ಕಾಂಗ್ರೆಸ್​ನ 3 ಪಟ್ಟಿ ಬಿಡುಗಡೆ: ಒಟ್ಟು 209 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ: ಬಾಕಿ ಉಳಿದ ಆ 15 ಕ್ಷೇತ್ರಗಳಾವುವು?

|

Updated on: Apr 15, 2023 | 4:33 PM

ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್​, ಅಳೆದು ತೂಗಿ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಆದ್ರೆ, ಇನ್ನೂ 15 ಕ್ಷೇತ್ರಗಳಿಗೆ ಟಿಕೆಟ್​​ ಬ್ಯಾಲೆನ್ಸ್ ಇಟ್ಟುಕೊಂಡಿರುವುದು ಕುತೂಹಲ ಮೂಡಿಸಿದೆ.

ಕಾಂಗ್ರೆಸ್​ನ 3 ಪಟ್ಟಿ ಬಿಡುಗಡೆ: ಒಟ್ಟು 209 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ: ಬಾಕಿ ಉಳಿದ ಆ 15 ಕ್ಷೇತ್ರಗಳಾವುವು?
Follow us on

ಬೆಂಗಳೂರು: 224 ಕರ್ನಾಟಕ ವಿಧಾನಸಭೆ ಕ್ಷೇತ್ರಗಳ (Karnataka Assembly Elections 2023) ಪೈಕಿ ಕಾಂಗ್ರೆಸ್(C0ngress)ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಈ ಮೂಲಕ 58 ಕ್ಷೇತ್ರಗಳ ಟಿಕೆಟ್​ ಬಾಕಿ ಉಳಿಸಿಕೊಂಡಿತ್ತು. ಇದೀಗ  ಇಂದು(ಏಪ್ರಿಲ್ 15) 3ನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದೆ. ಇದರೊಂದಿಗೆ ಕಾಂಗ್ರೆಸ್​ 209 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ. ಅದರಲ್ಲೂ ಹಾಲಿ ಶಾಸಕರಿರುವ 4 ಕ್ಷೇತ್ರಗಳ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ.  ಈ ಮೂಲಕ ಕಾಂಗ್ರೆಸ್ ಹೈಕಮಾಂಡ್​ ಹಲವು ಲೆಕ್ಕಾಚಾರಗಳನ್ನು ಹಾಕುತ್ತಿದೆ.

ಇದನ್ನೂ ಓದಿ: Karnataka Assembly Elections 2023: ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯಗಿಲ್ಲ ಕೋಲಾರ ಟಿಕೆಟ್​

ಬಾಕಿ ಇರುವ 15 ಕ್ಷೇತ್ರಗಳು

ಪುಲಕೇಶಿ ನಗರ, ಸಿವಿ ರಾಮನ್ ನಗರ, ಮುಳಬಾಗಿಲು , ರಾಯಚೂರು ಸಿಟಿ, ಶಿಗ್ಗಾoವಿ, ಶ್ರವಣಬೆಳಗೊಳ, ಅರಕಲಗೂಡು, ಲಿಂಗಸೂರು, ಹುಬ್ಬಳ್ಳಿ-ಧಾರವಾಡ ಸೆಂಟ್ರಲ್, ಹುಬ್ಬಳ್ಳಿ-ಧಾರವಾಡ ದಕ್ಷಿಣ, ಮಂಗಳೂರು-ಉತ್ತರ, ಶಿಡ್ಲಘಟ್ಟ, ಕೆ ಆರ್ ಪುರಂ, ಚಿಕ್ಕಮಗಳೂರು, ಹರಿಹರ.

ಹಾಲಿ 4 ಕ್ಷೇತ್ರಗಳ ಟಿಕೆಟ್ ಘೋಷಿಸದ ಕಾಂಗ್ರೆಸ್​​​​

3ನೇ ಪಟ್ಟಿಯಲ್ಲಿ 19 ಹೊಸ ಮುಖಗಳಿಗೆ ಮಣೆ ಹಾಕಿರುವ ಕಾಂಗ್ರೆಸ್​,  ಹಾಲಿ ಶಾಸಕರಿರುವ 4 ಕ್ಷೇತ್ರಗಳ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ. ಶಿಡ್ಲಘಟ್ಟ(ವಿ.ಮುನಿಯಪ್ಪ), ಲಿಂಗಸೂಗೂರು( ಡಿಎಸ್‌ ಹೂಲಗೇರಿ), ಪುಲಿಕೇಶಿ ನಗರ(ಅಖಂಡ ಶ್ರೀನಿವಾಸ್ ಮೂರ್ತಿ), ಹರಿಹರ(ಎಸ್ ರಾಮಪ್ಪ) ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ.

ಜಗದೀಶ್ ಶೆಟ್ಟರ್​ ನಡೆ ಮೇಲೆ ಕೈ ಅಭ್ಯರ್ಥಿ ಆಯ್ಕೆ

ಇನ್ನು  ಹುಬ್ಬಳ್ಳಿ ದಕ್ಷಿಣ ಕ್ಷೇತ್ರದ ಟಿಕೆಟ್​ ಬಾಕಿ ಉಳಿಸಿಕೊಂಡಿದ್ದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ, ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಿಕೊಂಡು ಬಂದಿರುವ ಬಿಜೆಪಿಯ ಜಗದೀಶ್ ಶೆಟ್ಟರ್​ ಅವರಿಗೆ ಈ ಬಾರಿ ಟಿಕೆಟ್​ ಕೈತಪ್ಪುವ ಸಾಧ್ಯತೆಗಳಿವೆ. ಹೀಗಾಗಿ ಅವರು ಬಿಜೆಪಿ ವಿರುದ್ಧ ಬಂಡಾಯ ಎದ್ದೇಳುವುದು ಖಚಿತವಾಗಿದೆ ಎನ್ನಲಾಗಿದೆ, ಇದಕ್ಕೆ ಪೂರಕವೆಂಬಂತೆ ಶೆಟ್ಟರ್​ ಈಗಾಗಲೇ ಬೆಂಬಲಿಗರ ಸಭೆ ನಡೆಸಿದ್ದು, ಟಿಕೆಟ್​ ಸಿಗದಿದ್ದರೂ ಈ ಬಾರಿ ಸ್ಪರ್ಧೆ ಮಾಡಿಯೇ ತೀರುತ್ತೇನೆಂದು ಘೋಷಣೆ ಮಾಡಿದ್ದಾರೆ. ಹೀಗಾಗಿ ಜಗದೀಶ್ ಶೆಟ್ಟರ್​ ಅವರ ನಡೆ ಮೇಲೆ ಟಿಕೆಟ್​ ಘೋಷಣೆ ಮಾಡಲು ಕಾಂಗ್ರೆಸ್ ಕಾದು ನೊಡುವ ತಂತ್ರಕ್ಕೆ ಮೊರೆ ಹೋಗಿದೆ.

ಸಿಎಂ ವಿರುದ್ಧ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕಾಂಗ್ರೆಸ್ ರಣತಂತ್ರ

ಈ ಬಾರಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಂಬಂಧ ಕಾಂಗ್ರೆಸ್​ ಚಿಂತನೆ ನಡೆಸಿದೆ. ಶಿಗ್ಗಾಂವಿ ಕ್ಷೇತ್ರದಲ್ಲಿ ಪಂಚಮಸಾಲಿ ಹಾಗೂ ಮುಸ್ಲಿಂ ಸಮುದಾಯದ ಮತಗಳನ್ನು ಹೆಚ್ಚಿವೆ. ಹೀಗಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನ ಕಟ್ಟಿ ಹಾಕಲು ಪಂಚಮಸಾಲಿ ಅಭ್ಯರ್ಥಿಯನ್ನ ಕಣಕ್ಕಿಳಿಸಬೇಕೋ? ಅಥವಾ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೋ? ಎಂದು ಕಾಂಗ್ರೆಸ್ ಲೆಕ್ಕಾಚಾರ ಹಾಕಿತ್ತಿದೆ.

ಈ ಹಿಂದೆ ಪಂಚಮಸಾಲಿಯ ಪ್ರಭಾವಿ ನಾಯಕ ಮಾಜಿ ಸಚಿವ ವಿನಯ್ ಕುಲರ್ಣಿ ಅವರನ್ನು ಶಿಗ್ಗಾಂವಿಯಿಂದ ಕಣಕ್ಕಿಳಿಸುವ ಸಂಬಂಧ ಚರ್ಚೆಗಳು ನಡೆದಿದ್ದವು. ಆದರೆ, ಕೊನೆ ಕ್ಷಣದಲ್ಲಿ ವಿನಯ್ ಅವರಿಗೆ ಅವರ ತವರು ಕ್ಷೇತ್ರವಾದ ಧಾರವಾಡ ಟಿಕೆಟ್ ನೀಡಲಾಗಿದೆ. ಈಗ ಶಿಗ್ಗಾಂವಿಯಲ್ಲಿ ಬಸವರಾಜ ಬೊಮ್ಮಾಯಿಗೆ ಠಕ್ಕರ್​ ಕೊಡಲು ಪ್ರಬಲ ಅಭ್ಯರ್ಥಿಗಾಗಿ ಕಾಂಗ್ರೆಸ್ ಹುಡುಕಾಟ ನಡೆಸಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:10 pm, Sat, 15 April 23