Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ 28 ಕ್ಷೇತ್ರಗಳಿಗೆ ಈ 4 ಕೇಂದ್ರಗಳಲ್ಲೇ ಮತ ಎಣಿಕೆ; ರಾಜ್ಯದ ಭವಿಷ್ಯಕ್ಕೆ ಕ್ಷಣಗಣನೆ ಶುರು

28 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರೋ ಸಿಬ್ಬಂದಿ ಹಾಗು ಅಧಿಕಾರಿಗಳು 7.30ರೊಳಗೆ ತಮಗೆ ನಿಗಧಿಪಡಿಸಿರೋ ಕೇಂದ್ರಗಳಲ್ಲಿ ಹಾಜರು ಇರಬೇಕಿದೆ.

ಬೆಂಗಳೂರಿನ 28 ಕ್ಷೇತ್ರಗಳಿಗೆ ಈ 4 ಕೇಂದ್ರಗಳಲ್ಲೇ ಮತ ಎಣಿಕೆ; ರಾಜ್ಯದ ಭವಿಷ್ಯಕ್ಕೆ ಕ್ಷಣಗಣನೆ ಶುರು
ಕರ್ನಾಟಕ ಚುನಾವಣೆ ಫಲಿತಾಂಶ, ಮಾನ್ವಿ ಕ್ಷೇತ್ರ
Follow us
ಆಯೇಷಾ ಬಾನು
|

Updated on:May 13, 2023 | 6:54 AM

ಬೆಂಗಳೂರು: ಕುತೂಹಲ ಮೂಡಿಸಿದ್ದ, ತುದಿಗಾಲಲ್ಲಿ ನಿಂತು ಕಾಯುತ್ತಿದ್ದ ಕ್ಷಣ ಬಂದೇ ಬಿಟ್ಟಿದೆ(Karnataka Assembly Elections 2023). ರಾಜ್ಯದ ಚುಕ್ಕಾಣಿಯನ್ನ ಯಾರು ಹಿಡಿಯಲಿದ್ದಾರೆ ಅನ್ನೋ ಭವಿಷ್ಯಕ್ಕೆ ಇಂದು ಉತ್ತರ ಸಿಗಲಿದೆ. ಇಂದು(ಮೇ 13) ಬೆಳಿಗ್ಗೆ 8 ಗಂಟೆಯಿಂದ ರಾಜ್ಯಾದ್ಯಂತ ಮತಎಣಿಕೆಯ ಪ್ರಕ್ರಿಯೆ ಆರಂಭವಾಗಲಿದ್ದು, ಬೆಂಗಳೂರು ನಗರಕ್ಕೆ ಸಂಬಂಧಪಟ್ಟಂತೆ ಏನೆಲ್ಲ ಭದ್ರತೆ ಹಾಗು ಸಿದ್ದತೆಯನ್ನು ಮಾಡಿಕೊಳ್ಳಲಾಗಿದೆ ಅನ್ನೋದ್ರ ಮಾಹಿತಿ ಇಲ್ಲಿದೆ

ನಗರದಲ್ಲಿ 28 ವಿಧಾನಸಭಾ ಕ್ಷೇತ್ರಗಳು, 4 ಮತಎಣಿಕೆ ಕೇಂದ್ರಗಳು

ಇಂದು ರಾಜ್ಯಾದ್ಯಂತ ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ಅದರಲ್ಲೂ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳ ಮುಂದಿನ ಶಾಸಕರು ಯಾರು ಎಂಬ ಭವಿಷ್ಯ ಇಂದು ಹೊರಬೀಳಿಲಿದೆ. ಎಸ್ಎಸ್ಎಂಆರ್‌ವಿ ಕಾಲೇಜು, ಬಿಎಂಎಸ್ ಕಾಲೇಜು, ಮೌಂಟ್ ಕಾರ್ಮೆಲ್ ಕಾಲೇಜು ಹಾಗು ಸೇಂಟ್ ಜೋಸೆಫ್ ಕಾಲೇಜುಗಳಲ್ಲಿ ಬೆಂಗಳೂರಿನ 28 ಕ್ಷೇತ್ರಗಳ ಮತಎಣಿಕೆ ನಡೆಯಲಿದ್ದು, ಈ ಕೇಂದ್ರಗಳ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಇನ್ನು, ಈ ಮತಎಣಿಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿರೋ ಸಿಬ್ಬಂದಿಗೆ ನಿನ್ನೆ ಕೊನೆಯ ಹಂತದ ತರಬೇತಿ ನೀಡಲಾಗಿದ್ದು, ಬೆಂಗಳೂರು ನಗರ ಜಿಲ್ಲಾಧಿಕಾರಿ ಹಾಗು ಬೆಂಗಳೂರು ನಗರ ಚುನಾವಣಾಧಿಕಾರಿ ಭಾಗಿಯಾಗಿದ್ದರು.

ಇದನ್ನೂ ಓದಿ: Karnataka Assembly Election: ಕಳೆದ ವಿಧಾನಸಭೆ ಚುನಾವಣೆಯಲ್ಲಿ 5 ಸಾವಿರ ಮತಗಳ ಅಂತರದಿಂದ ಗೆದ್ದ ಹಾಗೂ ಸೋತ ಅಭ್ಯರ್ಥಿಗಳು

ಬೆಳಿಗ್ಗೆ 8 ಗಂಟೆಯಿಂದ 20ಕ್ಕೂ ಅಧಿಕ ಸುತ್ತಿನ ಮತಎಣಿಕೆ

ಇನ್ನು, 28 ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ಕಾರ್ಯ ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಲಿದ್ದು ಈ ಪ್ರಕ್ರಿಯೆಯಲ್ಲಿ ಭಾಗಿಯಾಗಲಿರೋ ಸಿಬ್ಬಂದಿ ಹಾಗು ಅಧಿಕಾರಿಗಳು 7.30ರೊಳಗೆ ತಮಗೆ ನಿಗಧಿಪಡಿಸಿರೋ ಕೇಂದ್ರಗಳಲ್ಲಿ ಹಾಜರು ಇರಬೇಕಿದೆ. 4 ಮತಎಣಿಕೆ ಕೇಂದ್ರಗಳಲ್ಲಿ 450ಕ್ಕೂ ಹೆಚ್ಚು ಮತಎಣಿಕೆ ಟೇಬಲ್‌ಗಳು ಇರಿಸಲಾಗಿದ್ದು ಇದಕ್ಕೆ 3 ಸುತ್ತಿನ ಭದ್ರತೆಯನ್ನೂ ಒದಗಿಸಲಾಗಿದೆ. ಒಳಗಿನ ಲೇಯರ್‌ನಲ್ಲಿ ಪ್ಯಾರಾಮಿಲಿಟರಿ ಪಡೆ, ನಂತರ ಬ್ಯಾರಿಕೇಡಿಂಗ್ ವ್ಯವಸ್ಥೆ ಹಾಗು ಹೊರಭಾಗದಲ್ಲಿ ಪೊಲೀಸರು ನೇತೃತ್ವದಲ್ಲಿ ಭದ್ರತೆ ಸಿದ್ದಪಡಿಸಿಕೊಳ್ಳಲಾಗಿದೆ. ಕ್ಷೇತ್ರದಲ್ಲಾಗಿರೋ ಮತದಾನಕ್ಕೆ ಹೋಲುವಂತೆ ಮತಎಣಿಕೆ ರೌಂಡ್ಸ್‌ಅನ್ನು ನಿರ್ಧರಿಸಲಾಗುತ್ತೆ. ಇನ್ನು, ಕನಿಷ್ಟ 20ರಿಂದ ಗರಿಷ್ಟ 26 ರೌಂಡ್‌ಗಳು ಕೂಡ ನಡೆಯುವ ಸಾಧ್ಯತೆ ಈಗ ಕಂಡುಬರ್ತಿದೆ.

4 ಸಾವಿರಕ್ಕೂ ಅಧಿಕ ಸಿಬ್ಬಂದಿ ನಿಯೋಜನೆ

ಇಡೀ ರಾಜ್ಯವೇ ಎದುರು ನೋಡ್ತಿರೋ ಈ ಚುನಾವಣೆಯ ರಿಸಲ್ಟ್ ಚುನಾವಣಾ ಆಯೋಗ ಲೈವ್ ವೆಬ್‌ಕಾಸ್ಟ್ ಮಾಡುತ್ತಿದೆ. ಇದ್ರಿಂದಾಗಿ ಮನೆಮನೆಗಳಲ್ಲಿಯೂ ಕೌಂಟಿಂಗ್ ಪ್ರಕ್ರಿಯೆಯನ್ನು ಜನಸಾಮಾನ್ಯರೂ ಕೂಡ ನೋಡಬಹುದಾಗಿದೆ. ಪ್ರತಿ ಮತ ಎಣಿಕೆ ಟೇಬಲ್‌ ಮೇಲೊಂದು ಕ್ಯಾಮೆರಾ ಅಳವಡಿಸಲಾಗಿದ್ದು, ಇದು ರಿಯಲ್ ಟೈಂ ಡೇಟಾ ಹೊರಹಾಕಲಿದೆ. ಮತ ಎಣಿಕೆ ಪ್ರಕ್ರಿಯೆಯ ಮೊದಲನೇ ಹಂತದಲ್ಲಿ ಈಗಾಗಲೇ ಬಂದಿರೋ 18ರಿಂದ 20 ಸಾವಿರ ಪೋಸ್ಟಲ್ ವೋಟ್‌ಗಳನ್ನು ಕೌಂಟ್ ಮಾಡಲಾಗುತ್ತೆ. ಪ್ರತಿ ಎಣಿಕೆ ಕೇಂದ್ರದಲ್ಲೂ ಇಂತಹ ಪೋಸ್ಟಲ್ ಬ್ಯಾಲೆಟ್ ವೋಟ್‌ಗಳಿಗಾಗಿಯೇ 2ರಿಂದ 3 ಟೇಬಲ್ ಮೀಸಲಿಡಲಾಗಿದೆ.

ಜೊತೆಗೆ ಮತ ಎಣಿಕೆ ಸರಿಯಾಗಿ ನಡೆಯುತ್ತಿದೆ ಅನ್ನೋದನ್ನು ಖಾತ್ರಿ ಪಡಿಸೋದಕ್ಕೆ ನಗರದಲ್ಲಿದ್ದ 14 ಅಬ್ಸರ್ವರ್‌ಗಳು ಮಾತ್ರವಲ್ಲದೇ ದೆಹಲಿಯಿಂದಲೂ 14 ಅಬ್ಸರ್ವರ್‌ಗಳು ಕೂಡ ಬಂದಿದ್ದಾರೆ. ಇದ್ರಿಂದಾಗಿ ಕ್ಷೇತ್ರಕ್ಕೊಬ್ಬ ವೀಕ್ಷಕರಂತೆ ನಗರದಲ್ಲಿ 28 ಅಬ್ಸರ್ವರ್‌ಗಳು ಇರಲಿದ್ದಾರೆ. ಒಟ್ನಲ್ಲಿ, ರಾಜ್ಯದ ಚುಕ್ಕಾಣಿಯನ್ನು ಯಾರ ಹಿಡಿಯಲಿದ್ದಾರೆ ಅಂತ ತಿಳಿಸೋದಕ್ಕೆ ಚುನಾವಣಾ ಆಯೋಗ ಸಜ್ಜಾಗಿದ್ದು, ಒಂದೇ ಪಕ್ಷ ಸರ್ಕಾರ ರಚಿಸುವಂತಾಗಲಿ ಅನ್ನೋ ಬಯಕೆಯನ್ನು ಜನಸಾಮಾನ್ಯರ ಹೊಂದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಕ್ಷಣ ಕ್ಷಣದ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 6:46 am, Sat, 13 May 23

ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಹೊಸಪಕ್ಷ ಕಟ್ಟಿದರೆ 224 ಸ್ಥಾನಗಳಿಗೆ ಅಭ್ಯರ್ಥಿಗಳೂ ಸಿಗಲ್ಲ: ರೇಣುಕಾಚಾರ್ಯ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಮೋದಿ ಬಳಿ ಅಶೋಕ ಚಕ್ರದ ವಿಶೇಷತೆ ಕೇಳಿದ ಚಿಲಿಯ ಅಧ್ಯಕ್ಷ
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಕೆಮ್ಮು ಬಾಧಿಸಲಾರಂಭಿಸಿದಾಗ ಯಡಿಯೂರಪ್ಪ ಮಗನಿಗೆ ಮಾತಾಡುವಂತೆ ಹೇಳಿದರು
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆ ಯತ್ನಾಳ್ ಚರ್ಚಿಸಿಲ್ಲ: ನಡಹಳ್ಳಿ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ಧಾರವಾಡ: ಮದ್ಯ ಮಾರಾಟದ ಅಂಗಡಿಗಳಿಗೆ ಮಹಿಳೆಯರ ಮುತ್ತಿಗೆ
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ನನ್ನ ವರ್ತನೆ ಮತ್ತು ವರಸೆ ಯಾವ ಕಾರಣಕ್ಕೂ ಬದಲಾಗದು: ಯತ್ನಾಳ್
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಬಿವಿ ಕಾರಂತರು ನಾಯಿ ತಿಥಿಗೆ ಹೋದ ಕತೆ, ರಂಗಾಯಣ ರಘು ಅನುಕರಣೆ ನೋಡಿ
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ಹಿಂದೂ ಕಾರ್ಯಕರ್ತರು ಯಾವ ಕಾರಣಕ್ಕೂ ಎದೆಗುಂದಬಾರದು: ಯತ್ನಾಳ್
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ವಿಜಯೇಂದ್ರ ಬಗ್ಗೆ ಹಿಂದೆ ನೀಡಿದ ಹೇಳಿಕೆಗೆ ಈಗಲೂ ಬದ್ಧ: ರಮೇಶ್ ಜಾರಕಿಹೊಳಿ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ
ಜಾಮ್ನಗರದಿಂದ ದ್ವಾರಕಾಗೆ 140 ಕಿ.ಮೀ ದೂರ ಅನಂತ್ ಅಂಬಾನಿ ಪಾದಯಾತ್ರೆ