Karnataka Assembly Election: ಅತಂತ್ರವಾದ್ರೆ ಸರ್ಕಾರ ರಚನೆ ಬಗ್ಗೆ ಕುಮಾರಣ್ಣ ಹೇಳಿದ್ದೇನು?

Karnataka Assembly Election: ಅತಂತ್ರವಾದ್ರೆ ಸರ್ಕಾರ ರಚನೆ ಬಗ್ಗೆ ಕುಮಾರಣ್ಣ ಹೇಳಿದ್ದೇನು?

ಕಿರಣ್ ಹನುಮಂತ್​ ಮಾದಾರ್
|

Updated on:May 13, 2023 | 7:13 AM

ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಈ ವೇಳೆ ಮಾತನಾಡಿದ ಹೆಚ್​ಡಿ ಕುಮಾರಸ್ವಾಮಿ ಅತಂತ್ರ ಆದ್ರೆ ಸರ್ಕಾರ ರಚನೆ ಬಗ್ಗೆ ಹೀಗೆ ಹೇಳಿದ್ದಾರೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(karnataka Assembly Election 2023) ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಅದರಂತೆ ಚುನಾವಣೆ ಮುಗಿಸಿ ಸಿಂಗಾಪುರಕ್ಕೆ ತೆರಳಿದ್ದ ಮಾಜಿ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ರಾತ್ರಿ 12:20 ರ ವಿಮಾನದಲ್ಲಿ ಬೆಂಗಳೂರಿಗೆ ವಾಪಾಸ್​​ ಆಗಿದ್ದಾರೆ. ಸಿಂಗಾಪುರದಿಂದ ಆಗಮಿಸಿದ ಹೆಚ್ಡಿಕೆ ಜೊತೆ ಪೊಟೋಗೆ ಅಭಿಮಾನಿಗಳು ಮುಗಿಬಿದ್ದಿದ್ದಾರೆ. ಇನ್ನು ಈ ವೇಳೆ ಮಾತನಾಡಿದ ಅವರು ‘ಫಲಿತಾಂಶ ಬರುವವರೆಗೂ ಕಾಯೋಣ, ಜನಕ್ಕೆ ಒಂದು ಅವಕಾಶ ಕೇಳಿದ್ದೆ, ಅವರು ಏನ್​ ಕೊಟ್ಟಿದ್ದಾರೆ ಫಲಿತಾಂಶದ ಬಳಿಕ ಗೊತ್ತಾಗುತ್ತೆ ಅಲ್ಲಿಯವೆರೆಗೂ ಕಾಯಿರಿ ಎಂದರು.

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: May 13, 2023 07:13 AM