Karnataka Assembly Election: ಮತ ಏಣಿಕೆಗೆ ಕ್ಷಣಗಣನೆ ಬಿಗಿ ಭದ್ರತೆ ಹೇಗಿದೆ ಗೊತ್ತಾ?

Karnataka Assembly Election: ಮತ ಏಣಿಕೆಗೆ ಕ್ಷಣಗಣನೆ ಬಿಗಿ ಭದ್ರತೆ ಹೇಗಿದೆ ಗೊತ್ತಾ?

ಕಿರಣ್ ಹನುಮಂತ್​ ಮಾದಾರ್
|

Updated on: May 13, 2023 | 7:36 AM

ರಾಜ್ಯ ವಿಧಾನಸಭೆ ಚುನಾವಣೆ ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಈ ಹಿನ್ನಲೆ ಬಿಗಿ ಭದ್ರತೆ, ಸಿದ್ದತೆ ಹೀಗಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Elections 2023 Result)  ಮತದಾನ ಮೇ.10 ರಂದು ಭರ್ಜರಿಯಾಗಿ ನಡೆದಿದೆ. ಅದರಂತೆ ಇಂದು (ಮೇ.13) 224 ಕ್ಷೇತ್ರದ ಫಲಿತಾಂಶ ಬರಲಿದ್ದು, ಇಡೀ ರಾಜ್ಯವೇ ಕಾದು ನೋಡುತಿದೆ. ಜಯನಗರದ ಎಸ್​ಎಸ್​ಎಂ‌ಆರ್​ವಿ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, 7.30ಕ್ಕೆ ಅಧಿಕಾರಿಗಳು ಸ್ಟ್ರಾಂಗ್ ರೂಂ ಓಪನ್ ಮಾಡಲಿದ್ದಾರೆ. 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ. ನಂತರ ಇವಿಎಂ ಮತಗಳ ಎಣಿಕೆ ಮಾಡಲಿದ್ದು, ಮತ ಎಣಿಕೆಗೆ ಒಟ್ಟು 16 ಟೇಬಲ್​ಗಳು ಅಳವಡಿಕೆ ಮಾಡಲಾಗಿದೆ. ಅದರಲ್ಲಿ 14 ಟೇಬಲ್​ಗಳು ಇವಿಎಂ ಮಷಿನ್ ಮತ ಎಣಿಕೆ ಮಾಡಲಾಗುತ್ತೆ.

ಕರ್ನಾಟಕ ಚುನಾವಣಾ ಫಲಿತಾಂಶ ಲೈವ್​ ಅಪ್ಡೇಟ್ಸ್​ಗಾಗಿ ಇಲ್ಲಿ ಕ್ಲಿಕ್​ ಮಾಡಿ

ಇನ್ನಷ್ಟು ಚುನಾವಣಾ ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ