ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೇಸ್ ನಿಂದ ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಪುತ್ರಿ ಹಾಲಿ ಶಾಸಕಿ ರೂಪ ಕಲಾ ಎಂ ಸ್ಪರ್ಧೆ ಮಾಡಿದ್ದು ಎರಡನೇ ಬಾರಿ ತಮ್ಮ ಅದೃಷ್ಟ ಪರೀಕ್ಷೆಗೆ ಇಳಿದು ಇದೀಗಾ ಜಯಗಳಿಸಿದ್ದಾರೆ. ಇನ್ನು ಬಿಜೆಪಿಯಿಂದ ಮಾಜಿ ಶಾಸಕ ವೈ.ಸಂಪಂತಿ ಪುತ್ರಿ ಕಳೆದ ಬಾರಿ ಬಿಜೆಪಿಯಿಂದ ಸ್ಪರ್ಧೆ ಮಾಡಿ ಪರಾಭವಗೊಂಡಿದ್ದ ಅಭ್ಯರ್ಥಿ ಅಶ್ವಿನಿ ಸಂಪಂಗಿ, ಈ ಸಲವೂ ಕೂಡ ಪರಾಭವಗೊಂಡಿದ್ದಾರೆ. ಜೆಡಿಎಸ್ ಪಕ್ಷದದಿಂದ ಹೊಸ ಮುಖ ರಮೇಶ್ ಬಾಬು ಹಾಗೂ ಆರ್.ಪಿ.ಐ ಪಕ್ಷದಿಂದ ಮಾಜಿ ಶಾಸಕ ಎಸ್.ರಾಜೇಂದ್ರನ್ ಸ್ಪರ್ಧೆ ಮಾಡಿದ್ದು ಗೆಲುವು ಇವರ ಕೈ ಹಿಡಿದಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಇದೀಗಾ ಮಾಜಿ ಸಂಸದ ಕೆಹೆಚ್ ಮುನಿಯಪ್ಪ ಪುತ್ರಿ ಹಾಲಿ ಶಾಸಕಿ ರೂಪ ಕಲಾ ಎಂ ಗೆಲುವಿನ ಸಂಭ್ರಮದಲ್ಲಿದ್ದಾರೆ.
1957ರಲ್ಲಿ ಸಿಪಿಐನ ಎಂ.ಸಿ.ನರಸಿಂಹನ್, ಎಸ್‌ಸಿಎಫ್‌ನ ಸಿ.ಎಂ. ಆರ್ಮುಗಂ, 1962ರಲ್ಲಿ ಸಿಪಿಐ ಪಕ್ಷದ ಎಸ್.ರಾಜಗೋಪಾಲ್, 1967ರಲ್ಲಿ ಕಾಂಗ್ರೆಸ್‌ನ ಎಸ್.ಆರ್.ಗೋಪಾಲ್, 1972ರಲ್ಲಿ ಪಕ್ಷೇತರ ಅಭ್ಯರ್ಥಿ ಸಿ.ಎಂ.ಆರ್ಮುಗಂ, 1978ರಲ್ಲಿ ಆರ್‌ಪಿಐನ ಸಿ.ಎಂ.ಆರ್ಮುಗಂ, 1983ರಲ್ಲಿ ಸಾಲಿನಲ್ಲಿ ಎಐಡಿಎಂಕೆ ಎಂ.ಭಕ್ತವತ್ಸಲಂ, 1985ರಲ್ಲಿ ಸಿಪಿಎಂ ಪಕ್ಷದ ಟಿ.ಎಸ್.ಮಣಿ, 1989ರಲ್ಲಿ ಸಾಲಿನಲ್ಲಿ ಎಐಡಿಎಂಕೆ ಎಂ.ಭಕ್ತವತ್ಸಲಂ, 1994ರಲ್ಲಿ ಆರ್‌ಪಿಐ ಪಕ್ಷದ ಎಸ್.ರಾಜೇಂದ್ರನ್, 1999ನೇ ಸಾಲಿನಲ್ಲಿ ಎಐಎಡಿಎಂಕೆಯ ಎಂ.ಭಕ್ತವತ್ಸಲಂ, 2004ರಲ್ಲಿ ಸಾಲಿನಲ್ಲಿ ಆರ್‌ಪಿಐನ ಎಸ್. ರಾಜೇಂದ್ರನ್, 2008ನೇ ಸಾಲಿನಲ್ಲಿ ಬಿಜೆಪಿಯ ವೈ.ಸಂಪಂಗಿ,2013ನೇ ಸಾಲಿನಲ್ಲಿ ವೈ.ರಾಮಕ್ಕ ಆಯ್ಕೆಯಾಗಿದ್ದರು 2018ರ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷ ರೂಪಕಲಾ ಅವರು ಗೆಲುವು ಸಾಧಿಸಿದ್ದಾರೆ.