Karnataka Congress Manifesto: ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ, ಕರ್ನಾಟಕಕ್ಕೆ ಏನೆಲ್ಲಾ ಭರವಸೆ?

|

Updated on: May 02, 2023 | 10:16 AM

ಬಿಜೆಪಿ ಪ್ರಜಾ ಪ್ರಣಾಳಿಕೆ ಬಿಡುಗಡೆ ಬೆನ್ನಲ್ಲೇ ಇದೀಗ ಕಾಂಗ್ರೆಸ್​ ಸಹ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಹಾಗಾದ್ರೆ, ಕರ್ನಾಟಕಕ್ಕೆ ಏನೆಲ್ಲಾ ಭರವಸೆಗಳನ್ನು ನೀಡಿದೆ ಎನ್ನುವುದು ಈ ಕೆಳಗಿನಂತಿದೆ ನೋಡಿ.

Karnataka Congress Manifesto: ಕಾಂಗ್ರೆಸ್​ನ ಪ್ರಣಾಳಿಕೆ ಬಿಡುಗಡೆ, ಕರ್ನಾಟಕಕ್ಕೆ ಏನೆಲ್ಲಾ ಭರವಸೆ?
ಬಿಜೆಪಿಗೆ ನಿದ್ದೆಮಾಡಲು ಬಿಡದ ಕಾಂಗ್ರೆಸ್ ಪಕ್ಷದ ಆರು ಗ್ಯಾರಂಟಿಗಳು
Follow us on

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Assembly Elections 2023) ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮತದಾನಕ್ಕೆ 8 ದಿನ ಮಾತ್ರ ಬಾಕಿಯಿದೆ. ಇದರ ನಡುವೆಯೇ ನಿನ್ನೆ ಅಷ್ಟೇ ಬಿಜೆಪಿ ತನ್ನ ಪ್ರಜಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಇದರ ಬೆನ್ನಲ್ಲೇ ಇಂದು (ಮೇ 02) ಕಾಂಗ್ರೆಸ್​ ತನ್ನ ಚುನಾವಣಾ ಪ್ರಣಾಳಿಕೆಯನ್ನು (Congress Manifesto) ಬಿಡುಗಡೆ ಮಾಡಿದೆ. ಕಾಂಗ್ರೆಸ್​ ಬರಲಿದೆ, ಪ್ರಗತಿ ತರಲಿದೆ ಎನ್ನುವ ಘೋಷ ವಾಕ್ಯದೊಂದಿಗೆ ‘ಸರ್ವ ಜನಾಂಗದ ಶಾಂತಿಯ ತೋಟ ಇದುವೆ ಕಾಂಗ್ರೆಸ್​ ಬದ್ಧತೆ’ ಎನ್ನುವ ಹೆಸರಿನಲ್ಲಿ ಪ್ರಣಾಳಿಕೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಬಿಡುಗಡೆಗೊಳಿಸಿದರು.  ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಇದರ ಜೊತೆಗೆ NEP ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ ಮಾಡುವುದಾಗಿ ಹೇಳಿದೆ.

ಕಾಂಗ್ರೆಸ್​ ಬಿಡುಗಡೆ ಮಾಡಿರುವ ಪ್ರಣಾಳಿಕೆಯ ಪಿಡಿಎಫ್​ ಇಲ್ಲಿದೆ

ಪ್ರಣಾಳಿಕೆಯಲ್ಲಿರುವ ಅಂಶಗಳು

  • ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್​ ಉಚಿತ ವಿದ್ಯುತ್​
  • ಅನ್ನ ಭಾಗ್ಯ ಯೋಜನೆಯಡಿ ಪ್ರತಿ ವ್ಯಕ್ತಿಗೆ 10 ಕೆಜಿ ಉಚಿತ ಅಕ್ಕಿ
  • ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿಗೆ 2 ಸಾವಿರ ರೂ.
  • ಯುವನಿಧಿ ಯೋಜನೆಯಡಿ ನಿರುದ್ಯೋಗ ಯುವಕರಿಗೆ ನೆರವು
  • ಪದವೀಧರರಿಗೆ 3 ಸಾವಿರ ರೂ., ಡಿಪ್ಲೊಮೊ ಪದವೀಧರರಿಗೆ 1,500 ರೂ.
  • ಸರ್ಕಾರದಲ್ಲಿ ಒಂದು ವರ್ಷದಲ್ಲಿ ಖಾಲಿ ಇರುವ ಎಲ್ಲಾ ಹುದ್ದೆಗಳ ಭರ್ತಿ
  • ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡ್ತಿರುವ ನೌಕರರಿಗೆ ಖಾಯಂ
  • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನೌಕರರ ಖಾಯಂ
  • ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಬಜರಂಗದಳ, ಪಿಎಫ್ಐ ನಿಷೇಧ
  • ಅಂಗನವಾಡಿ ಕಾರ್ಯಕರ್ತೆಯರ ವೇತನ 11,500ರಿಂದ 15 ಸಾವಿರಕ್ಕೆ ಹೆಚ್ಚಳ
  • ಆಶಾ ಕಾರ್ಯಕರ್ತೆಯರ ಗೌರವಧನ 8 ಸಾವಿರ ರೂ.ಗೆ ಹೆಚ್ಚಳ
  • ರಾತ್ರಿ ಪಾಳಿಯ ಪೊಲೀಸ್​ ಸಿಬ್ಬಂದಿಗೆ 5 ಸಾವಿರ ರೂ. ವಿಶೇಷ ಭತ್ಯೆ
  • ಎಲ್ಲಾ ಪೊಲೀಸರಿಗೆ ವರ್ಷಕ್ಕೆ ಒಂದು ತಿಂಗಳ ವೇತನ ಹೆಚ್ಚುವರಿ ಪಾವತಿ
  • ಆದ್ಯತೆಯ ಮೇರೆಗೆ ಕಾಲ ಕಾಲಕ್ಕೆ ಎಲ್ಲಾ ಖಾಲಿ ಹುದ್ದೆಗಳ ಭರ್ತಿ
  • ನಾಲ್ಕು ವರ್ಷದೊಳಗೆ ಎಲ್ಲಾ ಪೊಲೀಸ್ ಸಿಬ್ಬಂದಿಗೂ ವಸತಿ ಸೌಲಭ್ಯ
  • ನೀರಾವರಿಗಾಗಿ ಮುಂದಿನ 5 ವರ್ಷಗಳಲ್ಲಿ 1.50ಲಕ್ಷ ಕೋಟಿ ರೂ.
  • ಕನಕಪುರದಲ್ಲಿ ಅತ್ಯಾಧುನಿಕ ವಿಶ್ವ ದರ್ಜೆಯ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ
  • ಬಿಬಿಎಂಪಿ ನಿರ್ವಹಣೆಗಾಗಿಯೇ ಸಮಗ್ರ ಶಾಸನ ಜಾರಿ
  • ಒಂದೇ ವೇದಿಕೆ ಅಡಿ ಸಾರಿಗೆ ವಿದ್ಯುತ್ ವಸತಿ ಒಳಚರಂಡಿ, ನೀರು ಸರಬರಾಜು ಸೌಕರ್ಯ
  • ಬೆಂಗಳೂರು ನಗರದ ವಿವಿಧ ಪ್ರದೇಶಗಳಿಗೆ ರಾತ್ರಿ 1 ಗಂಟೆ ತನಕ ಬಸ್ ವ್ಯವಸ್ಥೆ
  • NEP ರದ್ದು ಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ
  • ಸರ್ಕಾರದಿಂದಲೇ ಮನೆಗಳ ನಿರ್ಮಾಣ
  • ಮಂಗಳಮುಖಿರಿಗಾಗಿ ಮಂಡಳಿ ಸ್ಥಾಪನೆ (100 ಕೋಟಿ ಅನುದಾನ)
  • ಆಟೋ ಚಾಲಕರ ಮಂಡಳಿ ಹಾಗೂ ಟ್ಯಾಕ್ಸಿ ಚಾಲಕರ ಮಂಡಳಿ ಸ್ಥಾಪನೆ
  • ಪತ್ರಕರ್ತರ ಕಲ್ಯಾಣ ನಿಧಿಗೆ 500 ಕೋಟಿ ರೂ ಮೀಸಲು (ಪತ್ರಕರ್ತರಿಗೆ ಸಾಮಾಜಿಕ ಭದ್ರತಾ ಯೋಜನೆ ಜಾರಿ, ಮೊದಲ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿ ಮಂಡನೆ)
  • SC-ST ಒಳ ಮೀಸಲಾತಿಗೆ ನ್ಯಾಯ ಕೊಡಿಸಲು ಕಾಂಗ್ರೆಸ್ ಬದ್ದ.
  • ಒಂದು ಬಾರಿಯ ನೆರವಿನ ರೂಪದಲ್ಲಿ ಬೀದಿ ವ್ಯಾಪಾರಿಗಳಿಗೆ 20 ಸಾವಿರ ಅನುದಾನ
  • ಹಿರಿಯ ನಾಗರಿಕರಿಗೆ ಎರಡು ವರ್ಷಕ್ಕೊಮ್ಮೆ ರಾಜ್ಯದ 15 ದೇಶದ 10 ಪವಿತ್ರ ಸ್ಥಳಗಳಿಗೆ ಉಚಿತ ಪ್ರವಾಸ.
  • ಕಾಶಿ, ಮಥುರ, ಕೈಲಾಸ, ಮಾನಸ ಸರೋವರ ಯಾತ್ರೆಯ ಸಬ್ಸಿಡಿ ಹೆಚ್ಚಳ
  • ವಿಶೇಷ ಚೇತನರಿಗೆ ಪ್ರತಿ ಜಿಲ್ಲೆಯಲ್ಲಿ ವಿಶೇಷ ಶಾಲೆ ಸ್ಥಾಪನೆ.
  • ಅಂಗವಿಕಲ ಮಹಿಳೆಯರಿಗೆ ಸ್ವ ಉದ್ಯೋಗಕ್ಕೆ 3 ಲಕ್ಷದವರೆಗೂ ಬಡ್ಡಿ ರಹಿತ ಸಾಲ.
  • ಎಸ್.ಸಿ ಎಸ್.ಟಿ ಮೀಸಲಾತಿ ಸೇರಿದಂತೆ ಶೇ.50 ರಿಂದ ಶೇ.75ಕ್ಕೆ ಏರಿಕೆಗೆ ಸೂಕ್ತ ಕ್ರಮ (ಎಸ್.ಸಿ ಮೀಸಲಾತಿ ಶೇ.17ಕ್ಕೆ ಏರಿಕೆ, ಎಸ್.ಟಿ ಮೀಸಲಾತಿ ಶೇ. 7ಕ್ಕೆ ಏರಿಕೆ. ಅಲ್ಪ ಸಂಖ್ಯಾತರಿಗೆ ಶೇ.4 ರ ಮೀಸಲಾತಿ ಮರು ಸ್ಥಾಪನೆ, ಹಿಂದುಳಿದ ವರ್ಗಗಳ ಜನಗಣತಿ ವರದಿ ಅನುಷ್ಠಾನ)

Published On - 9:53 am, Tue, 2 May 23