AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಎನ್ನುವುದು ಗೊತ್ತಾಗಿದೆ, ಅದಕ್ಕೆ ಸಿನಿಮಾ ಸ್ಟಾರ್​ಗಳನ್ನು ಕರೆಸುತ್ತಿದ್ದಾರೆ-ಹೆಚ್​ಡಿ ಕುಮಾರಸ್ವಾಮಿ

ಸಿನಿಮಾ ಸ್ಟಾರ್​ಗಳನ್ನು ಬಿಜೆಪಿ ಕರೆಸಿ ಪ್ರಚಾರ ಮಾಡಿದ್ದಾರೆ ಅಂದರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ ಎಂದ ಹೆಚ್​ಡಿ ಕುಮಾರಸ್ವಾಮಿ.

ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಎನ್ನುವುದು ಗೊತ್ತಾಗಿದೆ, ಅದಕ್ಕೆ ಸಿನಿಮಾ ಸ್ಟಾರ್​ಗಳನ್ನು ಕರೆಸುತ್ತಿದ್ದಾರೆ-ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ
ಆಯೇಷಾ ಬಾನು
|

Updated on:Apr 05, 2023 | 2:58 PM

Share

ಬೆಂಗಳೂರು: ನಟ ಸುದೀಪ್(Kiccha Sudeep) ಬಿಜೆಪಿ(BJP) ಸೇರುತ್ತಾರೆ ಎಂಬ ಸುದ್ದಿ ಸಿಕ್ಕಾಪಟ್ಟೆ ಹರಿದಾಡುತ್ತಿತ್ತು. ಸದ್ಯ ಈಗ ಕಿಚ್ಚ ಸುದೀಪ್ ತಾವು ಯಾವ ಪಕ್ಷವನ್ನೂ ಸೇರುತ್ತಿಲ್ಲ. ಬದಲಿಗೆ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡುತ್ತೇನೆ. ಬಿಜೆಪಿಯ ಪ್ರಚಾರದಲ್ಲಿ ಭಾಗಿಯಾಗುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮತ್ತೊಂದೆಡೆ ಈ ಬಗ್ಗೆ ಹೆಚ್​ಡಿ ಕುಮಾರಸ್ವಾಮಿ(HD Kumaraswamy) ಪ್ರತಿಕ್ರಿಯೆ ನೀಡಿದ್ದು ಸಿನಿಮಾ ಸ್ಟಾರ್​ಗಳನ್ನು ಕರೆಸಿ ಬಿಜೆಪಿಯವರು ಪ್ರಚಾರ ಮಾಡ್ತಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಾರಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.

ಸಿನಿಮಾ ಸ್ಟಾರ್​ಗಳನ್ನು ಬಿಜೆಪಿ ಕರೆಸಿ ಪ್ರಚಾರ ಮಾಡಿದ್ದಾರೆ ಅಂದರೆ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಕಷ್ಟ ಅನ್ನೋದು ಗೊತ್ತಾಗಿದೆ. ನಟರ ಮುಖ ತೋರಿಸಿ ಮತ ಪಡೆಯಲು ಬಿಜೆಪಿ ಹೊರಟಿದೆ. ನಮಗೆ ನಮ್ಮ ಕಾರ್ಯಕರ್ತರು, ನನ್ನ ಜನರೇ ಸ್ಟಾರ್ ಪ್ರಚಾರಕರು. ಸಿನಿಮಾ ನಟರ ಬಗ್ಗೆ ನಾನು ಲಘುವಾಗಿ ಮಾತನಾಡಲು ಹೋಗಲ್ಲ. ಆದರೆ ಅವರು ಒಂದು ಪಕ್ಷದ ಪರವಾಗಿ ಪ್ರಚಾರ ಮಾಡಿ ಆ ಮೇಲೆ ಸುಮ್ಮನಾಗುತ್ತಾರೆ. ಸಿನಿಮಾ ನಟರು ಪ್ರಚಾರ ಮಾಡಿದ ಪಕ್ಷ ಜನರಿಗೆ ಒಳ್ಳೆಯದನ್ನು ಮಾಡುತ್ತಿದೆಯೋ, ಇಲ್ಲವೋ ಎಂಬುವುದನ್ನೂ ನೋಡಲ್ಲ. ಸಿನಿಮಾ ನಟರು ಪ್ರಚಾರ ಮಾಡಿದ ಕೆಲವು ಕಡೆ ಸೋಲು ಆಗಿದೆ. ಮಂಡ್ಯದಲ್ಲಿ ಸ್ಟಾರ್​ಗಳಿಂದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಸೋತಿದ್ದಾರೆ ಅನ್ನುತ್ತಾರೆ ಅದು ಸುಳ್ಳು. ನಿಖಿಲ್ ಸೋತ್ತಿದ್ದು ಬಿಜೆಪಿ, ಕಾಂಗ್ರೆಸ್, ರೈತ ಸಂಘಟನೆ ಒಳ ಒಪ್ಪಂದದಿಂದ ಎಂದು ಮಾಜಿ ಸಿಎಂ ಹೆಚ್​.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಇದನ್ನೂ ಓದಿ: Kichcha Sudeep: ನನ್ನ ಜೊತೆಗೆ ಬಿಜೆಪಿ ಪರವೂ ನಟ ಕಿಚ್ಚ ಸುದೀಪ್ ಪ್ರಚಾರ ಮಾಡುತ್ತಾರೆ: ಸಿಎಂ ಬಸವರಾಜ ಬೊಮ್ಮಾಯಿ

ರಾಜಕೀಯ ನಿಲುವು ಪ್ರಕಟಿಸಿದ ಕಿಚ್ಚ ಸುದೀಪ್

ಬೆಂಗಳೂರಿನ ಖಾಸಗಿ ಹೊಟೇಲ್​ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ನಟ ಕಿಚ್ಚ ಸುದೀಪ ಜಂಟಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಮಾತನಾಡಿದ ನಟ ಸುದೀಪ, ನನ್ನ ಲೈಫ್ ನಲ್ಲಿ ಒಳ್ಳೆಯ ಜಾಗದಲ್ಲಿ ಅವರು ಇದ್ದಾರೆ. ಅವರು ಎಲ್ಲಿ ಹೇಳುತ್ತಾರೆ ಅಲ್ಲಿ ಕೆಲಸ ಮಾಡೋಕೆ ನಾನು ತಯಾರಿದ್ದೇನೆ. ಒಬ್ಬ ತಂದೆಯ ಮಾತು ಕೇಳುವ ರೀತಿ ಅವರ ಮಾತು ಕೇಳುತ್ತೇನೆ. ಪಕ್ಷ ಕರೆದಿರೋದು ನನಗೆ ಗೊತ್ತಿಲ್ಲ. ಬೊಮ್ಮಾಯಿ ಬೇರೆ ಪಕ್ಷದಲ್ಲಿದ್ದರೂ ಅವರ ಜೊತೆ ನಾನು‌ ನಿಲ್ಲುತ್ತಿದ್ದೆ. ನಾನು ಸಿಎಂ ಬೊಮ್ಮಾಯಿ ಅವರ ವಿಷಯದಲ್ಲಿ ಪಕ್ಷ ನೋಡುತ್ತಿಲ್ಲ, ವ್ಯಕ್ತಿ ನೋಡುತ್ತೇನೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:58 pm, Wed, 5 April 23

Follow Us
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
ಮತ್ತೆ ವಿವಾದದ ಕಿಡಿ ಹೊತ್ತಿಸಿದ ಕನ್ಹೇರಿ ಸ್ವಾಮೀಜಿ , ಏನು ಹೇಳಿದ್ರು ಕೇಳಿ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಪೆದ್ದಿ’ ಡಬ್ಬಿಂಗ್​​ನಲ್ಲಿ ನಿರ್ದೇಶಕನ ಕಾಲೆಳೆದ ರಾಮ್ ಚರಣ್: ವಿಡಿಯೋ
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
‘ಹಯಗ್ರೀವ’ ಸಿನಿಮಾಕ್ಕೆ ಸಿಕ್ಕ ಪ್ರತಿಕ್ರಿಯೆ ನೋಡಿ ಸಂಜನಾ ಫುಲ್ ಖುಷ್
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಇಸ್ರೇಲ್ ಏರ್​ಸ್ಟ್ರೈಕ್​ನಲ್ಲಿ ಇರಾನ್ ಮಾಜಿ ಅಧ್ಯಕ್ಷ ಸಾವು
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಹೋದ ಜೀವ ವಾಪಸ್‌ ಕೊಡ್ತೀರಾ? ಸಿದ್ದರಾಮಯ್ಯ ವಿರುದ್ಧ ಗುಡುಗಿದ ಈಶ್ವರಪ್ಪ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಈ ಯುದ್ಧ ಅಗತ್ಯ ಇರಲಿಲ್ಲ: ಇರಾನ್ ನಾಯಕ ಖಮೇನಿ ಹತ್ಯೆ ಖಂಡಿಸಿದ ಸಿಎಂ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಸಹಾಯದಿಂದ ಅಲಿಪುರದಲ್ಲಿ ನಿರ್ಮಿಸಿದ್ದ IK ಆಸ್ಪತ್ರೆ ಇದೆ ನೋಡಿ
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಇರಾನ್ ಅಧಿಪತಿ ಖಮನೈಗೂ ಚಿಕ್ಕಬಳ್ಳಾಪುರದ ಅಲೀಪುರ ಮುಸ್ಲಿಮರಿಗೂ ನಂಟು ಏನು?
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಮೈಸೂರಿನಲ್ಲಿ ಡ್ರಗ್ಸ್ ಜಾಲದ ಬಗ್ಗೆ ಮಾತನಾಡಿದ ನಟ ವಿನಯ್ ರಾಜ್​ಕುಮಾರ್
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ
ಖಮೇನಿ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅದರಲ್ಲೇ ಸಿಗರೇಟ್ ಹೊತ್ತಿಸಿಕೊಂಡ ಯುವತಿ