Karnataka Assembly Polls: ಮೈಸೂರಿನ ಪಿರಿಯಾಪಟ್ಟಣದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಅವ್ಯಾಹತ ಬೆಟ್ಟಿಂಗ್!

Karnataka Assembly Polls: ಮೈಸೂರಿನ ಪಿರಿಯಾಪಟ್ಟಣದಲ್ಲಿ ಚುನಾವಣಾ ಫಲಿತಾಂಶದ ಮೇಲೆ ಅವ್ಯಾಹತ ಬೆಟ್ಟಿಂಗ್!

ಅರುಣ್​ ಕುಮಾರ್​ ಬೆಳ್ಳಿ
|

Updated on: May 12, 2023 | 7:24 PM

ಚಾಮರಾಜನಗರದ ಗುಂಡ್ಲುಪೇಟೆಯ ಪಂಟರ್, ಕಿರಣ್ ಮನೆಗೆ ಪೊಲೀಸರು ಹೋದಂತೆ ಪಿರಿಯಾಪಟ್ಟಣಕ್ಕೂ ಹೋದರೆ ದೊಡ್ಡ ದೊಡ್ಡ ಬೆಟ್ಟಿಂಗ್ ಮಿಕಗಳು ಬಲೆಗೆ ಬೀಳುತ್ತವೆ.

ಮೈಸೂರು: ಇದು ನಾಳಿನ ಚುನಾವಣೆಗೆ ಸಂಬಂಧಿಸಿದ ಇನ್ನೊಂದು ಬೆಟ್ಟಿಂಗ್ ವಿಡಿಯೋ. ಜಿಲ್ಲೆಯ ಪಿರಿಯಾಪಟ್ಟಣ (Piriyapatna) ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಕೆ ವೆಂಕಟೇಶ್ (K Venkatesh) ಗೆಲ್ತಾರೆ ಅಂತ ಈ ಊರಲ್ಲಿ ಸುಮಾರು ಜನ ಬೆಟ್ಸ್ ಹಾಕೋದಿಕ್ಕೆ ತಯಾರಾಗಿದ್ದಾರೆ, ವಿಡಿಯೋದಲ್ಲಿ ಕಾಣುವ ಮೊದಲ ವ್ಯಕ್ತಿ ವೆಂಕಟೇಶ್ ಮೇಲೆ ರೂ. 3ಲಕ್ಷ ಬಾಜಿ ಹೂಡಲು ರೆಡಿಯಾಗಿದ್ದಾರೆ ಮತ್ತು ಆಸಕ್ತರಿಗೆ ಮೊಬೈಲ್ ನಂಬರ್ ಸಹ ನೀಡುತ್ತಾರೆ. ಎರಡನೇ ವ್ಯಕ್ತಿ ಕಾಂಗ್ರೆಸ್ ಅಭ್ಯರ್ಥಿ ಪರ ಒಂದೆಕರೆ ಜಮೀನು (one acre land) ಪಣದಲ್ಲಿ ಹೂಡಲು ರೆಡಿಯಾಗಿದ್ದಾರೆ. ಹಾಗೆಯೇ ಮೂರನೇ ವ್ಯಕ್ತ ಅದೇ ವೆಂಕಟೇಶ್ ಪರ ರೂ. 5 ಲಕ್ಷ ಬಾಜಿ ಕಟ್ಟಲು ತಯಾರಾಗಿದ್ದಾರೆ. ತಾಕತ್ತಿದ್ರೆ, ದಮ್ಮಿದ್ರೆ ಬಂದು ಬಾಜಿ ಕಟ್ಟಿ ಅಂತ ಯಜಮಾನರು ಸವಾಲೆಸೆಯುತ್ತಿದ್ದಾರೆ! ಚಾಮರಾಜನಗರದ ಗುಂಡ್ಲುಪೇಟೆಯ ಪಂಟರ್, ಕಿರಣ್ ಮನೆಗೆ ಪೊಲೀಸರು ಹೋದಂತೆ ಪಿರಿಯಾಪಟ್ಟಣಕ್ಕೂ ಹೋದರೆ ದೊಡ್ಡ ದೊಡ್ಡ ಬೆಟ್ಟಿಂಗ್ ಮಿಕಗಳು ಬಲೆಗೆ ಬೀಳುತ್ತವೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ