಂದು ರಾಜ್ಯದಲ್ಲಿ ಸಮಾವೇಶ ಭರ್ಜರಿ  ರೋಡ್​ ಶೋ ನಡೆಸಿ ಅಲೆ ಸೃಷ್ಟಿಸಿದ್ದಾರೆ. ಇಂದು ಮತ್ತು ನಾಳೆ (ಮೇ.02, 03)  ಬಿಜೆಪಿ ಅಭ್ಯರ್ಥಿಗಳ ಪರ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಪ್ರಧಾನಿ ಮೋದಿಯವರು ಇಂದು ಬೆಳಗ್ಗೆ 10.25ಕ್ಕೆ ಚಿತ್ರದುರ್ಗಕ್ಕೆ ಆಗಮಿಸಲಿದ್ದು 11 ಗಂಟೆಗೆ ಚಳ್ಳಕೆರೆಯಲ್ಲಿ ಪ್ರಚಾರ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಧ್ಯಾಹ್ನ 1 ಗಂಟೆಗೆ ಹೊಸಪೇಟೆ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಿ ಮಧ್ಯಾಹ್ನ 2.45ಕ್ಕೆ ಸಿಂಧನೂರು ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ನಂತರ ಸಂಜೆ 5 ಗಂಟೆಗೆ ಕಲಬುರಗಿಯಲ್ಲಿ ರೋಡ್​ಶೋ ನಡೆಸಲಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರಿನಲ್ಲಿ ಸುಮಾರು 45 ನಿಮಿಷ ರೋಡ್​ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಲಿದ್ದಾರೆ. ರಾತ್ರಿ ಕಲಬುರಗಿಯಲ್ಲೇ ತಂಗಲಿದ್ದಾರೆ.

Karnataka Breaking Kannada News Live Updates: ಕರ್ನಾಟಕ ವಿಧಾನಸಭೆ ಚುನಾವಣೆಯ ಕಾವು ತಾರಕಕ್ಕೇರಿದೆ. ಅಭ್ಯರ್ಥಿಗಳು ಅಬ್ಬರದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್​ ರಾಷ್ಟ್ರೀಯ ನಾಯಕರ ಶಕ್ತಿ ಪ್ರದರ್ಶನವಾಗುತ್ತಿದೆ. ನಿನ್ನೆ (ಮೇ.01) ರಂದು ಬಿಜೆಪಿಯಿಂದ ಕೇಂದ್ರ ಗೃಹ ಸಚಿವ ಅಮಿತ್​ ಶಾ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಬಿರುಸಿನ ಪ್ರಚಾರ ನಡೆಸಿದರು. ಇತ್ತ ಕಾಂಗ್ರೆಸ್​ನಲ್ಲಿ ನಾಯಕ ರಾಹುಲ್​ ಗಾಂಧಿಯವರ ಪ್ರಚಾರದ ಭರಾಟೆ ಜೋರಾಗಿಯೇ ಇತ್ತು. ಹಾಗೇ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಹಲವು ಮಹತ್ವದ ಘೋಷಣೆಗಳನ್ನು ಮಾಡಿದೆ ಇದರೊಂದಿಗೆ ಇಂದಿನ್​ ಲೇಟೆಸ್ಟ್​​ ಅಪ್ಡೇಟ್ಸ್​​

Published On - 6:58 am, Tue, 2 May 23

Follow us on