Kichcha Sudeep: ನನ್ನ ಜೊತೆಗೆ ಬಿಜೆಪಿ ಪರವೂ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

|

Updated on: Apr 05, 2023 | 9:12 PM

ನಟ ಕಿಚ್ಚ ಸುದೀಪ್ ಅವರು ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ಇವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿಲ್ಲ. ಆದರೆ​ ನನಗೆ ಬೆಂಬಲ ಕೊಡುತ್ತಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.

Kichcha Sudeep: ನನ್ನ ಜೊತೆಗೆ ಬಿಜೆಪಿ ಪರವೂ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಕಿಚ್ಚ ಸುದೀಪ್
Image Credit source: ANI
Follow us on

ಬೆಂಗಳೂರು: ತಾವೆಲ್ಲ ನಿನ್ನೇ ಸುದ್ದಿ ಮಾಧ್ಯಮದಲ್ಲಿ ನಿರೀಕ್ಷೆ ಮಾಡಿದಂತೆ ಕನ್ನಡದ ನಟ ಕಿಚ್ಚ ಸುದೀಪ್ (Kichcha Sudeep) ಅವರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ನನ್ನ ಜೊತೆಗೆ ಬಿಜೆಪಿ ಪರವೂ ಪ್ರಚಾರ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುದೀಪ್ ಅವರು ರಾಜಕೀಯದಲ್ಲಿಲ್ಲ, ಚಲನಚಿತ್ರದಲ್ಲಿದ್ದಾರೆ. ಸುದೀಪ್​ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಸೇರದೆ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದಿದ್ದೇನೆ. ಹೀಗಾಗಿ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ​ ನನಗೆ ಬೆಂಬಲ ಕೊಡುತ್ತಿದ್ದಾರೆ. ನನ್ನ ಜೊತೆಗೆ ನಮ್ಮ ಪಕ್ಷಕ್ಕೂ ಪ್ರಚಾರ ಮಾಡುತ್ತಾರೆ ಎಂದರು.

ಸುದೀಪ್ ಹಾಗೂ ನಮ್ಮ ಸಂಬಂಧವನ್ನ ಗೌರವಿಸಿ. ನನಗೆ ಮೊದಲಿನಿಂದಲೂ ಸಂಬಂಧ ಇರುವುದರಿಂದ ನಾನು ಅವರ ಜೊತೆ ಮಾತನಾಡಿದ್ದೇನೆ. ನೀನು ನಮ್ಮ ಪಕ್ಷಕ್ಕೆ ಸೇರದಿದ್ದರೂ ನಿಮ್ಮ ಅವಶ್ಯಕತೆ ಇದೆ ಅಂತ ಹೇಳಿದ್ದೇನೆ. ಹೀಗಾಗಿ ಅವರು ನಿಮಗೋಸ್ಕರ ನಾನು ಇದ್ದೇನೆ, ನಿಮಗೆ ಮಾತ್ರ ನನ್ನ ಬೆಂಬಲ ಅಂತ ಹೇಳಿದ್ದಾರೆ. ಆದರೆ, ಅವರು ಪಕ್ಷದ ಪರವೂ ಪ್ರಚಾರ ಮಾಡುತ್ತಾರೆ. ಮನುಷ್ಯತ್ವ ಅನ್ನೋದು ಇದೆ, ಸಂಬಂಧಗಳು ಅನ್ನೋದು ಇವೆ. ನಿಮ್ಮ ಕಲ್ಪನೆಯಲ್ಲಿ ಕಮರ್ಷಿಯಲ್​ನಲ್ಲಿ ನೋಡಬೇಡಿ. ನಾನು ಹಣ ಮಾಡಬೇಕಾಗಿಲ್ಲ ಎಂದರು.

ಇದನ್ನೂ ಓದಿ: Karnataka Assembly Election 2023: ರಾಜಕೀಯ ನಿಲುವು ಪ್ರಕಟಿಸಿದ ನಟ ಕಿಚ್ಚ ಸುದೀಪ್​

ನಟ ಸುದೀಪ್​ ಪ್ರಚಾರದಿಂದ ಬಿಜೆಪಿಗೆ ದೊಡ್ಡ ಶಕ್ತಿ ಬರುತ್ತದೆ: ಸಿಎಂ ಬೊಮ್ಮಾಯಿ

ನಾನು ಹೇಳಿದ ಕಡೆ ನಟ ಸುದೀಪ್​ ಪ್ರಚಾರ ಮಾಡುತ್ತಾರೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್​ ಪ್ರಚಾರ ಮಾಡುತ್ತಾರೆ. ಇವರ​ ಪ್ರಚಾರದಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತದೆ ಎಂದು ಬೊಮ್ಮಾಯಿ ಹೇಳಿದ್ದಾರೆ. ಸುದೀಪ್ ಅವರು ನನ್ನ ಪರವಾಗಿ ಇದ್ದಾರೆ. ನಾನು ಬಿಜೆಪಿಯೊಳಗೆ ಇದ್ದೇನೆ, ಮುಖ್ಯಂತ್ರಿ ಆಗಿದ್ದೇನೆ. ನಾನು ಯಾರಿಗೆ ಹೇಳುತ್ತೇನೋ ಅವರ ಪರ ಸುದೀಪ್ ಪ್ರಚಾರ ಮಾಡುತ್ತಾರೆ. ಸುದೀಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ರೂಪರೇಷೆ ಸಿದ್ಧಪಡಿಸುತ್ತೇವೆ 15 ದಿನಗಳ ಕಾಲ ಪ್ರಚಾರಕಾರ್ಯದಲ್ಲಿ ತೊಡಗುತ್ತಾರೆ ಎಂದರು.

ಸುದೀಪ್ ಕಾಂಗ್ರೆಸ್ ಪರ ಪ್ರಚಾರಕ್ಕೂ ಇಳಿಯುತ್ತಾರಾ?

ನಟ ಸುದೀಪ್ ಅವರು ಕಾಂಗ್ರೆಸ್ ಪರವೂ ಪ್ರಚಾರಕ್ಕೆ ಹೋತ್ತಾರೆ ಎಂಬ ಮಾತುಗಳು ಕೇಳಿಬರಲು ಆರಂಭಿಸಿದೆ. ಈ ಬಗ್ಗೆ ಪತ್ರಕರ್ತರು ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದಾಗ ಇಲ್ಲ ಎಂದಿದ್ದಾರೆ. ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಸಮಯದಲ್ಲಿ ಸಿಎಂ ಬೊಮ್ಮಾಯಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡಲು ಬಂದಿದ್ದೇನೆ. ಹಾಗೆ ಕೆಲ ಸ್ನೇಹಿತರು ಇದ್ದಾರೆ, ಅವರ ಪರನೂ ನಿಲ್ಲುತ್ತೇನೆ ಎಂದು ಸುದೀಪ್ ಹೇಳಿದ್ದಾರೆ. ಆದರೆ ಕೆಲವು ದಿನಗಳ ಹಿಂದೆ ನಟ ಸುದೀಪ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಭೇಟಿಯಾಗಿದ್ದರು. ಆದರೆ ಈ ವೇಳೆ ನಡೆದಿದ್ದ ಮಾತುಕತೆ ವೇಳೆ ಸುದೀಪ್ ಅವರು ಯಾವುದೇ ಸ್ಪಷ್ಟ ಉತ್ತರ ನೀಡದೇ ಸುಮ್ಮನಾಗಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 2:43 pm, Wed, 5 April 23