AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಸ್ಸಾ ಸಿಎಂ ಹೇಳ್ತಿದ್ದಾರೆ… ಅದಕ್ಕಾಗಿ ಗ್ರಾಮೀಣ ಕ್ಷೇತ್ರದಿಂದ‌ ಕಣಕ್ಕೆ‌ ಇಳಿಯುವೆ ಎಂದು ಘೋಷಿಸಿದ ರಾಮುಲು!

Dr. Himanta Biswa Sarma: ಕೋಲ್ ಬಜಾರ್ ನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆ ವೇಳೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ ಅವರ ಸಮ್ಮುಖದಲ್ಲಿ ಗ್ರಾಮೀಣ ಕ್ಷೇತ್ರದಿಂದ‌ ಸ್ಪರ್ಧೆ ಮಾಡುವುದಾಗಿ ರಾಮುಲು ಹೇಳಿದರು.

ಅಸ್ಸಾ ಸಿಎಂ ಹೇಳ್ತಿದ್ದಾರೆ... ಅದಕ್ಕಾಗಿ ಗ್ರಾಮೀಣ ಕ್ಷೇತ್ರದಿಂದ‌ ಕಣಕ್ಕೆ‌ ಇಳಿಯುವೆ ಎಂದು ಘೋಷಿಸಿದ ರಾಮುಲು!
ಬಳ್ಳಾರಿ ಗ್ರಾಮೀಣದಿಂದ ಕಣಕ್ಕೆ ಇಳಿಯುವುದಾಗಿ ಘೋಷಿಸಿದ ಸಚಿವ ಶ್ರೀರಾಮುಲು
ಸಾಧು ಶ್ರೀನಾಥ್​
|

Updated on: Mar 15, 2023 | 9:22 AM

Share

ಬಳ್ಳಾರಿ: ರಾಜ್ಯ ಅಸೆಂಬ್ಲಿ ಚುನಾವಣೆ (Karnataka Assembly Elections 2023) ಯಾವುದೇ ಕ್ಷಣದಲ್ಲಿ ಘೋಷಣೆಯಾಗಬಹುದಾದ ರಾಜಕೀಯ ಪರಿಸ್ಥಿತಿ ಕರ್ನಾಟಕದಲ್ಲಿದೆ. ಈ ಮಧ್ಯೆ ಬಳ್ಳಾರಿ ರಾಜಕೀಯ ಮತ್ತೊಂದು ಮಜಲಿಗೆ ತಲುಪಿದೆ. ಬಳ್ಳಾರಿ ಬ್ರದರ್ಸ್ ಎಂದೇ ಗುರುತಿಸಿಕೊಂಡಿದ್ದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಹಾಲಿ ಸಚಿವ ಶ್ರೀರಾಮುಲು (Ballari Sriramulu) ಇದೀಗ ವಿಮುಖಗೊಂಡಿದ್ದು, ರಾಜಕೀಯ ಜಿದ್ದಾಜಿದ್ದಿಗೆ ಸಿಲುಕಿದ್ದಾರೆ. ಬಳ್ಳಾರಿ ನಗರ ಅಸೆಂಬ್ಲಿ ಕ್ಷೇತ್ರದಿಂದ ಜನಾರ್ದನ ರೆಡ್ಡಿ ಅವರ ಪತ್ನಿ ಲಕ್ಷ್ಮಿ ಅರುಣಾ ಕಣಕ್ಕಿಳಿಯುವುದಾಗಿ ಘೋಷಿಸಿದ್ದರೆ ಇದೀಗ ಶ್ರೀರಾಮುಲು ಅವರು ಬಳ್ಳಾರಿ ಗ್ರಾಮೀಣದಿಂದ ಕಣಕ್ಕೆ (Bellary Rural constituency) ಇಳಿಯುವುದಾಗಿ ತಾಜಾ ಆಗಿ ಪ್ರಕಟಿಸಿದ್ದಾರೆ. ರಾಮುಲು ಹಾಲಿ ಮೊಳಕಾಲ್ಮೂರು (Molakalmooru) ಕ್ಷೇತ್ರವನ್ನು ಬಿಟ್ಟು ಸಂಡೂರು ಕ್ಷೇತ್ರವನ್ನು ಪ್ರತಿನಿಧಿಸುವುದಾಗಿ ಈ ಹಿಂದೆ ಹೇಳಿದ್ದರು ಎಂಬುದು ಗಮನಾರ್ಹ. ಇದೀಗ, ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಘೋಷಿಸಿರುವ ಸಚಿವ ಶ್ರೀರಾಮುಲು ಅದಕ್ಕೆ ನೀಡಿರುವ ಕಾರಣವೂ ಕುತೂಹಲಕಾರಿಯಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹೇಳಿದ್ದಾರೆಂದು ಬಳ್ಳಾರಿ ಗ್ರಾಮಾಂತರದಿಂದ ಅಸೆಂಬ್ಲಿಗೆ ಸ್ಪರ್ಧಿಸುವುದಾಗಿ ಶ್ರೀರಾಮುಲು ವಿಶ್ವಾಸದ ಮಾತು ಹೇಳಿದ್ದಾರೆ.

ಚುನಾವಣೆ ನಿಮಿತ್ತ ಆಡಳಿತಾರೂಢ ಬಿಜೆಪಿ ಪಕ್ಷವು ರಾಜ್ಯಾದ್ಯಂತ ಹಮ್ಮಿಕೊಂಡಿರುವ ವಿಜಯಸಂಕಲ್ಪ ಯಾತ್ರೆಯಲ್ಲಿ ಅಸ್ಸಾಂ ಮುಖ್ಯಮಂತ್ರಿ ಹಿಮಂತ್ ಶರ್ಮಾ ಸಮ್ಮುಖದಲ್ಲಿ ಶ್ರೀರಾಮುಲು ತಮ್ಮ ಕ್ಷೇತ್ರ ಘೋಷಣೆ ಮಾಡಿದ್ದಾರೆ. ಏರಿತಾತ ಸ್ವಾಮಿ ಆಶೀರ್ವಾದದಿಂದ ನನ್ನನ್ನ ಬಳ್ಳಾರಿ ಗ್ರಾಮೀಣದಲ್ಲಿ ಗೆಲ್ಲಿಸಲು ಸಚಿವ ರಾಮುಲು ಮನವಿ ಮಾಡಿದರು. ಇದೇ ಸಂದರ್ಭದಲ್ಲಿ, ಅಸ್ಸಾಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ (Dr. Himanta Biswa Sarma) ಗ್ರಾಮೀಣ ಕ್ಷೇತ್ರಕ್ಕೆ ರಾಮುಲು ಫಿಕ್ಸ್ ಅಂತಾ ಘೋಷಿಸಿದ್ದಾರೆ.

ನಾನು ಯಾವತ್ತೂ ಗ್ರಾಮೀಣ ಕ್ಷೇತ್ರದಿಂದ ಸ್ಪರ್ಧೆ ಮಾಡ್ತೀನಿ ಅಂತಾ ಹೇಳಿರಲಿಲ್ಲ. ಆದರೆ ಇವತ್ತು (ನಿನ್ನೆ ಮಂಗಳವಾರ) ಅಸ್ಸಾ ಸಿಎಂ ಹೇಳ್ತಿದ್ದಾರೆ. ಅದಕ್ಕಾಗಿ ಗ್ರಾಮೀಣ ಕ್ಷೇತ್ರದಿಂದ‌ ಕಣಕ್ಕೆ‌ ಇಳಿಯುವೆ ಎಂದು ರಾಮುಲು ಹೇಳಿದರು.

ಇದನ್ನೂ ಓದಿ:

ಮಾಜಿ ಶಾಸಕ ತಿಪ್ಪೇಸ್ವಾಮಿ ಕಾಂಗ್ರೆಸ್ ತೊರೆದು ವಾಪಸ್​ ಬಿಜೆಪಿಗೆ, ಕುತೂಹಲ ಮೂಡಿಸಿದ ಶ್ರೀರಾಮುಲು ರಾಜಕೀಯ ನಡೆ

ನಿನ್ನೆ ಮಂಗಳವಾರ ಬಳ್ಳಾರಿ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಕೊಳಗಲ ಗ್ರಾಮ ಮತ್ತು ಕೋಲ್ ಬಜಾರ್ ನಲ್ಲಿ ನಡೆದ ವಿಜಯ ಸಂಕಲ್ಪ ಯಾತ್ರೆಯಲ್ಲಿ ಊಹಿಸಲಾಗದಷ್ಟು ಜನರು ಹಾಜರಿದ್ದರು. ಬಂದ ಜನರಿಂದ ಕೇಳುತಿದ್ದದ್ದು ಒಂದೇ ವಾಕ್ಯ “ಬಿಜೆಪಿಯೇ ಭರವಸೆ”. ನಿಮ್ಮ ಈ ಪ್ರತಿಕ್ರಿಯೆ ನೋಡಿ ಅತೀವ ಸಂತಸವಾಗಿದೆ. ಈ ಸಂದರ್ಭದಲ್ಲಿ ಅಸ್ಸಾಂ ನ ಮುಖ್ಯಮಂತ್ರಿಗಳಾದ ಶ್ರೀ ಹಿಮಂತ ಬಿಸ್ವ ಶರ್ಮಾ ಅವರು, ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ನಳಿನ್ ಕುಮಾರ್ ಕಟೀಲ ಅವರ ಸಮ್ಮುಖದಲ್ಲಿ ಗ್ರಾಮೀಣ ಕ್ಷೇತ್ರದಿಂದ‌ ಸ್ಪರ್ಧೆ ಮಾಡುವುದಾಗಿ ರಾಮುಲು ಹೇಳಿದರು.

ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ್ ಶೆಟ್ಟರರವರು, ವಿಧಾನಸಭಾ ಪರಿಷತ್ ಸದಸ್ಯರಾದ ಶ್ರೀ ವೈ ಎಂ ಸತೀಶರವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಶ್ರೀ ಮುರಾರಿ ಗೌಡ್ರು, ಮಾಜಿ ಸಂಸದೆಯಾದ ಶ್ರೀಮತಿ ಜೆ ಶಾಂತರವರು, ಮಾಜಿ ಸಂಸದರಾದ ಶ್ರೀ ಸಣ್ಣ ಪಕೀರಪ್ಪರವರು , ಬಳ್ಳಾರಿ ಸಂಸದರಾದ ಶ್ರೀ ದೇವೇಂದ್ರಪ್ಪರವರು, ಮಾಜಿ ಶಾಸಕರಾದ ಶ್ರೀ ಟಿ ಎಚ್ ಸುರೇಶ್ ಬಾಬುರವರು, ಮುಖಂಡರು ಮತ್ತು ಕಾರ್ಯಕರ್ತರು ವಿಜಯ ಸಂಕಲ್ಪ ಯಾತ್ರೆಯಲ್ಲಿ ಭಾಗಿಯಾಗಿದ್ದರು.

ಕರ್ನಾಟಕ ಅಸೆಂಬ್ಲಿ ಚುನಾವಣೆ ಕುರಿತಾದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ