AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Assembly Elections 2023: ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯಗಿಲ್ಲ ಕೋಲಾರ ಟಿಕೆಟ್​

Congress third list Released: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೂರನೃ ಪಟ್ಟಿ ಬಿಡುಗಡೆ ಮಾಡಿದೆ.

Karnataka Assembly Elections 2023: ಕಾಂಗ್ರೆಸ್​​​ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ: ಸಿದ್ದರಾಮಯ್ಯಗಿಲ್ಲ ಕೋಲಾರ ಟಿಕೆಟ್​
ರಮೇಶ್ ಬಿ. ಜವಳಗೇರಾ
|

Updated on:Apr 15, 2023 | 3:10 PM

Share

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ(Karnataka Assembly Elections 2023) ಕಾಂಗ್ರೆಸ್​ ತನ್ನ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಈಗಾಗಲೇ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಇದೀಗ 43 ಕ್ಷೇತ್ರಗಳಿಗೆ ಮೂರನೇ ಪಟ್ಟಿಯಲ್ಲಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಈ 43 ಅಭ್ಯರ್ಥಿಗಳ ಪಟ್ಟಿಯಲ್ಲಿ 16 ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ.  ಇನ್ನು ಮುಖ್ಯವಾಗಿ ಸಿದ್ದರಾಮಯ್ಯ ಅವರಿಗೆ  ಕೋಲಾರ ಟಿಕೆಟ್​ ನೀಡಲ್ಲ. ಬದಲಿಗೆ ಕೋಲಾರ ಟಿಕೆಟ್​  ಕೊತ್ತೂರು ಮಂಜುನಾಥ್ ಅವರಿಗೆ ನೀಡಲಾಗಿದೆ. ಇದರಿಂದ ಸಿದ್ದರಾಮಯ್ಯ ವರುಣಾದಿಂದ ಮಾತ್ರ ಸ್ಪರ್ಧೆ ಫಿಕ್ಸ್ ಆದಂತಾಗಿದೆ.

ಕೊತ್ತೂರು ಮಂಜುನಾಥ್‌  ಅವರು 2013ರಲ್ಲಿ ಮುಳಬಾಗಿಲಿ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಆದರೆ ಅವರ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ಅಸಿಂಧುವಾದ್ದರಿಂದ 2018ರಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.  224 ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಈಗಾಗಲೇ ಮೊದಲ ಪಟ್ಟಿಯಲ್ಲಿ 166, ಎರಡನೇ ಪಟ್ಟಿಯಲ್ಲಿ 23 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿತ್ತು. ಇದೀಗ ಮೂರನೇ ಪಟ್ಟಿಯಲ್ಲಿ 43 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಪ್ರಕಟಿಸಿದ್ದು, ಇನ್ನೂ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಪ್ರಕಟಿಸದೇ ಬಾಕಿ ಉಳಿಸಿಕೊಂಡಿದೆ. ಇದರಲ್ಲಿ ಹಾಲಿ ಶಾಸಕರಿರುವ 4 ಕ್ಷೇತ್ರಗಳಿಗೆ ಟಿಕೆಟ್ ಘೋಷಿಸದಿರುವುದು ಅಚ್ಚರಿಗೆ ಕಾರಣವಾಗಿದೆ.

ಮೂರನೇ ಪಟ್ಟಿ ಇಂತಿದೆ

  • ಅರಭಾವಿ ಕ್ಷೇತ್ರ-ಅರವಿಂದ ದಳವಾಯಿ
  • ಕೋಲಾರ ಕ್ಷೇತ್ರ-ಕೊತ್ತೂರು ಮಂಜುನಾಥ
  • ಚಿಕ್ಕಪೇಟೆ ಕ್ಷೇತ್ರ-ಆರ್.ವಿ.ದೇವರಾಜ್​
  •  ಅರಸೀಕೆರೆ ಕ್ಷೇತ್ರ-ಕೆ.ಎಂ.ಶಿವಲಿಂಗೇಗೌಡ
  •  ಬೊಮ್ಮನಹಳ್ಳಿ ಕ್ಷೇತ್ರ-ಉಮಾಪತಿ ಶ್ರೀನಿವಾಸಗೌಡ
  • ಕುಂದಗೋಳ ಕ್ಷೇತ್ರ-ಕುಸುಮಾ ಶಿವಳ್ಳಿ
  • ರಾಯಬಾಗ ಕ್ಷೇತ್ರ-ಮಹಾವೀರ ಮೋಹಿತ್​
  • ಬೆಳಗಾವಿ ಉತ್ತರ ಕ್ಷೇತ್ರ-ಆಸೀಫ್ ಸೇಠ್​
  •  ಬೆಳಗಾವಿ ದಕ್ಷಿಣ ಕ್ಷೇತ್ರ-ಪ್ರಭಾವತಿ ಮಾಸ್ತಿ ಮರಡಿ
  • ತೇರದಾಳ ಕ್ಷೇತ್ರ-ಸಿದ್ದಪ್ಪ ರಾಮಪ್ಪ ಕೊಣ್ಣೂರು
  • ದೇವರಹಿಪ್ಪರಗಿ-ಶರಣಪ್ಪ ಟಿ.ಸುಣಗಾರ
  • ಮೂಡಿಗೆರೆ ಕ್ಷೇತ್ರ-ನಯನಾ ಜ್ಯೋತಿ ಜವಾರ್(ಮೋಟಮ್ಮ ಪುತ್ರಿ)
  • ಸಿಂದಗಿ ಕ್ಷೇತ್ರ-ಅಶೋಕ ಎಂ.ಮನಗೂಳಿ
  • ಕಲಬುರಗಿ ಗ್ರಾಮಾಂತರ ಕ್ಷೇತ್ರ-ರೇವೂನಾಯ್ಕ್​ ಬೆಳಮಗಿ
  • ಔರಾದ್ ಕ್ಷೇತ್ರ-ಡಾ.ಶಿಂಧೆ ಭೀಮಸೇನ್​ ರಾವ್​
  •  ಮಾನ್ವಿ ಕ್ಷೇತ್ರ-ಜಿ.ಹಂಪಯ್ಯ ನಾಯಕ
  • ದೇವದುರ್ಗ ಕ್ಷೇತ್ರ-ಶ್ರೀದೇವಿ ಆರ್.ನಾಯಕ
  •  ಸಿಂಧನೂರು ಕ್ಷೇತ್ರ-ಹಂಪನಗೌಡ ಬಾದರ್ಲಿ
  • ಶಿರಹಟ್ಟಿ ಕ್ಷೇತ್ರ-ಸುಜಾತಾ ಎನ್.ದೊಡ್ಮನಿ
  • ನವಲಗುಂದ ಕ್ಷೇತ್ರ-ಎನ್.ಹೆಚ್.ಕೋನರೆಡ್ಡಿ
  •  ಕುಮಟಾ ಕ್ಷೇತ್ರ-ನಿವೇದಿತ್ ಆಳ್ವಾ
  • ಸಿರುಗುಪ್ಪ ಕ್ಷೇತ್ರ-ಬಿ.ಎಂ.ನಾಗರಾಜ್​
  • ಬಳ್ಳಾರಿ ನಗರ ಕ್ಷೇತ್ರ-ಭರತ್​ ರೆಡ್ಡಿ
  •  ಜಗಳೂರು ಕ್ಷೇತ್ರ-ಬಿ.ದೇವೇಂದ್ರಪ್ಪ
  • ಹರಪನಹಳ್ಳಿ ಕ್ಷೇತ್ರ-ಎನ್.ಕೊಟ್ರೇಶ್​
  •  ಹೊನ್ನಾಳಿ ಕ್ಷೇತ್ರ-ಡಿ.ಜಿ.ಶಾಂತನಗೌಡ
  • ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ-ಡಾ.ಶ್ರೀನಿವಾಸ ಕರಿಯಣ್ಣ
  •  ಶಿವಮೊಗ್ಗ ನಗರ ಕ್ಷೇತ್ರ-ಹೆಚ್.ಸಿ.ಯೋಗೇಶ್​
  • ಶಿಕಾರಿಪುರ ಕ್ಷೇತ್ರ-ಜಿ.ಬಿ.ಮಾಲ್ತೇಶ್​
  •  ಕಾರ್ಕಳ ಕ್ಷೇತ್ರ-ಉದಯ್ ಶೆಟ್ಟಿ
  •  ತರೀಕೆರೆ ಕ್ಷೇತ್ರ-ಜಿ.ಹೆಚ್.ಶ್ರೀನಿವಾಸ
  •  ತುಮಕೂರು ಗ್ರಾಮಾಂತರ ಕ್ಷೇತ್ರ-ಜಿ.ಹೆಚ್.ಷಣ್ಮುಖಪ್ಪ ಯಾದವ್​
  •  ಚಿಕ್ಕಬಳ್ಳಾಪುರ ಕ್ಷೇತ್ರ-ಪ್ರದೀಪ್ ಈಶ್ವರ್ ಅಯ್ಯರ್​
  •  ದಾಸರಹಳ್ಳಿ ಕ್ಷೇತ್ರ-ಧನಂಜಯ ಗಂಗಾಧರಯ್ಯ
  •  ಬೆಂಗಳೂರು ದಕ್ಷಿಣ ಕ್ಷೇತ್ರ-ಆರ್.ಕೆ.ರಮೇಶ್​
  •  ಚನ್ನಪಟ್ಟಣ ಕ್ಷೇತ್ರ-ಎಸ್.ಗಂಗಾಧರ್​
  • ಮದ್ದೂರು ಕ್ಷೇತ್ರ-ಕೆ.ಎಂ.ಉದಯ್​
  •  ಹಾಸನ ಕ್ಷೇತ್ರ-ಬನವಾಸಿ ರಂಗಸ್ವಾಮಿ
  •  ಮಂಗಳೂರು ನಗರ ದಕ್ಷಿಣ ಕ್ಷೇತ್ರ-ಜಾನ್​ ರಿಚರ್ಡ್ ಲೋಬೋ
  •  ಪುತ್ತೂರು ಕ್ಷೇತ್ರ-ಅಶೋಕ್ ಕುಮಾರ್ ರೈ
  •  ಮೈಸೂರಿನ ಕೃಷ್ಣರಾಜ ಕ್ಷೇತ್ರ-ಎಂ.ಕೆ.ಸೋಮಶೇಖರ್​
  •  ಮೈಸೂರಿನ ಚಾಮರಾಜ ಕ್ಷೇತ್ರ-ಕೆ.ಹರೀಶ್ ಗೌಡ

ಕರ್ನಾಟಕ ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:19 pm, Sat, 15 April 23

Follow Us
ರಮೇಶ್ ಬಿ. ಜವಳಗೇರಾ
ರಮೇಶ್ ಬಿ. ಜವಳಗೇರಾ

ಟಿವಿ9 ಕನ್ನಡದಲ್ಲಿ ಹಿರಿಯ ಉಪ ಸಂಪಾದಕ. ಕಳೆದ 07 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದದ್ದು, ರಾಯಚೂರು ಜಿಲ್ಲೆಯ ಸಿಂಧನೂರಿನ ಜವಳಗೇರಾದಲ್ಲಿ. ಗುಲ್ಬರ್ಗಾ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಪದವಿ ಪಡೆದಿದ್ದೇನೆ. ನನ್ನ ವೃತ್ತಿ ಆರಂಭವಾಗಿದ್ದೇ ಡಿಜಿಟಲ್​ ಮಾಧ್ಯಮದಿಂದ. ಒನ್​ ಇಂಡಿಯಾ ಕನ್ನಡ, ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಕೆಲಸ ಮಾಡಿದ್ದೇನೆ. ಕ್ರೈಂ, ರಾಜಕೀಯ ಹಾಗೂ ಪ್ರಚಲಿತ ಸುದ್ದಿ ಬಗ್ಗೆ ಆಸಕ್ತಿ. ಪ್ರವಾಸ ಮಾಡುವುದು, ಸಂಗೀತ ಕೇಳುವುದು ನನ್ನ ಹವ್ಯಾಸಗಳು.

Read More
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
ಧರ್ಮಸ್ಥಳಕ್ಕೆ ಕಳಂಕ ತರಲು ಗ್ಯಾಂಗ್ ಹುನ್ನಾರ:ಚಿನ್ನಯ್ಯನಿಂದ ಸ್ಫೋಟಕ ಮಾಹಿತಿ
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
‘ನಾಗುಗೆ ವಧು ಬೇಕಾಗಿದೆ’ ಟೈಟಲ್ ವಿಶೇಷತೆ ಬಗ್ಗೆ ವಿವರಿಸಿದ ನಿರ್ದೇಶಕ ಚೇತನ್
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೊರಗುಂಟೆಪಾಳ್ಯ ಭೀಕರ ರಸ್ತೆ ಅಪಘಾತ: ಸ್ಫೋಟಕ ಮಾಹಿತಿ ನೀಡಿದ ಡಿಸಿಪಿ
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ: 3.89 ಲಕ್ಷ ಜನ ಸ್ಕೀಂನಿಂದ ಔಟ್!
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ವಿಡಿಯೋ: ಸಿನಿಮಾಗಳಲ್ಲಿ ಆಕ್ಷನ್ ದೃಶ್ಯ ಎಷ್ಟು ಕಷ್ಟವಾಗಿರುತ್ತೆ ನೋಡಿ
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಬೈಕ್​​​ಗೆ ಗುದ್ದಿ ನೇರವಾಗಿ ಅಡಿಕೆ ತೋಟಕ್ಕೆ ನುಗ್ಗಿದ KSRTC ಬಸ್
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
ಮತದಾನವಿಲ್ಲದೇ ಕರ್ನಾಟಕದಿಂದ ನಾಲ್ವರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
‘ಬಾಯ್ಸ್ ನೆವರ್ ಕಾಂಪ್ರಮೈಸ್’: ಸಿನಿಮಾ ಬಗ್ಗೆ ನಿರ್ದೇಶಕರ ಮಾತು
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
'ಅವನು ನನ್ನ ವಿರುದ್ಧವೇ ಕೆಲಸ ಮಾಡಿದ್ದಾನೆ': ಜಮಿರ್ ವಿರುದ್ಧ ಸಿದ್ದು ಗರಂ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ
ಹಿಂದುಳಿದ ವರ್ಗಗಳ ಇಲಾಖೆಯಲ್ಲಿ ಅನುದಾನ ತಾರತಮ್ಯದ ಆರೋಪ