ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ. ಇದರ ಮಧ್ಯೆ ಈ ಬಾರಿಯ ಚುನಾವಣೆ ಫಲಿತಾಂಶದ ಬಗ್ಗೆ ಕೋಡಿ ಮಠದ ಶ್ರೀಗಳು ಹೇಳಿದ ಭವಿಷ್ಯ ಮತ್ತೆ ಮುನ್ನೆಲೆಗೆ ಬಂದಿದೆ. ಈ ಬಾರಿ ಒಂದೇ ಪಕ್ಷ ಅಧಿಕಾರಿಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ಭವಿಷ್ಯ ನುಡಿದಿದ್ದರು. ಅದರಂತೆ ಇದೀಗ ಕರ್ನಾಟಕದಲ್ಲಿ ಕಾಂಗ್ರೆಸ್ ಬಹುಮತ ಪಡೆಯುವುದರೊಂದಿಗೆ ಅಧಿಕಾರಕ್ಕೇರಿದೆ. ಇದರೊಂದಿಗೆ ಕೋಡಿಶ್ರೀ ನುಡಿದಿದ್ದ ನಿಜವಾಗಿದೆ. ಇನ್ನು ಹಲವು ಮತದಾನೋತ್ತರ ಸಮೀಕ್ಷೆಗಳು ಸುಳ್ಳಾಗಿದೆ.
ಇದನ್ನೂ ಓದಿ: ಚುನಾವಣಾ ಫಲಿತಾಂಶದ ಬಗ್ಗೆ ಸ್ಫೋಟಕ ಭವಿಷ್ಯ ನುಡಿದಿದ್ದ ಕೋಡಿಮಠ ಶ್ರೀ? ಇಲ್ಲಿದೆ ನೋಡಿ
ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮಿಜಿ ನುಡಿದ ಬಹುತೇಕ ಭವಿಷ್ಯಗಳು ನಿಜವಾಗಿವೆ. ಇಡೀ ವಿಶ್ವದಲ್ಲಿ ರೋಗರುಜುನು ಕಾಡಲಿದೆ ಎಂದು ಹೇಳಿದ್ದರು. ಅದರಂತೆ ಕೋರೋನಾ ಇಡೀ ವಿಶ್ವವನ್ನೇ ಕಟ್ಟಿ ಕಾಡಿತ್ತು. ಅದರಂತೆ ಇತ್ತೀಚೆಗೆ ಕರ್ನಾಟಕ ಚುನಾವಣೆ ಬಗ್ಗೆಯೂ ನುಡಿದಿದ್ದ ಭವಿಷ್ಯವೂ ಸಹ ಸತ್ಯವಾಗಿದೆ. ಕೋಡಿಮಠದ ಶ್ರೀಗಳು ಇದೇ ಫೆಬ್ರವರಿಯಲ್ಲಿ, ರಾಜ್ಯದಲ್ಲಿ ರಾಜಕೀಯ ಅರಾಜಕತೆಯ ವಾತಾವರಣವಿದೆ. ಸದ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ರಾಜಕೀಯ ಪರಸ್ಪರ ಒಗ್ಗೂಡಿಕೊಂಡು ಚುನಾವಣೆಯನ್ನು (ಚುನಾವಣಾ ಪೂರ್ವ ಮೈತ್ರಿ) ಎದುರಿಸುವುದಿಲ್ಲ. ಆದರೆ, ಚುನಾವಣೆಯಲ್ಲಿ ಈ ಬಾರಿ ಒಂದು ಪಕ್ಷಕ್ಕೆ ಸ್ಪಷ್ಟವಾದ ಬಹುಮತ ಸಿಗಲಿದೆ. ಮತದಾರರು ಒಂದು ಪಕ್ಷಕ್ಕೆ ಸ್ಪಷ್ಟವಾದ ಅಧಿಕಾರ ಕೊಡುತ್ತಾರೆ. ಈ ಬಾರಿ ಸಮ್ಮಿಶ್ರ ಸರ್ಕಾರವಾಗುವುದಿಲ್ಲ ಎಂದು ಹೇಳಿದ್ದರು. ಅದರಂತೆ ಇದೀಗ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಕ್ಕಿದೆ.
ಕೋಡಿಶ್ರೀ ನುಡಿದಿದ್ದ ಭವಿಷ್ಯ ನಿಜವಾಗಿದ್ದರೆ, ಇತ್ತ ಇಂಡಿಯಾ ಟುಡೇ ಆ್ಯಕ್ಸಿಸ್ ಮೈ ಇಂಡಿಯಾ ಸಮೀಕ್ಷೆ ಸಹ ಸತ್ಯವಾಗಿದೆ. ಹೌದು.. ಕಾಂಗ್ರೆಸ್‌ಗೆ ಅಭೂತ ಪೂರ್ವ ಬಹುಮತ ಬರುತ್ತೆ ಎಂದಿದ್ದು, ಬರೋಬ್ಬರಿ 122 ಸ್ಥಾನದಿಂದ 140 ಸ್ಥಾನಗಳನ್ನ ಪಡೆದು ಭರ್ಜರಿ ವಿಜಯ ಸಾಧಿಸುತ್ತೆ ಎಂದು ಭವಿಷ್ಯ ನುಡಿದಿತ್ತು. ಹಾಗೆಯೇ ಬಿಜೆಪಿ ಕೇವಲ 62 ರಿಂದ 80 ಸ್ಥಾನ ಗಳಿಸಬಹುದೆಂದು ಅಂದಾಜಿಸಿತ್ತು. ಜೆಡಿಎಸ್ 20 ರಿಂದ 25 ಸ್ಥಾನಗಳನ್ನ ಗಳಿಸಿದ್ರೆ, ಮೂವರು ಪಕ್ಷೇತರ ಅಭ್ಯರ್ಥಿಗಳು ಗೆಲ್ಲಬಹುದು ಎಂದು ಸಮೀಕ್ಷೆ ನುಡಿದಿತ್ತು. ಇದೀಗ ಕಾಂಗ್ರೆಸ್ ಅಭೂತ ಪೂರ್ವ ಬಹುಮತ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇಂಡಿಯಾ ಟುಡೇ ಆ್ಯಕ್ಸಿಸ್ ಹೊರತುಪಡಿಸಿ ಬಹುತೇಕ ಚುನಾವಣೆ ಬಗ್ಗೆ ನುಡಿದ್ದ ಸಮೀಕ್ಷೆಗಳು ಸುಳ್ಳಾಗಿವೆ. ಮೇ 10 ರಂದು ಪ್ರಕಟವಾಗಿದ್ದ ಚುನಾವಣೆ ಸಮೀಕ್ಷೆಗಳು ಈ ಬಾರಿ ಅತಂತ್ರ ಫಲಿತಾಂಶ ಬರಲಿದ್ದು ಸಮ್ಮಿಶ್ರ ಸರ್ಕಾರ ರಚನೆ ಆಗುವ ಸಾಧ್ಯತೆ ಹೆಚ್ಚು ಎನ್ನಲಾಗಿತ್ತು. ಮೇ 10 ರಂದು ನಡೆದಿದ್ದ ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆ ಇಂದು ನಡೆಯುತ್ತಿದೆ. ಇದುವರೆಗೂ ಆಗಿರುವ ಮತ ಎಣಿಕೆಯಲ್ಲಿ ಕಾಂಗ್ರೆಸ್ ಪಕ್ಷ ಮುನ್ನಡೆ ಸಾಧಿಸಿದ್ದು ಕೈ ನಾಯಕರು ಹರ್ಷೋದ್ಘಾರ ಮಾಡಿದ್ದಾರೆ. ಈಗಾಗಲೇ ಕಾಂಗ್ರೆಸ್ ಬೆಂಬಲಿಗರು ಎಲ್ಲೆಡೆ ಸಿಹಿ ಹಂಚುತ್ತಾ ತಮ್ಮ ಸಂತೋಷ ವ್ಯಕ್ತಪಡಿಸುತ್ತಿದ್ದಾರೆ.
ಟುಡೇಸ್ ಚಾಣಕ್ಯ ಸಮೀಕ್ಷೆಯೂ ಕಾಂಗ್ರೆಸ್‌ಗೆ ಜೈ ಎಂದಿದ್ದು, ಇದರ ಪ್ರಕಾರ ಕಾಂಗ್ರೆಸ್ 120 ಸ್ಥಾನಗಳನ್ನ ಗಳಿಸಲಿದೆ. ಆದ್ರೆ, 11 ಸ್ಥಾನ ಹೆಚ್ಚು ಅಥವಾ ಕಡಿಮೆ ಬರಲಿದೆ ಅಂತಾನೂ ಹೇಳಿದೆ. ಹಾಗೆಯೇ ಬಿಜೆಪಿ 92 ಸ್ಥಾನ ಪಡೆಯಲಿದ್ದು, 11 ಸ್ಥಾನ ಹೆಚ್ಚು ಅಥವಾ ಕಡಿಮೆ ಬರುತ್ತೆ ಅಂತಾ ಭವಿಷ್ಯ ನುಡಿದಿದೆ. ಆದ್ರೂ, ಬಿಜೆಪಿ ಮ್ಯಾಜಿಕ್ ನಂಬರ್ ರೀಚ್ ಆಗೋದು ಕಷ್ಟ ಎಂದಿದೆ. ಜೆಡಿಎಸ್ 12 ಸ್ಥಾನ ಪಡೆದ್ರೆ, ಪಕ್ಷೇತರರು 3 ಸ್ಥಾನ ಪಡೆಯಬಹುದು ಅಂತಾ ಸಮೀಕ್ಷೆ ತಿಳಿಸಿತ್ತು.