ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ (Karnataka Assembly Elections 2023) ಪ್ರಯುಕ್ತ ಎಲ್ಲ 224 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಬುಧವಾರ ಸಂಜೆ ಮುಕ್ತಾಯಗೊಂಡಿದೆ. ರಾಜ್ಯದಾದ್ಯಂತ ಸಂಜೆ 5 ಗಂಟೆ ವರೆಗಿನ ಲೆಕ್ಕಾಚಾರ ಪ್ರಕಾರ ಶೇ 65.69 ರಷ್ಟು ಮತದಾನವಾಗಿದೆ. ಇದರ ಬೆನ್ನಲ್ಲೇ ಟಿವಿ9 ಸಿವೋಟರ್ ಮತಗಟ್ಟೆ ಸಮೀಕ್ಷೆ ಪ್ರಕಟವಾಗಿದೆ. ಮತಗಟ್ಟೆ ಸಮೀಕ್ಷೆಯಲ್ಲಿ ಯಾವ ಪಕ್ಷಕ್ಕೆ ಎಷ್ಟು ಸ್ಥಾನ ದೊರೆತಿದೆ? ಯಾವ ಪ್ರದೇಶದಲ್ಲಿ ಯಾವ ಪಕ್ಷ ಪ್ರಾಬಲ್ಯ ಸಾಧಿಸಿದೆ ಇತ್ಯಾದಿ ವಿವರಗಳು ಇಲ್ಲಿವೆ.
ಟಿವಿ9 ಸಿವೋಟರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ಗೆ 100 ರಿಂದ 112 ಸ್ಥಾನ ದೊರೆಯುವ ನಿರೀಕ್ಷೆ ಇದ್ದು, ಬಿಜೆಪಿಗೆ 83 ರಿಂದ 95 ಹಾಗೂ ಜೆಡಿಎಸ್ಗೆ 21 ರಿಂದ 29 ಸ್ಥಾನಗಳು ದೊರೆಯುವ ಸಾಧ್ಯತೆ ಇದೆ. ಇತರರು 2 ರಿಂದ 6 ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು ಸಮೀಕ್ಷಾ ವರದಿ ತಿಳಿಸಿದೆ. ಕಾಂಗ್ರೆಸ್ ಪಕ್ಷವು ಶೇ 41.1 ರಷ್ಟು ಮತ ಹಂಚಿಕೆ ಪಡೆದಿದೆ. ಕಳೆದ ಬಾರಿ ಪಕ್ಷಕ್ಕೆ ಶೇ 38 ರಷ್ಟು ಮತ ಹಂಚಿಕೆ ಪಡೆದಿತ್ತು. ಇದರೊಂದಿಗೆ ಪಕ್ಷದ ಮತ ಹಂಚಿಕೆ ಪ್ರಮಾಣ ಶೇ 3.1 ರಷ್ಟು ಹೆಚ್ಚಾದಂತಾಗಿದೆ. ಬಿಜೆಪಿ ಕಳೆದ ಚುನಾವಣೆಯಲ್ಲಿ ಶೇ 36ರಷ್ಟು ಮತ ಪಡೆದಿದ್ದರೆ ಈ ಬಾರಿ ಶೇ 38.3 ಮತ ಹಚಿಕೆ ಪಡೆದಿದೆ. ಜೆಡಿಎಸ್ ಮತ ಹಂಚಿಕೆ ಪ್ರಮಾಣ ಶೇ 18 ಇದ್ದುದು ಶೇ 14.6ಕ್ಕೆ ಇಳಿಕೆಯಾಗಿದೆ. ಇತರರ ಮತ ಹಂಚಿಕೆ ಪ್ರಮಾಣವೂ ಶೇ 8 ರಿಂದ 6ಕ್ಕೆ ಇಳಿಕೆಯಾಗಿದೆ.
ಮತಗಟ್ಟೆ ಸಮೀಕ್ಷೆಯ ಪ್ರಾದೇಶಿಕ (ಅಂದಾಜು) ವಿವರ ಇಲ್ಲಿದೆ;
ಕೇಂದ್ರ ಕರ್ನಾಟಕದಲ್ಲಿ ಯಾರಿಗೆ ಬಲ?
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 18 | ರಿಂದ | 22 |
ಬಿಜೆಪಿ | 12 | ರಿಂದ | 16 |
ಜೆಡಿಎಸ್ | 0 | ರಿಂದ | 2 |
ಇತರರು | 0 | ರಿಂದ | 1 |
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 2 | ರಿಂದ | 6 |
ಬಿಜೆಪಿ | 15 | ರಿಂದ | 19 |
ಜೆಡಿಎಸ್ | 0 | ರಿಂದ | 0 |
ಇತರರು | 0 | ರಿಂದ | 0 |
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 11 | ರಿಂದ | 15 |
ಬಿಜೆಪಿ | 15 | ರಿಂದ | 19 |
ಜೆಡಿಎಸ್ | 1 | ರಿಂದ | 4 |
ಇತರರು | 0 | ರಿಂದ | 1 |
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 13 | ರಿಂದ | 17 |
ಬಿಜೆಪಿ | 11 | ರಿಂದ | 15 |
ಜೆಡಿಎಸ್ | 0 | ರಿಂದ | 2 |
ಇತರರು | 0 | ರಿಂದ | 3 |
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 22 | ರಿಂದ | 26 |
ಬಿಜೆಪಿ | 24 | ರಿಂದ | 28 |
ಜೆಡಿಎಸ್ | 0 | ರಿಂದ | 1 |
ಇತರರು | 0 | ರಿಂದ | 0 |
ಪಕ್ಷ | ಕನಿಷ್ಠ | ರಿಂದ | ಗರಿಷ್ಠ |
ಕಾಂಗ್ರೆಸ್ | 28 | ರಿಂದ | 32 |
ಬಿಜೆಪಿ | 0 | ರಿಂದ | 4 |
ಜೆಡಿಎಸ್ | 19 | ರಿಂದ | 23 |
ಇತರರು | 0 | ರಿಂದ | 3 |
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 6:53 pm, Wed, 10 May 23