ಪ್ರಧಾನಿ ಮೋದಿ ಕರೆಗೆ ಮತದಾರರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ, ನಾವು ನಿರೀಕ್ಷಿಸಿದ ಫಲಿತಾಂಶ ದೊರೆಯುವ ಸೂಚನೆ ಸಿಕ್ಕಿದೆ -ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಇಂದು ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ವಿವೇಕಾನಂದನಗರದ ರೋಟರಿ ಶಾಲೆಯಲ್ಲಿ ಮತ ಚಲಾಯಿಸಿದರು‌‌.

ಹುಬ್ಬಳ್ಳಿ: ಕರ್ನಾಟಕ ವಿಧಾನಸಭಾ ಚುನಾವಣೆಯ(Karnataka Assembly Elections 2023) ನಿಮಿತ್ತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು(Pralhad Joshi) ಇಂದು ಹುಬ್ಬಳ್ಳಿಯ ನಾಗಶೆಟ್ಟಿಕೊಪ್ಪದ ವಿವೇಕಾನಂದನಗರದ ರೋಟರಿ ಶಾಲೆಯಲ್ಲಿ ಮತ ಚಲಾಯಿಸಿದರು‌‌. ತಮ್ಮ ಕುಟುಂಬದ ಸದಸ್ಯರ ಜೊತೆ ಬೆಳಗ್ಗೆಯೇ ಆಗಮಿಸಿ ಮತ ಚಲಾವಣೆ ಮಾಡಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ನಂತರ ಮಾದ್ಯಮಗಳ ಪ್ರಶ್ನೆಗೆ ಉತ್ತರಿಸಿ ಬೆಳಗ್ಗಿನಿಂದಲೇ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದರು.

ಮತದಾನದ ಬಳಿಕ ಮಾತನಾಡಿದ ಅವರು, ಬೆಳಗ್ಗೆ 7 ಗಂಟೆಯಿಂದಲೇ ನಾನು ಮಾಹಿತಿ ಸಂಗ್ರಹಿಸುತ್ತಿದ್ದೇನೆ, ಕೆಲವು ಮಾದ್ಯಮಗಳಲ್ಲೂ ಗಮನಿಸುತ್ತಿದ್ದೇನೆ, ಅದ್ಭುತವಾದ ಪ್ರತಿಕ್ರಿಯೆ ಇದೆ. ಪ್ರಜಾಪ್ರಭುತ್ವದ ಈ ಹಬ್ಬದಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಜನರು ಭಾಗಿಯಾಗಬೇಕು ಹಾಗೂ ಪೂರ್ತಿ ಮೆಜಾರಿಟಿಯನ್ನು ನನಗೆ ಕೊಟ್ರೆ ನಾನು ಕರ್ನಾಟಕವನ್ನು ನಂಬರ್ ವನ್ ಮಾಡ್ತೇನೆ ಅಂತ ನಮ್ಮ ದೇಶದ ನೆಚ್ಚಿನ ಪ್ರಧಾನಮಂತ್ರಿಗಳು ಕರೆ ಕೊಟ್ಟಿದ್ದರು, ಅದಕ್ಕೆ ಬಹಳ ಅತ್ಯುತ್ತಮ ಪ್ರತಿಕ್ರಿಯೆ ಸಿಗ್ತಿದೆ.

ಇದನ್ನೂ ಓದಿ: Karnataka Assembly Polls: ಮಾಕೋನಹಳ್ಳಿಯ ವಧು ಪ್ರದರ್ಶಿಸಿರುವ ಬದ್ಧತೆ ಎಲ್ಲರಲ್ಲೂ ಬಂದರೆ ಪ್ರಜಾಪ್ರಭುತ್ವ ವ್ಯವಸ್ಥೆ ಇನ್ನೂ ಗಟ್ಟಿಯಾಗುತ್ತದೆ!

ಸಾಮಾನ್ಯವಾಗಿ ಒಂದು ಫೀಲಿಂಗ್ ಇರುತ್ತೆ ಏನಂದ್ರೆ ಎಜುಕೇಟೆಡ್ ಜನ ಬೇಗ ಓಟಿಂಗ್ ಗೆ ಬರಲ್ಲ ಅಂತ, ಆದರೆ ಈ ಭಾಗದ ಹೆಚ್ಚಿನ ಪ್ರದೇಶ ಸುಶಿಕ್ಷಿತರು ಇರುವಂಥದ್ದು, ಇಲ್ಲಿ ಎಲ್ಲಾ ಬೂತ್ ಗಳಲ್ಲೂ ದೊಡ್ಡ ಸಂಖ್ಯೆಯಲ್ಲಿ ಬೆಳಗ್ಗೆ 7 ಗಂಟೆಗೆ ಎದ್ದು ಬಂದು ಮತದಾನ ಮಾಡ್ತಿದ್ದಾರೆ. ಇದು ನಮ್ಮ ಪಕ್ಷಕ್ಕೆ ಭಾರೀ ಬೆಂಬಲ ಸಿಗ್ತಿದೆ ಎಂಬುದರ ಸಂಕೇತ ಅಂತ ನಾನು ಭಾವಿಸ್ತೇನೆ. ಡಬ್ಬಲ್ ಇಂಜಿನ್ ಸರ್ಕಾರ ಮತ್ತೆ ಬರಲಿದೆ ಅಂತ ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಅಭಿಪ್ರಾಯಪಟ್ಟರು.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ

Published On - 11:55 am, Wed, 10 May 23