Karnataka Assembly Polls; ಚಿತ್ರನಟ ಸುದೀಪ್ ಬಿಜೆಪಿ ಸೇರಿದರೆ ಆ ಪಕ್ಷಕ್ಕೆ ಲಾಭವಿಲ್ಲ, ಕಾಂಗ್ರೆಸ್ಗೆ ನಷ್ಟವೂ ಇಲ್ಲ: ರಾಮಲಿಂಗಾರೆಡ್ಡಿ
ಸಿನಿಮಾ ನಟರು ರಾಜಕೀಯ ಪ್ರವೇಶಿಸುವುದು ಮತದಾರರ ಮೇಲೆ ಪ್ರಭಾವ ಬೀರಲ್ಲ, ಎರಡೂ ಕ್ಷೇತ್ರಗಳು ಭಿನ್ನ ಎಂದು ರಾಮಲಿಂಗಾರೆಡ್ಡಿ ಹೇಳಿದರು.
ಕಲಬುರಗಿ: ಸಿನಿಮಾ ನಟ ಕಿಚ್ಚ ಸುದೀಪ್ (Kiccha Sudeep) ಬಿಜೆಪಿ ಸೇರಿದರೆ ಆ ಪಕ್ಷಕ್ಕೆ ಲಾಭವೂ ಇಲ್ಲ ಮತ್ತು ಕಾಂಗ್ರೆಸ್ ಪಕ್ಷಕ್ಕೆ ನಷ್ಟವೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ (Ramalinga Reddy) ಹೇಳಿದರು. ಕಲಬುರಗಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಮಾಜಿ ಸಚಿವರು, ಸಿನಿಮಾ ನಟರು ರಾಜಕೀಯ ಪ್ರವೇಶಿಸುವುದು ಮತದಾರರ ಮೇಲೆ ಪ್ರಭಾವ ಬೀರಲ್ಲ, ಎರಡೂ ಕ್ಷೇತ್ರಗಳು ಭಿನ್ನ ಎಂದರು. ಡಿಕೆ ಶಿವಕುಮಾರ (DK Shivakumar) ಜೊತೆ ಸುದೀಪ್ ಕೆಮೆರಾಗಳಿಗೆ ಪೋಸ್ ನೀಡಿದ್ದು ಮತ್ತು ಚಿತ್ರನಟ ಕಾಂಗ್ರೆಸ್ ಸೇರುವ ಬಗ್ಗೆ ಎದ್ದ ಉಹಾಪೋಹಗಳನ್ನು ರೆಡ್ಡಿಯವರ ಮುಂದೆ ಪ್ರಸ್ತಾಪಿಸಿದಾಗ, ಅದು ಅವರ ವೈಯಕ್ತಿಕ ವಿಚಾರ; ಸುದೀಪ್, ಶಿವಕುಮಾರ್ ರನ್ನು ಭೇಟಿಯಾದಾಗ ತಾವು ಸಹ ಅಲ್ಲಿದ್ದುದ್ದಾಗಿ ಹೇಳಿದ ಅವರು ಪಕ್ಷ ಸೇರುವ ಕುರಿತು ಚರ್ಚೆಯೇನೂ ನಡೆಯಲಿಲ್ಲ ಎಂದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಸಲಾಲ್ ಡ್ಯಾಂನ ಗೇಟ್ ಓಪನ್ ಮಾಡಿದ ಭಾರತ; ಪಾಕಿಸ್ತಾನ ಕಂಗಾಲು
ಮದುವೆ ಬಳಿಕ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನಕ್ಕೆ ಚಿಕ್ಕಣ್ಣ, ಪಾವನಾ ಭೇಟಿ
ಗ್ಯಾರಂಟಿ ಪ್ರಾಧಿಕಾರದ ಸಭೆಯಲ್ಲಿ ಮಹತ್ವದ ತೀರ್ಮಾನ: ಚುನಾವಣೆಗೆ ತಯಾರಿ?
ಗೃಹಜ್ಯೋತಿ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್:ಪರಿಷ್ಕರಣೆಗೆ ಗಡುವು ವಿಸ್ತರಣೆ
