Karnataka Election Results and Winner 2023 Highlights: ಜಯನಗರ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ: ಮತಎಣಿಕೆ ಕೇಂದ್ರದ ಬಳಿಯೇ ಕುಳಿತ ಕಾಂಗ್ರೆಸ್​ ನಾಯಕರು

| Updated By: ಗಂಗಾಧರ​ ಬ. ಸಾಬೋಜಿ

Updated on: May 13, 2023 | 11:11 PM

Karnataka Assembly Elections Result and Winner 2023 Highlights Updates in Kannada: ಕರ್ನಾಟಕ ವಿಧಾನಸಭೆ ಚುನಾವಣೆಯ ಬಹುನಿರೀಕ್ಷಿತ ಮತ ಎಣಿಕೆ ಮತ್ತು ಫಲಿತಾಂಶ ಹೊರಬಿದ್ದಿದ್ದೆ. ಕಾಂಗ್ರೆಸ್ ಪಕ್ಷವು 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್​ ನಾಯಕರು ಸಿಹಿ ತಿಂದು ಸಂಭ್ರಮಿಸಿದ್ದಾರೆ.

Karnataka Assembly Polls 2023 Highlights Vote Counting Updates in Kannada: ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಫಲಿತಾಂಶ ಪ್ರಕಟವಾಗಿದೆ ಕರ್ನಾಟಕ ವಿಧಾನಸಭೆ ಚುನಾವಣೆಯ ಬಹುನಿರೀಕ್ಷಿತ ಮತ ಎಣಿಕೆ ಮತ್ತು ಫಲಿತಾಂಶ ಹೊರಬಿದ್ದಿದ್ದೆ. ಕಾಂಗ್ರೆಸ್ ಪಕ್ಷವು 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಈ ಹಿನ್ನೆಲೆ ಕಾಂಗ್ರೆಸ್​ ನಾಯಕರು ಸಿಹಿ ತಿಂದು ಸಂಭ್ರಮಿಸಿದ್ದಾರೆ. ಫಲಿತಾಂಶದ ಸಂಪೂರ್ಣ ಹೈಲೈಟ್ಸ್​ ಇಲ್ಲಿದೆ.

LIVE NEWS & UPDATES

The liveblog has ended.
  • 13 May 2023 11:05 PM (IST)

    Bengaluru Election Result Live: ಮತ ಎಣಿಕೆಯಲ್ಲಿ ಗೊಂದಲ: ತುಷಾರ್ ಗಿರಿನಾಥ್ ಭೇಟಿ

    ಜಯನಗರ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ ಹಿನ್ನೆಲೆ ಮತ ಎಣಿಕೆ ಕೇಂದ್ರಕ್ಕೆ ನಗರ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್‌ ಭೇಟಿ ನೀಡಿದ್ದಾರೆ. ಅಧಿಕಾರಿಗಳು ಕೈಗೊಂಡ ಕ್ರಮದ ಬಗ್ಗೆ ಪರಿಶೀಲಿಸುತ್ತಿದ್ದಾರೆ. ಪರಿಶೀಲನೆ ಬಳಿಕ ಫಲಿತಾಂಶ ಪ್ರಕಟಿಸಲಿದ್ದಾರೆ.

  • 13 May 2023 11:02 PM (IST)

    Bengaluru Election Result Live: 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 135 ಕ್ಷೇತ್ರಗಳಲ್ಲಿ ಭರ್ಜರಿ ಜಯ

    ವಿಧಾನಸಭಾ ಚುನಾವಣೆಯ ಅಂತಿಮ ಫಲಿತಾಂಶ ಪ್ರಕಟವಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಪ್ರಚಂಡ ಬಹುಮತ ಪಡೆದಿದೆ. 224 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ 135 ಕ್ಷೇತ್ರಗಳಲ್ಲಿ ಭರ್ಜರಿ ಜಯ ಗಳಿಸಿದೆ. ಕೇವಲ 65 ಕ್ಷೇತ್ರಗಳಲ್ಲಿ ಮಾತ್ರ ಭಾರತೀಯ ಜನತಾ ಪಕ್ಷಕ್ಕೆ ಗೆಲುವು ಸಾಧಿಸಿದ್ದು, 19 ಕ್ಷೇತ್ರಗಳಲ್ಲಿ ಮಾತ್ರ ಜಾತ್ಯತೀತ ಜನತಾದಳ ಪಕ್ಷ ಜಯ ಗಳಿಸಿದೆ.

  • 13 May 2023 10:59 PM (IST)

    Bengaluru Election Result Live: ಜಯನಗರ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ

    ಬೆಂಗಳೂರು: ಜಯನಗರ ಕ್ಷೇತ್ರದ ಮತ ಎಣಿಕೆಯಲ್ಲಿ ಗೊಂದಲ ಹಿನ್ನೆಲೆ ಮತ್ತೆ ಮತ ಎಣಿಕೆ ಕೇಂದ್ರಕ್ಕೆ ಡಿ.ಕೆ.ಶಿವಕುಮಾರ್‌ ಆಗಮಿಸಿದ್ದಾರೆ. ಜಯನಗರದ SSMRV ಕಾಲೇಜಿನಲ್ಲಿ ಮತಎಣಿಕೆ ಕೇಂದ್ರ ತೆರೆಯಲಾಗಿದ್ದು, ಮುನ್ನೆಚ್ಚರಿಕೆಯಿಂದ ಮತಎಣಿಕೆ ಕೇಂದ್ರದ ಬಳಿ ಭಾರಿ ಭದ್ರತೆ ಒದಗಿಸಲಾಗಿದೆ. ಸುತ್ತಲೂ ಬ್ಯಾರಿಕೇಡ್‌ಗಳನ್ನು ಹಾಕಿ ಪೊಲೀಸ್ ಸರ್ಪಗಾವಲು ನಿಯೋಜನೆ ಮಾಡಲಾಗಿದೆ.

  • 13 May 2023 10:01 PM (IST)

    Bengaluru Election Result Live: ಪ್ರಧಾನಿ ರೋಡ್‌ಶೋನಿಂದ ಬಿಜೆಪಿಗೆ ಸೋಲು ಆಗಿಲ್ಲ

    ನನ್ನ ರಾಜೀನಾಮೆಯನ್ನು ರಾಜ್ಯಪಾಲರು ಸ್ವೀಕರಿಸಿದ್ದಾರೆ ಎಂದು ನಿರ್ಗಮಿತ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಸೋಲಿನ ಹೊಣೆಯನ್ನು ನಾನೇ ಹೊತ್ತುಕೊಳ್ಳುತ್ತೇವೆ. ತಪ್ಪುಗಳನ್ನು ಸರಿಪಡಿಸಿ ಲೋಕಸಭಾ ಚುನಾವಣೆಗೆ ಸಿದ್ಧರಾಗುತ್ತೇವೆ. ಫಲಿತಾಂಶ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಲ್ಲ. ಪ್ರಧಾನಿ ರೋಡ್‌ಶೋನಿಂದ ಬಿಜೆಪಿಗೆ ಸೋಲು ಆಗಿಲ್ಲ. ಬಿಜೆಪಿ ಸೋಲಿಗೆ ಹಲವು ಕಾರಣಗಳಿವೆ ಎಂದು ಹೇಳಿದರು.

  • 13 May 2023 09:57 PM (IST)

    Bengaluru Election Result Live: ಸಿಎಂ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬಸವರಾಜ ಬೊಮ್ಮಾಯಿ

    ಬೆಂಗಳೂರು: ಸಿಎಂ ಸ್ಥಾನಕ್ಕೆ ಬಸವರಾಜ ಬೊಮ್ಮಾಯಿ ಶನಿವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲ ಗೆಹ್ಲೋಟ್​​ರವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಹಿನ್ನೆಲೆ ರಾಜೀನಾಮೆ ಸಲ್ಲಿಕೆ ಮಾಡಲಾಗಿದೆ. 19 ತಿಂಗಳು 17 ದಿನಗಳ ಕಾಲ ಸಿಎಂ ಆಗಿದ್ದರು.

  • 13 May 2023 09:06 PM (IST)

    Bengaluru Election Result Live: 17 ಮತಗಳಿಂದ ಬಿಜೆಪಿ ಗೆದ್ದಿದೆ

    ಬೆಂಗಳೂರು: 17 ಮತಗಳಿಂದ ಬಿಜೆಪಿ ಗೆದ್ದಿದೆ. ಘೋಷಣೆ ಮಾಡದಂತೆ ರಾಮಲಿಂಗಾರೆಡ್ಡಿ ಅವರು ಅಡ್ಡಿ ಮಾಡುತ್ತಿದ್ದಾರೆ. ಚುನಾವಣಾ ಅಧಿಕಾರಿಗಳು ಘೋಷಣೆ ಮಾಡಲು ರೆಡಿ ಇದ್ದಾರೆ. ಅನಧಿಕೃತವಾಗಿ ರಾಮಲಿಂಗಾರೆಡ್ಡಿ ಕೇಂದ್ರದ ಒಳಗೆ ಪ್ರವೇಶಿಸಿದ್ದಾರೆ. ಕಾಂಗ್ರೆಸ್ ಶಾಲು ಹಾಕಿಕೊಂಡು 20 ಜನ ಒಳಗೆ ಕೂತಿದ್ದರು. ಅವರು ಕೇಂದ್ರದ ಒಳಗೆ ಹೋದರೆ ನಾವೂ ಕೂಡಾ ಹೋಗುತ್ತೇವೆ ಎಂದು ಆರ್. ಅಶೋಕ್ ಹೇಳಿದ್ದಾರೆ.

  • 13 May 2023 08:50 PM (IST)

    Bengaluru Election Result Live: ಇದು ನನ್ನ ಇಚ್ಛೆ ಅಲ್ಲ, ಜನರ ಇಚ್ಛೆ ಎಂದ ಪುತ್ರ ಯತೀಂದ್ರ

    ಬೆಂಗಳೂರು: ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಬೇಕೆಂಬುದು ಇದು ನನ್ನ ಇಚ್ಛೆ ಅಲ್ಲ, ಜನರ ಇಚ್ಛೆ ಎಂದು ಪುತ್ರ ಯತೀಂದ್ರ ಹೇಳಿದರು. ಸಂವಿಧಾನದ ಮೇಲೆ ನಂಬಿಕೆ ಮತ್ತು ಸಿದ್ಧಾಂತದ ರಾಜಕಾರಣಿ. ಹೀಗಾಗಿ ನನ್ನ ತಂದೆ ಸಿದ್ದರಾಮಯ್ಯ ಮತ್ತೆ ಸಿಎಂ ಆಗಬೇಕು ಎಂದು ಹೇಳಿದರು.

  • 13 May 2023 08:42 PM (IST)

    Hubballi Election Result Live: ಸೋಲಿನ ಹೊಣೆ ನಾನೇ ವಹಿಸುತ್ತೇನೆ ಎಂದ ಸಿಎಂ ಬೊಮ್ಮಾಯಿ

    ಹುಬ್ಬಳ್ಳಿ: ಸೋಲಿನ ಹೊಣೆ ನಾನೇ ವಹಿಸುತ್ತೇನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು. ಹುಬ್ಬಳ್ಳಿ ಏರ್​​ಪೋರ್ಟ್​ನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷದ ಸೋಲಿಗೆ ಹಲವು ಕಾರಣಗಳಿವೆ. ಹಿರಿಯ ನಾಯಕರ ಜತೆ ಕುಳಿತು ಸೋಲಿನ ಪರಾಮರ್ಶೆ ಮಾಡುತ್ತೇವೆ. ಮುಂದಿನ‌ ಲೋಕಸಭಾ ಚುನಾವಣೆ ವೇಳೆಗೆ ಪುಟಿದೇಳುತ್ತೇವೆ ಎಂದು ಹೇಳಿದರು.

  • 13 May 2023 08:24 PM (IST)

    Congress Press Conference Live: 5 ಗ್ಯಾರಂಟಿ ಜಾರಿಗೆ ತರುವುದಾಗಿ ಚಾಮುಂಡಿ ಮುಂದೆ ಪ್ರಮಾಣ

    ನಮ್ಮ ಸರ್ಕಾರ ಬಂದ ಮೊದಲ ದಿನ ಗೃಹಲಕ್ಷ್ಮೀ ನಗುತ್ತಾಳೆ. ಅನ್ನಭಾಗ್ಯ ಯೋಜನೆ ಬಡವರ ಹೊಟ್ಟೆ ತುಂಬಿಸಲಿದೆ. 5 ಗ್ಯಾರಂಟಿ ಜಾರಿಗೆ ತರುವುದಾಗಿ ನಾನು, ಸಿದ್ದರಾಮಯ್ಯ ಚಾಮುಂಡಿ ಮುಂದೆ ಪ್ರಮಾಣಮಾಡಿದ್ದೇವೆ. ಚುನಾವಣೆ ಗೆಲುವು ನಿಮಗೆ ಅರ್ಪಿಸುವುದಾಗಿ ಸೋನಿಯಾಗೆ ಹೇಳಿದ್ದೆ. ಕಾಂಗ್ರೆಸ್​ನಲ್ಲಿ ವ್ಯಕ್ತಿ ಪೂಜೆ ಇಲ್ಲ, ಪಕ್ಷದ ಪೂಜೆ ಮಾತ್ರ ಎಂದು ಡಿ.ಕೆ.ಶಿವಕುಮಾರ್​ ಹೇಳಿದರು.

  • 13 May 2023 08:13 PM (IST)

    Congress Press Conference Live: ಈಗ ಜನ ಒಂದು ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ

    2013ರಲ್ಲಿ ಬಹುಮತ ನೀಡಿದ್ರಿಂದ 5 ವರ್ಷ ಸುಭದ್ರ ಸರ್ಕಾರ. ಜನರ ಭರವಸೆ ಈಡೇರಿಸಲು ಆಗ ಸಾಧ್ಯವಾಯಿತು. ನಂತರ ಮೈತ್ರಿ ಸರ್ಕಾರದಿಂದ ಕೆಲಸ ಮಾಡಲು ಆಗಲಿಲ್ಲ. ಈಗ ಜನ ಒಂದು ಪಕ್ಷಕ್ಕೆ ಅಧಿಕಾರ ನೀಡಿದ್ದಾರೆ. ಹೊಸ ಬದಲಾವಣೆಗೆ ಜನ ನಾಂದಿಹಾಡಿದ್ದಾರೆ ಎಂದು ಹೇಳಿದರು.

  • 13 May 2023 08:11 PM (IST)

    Congress Press Conference Live: ಜನರು ಬದಲಾವಣೆ ಬಯಸಿದ್ದರು

    ಬಿಜೆಪಿ ಯಾವಾಗ ಯಾವಾಗ ಇತ್ತು ಕುಮಾರಸ್ವಾಮಿ ಯಾವಾಗ ಇದ್ರೂ ಆಗ ಸುಭದ್ರ ಸರ್ಕಾರ ನೀಡಲು ಸಾಧ್ಯವೇ ಆಗಿಲ್ಲ. ಅದಕ್ಕಾಗಿ ಜನ ಒಂದು ಪಕ್ಷಕ್ಕೆ ಅಧಿಕಾರ ನೀಡಬೇಕು ಅಂತ ಬದಲಾವಣೆ ಬಯಸಿದ್ದರು. ಆ ಮೂಲಕ ಕಾಂಗ್ರೆಸ್​​ ಗೆಲುವು ಸಾಧ್ಯತೆ ಆಗಿದೆ.

  • 13 May 2023 08:07 PM (IST)

    Congress Press Conference Live: ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು

    ಬಿಜೆಪಿ ಅಧಿಕಾರಕ್ಕೆ ಬಂದಾಗ ಯಾವತ್ತೂ ಕೂಡ ಜನರ ಆಶೀರ್ವಾದ ಪಡೆದು ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕ ಅಧಿಕಾರಕ್ಕೆ ಬಂದವರು. ಯಾವ ಯಾವಾಗೆಲ್ಲ ಅತಂತ್ರ ವಿಧಾನಸಭೆ ಆಗಿದೆ. ಆ ಎಲ್ಲ ಕಾಲದಲ್ಲೂ ಕೂಡ ಸುಭದ್ರ ಸರ್ಕಾರ ಸಾಧ್ಯವಾಗಿಲ್ಲ ಎಂದು ಸಿದ್ಧರಾಮಯ್ಯ ಹೇಳಿದರು.

  • 13 May 2023 08:05 PM (IST)

    Congress Press Conference Live: ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ: ಸಿದ್ಧರಾಮಯ್ಯ

    ಖರ್ಗೆಯವರು ಜನರು ಕೊಟ್ಟ ತೀರ್ಪಿನ ಬಗ್ಗೆ ಸುದೀರ್ಘವಾಗಿ ಮಾತನಾಡಿದ್ದಾರೆ. ಸುರ್ಜೆವಾಲಾ, ಡಿಕೆಶಿ ಹೇಳಿದಂತೆ ಇದು ಏಳು ಕೋಟಿ ಕನ್ನಡಿಗರ ಗೆಲುವು. ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ ಎಂದು ಮಾಜಿ ಸಿಎಂ ಸಿದ್ಧರಾಮಯ್ಯ ಹೇಳಿದರು.

  • 13 May 2023 08:02 PM (IST)

    Congress Press Conference Live: ನಾಳೆ ಸಂಜೆ ಕಾಂಗ್ರೆಸ್ ಶಾಸಕಾಂಗ ಸಭೆ

    ನಾಳೆ ಸಂಜೆ 5.30ಕ್ಕೆ ಕಾಂಗ್ರೆಸ್ ಶಾಸಕಾಂಗ ಸಭೆ ನಡೆಯಲಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ಇಲ್ಲಿ ವ್ಯಕ್ತಿ ಪೂಜೆ ಇಲ್ಲ, ಇಲ್ಲಿ ಪಕ್ಷದ ಪೂಜೆ ಮಾತ್ರ ಎಂದು ಹೇಳಿದರು.

  • 13 May 2023 08:01 PM (IST)

    Congress Press Conference Live: ಇದು ನನ್ನ, ಸಿದ್ದರಾಮಯ್ಯ ಗೆಲುವಲ್ಲ, ಜನರ ಗೆಲುವು

    ಇದು ನನ್ನ, ಸಿದ್ದರಾಮಯ್ಯ ಗೆಲುವಲ್ಲ, ಜನರ ಗೆಲುವು ಎಂದು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಹೇಳಿದರು. ಮೂರುವರೆ ವರ್ಷದಿಂದ ಇದ್ದ ಗ್ರಹಣ ಅಳಿಸಿ ಹೋಗಿದೆ. ಇದನ್ನು ಅಳಿಸಿದ ಜನರಿಗೆ ಹೃದಯಪೂರ್ವಕ ಅಭಿನಂದನೆ. ಇದು ಭಾರತವನ್ನು ಜೋಡಿಸುವ ಚುನಾವಣಾ ಫಲಿತಾಂಶ ಎಂದರು.

  • 13 May 2023 07:54 PM (IST)

    Congress Press Conference Live: ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್​

    ಮೋದಿ ಗುಜರಾತ್​ ಭೂಮಿ ಪುತ್ರಯಾದರೆ, ನಾನು ಕರ್ನಾಟಕದ ಭೂಮಿ ಪುತ್ರ ಎಂದು ಪ್ರಧಾನಿ ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್​ ಕೊಟ್ಟರು.

  • 13 May 2023 07:47 PM (IST)

    Congress Press Conference Live: ಮೇಕೆದಾಟುವಿನಿಂದ ಪಕ್ಷಕ್ಕೆ ಉತ್ಸಾಹ ಬಂತು

    ಮೇಕೆದಾಟುವಿನಿಂದ ಪಕ್ಷಕ್ಕೆ ಉತ್ಸಾಹ ಬಂತು. ಭಾರತ್ ಜೋಡೋ ಎಲ್ಲೆಲ್ಲಿ ಹೋಗಿದೆಯೋ 99% ನಾವು ಗೆದ್ದಿದ್ದೇವೆ. ಭಾರತ್ ಜೋಡೋದ ದೊಡ್ಡ ಸಾಧನೆ ಇದು ಎಂದು ಹೇಳಿದರು.

  • 13 May 2023 07:43 PM (IST)

    Congress Press Conference Live: ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಜಯ ಎಂದ ಖರ್ಗೆ

    ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರ ಸಹಕಾರ ಪಡೆಯಬೇಕು. ಜನಪರ ಕೆಲಸ ಮಾಡುವ ಮೂಲಕ ಜನರ ಮನಗೆಲ್ಲಬೇಕು. ಸಾಮೂಹಿಕ ನಾಯಕತ್ವಕ್ಕೆ ಸಿಕ್ಕ ಜಯ. ಮೊದಲ ಕ್ಯಾಬಿನೆಟ್​ನಲ್ಲೇ 5 ಗ್ಯಾರಂಟಿ ಈಡೇರಿಸಬೇಕು ಎಂದು ಹೇಳಿದರು.

  • 13 May 2023 07:40 PM (IST)

    Congress Press Conference Live: ರಾಜ್ಯ ನಾಯಕರಿಗೆ ಖರ್ಗೆ ಸೂಚನೆ

    ಇದೇ ಉತ್ಸಾಹವನ್ನು ಉಳಿಸಿಕೊಂಡು ಮುಂದೆಯೋ ಹೋಗಬೇಕಾಗಿದೆ. ನಾವು ಕೊಟ್ಟ ಗ್ಯಾರಂಟಿಯನ್ನು ಅನುಷ್ಟಾನಕ್ಕೆ ತರಬೇಕು. ಗ್ಯಾರಂಟಿ ಅನುಷ್ಟಾನಕ್ಕೆ ಹೆಚ್ಚಿ‌ನ ಒತ್ತು ಕೊಡಿ ಎಂದು ರಾಜ್ಯ ನಾಯಕರಿಗೆ ಖರ್ಗೆ ಸೂಚನೆ ನೀಡಿದರು.

  • 13 May 2023 07:37 PM (IST)

    Congress Press Conference Live: ಈ ವಿಕ್ಟರಿ ಕರ್ನಾಟಕದ ಜನರ ವಿಕ್ಟರಿ

    ಈ ವಿಕ್ಟರಿ ಕರ್ನಾಟಕದ ಜನರ ವಿಕ್ಟರಿ. ಯಾವೊಬ್ಬ ವ್ಯಕ್ತಿಯ ವಿಕ್ಟರಿ ಕೂಡ ಅಲ್ಲ. 35 ವರ್ಷಗಳ ಮೇಲೆ ಭಾರೀ ಬಹುಮತ ನಮಗೆ ಇದರಿಂದ ಬಂದಿದೆ ಎಂದು ಖರ್ಗೆ ಹೇಳಿದರು. ಎಲ್ಲರೂ ಕೂಡ ಕೆಲಸ ಮಾಡಿದ್ದಕ್ಕೆ ವಿಜಯ ಸಿಕ್ಕಿದೆ ಎಂದರು.

  • 13 May 2023 07:35 PM (IST)

    Congress Press Conference Live: ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ ಖರ್ಗೆ

    ಎಲ್ಲರೂ ಸೇರಿ ಇಂದು ಕೆಲಸ ಮಾಡಿರುವುದಕ್ಕೆ ಕಾಂಗ್ರೆಸ್​ಗೆ ಈ ಜಯ ಲಭ್ಯವಾಗಿದೆ. ಇದಕ್ಕೆ ಕರ್ನಾಟಕದ ಜನರು ಸಹ ಕಾರಣ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

  • 13 May 2023 07:28 PM (IST)

    Congress Press Conference Live: ಸೋನಿಯಾ ಗಾಂಧಿ ಅಶೀರ್ವಾದವೇ ಕಾರಣ

    ಸೋನಿಯಾ ಗಾಂಧಿ ಅಶೀರ್ವಾದ ಇಲ್ಲದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಎಲ್ಲ ಕೆಲಸವನ್ನೂ ಸಮರ್ಥವಾಗಿ ಮಾಡಿ ಯಾವುದೇ ಕ್ರೆಡಿಟ್ ತೆಗೆದುಕೊಳ್ಳದವರು ರಾಹುಲ್ ಗಾಂಧಿ. ಕನ್ನಡಿಗ ಕರ್ನಾಟಕದ ಭಾಗ ಎಂಬಂತೆ ಸಮಯ ಕಳೆದಿದ್ದಾರೆ ಎಂದು ಹೇಳಿದರು.

  • 13 May 2023 07:23 PM (IST)

    Congress Press Conference Live: ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ ಸುರ್ಜೇವಾಲ

    ಬೆಂಗಳೂರು: ಇದು ಕಾಂಗ್ರೆಸ್​ ಗೆಲುವಲ್ಲ. ಇಡೀ ಕರ್ನಾಟಕ ರಾಜ್ಯದ ಜನತೆಯ ಗೆಲುವು ಎಂದು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಹೇಳಿದರು. ಕರ್ನಾಟಕದ ಜನತೆಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದ್ದರು.

  • 13 May 2023 07:17 PM (IST)

    ongress Press Conference Live: ಕಾಂಗ್ರೆಸ್​ ನಾಯಕರ ಆಗಮನ

    ಬೆಂಗಳೂರು: ಕೆಪಿಸಿಸಿ ನೂತನ ಕಚೇರಿಯ ಆಡಿಟೋರಿಯಂಗೆ ಕಾಂಗ್ರೆಸ್​ ನಾಯಕರು ಆಗಮಿಸಿದ್ದಾರೆ. ಡಿಕೆ ಸುರೇಶ್, ಕೆಸಿ ವೇಣುಗೋಪಾಲ, ಸುರ್ಜೆವಾಲಾ ಆಗಮಿಸಿದ್ದು, ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಯಲಿದೆ.

  • 13 May 2023 07:04 PM (IST)

    Bengaluru Election Result Live: ಖರ್ಗೆ ನಿವಾಸದಲ್ಲಿ ಕಾಂಗ್ರೆಸ್​ ಮುಖಂಡರ ಮಾತುಕತೆ

    ಬೆಂಗಳೂರು: ನಗರದ ಖರ್ಗೆನಿವಾಸದಲ್ಲಿ ಕಾಂಗ್ರೆಸ್​ ಮುಖಂಡರು ಮಾತುಕತೆ ಮಾಡಿದ್ದು, ರಾಜ್ಯದ ಜನರಿಗೆ ನಾವು ಏನು ಭರವಸೆ ನೀಡಿದ್ದೇವೆ ಅದರ ಬಗ್ಗೆ ಚರ್ಚೆ ಮಾಡಲಾಗಿದೆ. ಮೊದಲೇ ನಾವು ನೀಡಿರುವ ಘೋಷಣೆಗಳ ಬಗ್ಗೆ ಚರ್ಚೆ ಮಾಡಿದ್ದಾರೆ. ರಾಜ್ಯದ ಜನತೆಗೆ ಧನ್ಯವಾದ ಹೇಳುವ ಬಗ್ಗೆ ಕೂಡ ಚರ್ಚೆ ನಡೆಸಿದ್ದಾರೆ.

  • 13 May 2023 07:00 PM (IST)

    Ramanagara Election Result Live: 1,22,392 ಮತಗಳ ಅಂತರದಲ್ಲಿ ಡಿಕೆ ಶಿವಕುಮಾರ್​ ಭರ್ಜರಿ ಗೆಲುವು

    ರಾಮನಗರ: ಕನಕಪುರ ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ.ಶಿವಕುಮಾರ್​ಗೆ 1,22,392 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್​ ಅಭ್ಯರ್ಥಿ ಡಿ.ಕೆ.ಶಿವಕುಮಾರ್​ 1,43,023 ಮತ ಪಡೆದ್ರೆ, ಜೆಡಿಎಸ್ ಅಭ್ಯರ್ಥಿ ನಾಗರಾಜ್ 20,631 ಮತಗಳನ್ನು ಪಡೆದಿದ್ದಾರೆ. ಬಿಜೆಪಿ ಅಭ್ಯರ್ಥಿ ಆರ್.ಅಶೋಕ್ 19,753 ಮತ ಪಡೆದಿದ್ದಾರೆ.

  • 13 May 2023 06:47 PM (IST)

    Bengaluru Election Result Live: ಮರು ಪರಿಶೀಲನೆಯಲ್ಲಿ ಮತ್ತೆ ಗೊಂದಲ

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರ ಫಲಿತಾಂಶ ಗೊಂದಲಕ್ಕೀಡು ಮಾಡಿದೆ. ಮರು ಪರಿಶೀಲನೆಯಲ್ಲಿ ಮತ್ತೆ ಗೊಂದಲ ಉಂಟಾಗಿದ್ದು, ಒಮ್ಮೆ ಮುನ್ನಡೆ, ಮತ್ತೊಮ್ಮೆ ಹಿನ್ನಡೆ ಫಲಿತಾಂಶ ತೋರಿಸುತ್ತಿದೆ. ಎಣಿಕ ಕೇಂದ್ರದಲ್ಲೇ ಸೌಮ್ಯರೆಡ್ಡಿ ಕುಳಿತುಕೊಂಡಿದ್ದಾರೆ. ಗಾಬರಿಯಿಂದ ಮತ ಎಣಿಕೆ ಕೇಂದ್ರದೊಳಗೆ ರಾಮಲಿಂಗಾರೆಡ್ಡಿ ತೆರಳಿದ್ದು, ತಂದೆ ಮಗಳು ಇಬ್ಬರೂ SSMRV ಮತ ಎಣಿಕೆ ಕೇಂದ್ರದಲ್ಲೇ ಇದ್ದಾರೆ.

  • 13 May 2023 06:39 PM (IST)

    Bengaluru Election Result Live: ಡಿಕೆ ಶಿವಕುಮಾರ್ ಸಿಎಂ ಆಗಬೇಕು

    ಬೆಂಗಳೂರು: ನಾನು ಸಂಸದನಾಗಿ, ತಮ್ಮನಾಗಿ ಹೇಳುತ್ತಿದ್ದೇನೆ ಡಿ. ಕೆ ಶಿವಕುಮಾರ್​ ಸಿಎಂ ಆಗಬೇಕು ಎಂದು  ಖರ್ಗೆ ನಿವಾಸದ ಬಳಿ ಡಿಕೆ ಸುರೇಶ್ ಮಹತ್ವದ ಹೇಳಿಕೆ ನೀಡಿದ್ದಾರೆ.

  • 13 May 2023 06:36 PM (IST)

    Mysore Election Result Live: ನರಸಿಂಹರಾಜ ಕ್ಷೇತ್ರದಲ್ಲಿ ಕಾಂಗ್ರೆಸ್​ನ ತನ್ವೀರ್​ ಸೇಠ್​​ ಗೆಲುವು

    ಮೈಸೂರು: ನರಸಿಂಹರಾಜ ಕ್ಷೇತ್ರದಲ್ಲಿ 31,120 ಮತಗಳ ಅಂತರದಲ್ಲಿ ತನ್ವೀರ್ ​ಸೇಠ್ ಗೆಲುವು ಸಾಧಿಸಿದ್ದಾರೆ.​ ಕಾಂಗ್ರೆಸ್​ ಅಭ್ಯರ್ಥಿ ತನ್ವೀರ್​ ಸೇಠ್​​ಗೆ 83,480 ಮತಗಳು ಪಡೆದ್ರೆ, ಬಿಜೆಪಿ ಅಭ್ಯರ್ಥಿ ಸಂದೇಶ್​ ಸ್ವಾಮಿಗೆ 52,360 ಮತಗಳು ಪಡೆದುಕೊಂಡಿದ್ದಾರೆ. ಎಸ್‌ಡಿ‌ಪಿ‌ಐ ಅಭ್ಯರ್ಥಿ ಅಬ್ದುಲ್ ಮಜೀದ್​ಗೆ 41,037 ಮತ ಗಳಿಸಿದ್ದಾರೆ.

  • 13 May 2023 06:23 PM (IST)

    Bengaluru Election Result Live: ಬಿಜೆಪಿ 75 ಹೊಸ ಅಭ್ಯರ್ಥಿಗಳಲ್ಲಿ 19 ಅಭ್ಯರ್ಥಿಗಳು ಗೆಲುವು

    ಬೆಂಗಳೂರು: ಬಿಜೆಪಿ 75 ಹೊಸ ಅಭ್ಯರ್ಥಿಗಳಲ್ಲಿ 19 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

    ಮಹದೇವಪುರ – ಮಂಜುಳ ಲಿಂಬಾವಳಿ, ಹುಬ್ಬಳ್ಳಿ-ಧಾರವಾಡ ಕೇಂದ್ರ – ಮಹೇಶ್ ಟೆಂಗಿನಕಾಯಿ, ಹುಕ್ಕೇರಿ – ನಿಖಿಲ್ ಕತ್ತಿ, ಖಾನಾಪುರ – ವಿಠಲ್ ಹಲಗೇಕರ್, ಬೈಂದೂರು – ಗುರುರಾಜ್ ಗಂಟಿಹೊಳ, ಕಾಪು – ಗುರ್ಮೆ ಸುರೇಶ್ ಶೆಟ್ಟಿ, ಕುಂದಾಪುರ – ಕಿರಣ್ ಕುಮಾರ್ ಕೊಡ್ಗಿ, ಉಡುಪಿ – ಯಶಪಾಲ್ ಸುವರ್ಣ, ಬೇಲೂರು – ಹುಲ್ಲಳ್ಳಿ ಸುರೇಶ್, ಸಕಲೇಶಪುರ – ಸಿಮೆಂಟ್ ಮಂಜು, ಸುಳ್ಯ – ಭಾಗೀರಥಿ ಮುರುಳ್ಯ, ಶಿಕಾರಿಪುರ – ಬಿ.ವೈ. ವಿಜಯೇಂದ್ರ, ಕೃಷ್ಣರಾಜ – ಟಿ.ಎ. ಶ್ರೀವತ್ಸ, ದೊಡ್ಡಬಳ್ಳಾಪುರ – ಧೀರಜ್ ಮುನಿರಾಜು, ಜಮಖಂಡಿ – ಜಗದೀಶ್ ಗುಡಗಂಟಿ, ಶಿರಹಟ್ಟಿ – ಡಾ.ಚಂದ್ರು ಲಮಾಣಿ, ಶಿವಮೊಗ್ಗ ನಗರ- ಚನ್ನಬಸಪ್ಪ, ಹುಮ್ನಾಬಾದ್ – ಸಿದ್ದು ಪಾಟೀಲ್

  • 13 May 2023 06:14 PM (IST)

    Belagavi Election Result Live: ಬಿಜೆಪಿ ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಗಲಾಟೆ

    ಬೆಳಗಾವಿ: ಬೆಳಗಾವಿ ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಎಂಇಎಸ್ ಕಾರ್ಯಕರ್ತರ ನಡುವೆ ಗಲಾಟೆ ಉಂಟಾಗಿದೆ. ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದ್ದು, ಈ ವೇಳೆ ಪಟಾಕಿ ಒಡೆಯದಂತೆ ಎಂಇಎಸ್ ಕಾರ್ಯಕರ್ತರು ತಾಕೀತು ಮಾಡಿದ್ದಾರೆ. ಹಠಕ್ಕೆ ಬಿದ್ದು ಪಟಾಕಿ ಒಡೆಯಲು ಮುಂದಾದ ಬಿಜೆಪಿ ಕಾರ್ಯಕರ್ತರ ಜತೆ ವಾಗ್ವಾದ ನಡೆದಿದೆ. ಸ್ಥಳದಲ್ಲಿ ಬಿಗುವಿಣ ವಾತಾವರಣ ನೂರಕ್ಕೂ ಅಧಿಕ ಪೊಲೀಸರಿಂದ ಬಂದೋಬಸ್ತ್ ಮಾಡಲಾಗಿದೆ.

  • 13 May 2023 06:02 PM (IST)

    Haveri Election Result Live: ನಿಜವಾಯ್ತು ಮೈಲಾರ ಲಿಂಗೇಶ್ವರನ ಕಾರ್ಣಿಕ

    ಹಾವೇರಿ: “ಅಂಬಲಿ ಹಳಿಸಿತು ಕಂಬಳಿ ಬಿಸಿತಲೆ ಪರಾಕ” ಗೊರವಯ್ಯ ಕಾರ್ಣಿಕ ನುಡಿದಿದ್ರು. ಈ ವರ್ಷದ ಫೆಬ್ರುವರಿಯಲ್ಲಿ ನಡೆದ ಮೈಲಾರ ಲಿಂಗ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲಾಗಿತ್ತು. ಈ ವರ್ಷ ಹಾಲು ಮತ ಸಮುದಾಯದ ವ್ಯಕ್ತಿಯ ನೇತೃತ್ವದ ಪಕ್ಷ ಅಧಿಕಾರಕ್ಕೆ ಬರುತ್ತೆ ಅಂತ ನುಡಿದಿದ್ರು. ಕಾರ್ಣಿಕ ನುಡಿದಂತೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಪಡೆದಿದೆ. ಜನರು ಈ ಸರ್ಕಾರದಿಂದ ಬೆಸತಿದ್ದು ರಾಜ್ಯದಲ್ಲಿ ಕುರುಬ ನಾಯಕನ ಸರ್ಕಾರ ಬರುತ್ತೆ ಎಂದು ಪರೋಕ್ಷವಾಗಿ ನುಡಿದಿದ್ರು.

     

  • 13 May 2023 05:59 PM (IST)

    Bengaluru Election Result Live: ಕಾಂಗ್ರೆಸ್​ಗೆ ಅಭಿನಂದನೆ ಸಲ್ಲಿಸಿದ ಪ್ರಧಾನಿ ಮೋದಿ

    ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಪ್ರಕಟಗೊಂಡಿದ್ದು, ಕಾಂಗ್ರೆಸ್ ಪಕ್ಷವು 120ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಹಾಗಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮಾಡುವ ಮೂಲಕ ಕಾಂಗ್ರೆಸ್​ಗೆ ಅಭಿನಂದನೆ ಸಲ್ಲಿಸಿದ್ದಾರೆ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಅವರಿಗೆ ನನ್ನ ಶುಭ ಹಾರೈಕೆಗಳು ಎಂದು ಟ್ವೀಟ್​ ಮಾಡಿದ್ದಾರೆ.

  • 13 May 2023 05:51 PM (IST)

    Bengaluru Election Result Live: 8 ಜಿಲ್ಲೆಗಳಲ್ಲಿ ಬಿಜೆಪಿ ಕೇವಲ ಒಂದು ಸ್ಥಾನಕ್ಕೆ ತೃಪ್ತಿ

    ಬೆಂಗಳೂರು: ಬಹುನಿರೀಕ್ಷಿತ ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ ಬಂದಿದ್ದು, ಕಾಂಗ್ರೆಸ್​ ಗೆಲುವು ಸಾಧಿಸಿದೆ. ಆದರೆ 9 ಜಿಲ್ಲೆಗಳಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. 8 ಜಿಲ್ಲೆಗಳಲ್ಲಿ ಕೇವಲ ಒಂದೊಂದೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದು, 7 ಜಿಲ್ಲೆಗಳಲ್ಲಿ ತಲಾ ಎರಡು ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಚಿಕ್ಕಮಗಳೂರು, ಬಳ್ಳಾರಿ, ಕೊಡಗು, ಮಂಡ್ಯ, ರಾಮನಗರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಕೋಲಾರದಲ್ಲಿ ಶೂನ್ಯ ಸ್ಥಾನ ಸಂಪಾದನೆ ಮಾಡಿದೆ.

  • 13 May 2023 05:05 PM (IST)

    Bengaluru Election Result Live: ಕೆಲವೇ ಕ್ಷಣಗಳಲ್ಲಿ ಕಾಂಗ್ರೆಸ್ ನಾಯಕರಿಂದ ಸುದ್ದಿಗೋಷ್ಠಿ

    ಬೆಂಗಳೂರು: ಕಾಂಗ್ರೆಸ್ ನಾಯಕರಿಂದ ಕೆಲವೇ ಕ್ಷಣಗಳಲ್ಲಿ ಸುದ್ದಿಗೋಷ್ಠಿ ನಡೆಯಲಿದೆ. ಕೆಪಿಸಿಸಿಯ ನೂತನ ಕಚೇರಿ ಸಿದ್ದರಾಮಯ್ಯ, ಡಿಕೆ ಶಿವಕುಮಾರ್​, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲ, ಕೆಸಿ ವೇಣುಗೋಪಾಲ್ ಭಾಗಿಯಾಗಲಿದ್ದು, ಗೆಲುವಿಗೆ ಕಾರಣ ಆದವರನ್ನ ನಾಯಕರು ನೆನಪಿಸಿಕೊಳ್ಳಲಿದ್ದಾರೆ. ರಾಜ್ಯದ ಜನತೆಗೆ ಅಭಿನಂದನೆ, ಮುಂದಿನ ಯೋಜನೆಗಳ ತಂತ್ರದ ಬಗ್ಗೆ ಮಾತನಾಡಲಿದ್ದಾರೆ.

  • 13 May 2023 04:56 PM (IST)

    Bellary Election Result Live: ರಾಮುಲುಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ

    ಬಳ್ಳಾರಿ: ಭರ್ಜರಿ ಗೆಲುವಿನ ಬಳಿಕ ಶಾಸಕ ಬಿ ನಾಗೇಂದ್ರ ಹೇಳಿಕೆ ನೀಡಿದ್ದು, ಶ್ರೀರಾಮುಲು ಮತ್ತೆ ನನ್ನ ಮಧ್ಯದ ಚುನಾವಣೆ ಗುರು ಶಿಷ್ಯರ ಮದ್ಯದ ಚುನಾವಣೆಯಾಗಿತ್ತು. ಧರ್ಮ, ಅಧರ್ಮದ ಮಧ್ಯದ ಚುನಾವಣೆಯಲ್ಲಿ ಧರ್ಮ ಗೆದ್ದಿದೆ. ದುಡ್ಡಿನ ಅಹಂಕಾರದಿಂದ ಗೆಲುವು ಸಾಧಿಸುತ್ತೇನೆ ಅಂತಾ ಅಹಂಕಾರ ತೋರಿದ್ದ ರಾಮುಲುಗೆ ಮತದಾರರು ತಕ್ಕ ಪಾಠ ಕಲಿಸಿದ್ದಾರೆ ಎಂದರು.

  • 13 May 2023 04:38 PM (IST)

    Vijayapura Election Result Live: ಎಲ್ಲರ ಪರಿಶ್ರಮದಿಂದ ನಾನು ಆಯ್ಕೆಯಾಗಿ ಬಂದಿದ್ದೇನೆ

    ವಿಜಯಪುರ: ಬಿಜೆಪಿ ಅಭ್ಯರ್ಥಿ ಬಸನ್​ಗೌಡ ಪಾಟೀಲ್ ಯತ್ನಾಳ್ ಗೆಲುವು ಸಾಧಿಸಿದ್ದಾರೆ. ಹಿಂದುತ್ವ ಹಾಗೂ ಅಭಿವೃದ್ಧಿಪರ ಮತದಾರರು ಮತ ಚಲಾವಣೆ ಮಾಡಿದ್ದಾರೆ. ಎಲ್ಲರ ಪರಿಶ್ರಮದಿಂದ ನಾನು ಆಯ್ಕೆಯಾಗಿ ಬಂದಿದ್ದೇನೆ. ಜಿಲ್ಲೆಯಲ್ಲಿ ಹಾಗೂ ರಾಜ್ಯದಲ್ಲಿ ಟಿಕೆಟ್ ಹಂಚಿಕೆ ವಿಚಾರದಲ್ಲಿ ನಾವು ಎಡವಿದ್ದೇವೆ. ಗೆಲ್ಲುವ ಅಭ್ಯರ್ಥಿಗಳಿಗೆ ನಾವು ಟಿಕೆಟ್ ನೀಡಬೇಕಾಗಿತ್ತು.

  • 13 May 2023 04:28 PM (IST)

    Mysore Election Result Live: ಬಿಜೆಪಿ ಆಟ ಚುನಾವಣೆಯಲ್ಲಿ ನಡೆಯಲಿಲ್ಲ: ಸಿದ್ದರಾಮಯ್ಯ

    ಮೈಸೂರು: ಬಿಜೆಪಿ ಸರ್ಕಾರದ ದುರಾಡಳಿತಕ್ಕೆ ಜನ ಬೇಸತ್ತಿದ್ದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದರು. ನಾನು ಮಾನವತವಾದಿ, ಯಾವುದೇ ಜಾತಿ ವಿರೋಧಿ ಅಲ್ಲ. ಲಿಂಗಾಯತ ವಿರೋಧಿ ಅಂತಾ ನನ್ನ ಬಿಂಬಿಸಲು ಹೊರಟಿದ್ದರು. ಆದರೆ ಬಿಜೆಪಿ ಆಟ ಚುನಾವಣೆಯಲ್ಲಿ ನಡೆಯಲಿಲ್ಲ ಎಂದು ಹೇಳಿದರು.

  • 13 May 2023 04:16 PM (IST)

    Bengaluru Election Result Live: ಸಿಹಿ ಹಂಚಿ ಸಂಭ್ರಮಿಸಿದ ಮಲ್ಲಿಕಾರ್ಜುನ ಖರ್ಗೆ

    ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷಕ್ಕೆ​ ಗೆಲುವು ಹಿನ್ನೆಲೆ ಎಐಸಿಸಿ ಅಧ್ಯಕ್ಷ ಖರ್ಗೆ ಮನೆಯಲ್ಲಿ ನಾಯಕರ ಸಂಭ್ರಮಾಚರಣೆ ಮಾಡಿದ್ದಾರೆ. ಸುರ್ಜೇವಾಲ, ವೇಣುಗೋಪಾಲ್​ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದ್ದಾರೆ.

  • 13 May 2023 04:07 PM (IST)

    Mysore Election Result Live: ರಾಜ್ಯದ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇವೆ: ಸಿದ್ದರಾಮಯ್ಯ

    ಮೈಸೂರು: ನಮ್ಮ ನಿರೀಕ್ಷೆಗೂ ಮೀರಿ ಕಾಂಗ್ರೆಸ್​ಗೆ ರಾಜ್ಯದ ಜನ ಆಶೀರ್ವದಿಸಿದ್ದಾರೆ. ರಾಜ್ಯದ ಜನರಿಗೆ ನೀಡಿರುವ ಭರವಸೆ ಈಡೇರಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು. ಸರ್ಕಾರ ರಚನೆ ಬಳಿಕ ಮೊದಲ ಸಂಪುಟದಲ್ಲೇ ಭರವಸೆ ಈಡೇರಿಸುತ್ತೇವೆ. ವರುಣ ಕ್ಷೇತ್ರದ ಕಾರ್ಯಕರ್ತರ ಪರಿಶ್ರಮದಿಂದ ನಾನು ಗೆದ್ದಿದ್ದೇನೆ. ಮೋದಿ, ಅಮಿತ್ ಶಾ, ನಡ್ಡಾ 100 ಬಾರಿ ಬಂದರೂ ಏನೂ ಆಗಲ್ಲ. ರಾಜ್ಯದಲ್ಲಿ 130 ಕಾಂಗ್ರೆಸ್​ ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಹೇಳುತ್ತಿದ್ದೆ. ಅದರಂತೆ ನಮ್ಮ ಪಕ್ಷಕ್ಕೆ ಜನ ಆಶೀರ್ವದಿಸಿದ್ದಾರೆ ಎಂದರು.

  • 13 May 2023 04:03 PM (IST)

    Mysore Election Result Live: ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸಿದ ಸಿದ್ಧರಾಮಯ್ಯ

    ಮೈಸೂರು: ಕರ್ನಾಟಕದ ಜನತೆಗೆ ಹೃದಯಪೂರ್ವಕ ಧನ್ಯವಾದ ಅರ್ಪಿಸುವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ರಾಜ್ಯದ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು, ಎಐಸಿಸಿ ಅಧ್ಯಕ್ಷ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​, ಸೋನಿಯಾ, ಪ್ರಿಯಾಂಕ್, ರಾಹುಲ್ ಗಾಂಧಿಗೆ ಧನ್ಯವಾದ ತಿಳಿಸಿದ್ದಾರೆ.

  • 13 May 2023 03:50 PM (IST)

    Dharwad Election Result Live: ಧಾರವಾಡ ಗ್ರಾಮೀಣ ಕಾಂಗ್ರೆಸ್ ವಿನಯ್ ಗೆಲುವು

    ಧಾರವಾಡ ಗ್ರಾಮೀಣ ಭಾಗದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ವಿನಯ್ ಕುಲಕರ್ಣಿ 18,144 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಹು-ಧಾ ಸೆಂಟ್ರಲ್​ ಬಿಜೆಪಿ​ ಮಹೇಶ್​​​ ಟೆಂಗಿನನಾಯಿ 34,289 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

  • 13 May 2023 03:38 PM (IST)

    Bengaluru Election Result Live: ಬಿಜೆಪಿ ಸೋಲಿಗೆ ನಾವೆಲ್ಲರೂ ನೈತಿಕ ಹೊಣೆ ಹೊರುತ್ತೇವೆ

    ಬೆಂಗಳೂರು: ಬಿಜೆಪಿ ಸೋಲಿಗೆ ನಾವೆಲ್ಲರೂ ನೈತಿಕ ಹೊಣೆ ಹೊರುತ್ತೇವೆ ಎಂದು ಬಿಜೆಪಿ ಕಚೇರಿಯಲ್ಲಿ ಕೆ.ಗೋಪಾಲಯ್ಯ ಹೇಳಿದರು. ನನ್ನ ಗೆಲ್ಲಿಸಿದ ಮಹಾಲಕ್ಷ್ಮಿ ಲೇಔಟ್ ಕ್ಷೇತ್ರದ ಜನತೆಗೆ ಧನ್ಯವಾದ. ಸೋಲಿನ ಬಗ್ಗೆ ಕುಳಿತು ಚರ್ಚೆ ಮಾಡುತ್ತೇವೆ. ಲೋಕಸಭಾ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದು ಹೇಳಿದರು.

  • 13 May 2023 03:26 PM (IST)

    Bengaluru Election Result Live: ಬಸವನಗುಡಿ ಮತ ಎಣಿಕೆ ಕಾರ್ಯ ಮುಕ್ತಾಯ

    ಬೆಂಗಳೂರು: ಬಸವನಗುಡಿ ಮತ ಎಣಿಕೆ ಕಾರ್ಯ ಮುಕ್ತಾಯವಾಗಿದ್ದು, ಬಿಜೆಪಿ ಅಭ್ಯರ್ಥಿ ಜಯಭೇರಿ ಸಾಧಿಸಿದ್ದಾರೆ. ಬಿಜೆಪಿಯ ರವಿಸುಬ್ರಮಣ್ಯ 78854, ಕಾಂಗ್ರೆಸ್ ನ ಯುಬಿ ವೆಂಕಟೇಶ್ 23876, ಜೆಡಿಎಸ್​ನ ಅರಮನೆ ಶಂಕರ್ 19931 ಮತ್ತು ಬಿಜೆಪಿ 54978 ಮತಗಳ ಅಂತರದ ಜಯ ಲಭ್ಯವಾಗಿದೆ.

  • 13 May 2023 03:17 PM (IST)

    Hubballi Election Result Live: ನನ್ನ ಸೋಲಿಸೋದಲ್ಲ, ಇಡೀ ರಾಜ್ಯದಲ್ಲಿ ಬಿಜೆಪಿ ಸೋಲಿಸಿದರು

    ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್​ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ನಾನು ಕಳೆದ ಒಂದು ವಾರದಿಂದ ಇದನ್ನು ಹೇಳಿದ್ದೆ ಎಂದು ಹುಬ್ಬಳ್ಳಿಯಲ್ಲಿ ಮಾಜಿ‌ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು. ಕಾಂಗ್ರೆಸ್​ಗೆ ಬೆಂಬಲ ನೀಡಿದಕ್ಕೆ ಜನರಿಗೆ ಧನ್ಯವಾದ ಎಂದರು. ನನಗೆ ಗೆಲ್ಲೋಕೆ ಆಗಲ್ಲ. ಜನತೆ ತೀರ್ಪಿಗೆ ಗೌರವ ಕೊಡುತ್ತೇನೆ. ನನ್ನ ಸೋಲಿಸೋದಲ್ಲ,ಇಡೀ ರಾಜ್ಯದಲ್ಲಿ ಬಿಜೆಪಿ ಸೋಲಿಸಿದರು. ನನ್ನ ಟಾರ್ಗೆಟ್ ಮಾಡಿದವರೇ ರಾಜ್ಯದಲ್ಲಿ ಬಿಜೆಪಿ‌ ಸೋಲಿಸಿದರು ಎಂದು ಹೇಳಿದರು.

  • 13 May 2023 03:13 PM (IST)

    Bengaluru Election Result Live: ಸಿಎಂ ಬೊಮ್ಮಾಯಿ ರಾಜೀನಾಮೆ ನೀಡುವ ಸಾಧ್ಯತೆ

    ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಕಾಂಗ್ರೆಸ್​ ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕಿದೆ. ಹೀಗಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ಬಸರಾಜ ಬೊಮ್ಮಾಯಿ ರಾಜೀನಾಮೆಗೆ ಮುಂದಾಗಿದ್ದಾರೆ. ಇಂದು ಸಂಜೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಆಗಮಿಸಿದ ನಂತರ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಲಿದ್ದಾರೆ.

  • 13 May 2023 03:09 PM (IST)

    Karnataka Election Result Live: ಕರ್ನಾಟಕದ ಜನತೆಗೆ ಧನ್ಯವಾದ ತಿಳಿಸಿದ ರಾಹುಲ್​ ಗಾಂಧಿ

    ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ (Congress) ಭರ್ಜರಿಯಾಗಿ ಮುನ್ನಡೆ ಸಾಧಿಸಿ, ಹಲವು ಕ್ಷೇತ್ರಗಳಲ್ಲಿ ಗೆಲುವಿನ ನಗೆ ಬೀರುತ್ತಿದ್ದಂತೆ ದೆಹಲಿಯಲ್ಲಿ ಮಾಧ್ಯಮದವರನ್ನುದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ನಾನು ಮೊದಲಿಗೆ ಕರ್ನಾಟಕದ ಜನತೆಗೆ ಧನ್ಯವಾದಗಳನ್ನು  ಹೇಳಲು ಬಯಸುತ್ತೇನೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

  • 13 May 2023 02:57 PM (IST)

    Hassan Election Result Live: ಮುಸ್ಲಿಂ ಸಮುದಾಯದ ವಿರುದ್ಧ ಪ್ರೀತಂಗೌಡ ಆಕ್ರೋಶ

    ಹಾಸನ: ಸೋಲಿನ ಬಳಿಕ ಮುಸ್ಲಿಂ ಸಮುದಾಯದ ವಿರುದ್ಧ ಪ್ರೀತಂಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐದು ವರ್ಷಗಳ ಕಾಲ ಕೆಲಸ ಮಾಡಿದ್ದೀನಿ. ಕೋವಿಡ್ ಕಾಲದಲ್ಲಿ, ಅನೇಕ ಕಷ್ಟದ ಸಂದರ್ಭದಲ್ಲಿ ಎಲ್ಲರೂ ಮಲಗಿದ್ದರು. ಕೆಲಸ ಮಾಡಿದವರೆಲ್ಲಾ ನಾವು ಇಲ್ಲಿದ್ದಿವಿ, ಜನರು ಮರೆತಿರುವುದಿಲ್ಲ. ಒಂದು ವರ್ಗದ ಜನ ಏನ್ ನಮಗೆ ತೋರ್ಸಿದ್ದಾರೆ ಎಂದರು.

  • 13 May 2023 02:54 PM (IST)

    Belagavi Election Result Live: ರಾಮದುರ್ಗ ಕಾಂಗ್ರೆಸ್ ಅಭ್ಯರ್ಥಿ ಗೆಲುವು

    ಬೆಳಗಾವಿ: ರಾಮದುರ್ಗ ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ್ ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ರಾಮದುರ್ಗ ಕ್ಷೇತ್ರದ 22ನೇ ಸುತ್ತಿನ ಮತ‌ಎಣಿಕೆ ಮುಕ್ತಾಯವಾಗಿದೆ. ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಪಟ್ಟಣ 11420 ಮತಗಳ ಮುನ್ನಡೆ ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಚಿಕ್ಕರೆವಣ್ಣ 66635 ಮತಗಳು ಪಡೆದುಕೊಂಡಿದ್ದಾರೆ.

  • 13 May 2023 02:51 PM (IST)

    Mysore Election Result Live: ಜೆಡಿಎಸ್‌ ಭದ್ರ ಕೋಟೆ ಛಿದ್ರ ಛಿದ್ರ

    ಮೈಸೂರು: ಜೆಡಿಎಸ್‌ ಭದ್ರ ಕೋಟೆ ಆಗಿರುವ ಮೈಸೂರಿನಲ್ಲಿ ಅತೀ ಹೆಚ್ಚು ಸ್ಥಾನ ಗೆಲ್ಲುವ ಜೆಡಿಎಸ್‌ ಕನಸು ಭಗ್ನವಾಗಿದೆ. ಕುಮಾರಸ್ವಾಮಿ ಆಪ್ತ ಸ್ನೇಹಿತ ಸಾ.ರಾ ಮಹೇಶ್‌ಗೆ ಹೀನಾಯ ಸೋಲುಂಟಾಗಿದೆ.

  • 13 May 2023 02:40 PM (IST)

    Channapatna Election Result Live: ಚನ್ನಪಟ್ಟಣದಲ್ಲಿ ಕುಮಾರಸ್ವಾಮಿಗೆ ಜಯ

    ಚನ್ನಪಟ್ಟಣ: ಚನ್ನಪಟ್ಟಣದಲ್ಲಿ ಜೆಡಿಎಸ್​​ ಮುನ್ನಡೆ ಸಾಧಿಸುವ ಮೂಲಕ ಹೆಚ್​.ಡಿ ಕುಮಾರಸ್ವಾಮಿ 15,915 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಬಿಜೆಪಿಯ ಸಿ.ಪಿ.ಯೋಗೇಶ್ವರ್​ಗೆ ಮತ್ತೆ ಮುಖಭಂಗವಾಗಿದೆ.

  • 13 May 2023 02:25 PM (IST)

    Gangavati Election Result Live: ಕೆಆರ್​ಪಿಪಿ ಪಕ್ಷದ ನಾರ್ದನ ರೆಡ್ಡಿ ಗೆಲುವು

    ಕೊಪ್ಪಳ: ಗಂಗಾವತಿಯಲ್ಲಿ ಕೆಆರ್​ಪಿಪಿ ಪಕ್ಷದ ನಾರ್ದನ ರೆಡ್ಡಿ ಗೆಲುವು ಸಾಧಿಸಿದ್ದಾರೆ.

  • 13 May 2023 02:23 PM (IST)

    Karnataka Election Result Live: ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ: ಸಿಎಂ ಬೊಮ್ಮಾಯಿ

    ಬೆಂಗಳೂರು: ಸೋಲಿಗೆ ಹಲವಾರು ಕಾರಣಗಳಿವೆ. ಫಲಿತಾಂಶದ ಬಗ್ಗೆ ಸಮಾಲೋಚನೆ ನಡೆಸುತ್ತೇವೆ. ತಪ್ಪುಗಳನ್ನು ಸರಿಪಡಿಸಿಕೊಂಡು, ಸಮರ್ಥ ವಿರೋಧ ಪಕ್ಷವಾಗಿ ಕಾರ್ಯ ನಿರ್ವಹಿಸುತ್ತೇವೆ ಎಂದು ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

  • 13 May 2023 02:18 PM (IST)

    Gandhinagar Election Result Live: ಗಾಂಧಿನಗರ ಕ್ಷೇತ್ರದಲ್ಲಿ ಮರು ಎಣಿಕೆ

    ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿಮತ್ತೆ ಮರು ಎಣಿಕೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಅಭ್ಯರ್ಥಿ ದಿನೇಶ್ ಗುಂಡೂರಾವ್ ಕಡಿಮೆ ಅಂತರದಲ್ಲಿ ಗೆದ್ದ ಹಿನ್ನಲೆ ಮತ್ತೆ ಮರು ಎಣಿಕೆ ಮಾಡಲು ಮನವಿ ಸಲ್ಲಿಸಲಾಗಿದೆ.

  • 13 May 2023 02:14 PM (IST)

    Jayanagar Election Result Live: ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಗೆಲುವು

    ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು 160 ಮತಗಳ ಅಂತರದಿಂದ ಗೆದ್ದಾರಿದ್ದಾರೆ.

  • 13 May 2023 02:06 PM (IST)

    Karnataka Election Result Live: ಈ ಫಲಿತಾಂಶದ ಬಗ್ಗೆ ಸಮಾಲೋಚನೆ ನಡೆಸುತ್ತೇವೆ: ಬಿಎಸ್​ ಯಡಿಯೂರಪ್ಪ

    ಬೆಂಗಳೂರು: ಈ ಸೋಲು ಬಿಜೆಪಿಗೆ ಹೊಸದೇನಲ್ಲ. 2 ಸ್ಥಾನದಿಂದ ರಾಜ್ಯದಲ್ಲಿ ಸರ್ಕಾರ ರಚಿಸಿದ್ದೇವು. ಇದರಿಂದ ಪಕ್ಷದ ಕಾರ್ಯಕರ್ತರು ದೃತಿಗೆಡಬಾರದು. ಪ್ರಧಾನಿ ನರೇಂದ್ರ ಮೋದಿಯವರ ಅಭಿವೃದ್ಧಿ ಹೊರತಾಗಿಯೂ ಈ ಫಲಿತಾಂಶ ಬಂದಿರುವುದರ ಬಗ್ಗೆ ಸಮಾಲೋಚನೆ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದ್ದಾರೆ.

  • 13 May 2023 02:01 PM (IST)

    Varuna Election Result Live: ವರುಣಾದಲ್ಲಿ ಸಿದ್ದರಾಮಯ್ಯ ಗೆಲುವು

    ಮೈಸೂರು: ರಾಜ್ಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಸಿದ್ದರಾಮಯ್ಯ ಗೆದ್ದಿದ್ದಾರೆ. ವಿ. ಸೋಮಣ್ಣ ಅವರು ಭಾರಿ ಮುಖಭಂಗವಾಗಿದೆ. ವಿ. ಸೋಮಣ್ಣ ಅವರು ಎರಡೂ ಕ್ಷೇತ್ರದಲ್ಲಿ ಸೋಲುಂಡಿದ್ದಾರೆ.

  • 13 May 2023 01:53 PM (IST)

    Kundgol Election Result Live: ಕುಂದಗೋಳ ಕ್ಷೇತ್ರ ಬಿಜೆಪಿ ಎಂಆರ್​ ಪಾಟೀಲ್​​ಗೆ ಗೆಲವು

    ಧಾರವಾಡ: ಕುಂದಗೋಳ ವಿಧಾನಸಭಾ ಕ್ಷೇತ್ರ ಬಿಜೆಪಿ ಎಂ.ಆರ್.ಪಾಟೀಲ್​ ಅವರು ಕಾಂಗ್ರೆಸ್​ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರ ವಿರುದ್ಧ ವಿಜಯಶಾಲಿಯಾಗಿದ್ದಾರೆ.

  • 13 May 2023 01:48 PM (IST)

    Karnataka Assembly Election Result Live: ಸೋಲಿನ ಹೊಣೆ ನಾನೆ ಹೊತ್ತಿಕೊಳ್ಳುವೆ: ನಳಿನ್​ ಕುಮಾರ್​ ಕಟೀಲ್​

    ಬೆಂಗಳೂರು: ರಾಜ್ಯದ ಜನರ ತೀರ್ಮಾನವನ್ನು ನಾನು ಗೌರವಿಸುತ್ತೇನೆ. ಸೋಲಿನ ಹೊಣೆಯನ್ನು ನಾನು ಹೊತ್ತುಕೊಳ್ಳುತ್ತೇನೆ. ಪಕ್ಷ ಸಂಘಟನೆ ಮಾಡುತ್ತೇವೆ. ಬರುವ ಲೋಕಸಭಾ ಚುನಾವಣೆ ಸಂಬಂಧ ಮತ್ತಷ್ಟು ಪಕ್ಷ ಸಂಘಟನೆ ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿದ್ದಾರೆ.

  • 13 May 2023 01:44 PM (IST)

    Maluru Election Result Live: ಮಾಲೂರು ಕ್ಷೇತ್ರ; ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಮರು ಎಣಿಕೆಗೆ ಆಗ್ರಹ

    ಕೋಲಾರ: ಜಿಲ್ಲೆಯ ಜಿದ್ದಾಜಿದ್ದಿನ ಕ್ಷೇತ್ರವಾಗಿದ್ದ ಮಾಲೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ವೈ.ನಂಜೇಗೌಡ ಅವರು ಪ್ರಯಾಸದ ಗೆಲುವು ಸಾಧಿಸಿದ್ದಾರೆ. ಈ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಮರು ಎಣಿಕೆ ಮಾಡುವಂತೆ ಆಗ್ರಹಿಸುತ್ತಿದ್ದಾರೆ. ಈ ವೇಳೆ ಮತ ಎಣಿಕೆ ಕೇಂದ್ರದ ಬಳಿ ತಳ್ಳಾಟ ನೂಕಾಟ ನಡೆದಿದೆ.

  • 13 May 2023 01:37 PM (IST)

    Bagalakote Election Result Live: ಬಾಗಲಕೋಟೆಯಲ್ಲಿ ಹೆಚ್​​ ವೈ ಮೇಟಿಗೆ ಗೆಲವು

    ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಹೆಚ್.ವೈ.ಮೇಟಿಯವರು ಬಿಜೆಪಿ ವೀರಣ್ಣ ಚರಂತಿಮಠ ವಿರುದ್ಧ ಜಯಭೇರಿ ಭಾರಿಸಿದ್ದಾರೆ.

  • 13 May 2023 01:33 PM (IST)

    Karnataka Assembly Election Result Live: ಈ ಚುನಾವಣೆ ಲೋಕಾಸಭಾ ಚುನಾವಣೆಗೆ ದಿಕ್ಸೂಚಿ

    ಮೈಸೂರು: ಈ ಚುನಾವಣೆ ಲೋಕಾಸಭಾ ಚುನಾವಣೆಗೆ ದಿಕ್ಸೂಚಿ. ಎಲ್ಲಾ ಪ್ರಚಾರ ಸಭೆಗಳಲ್ಲೂ ಹೇಳಿದ್ದೇನೆ. ಸುಮಾರು 130 ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತೇವೆ. ಕಾಂಗ್ರೆಸ್ ಪಾರ್ಟಿ ತನ್ನ ಶಕ್ತಿ ಮೇಲೆ ಸರ್ಕಾರ ಮಾಡುತ್ತದೆ. ಜನರು ಬದಲಾವಣೆ ಬಯಸಿದ್ದಾರೆ. 40 ಪರ್ಸೆಂಟ್ ಭ್ರಷ್ಟಾಚಾರ, ಬಿಜೆಪಿ ಸರ್ಕಾರದ ವಿರುದ್ದ ಕೆಂಪಣ್ಣ ಧ್ವ‌‌ನಿ ಎತ್ತಿದ್ದರು. ರಾಜ್ಯದ ಜನ ಬೇಸತ್ತು, ಬಿಜೆಪಿ ತೊಲಗಲಿ ಎಂದು ಪಾಠ ಕಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ, ಮಾಜಿ ಮುಖ್ಯಮಂತ್ರಿ ಬಿಎಸ್​​. ಯಡಿಯೂರಪ್ಪ ಎಲ್ಲರಿಗೂ ಗೊತ್ತಿದ್ದರೂ. ಸುಳ್ಳು ಹೇಳುತ್ತಿದ್ದರು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ಮಾಡಿದರು.

  • 13 May 2023 01:27 PM (IST)

    Hubli-Dharwad Central: ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​ ಶೆಟ್ಟರ್​ಗೆ ಸೋಲು

    ಧಾರವಾಡ: ಹುಬ್ಬಳ್ಳಿ-ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಜಗದೀಶ್​ ಶೆಟ್ಟರ್​​ ಅವರಿಗೆ ಭಾರಿ ಮುಖಭಂಗವಾಗಿದೆ. ಜಗದೀಶ್​ ಶೇಟ್ಟರ್​ ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋತಿಸಿದ್ದಾರೆ.

  • 13 May 2023 01:20 PM (IST)

    Jamkhandi Election Result Live: ಜಮಖಂಡಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್​ ಗುಡಗಂಟಿ ಗೆಲವು

    ಬಾಗಲಕೋಟೆ:  ಜಮಖಂಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಗದೀಶ್​ ಗುಡಗಂಟಿ, ಕಾಂಗ್ರೆಸ್ ಅಭ್ಯರ್ಥಿ  ಆನಂದ ನ್ಯಾಮಗೌಡ ವಿರುದ್ಧ ಗೆದ್ದಿದ್ದಾರೆ.

  • 13 May 2023 01:13 PM (IST)

    Chikkanayakanahalli Election Result Live: ಬಿಜೆಪಿ ಅಭ್ಯರ್ಥಿ ಮಾಧುಸ್ವಾಮಿಗೆ ಸೋಲು

    ತುಮಕೂರು: ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧುಸ್ವಾಮಿ ಅವರು ಸೋಲಾಗಿದೆ.  ಜೆಡಿಎಸ್​  ಅಭ್ಯರ್ಥಿ ಸುರೇಶ್ ಬಾಬು ಅವರಿಗೆ ಜಯವಾಗಿದೆ.

  • 13 May 2023 01:11 PM (IST)

    Ramnagar Election Result Live: ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಸೋಲು

    ರಾಮನಗರ: ರಾಮನಗರ ವಿಧಾನಸಭೆಯ ಫಲಿತಾಂಶ ಹೊರಬಿದ್ದಿದ್ದು ಜೆಡಿಎಸ್ ಪಕ್ಷದ ಅಭ್ಯರ್ಥಿಯಾದ ನಿಖಿಲ್ ಕುಮಾರಸ್ವಾಮಿ ಸೋಲುಂಡಿದ್ದಾರೆ. ಕಾಂಗ್ರೆಸ್​​ ಅಭ್ಯರ್ಥಿ ಇಕ್ಬಾಲ್ ಹುಸೇನ್ ಜಯ ಭಾರಿಸಿದ್ದಾರೆ

  • 13 May 2023 01:08 PM (IST)

    Teradal Election Result Live: ಬಿಜೆಪಿ ಅಭ್ಯರ್ಥಿ ಸಿದ್ದು ಸವದಿಗೆ ಗೆಲುವು

    ಬಾಗಲಕೋಟ: ತೇರದಾಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಿದ್ದು ಸವದಿ ಗೆದ್ದಿದ್ದಾರೆ.

  • 13 May 2023 01:02 PM (IST)

    Karnataka Election Results 2023 Live: ಕಾಂಗ್ರೆಸ್​ಗೆ ಅಭೂತಪೂರ್ವ ಗೆಲುವು, ಡಿಕೆ ಶಿವಕುಮಾರ್​ ಭಾವುಕ

    ಬೆಂಗಳೂರು: ಕಾಂಗ್ರೆಸ್​ಗೆ  ಅಭೂತಪೂರ್ವ ಗೆಲುವು ಸಿಕ್ಕ ಹಿನ್ನೆಲೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ಭಾವುಕರಾಗಿದ್ದಾರೆ. ಕರ್ನಾಟಕದ ಅತಿದೊಡ್ಡ ಗೆಲವಿಗಾಗಿ ಕಾರಣರಾದ ಪಕ್ಷದ ಕಾರ್ಯಕರ್ತರಿಗೆ ಮತ್ತು ನಾಯಕರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

  • 13 May 2023 12:51 PM (IST)

    Kolar Election Result Live: ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸೋಲು

    ಕೋಲಾರ: ಶ್ರೀನಿವಾಸಪುರ ಕ್ಷೇತ್ರದ ಮಾಜಿ ಸ್ಪೀಕರ್​ ರಮೇಶ್ ಕುಮಾರ್ ಸೋತಿದ್ದಾರೆ. ಜೆಡಿಎಸ್​ ವೆಂಕಟಶಿವಾರರೆಡ್ಡಿ ಅವರಿಗೆ ಜಯವಾಗಿದೆ.

  • 13 May 2023 12:49 PM (IST)

    Belagavi Rural Election Live: ಕಾಂಗ್ರೆಸ್​​ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್​ಗೆ ಗೆಲುವು

    ಬೆಳಗಾವಿ:  ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್​ ಗೆದ್ದಿದ್ದಾರೆ

  • 13 May 2023 12:47 PM (IST)

    Modol Election Result Live: ಮುಧೋಳದಲ್ಲಿ ಗೋವಿಂದ ಕಾರಜೋಳ ಸೋಲು

    ಬಾಗಲಕೋಟೆ: ಮುಧೋಳ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಹಾಲಿ ಸಚಿವ ಗೋವಿಂದ ಕಾರಜೋಳ ಅವರು ಹೀನಾಯವಾಗಿ ಸೋತಿದ್ದಾರೆ. ಆರ್​.ಬಿ.ತಿಮ್ಮಾಪುರ 16 ಸಾವಿರ ಮತಗಳ ಅಂತರದಿಂದ ಗೆದ್ದಿದ್ದಾರೆ.

  • 13 May 2023 12:43 PM (IST)

    Gandhinagar Election Result Live: ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ ದಿನೇಶ್ ಗುಂಡೂರಾವ್ ಗೆಲುವು

    ಬೆಂಗಳೂರು: ಗಾಂಧಿನಗರ ವಿಧಾನ ಸಭಾ ಕ್ಷೇತ್ರದಲ್ಲಿ 500 ಮತಗಳ ಅಂತರದಿಂದ ದಿನೇಶ್ ಗುಂಡೂರಾವ್ ಗೆಲುವು ಸಾಧಿಸಿದ್ದಾರೆ.

  • 13 May 2023 12:40 PM (IST)

    Indi Election Result Live: ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್ ಗೆಲುವು

    ವಿಜಯಪುರ: ಇಂಡಿ ಕಾಂಗ್ರೆಸ್ ಅಭ್ಯರ್ಥಿ ಯಶವಂತರಾಯಗೌಡ ಪಾಟೀಲ್ ಗೆಲುವು ಸಾಧಿಸಿದ್ದಾರೆ.

  • 13 May 2023 12:38 PM (IST)

    Mudigere Election Result Live: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ ಗೆಲವು

    ಚಿಕ್ಕಮಗಳೂರು: ಮೂಡಿಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ನಯನ ಮೋಟಮ್ಮ ಗೆದ್ದಿದ್ದಾರೆ.

  • 13 May 2023 12:36 PM (IST)

    Shantinagar Election Result Live: ಶಾಂತಿನಗರದಲ್ಲಿ ಎನ್.ಎ.ಹ್ಯಾರಿಸ್​ಗೆ ಜಯ

    ಬೆಂಗಳೂರು: ಶಾಂತಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಎನ್.ಎ.ಹ್ಯಾರಿಸ್​ಗೆ ಜಯ

  • 13 May 2023 12:33 PM (IST)

    Chikkaballapur Election Result Live: ಡಾ.ಕೆ.ಸುಧಾಕರ್​ಗೆ ಹೀನಾಯ ಸೋಲು

    ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್​ಗೆ ಹೀನಾಯವಾಗಿ ಸೋತಿದ್ದು, ಕಾಂಗ್ರೆಸ್​ನ ಪ್ರದೀಪ್​ ಈಶ್ವರ್ ಅಯ್ಯರ್​ ಜಯಭೇರಿ ಭಾರಿಸಿದ್ದಾರೆ.

  • 13 May 2023 12:29 PM (IST)

    Kalaburgi Election Result Live: ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ ಗೆಲವು

    ಕಲಬುರಗಿ: ಚಿತ್ತಾಪುರ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ16,000 ಮತಗಳ ಅಂತರದಿಂದ ಜಯ

  • 13 May 2023 12:26 PM (IST)

    Athani Election Result Live: ಅಥಣಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ​ ಲಕ್ಷ್ಮಣ ಸವದಿ ಜಯ

    ಬೆಳಗಾವಿ: ಅಥಣಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ​ ಲಕ್ಷ್ಮಣ ಸವದಿಯವರು ವಿಜಯಶಾಲಿಯಾಗಿದ್ದಾರೆ. 59,000ಕ್ಕೂ ಹೆಚ್ಚು ಮತಗಳ ಅಂತರದಿಂದ  ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಅವರನ್ನು ಸೋಲಿಸಿದ್ದಾರೆ.

  • 13 May 2023 12:23 PM (IST)

    Kanakapur Election Live Result: ಬಂಡೆಗೆ ಗೆಲವು, ಸಾಮ್ರಾಟ್​ಗೆ ಮುಖಬಂಗ

    ರಾಮನಗರ: ಹೈವೋಲ್ಟೆಜ್​ ಕ್ಷೇತ್ರವಾಗಿರುವ ಕನಕಪುರದಲ್ಲಿ ಸಾಮ್ರಾಟ್​ ಅಶೋಕ್​ ವಿರುದ್ಧ ಕಾಂಗ್ರೆಸ್​ನ ಬಂಡೆ ಡಿ.ಕೆ.ಶಿವಕುಮಾರ್​ 1 ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಜಯಶಾಲಿಗಳಾಗಿದ್ದಾರೆ.

  • 13 May 2023 12:14 PM (IST)

    Kodagu Election Result Live: ವಿರಾಜಪೇಟೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎ.ಎಸ್.ಪೊನ್ನಣ್ಣ ಜಯ

    ಕೊಡಗು: ವಿರಾಜಪೇಟೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಎ.ಎಸ್.ಪೊನ್ನಣ್ಣ 4,371 ಮತಗಳ ಅಂತರದಿಂದ    ಎ.ಎಸ್.ಪೊನ್ನಣ್ಣ ವಿರುದ್ಧ ಜಯಭೇರಿ ಭಾರಿಸಿದ್ದಾರೆ.

  • 13 May 2023 12:11 PM (IST)

    Haveri Election Result Live: ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿ ಗೆಲುವು

    ಹಾವೇರಿ: ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಗೆಲುವು

  • 13 May 2023 12:08 PM (IST)

    Bellari Election Result Live: ಬಳ್ಳಾರಿ ಗ್ರಾಮಾಂತರದಲ್ಲಿ ಶ್ರೀರಾಮುಲುಗೆ ಸೋಲು

    ಬಳ್ಳಾರಿ: ಬಿಜೆಪಿಯ ಘಟಾನುಘಟಿ ನಾಯಕ ಬಿ.ಶ್ರೀರಾಮುಲು ಅವರು ಬಳ್ಳಾರಿ ಗ್ರಾಮಾಂತರದಲ್ಲಿ ಸ್ಪರ್ಧಿಸಿ  ಸೋತಿದ್ದಾರೆ.  21,000 ಮತಗಳ ಅಂತರದಿಂದ ಕಾಂಗ್ರೆಸ್​ನ​ ಬಿ.ನಾಗೇಂದ್ರ ಗೆದ್ದಿದ್ದಾರೆ.

  • 13 May 2023 11:59 AM (IST)

    Karnataka Election Results 2023 Live: ರೋಣ, ಮಂಗಳೂರು, ದಾವಣಗೆರೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿಗಳ ಜಯ

    ರೋಣದಲ್ಲಿ ಜಿ.ಎಸ್.ಪಾಟೀಲ್, ಮಂಗಳೂರಲ್ಲಿ ಯು.ಟಿ.ಖಾದರ್, ದಾವಣಗೆರೆ ಉತ್ತರ ಎಸ್​.ಎಸ್​ ಮಲ್ಲಿಕಾರ್ಜುನಗೆ ಗೆದ್ದಿದ್ದಾರೆ.

  • 13 May 2023 11:55 AM (IST)

    Chikkaballapur Election Result Live: ಬಾಗೇಪಲ್ಲಿಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಗೆಲವು

    ಚಿಕ್ಕಬಳ್ಳಾಪುರ: ಜಿಲ್ಲೆಯ ಬಾಗೇಪಲ್ಲಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಸ್.ಎನ್.ಸುಬ್ಬಾರೆಡ್ಡಿ  ಅವರು ಬಿಜೆಪಿ ಅಭ್ಯರ್ಥಿ ಮುನಿರಾಜು ಅವರ ವಿರುದ್ಧ 10,000 ಮತಗಳ ಅಂತರದ ವಿಜಯಶಾಲಿಯಾಗಿದ್ದಾರೆ.

  • 13 May 2023 11:47 AM (IST)

    Karnataka Election Results 2023 Live: ಮಹತ್ವದ ಸಭೆ ನಡೆಸಿದ ಡಿಕೆ ಬ್ರದರ್ಸ್​​

    ಬೆಂಗಳೂರು: ಪಕ್ಷಕ್ಕೆ ಸ್ಪಷ್ಟ ಬಹುಮತ ಸಿಕ್ಕ ಹಿನ್ನೆಲೆಸದಾಶಿವನಗರದಲ್ಲಿರುವ ಡಿ.ಕೆ ಶಿವಕುಮಾರ್​ ನಿವಾಸಕ್ಕೆ ಸಹೋದರ ಡಿಕೆ ಸುರೇಶ್​ ಆಗಮಿಸಿ, ಮಹತ್ವದ ಚರ್ಚೆ ನಡೆಸಿದ್ದಾರೆ.

  • 13 May 2023 11:40 AM (IST)

    Shivajinagar Election Result: ಶಿವಾಜಿನಗರದಲ್ಲಿ ರಿಜ್ವಾನ್ ಅರ್ಷದ್ ಜಯ

    ಬೆಂಗಳೂರು: ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​​ ಅಭ್ಯರ್ಥಿ ರಿಜ್ವಾನ್ ಅರ್ಷದ್​ ಗೆಲವು ಸಾಧಿಸಿದ್ದಾರೆ.

  • 13 May 2023 11:37 AM (IST)

    Chamarajanagar Election Result Live: ಸೋಮಣ್ಣಗೆ ಸೋಲು, ಸಿ.ಪುಟ್ಟರಂಗಶೆಟ್ಟಿಗೆ ಗೆಲವು

    ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದಲ್ಲಿ ವಿ.ಸೋಮಣ್ಣಗೆ ಸೋತಿದ್ದಾರೆ. ಕಾಂಗ್ರೆಸ್​ನ ಸಿ.ಪುಟ್ಟರಂಗಶೆಟ್ಟಿಗೆ ಗೆದ್ದಿದ್ದಾರೆ.

  • 13 May 2023 11:34 AM (IST)

    Chamrajpet Election Result Live: ಜಮೀರ್ ಅಹ್ಮದ್​ಗೆ ಜಯ

    ಬೆಂಗಳೂರು: ಚಾಮರಾಜಪೇಟೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ​ ಜಮೀರ್ ಅಹ್ಮದ್​ ಜಯಭೇರಿ ಭಾರಿಸಿದ್ದಾರೆ.

     

  • 13 May 2023 11:32 AM (IST)

    Karnataka Election Results 2023 Live: ಬಿಜೆಪಿ 73, ಕಾಂಗ್ರೆಸ್​ 118 ಮುನ್ನಡೆ

    224 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ 118, ಬಿಜೆಪಿ 73, ಜೆಡಿಎಸ್​ 25, ಕೆಆರ್​​ಪಿಪಿ 1, ಎನ್​ಸಿಪಿ 1, ಎಸ್​ಕೆಪಿ 1 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

  • 13 May 2023 11:31 AM (IST)

    Hassan Election Result Live: ಹಾಸನದಲ್ಲಿ ಜೆಡಿಎಸ್​ ಅಭ್ಯರ್ಥಿ ಸ್ವರೂಪ್​ಗೆ ಗೆಲವು

    ಹಾಸನ: ಜೆಡಿಎಸ್​ ಟಿಕೆಟ್​ ಹಂಚಿಕೆ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿ ಕೊನೆಗು ಟಿಕಟ್​ ಸ್ವರೂಪ್​ಗೆ ಒಲದಿತ್ತು. ಇದೀಗ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ​ ​ಸ್ವರೂಪ್ ಪ್ರಕಾಶ್​ ಜಯಗಳಿಸುವ ಮೂಲಕ ಹೆಚ್​.ಡಿ ಕುಮಾರಸ್ವಾಮಿ ತಂತ್ರಗಾರಿಕೆಗೆ ಗೆಲುವಾಗಿದೆ.

  • 13 May 2023 11:18 AM (IST)

    Puttur Election Result Live: ಪುತ್ತೂರಲ್ಲಿ ಅರುಣ್ ಕುಮಾರ್ ಪುತ್ತಿಲ ಮುನ್ನಡೆ

    ದಕ್ಷಿಣ ಕನ್ನಡ: ಪುತ್ತೂರು ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ 91 ಮತಗಳಿಂದ ​ಮುನ್ನಡೆ ಸಾಧಿಸಿದ್ದಾರೆ. ಕಾಂಗ್ರೆಸ್​ನ ಅಶೋಕ್ ಕುಮಾರ್ ರೈಗೆ 2ನೇ ಸ್ಥಾನ

  • 13 May 2023 11:11 AM (IST)

    Karnataka Election Results 2023 Live : ಗೆಲುವಿನ ಖಾತೆ ತೆರೆದ ಕಾಂಗ್ರೆಸ್​

    ಚಳ್ಳಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಟಿ.ರಘುಮೂರ್ತಿ,  ಕೂಡ್ಲಗಿ ವಿಧಾಸಭಾ ಕ್ಷೇತ್ರದಲ್ಲಿಎನ್.ಟಿ.ಶ್ರೀನಿವಾಸ್ ಜಯಭೇರಿ ಭಾರಿಸಿದ್ದಾರೆ.

  • 13 May 2023 10:59 AM (IST)

    Shiggavi Election Result Live: ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಮುನ್ನಡೆ

    ಹಾವೇರಿ: ಶಿಗ್ಗಾಂವಿ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಅವರು 21,888 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

  • 13 May 2023 10:57 AM (IST)

    Kolar Election Live Result: ಕೋಲಾರದಲ್ಲಿ ಆಪರೇಷನ್​ ಕಾಂಗ್ರೆಸ್​ ? ಪಕ್ಷೇತರ ಅಭ್ಯರ್ಥಿಗೆ ಗಾಳ

    ಕೋಲಾರ: ಜಿಲ್ಲೆಯಲ್ಲಿ ಆಪರೇಷನ್ ಕಾಂಗ್ರೆಸ್​ ನಡೆಯುವ ಸಾಧ್ಯತೆ ಇದೆ. ಮಾಲೂರು ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್ ಕುಮಾರ್ ಅವರನ್ನು ಕೈ ನಾಯಕರು ಸಂಪರ್ಕಿಸಲು ಯತ್ನಿಸುತ್ತಿದ್ದಾರೆ ಎಂಬ ಮೂಲಗಳಿಂದ ಮಾಹಿತಿ ದೊರೆತಿದೆ. ಸದ್ಯ ಹೂಡಿ ವಿಜಯ್​ ಕುಮಾರ್​​ ಮುಳಬಾಗಿಲು ಕುರುಡುಮಲೆ ದೇಗಲಕ್ಕೆ ತೆರಳಿದ್ದಾರೆ. ಹೂಡಿ ವಿಜಯ್ ಕುಮಾರ್  ಅವರಿಗೆ ಬಿಜೆಪಿ ಟಿಕೆಟ್ ಕೈ ತಪ್ಪಿತ್ತು.

  • 13 May 2023 10:53 AM (IST)

    Bellari Election Result Live: ಬಳ್ಳಾರಿಯಲ್ಲಿ ಕಾಂಗ್ರೆಸ್​ ಮುನ್ನಡೆ

    ಬಳ್ಳಾರಿ

    ಬಳ್ಳಾರಿ ಗ್ರಾಮೀಣ

    ಎಂಟು ಸುತ್ತು ಮುಕ್ತಾಯ

    ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ – 47,930

    ಬಿಜೆಪಿ ಅಭ್ಯರ್ಥಿ ಶ್ರೀರಾಮುಲು – 27,767

    ಕಾಂಗ್ರೆಸ್ ಅಭ್ಯರ್ಥಿ ನಾಗೇಂದ್ರ  20,163 ಮುನ್ನಡೆ

    ಬಳ್ಳಾರಿ ನಗರ ಕ್ಷೇತ್ರ

    ಬಿಜೆಪಿ ಅಭ್ಯರ್ಥಿ ಸೋಮಶೇಖರ ರೆಡ್ಡಿ – 6115

    ಕೆಆರ್​​ಪಿಪಿ ಅಭ್ಯರ್ಥಿ ಲಕ್ಷ್ಮೀ ಅರಣ – 10, 483

    ಕಾಂಗ್ರೆಸ್ ಅಭ್ಯರ್ಥಿ ನಾರಾ ಭರತ್ ರೆಡ್ಡಿ -14138

    ಕಾಂಗ್ರೆಸ್ ‌3700 ಮತಗಳಿಂದ ಕಾಂಗ್ರೆಸ್ ಮುನ್ನಡೆ

    ಶಿರಗುಪ್ಪ

    5ನೇ ಸುತ್ತಲಿನ ಮತ ಎಣಿಕೆ ಮುಕ್ತಾಯ

    ಕಾಂಗ್ರೆಸ್ ಅಭ್ಯರ್ಥಿ ಬಿ ಎಂ‌ ನಾಗರಾಜ -27129

    ಬಿಜೆಪಿ ಅಭ್ಯರ್ಥಿ ಸೋಮಲಿಂಗಪ್ಪ – 1625

    ಕಾಂಗ್ರೆಸ್ ಅಭ್ಯರ್ಥಿ ಬಿ ಎಂ‌ ನಾಗರಾಜ ಮುನ್ನಡೆ – 10872

     

  • 13 May 2023 10:43 AM (IST)

    Dakashin Kannada Election Result Live: ದಕ್ಷಿಣ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿಗಳ ಮುನ್ನಡೆ

    ದಕ್ಷಿಣ ಕನ್ನಡ

    ಮೂಡಬಿದಿರೆ 4ನೇ ಸುತ್ತಿನ ಮತ ಎಣಿಕೆ

    ಉಮಾನಾಥ್ ಕೋಟ್ಯಾನ್ 6523 ಮತಗಳ ಮುನ್ನಡೆ

    ಬಿಜೆಪಿ ಅಭ್ಯರ್ಥಿ ಉಮಾನಾಥ್ ಕೋಟ್ಯಾನ್- 23,223

    ಕಾಂಗ್ರೆಸ್​ ಅಭ್ಯರ್ಥಿ ಮಿಥುನ್ ರೈ – 16700

    ಬಂಟ್ವಾಳ ನಾಲ್ಕನೇ ಸುತ್ತಿನ ಮತ ಎಣಿಕೆ

    ಬಿಜೆಪಿ ರಾಜೇಶ್ ನಾಯಕ್ – 22,578

    ಕಾಂಗ್ರೆಸ್ ನ ರಮಾನಾಥ್ ರೈ- 17,704

    ಬಂಟ್ವಾಳ ಬಿಜೆಪಿ ರಾಜೇಶ್ ನಾಯಕ್​ಗೆ 4874 ಮತಗಳ ಮುನ್ನಡೆ

    ಸುಳ್ಯ ವಿಧಾನಸಭಾ ಕ್ಷೇತ್ರದ ಐದನೇ ಸುತ್ತು ಮತ ಎಣಿಕೆ

    ಬಿಜೆಪಿ ಭಾಗೀರಥಿ ಮುರುಳ್ಯ- 27,213

    ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ – 21,366

    ಭಾಗೀರಥಿ ಮುರುಳ್ಯ ಅವರು 5,847 ಮತಗಳ ಮುನ್ನಡೆ

    ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಆರನೇ ಸುತ್ತಿನ ಮತ ಎಣಿಕೆ

    ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜಾ – 35,193

    ಕಾಂಗ್ರೆಸ್ ನ ರಕ್ಷಿತ್ ಶಿವರಾಂ- 30,043

    ಹರೀಶ್ ಪೂಂಜಾ 5150 ಮತಗಳ ಮುನ್ನಡೆ

  • 13 May 2023 10:33 AM (IST)

    Karnataka Election Results 2023 Live ಖಾಸಗಿ ಹೊಟೇಲ್​ನಲ್ಲಿ ಕಾಂಗ್ರೆಸ್​ ನಾಯಕರ ಸಭೆ ಸಾಧ್ಯತೆ

    ಬೆಂಗಳೂರು: ಮುನ್ನಡೆಯಲ್ಲಿ ಮ್ಯಾಜಿಕ್ ನಂಬರ್ ದಾಟಿದ ಹಿನ್ನೆಲೆ ಕಾಂಗ್ರೆಸ್​ ಶಾಸಕರನ್ನು ಒಟ್ಟುಗೂಡಿಸಲು ಕೈ ನಾಯಕರು ಶಾಂಗ್ರಿಲಾ ಹೋಟೆಲ್​ನಲ್ಲಿ ಸಭೆ ಸೇರುವ ಸಾಧ್ಯತೆ ಇದೆ.

     

  • 13 May 2023 10:31 AM (IST)

    Vijayapura Election Result Live: ವಿಜಯಪುರದ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಮುನ್ನಡೆ

    ವಿಜಯಪುರ: 

    ಮುದ್ದೇಬಿಹಾಳ – 4ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 1396

    ದೇವರಹಿಪ್ಪರಗಿ – 5ನೇ ಸುತ್ತು – ಜೆಡಿಎಸ್ ಮುನ್ನಡೆ – 4686

    ಬಸವನ‌ಬಾಗೇವಾಡಿ – 3ನೇ ಸುತ್ತು – ಜೆಡಿಎಸ್ ಮುನ್ನಡೆ – 1136

    ಬಬಲೇಶ್ವರ – 4ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 3873

    ವಿಜಯಪುರ ನಗರ – 2ನೇ ಸುತ್ತು – ಬಿಜೆಪಿ ಮುನ್ನಡೆ – 9132

    ನಾಗಠಾಣ – 3ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 6783

    ಇಂಡಿ – 5ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 4048

    ಸಿಂದಗಿ – 6ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 37

  • 13 May 2023 10:26 AM (IST)

    Karnataka Election Results 2023 Live: ಬಿಜೆಪಿ 74, ಕಾಂಗ್ರೆಸ್​ 110 ಕ್ಷೇತ್ರಗಳಲ್ಲಿ ಮುನ್ನಡೆ

    ಬೆಂಗಳೂರು: 224 ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಆರಂಭವಾಗಿದ್ದು, ಬಿಜೆಪಿ 74, ಕಾಂಗ್ರೆಸ್​ 110, ಜೆಡಿಎಸ್​ 25, ಕೆಆರ್​ಪಿಪಿ 1, ಎಸ್​ಕೆಪಿ 1, ಇತರೆ 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.

  • 13 May 2023 10:11 AM (IST)

    Mysore Election Result Live: ವರುಣಾದಲ್ಲಿ ಸಿದ್ದರಾಮಯ್ಯ ಮುನ್ನಡೆ

    ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಮುನ್ನಡೆ

    ಕಾಂಗ್ರೆಸ್​ನ ಸಿದ್ದರಾಮಯ್ಯ- 6576

    ಬಿಜೆಪಿಯ ವಿ.ಸೋಮಣ್ಣ- 3866

    ಕೃಷ್ಣರಾಜ ಮತಕ್ಷೇತ್ರ- ಬಿಜೆಪಿಯ ಶ್ರೀವತ್ಸ ಮುನ್ನಡೆ

    ಬಿಜೆಪಿಯ ಶ್ರೀವತ್ಸ- 2098 ಮತಗಳ ಮುನ್ನಡೆ

    ಕಾಂಗ್ರೆಸ್ ಎಂ.ಕೆ.ಸೋಮಶೇಖರ್- 6415

    ಬಿಜೆಪಿಯ ಶ್ರೀವತ್ಸಗೆ-8513

    ನಂಜನಗೂಡು ಕಾಂಗ್ರೆಸ್ ದರ್ಶನ್ ಮುನ್ನಡೆ

    ನಂಜನಗೂಡು ಬಿಜೆಪಿ ಹರ್ಷವರ್ಧನ್​ ಹಿನ್ನಡೆ

    ಹೆಚ್​.ಡಿ.ಕೋಟೆ ಕಾಂಗ್ರೆಸ್​ ಅನಿಲ್ ಮುನ್ನಡೆ

Published On - 5:30 am, Sat, 13 May 23

Follow us on