Sign In

By signing in or creating an account, you agree with Associated Broadcasting Company's Terms & Conditions and Privacy Policy.

Koppala Election Result 2023: ಕೊಪ್ಪಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಅಭ್ಯರ್ಥಿ ಕೆ ರಾಘವೇಂದ್ರಗೆ ಜಯ

Koppala Assembly Election Result 2023 Live Counting Updates: 33352 ಮತಗಳಿಂದ ರಾಘವೇಂದ್ರ ಅವರು ಬರಿ ಮುನ್ನಡೆ ಕಾಣುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದ ಮಂಜುಳಾ ಕರಡಿ 23062 ಮತಗಳಿಂದ ಎರಡನೇ ಸ್ಥಾನದಲ್ಲಿದ್ದರೆ.

Koppala Election Result 2023: ಕೊಪ್ಪಳ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಅಭ್ಯರ್ಥಿ ಕೆ ರಾಘವೇಂದ್ರಗೆ ಜಯ
ಕೆ.ರಾಘವೇಂದ್ರ ಹಿಟ್ನಾಳ್
Follow us
ನಯನಾ ಎಸ್​ಪಿ
|

Updated on:May 13, 2023 | 4:34 PM

Koppala Assembly Election Result 2023: ಕರ್ನಾಟಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ. ಕಾಂಗ್ರಸ್ ಅಭ್ಯರ್ಥಿ ರಾಘವೇಂದ್ರ ಹಿಟ್ನಾಳ್ ಜಯಭೇರಿ ಭರಿಸಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರದಲ್ಲಿ (Koppala Assembly Constituency) ಬಿಜೆಪಿ ಪಕ್ಷದಿಂದ ಸಂಸದ ಕರಡಿ ಸಂಗಣ್ಣ ಅಮರಪ್ಪ ಅವರ ಸೊಸೆ ಮಂಜುಳಾ ಅಮರೇಶ ಕರಡಿ ಸ್ಫರ್ಧಿಸಿದ್ದಾರೆ ಮತ್ತು ಜೆಡಿಎಸ್​ನಿಂದ ಸಿವಿ ಚಂದ್ರಶೇಖರ್‌ ಸ್ಪರ್ಧಿಸಿದ್ದಾರೆ.

ಕೊಪ್ಪಳ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿಯೂ ಕಾಂಗ್ರೆಸ್ ಗೆದ್ದಿದ್ದು, ಈ ಬಾರಿ ಕೂಡ ಮತದಾರರು ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಅವರನ್ನು ಆಯ್ಕೆ ಮಾಡಿರುವಂತೆ ತೋರುತ್ತಿದೆ. 33352 ಮತಗಳಿಂದ ರಾಘವೇಂದ್ರ ಅವರು ಬಾರಿ ಮುನ್ನಡೆ ಕಾಣುತ್ತಿದ್ದಾರೆ. ಇನ್ನೊಂದೆಡೆ ಬಿಜೆಪಿ ಪಕ್ಷದ ಮಂಜುಳಾ ಕರಡಿ 23062 ಮತಗಳಿಂದ ಎರಡನೇ ಸ್ಥಾನದಲ್ಲಿದ್ದರೆ.

2018ರ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಘವೇಂದ್ರ ಜಯಭೇರಿ ಭಾರಿಸಿದ್ದರು. ಭಾರತೀಯ ಜನತಾ ಪಾರ್ಟಿಯ ಅಮರೇಶ್ ಸಂಗಣ್ಣ ಕರಡಿ (ಮಂಜುಳಾ ಕರಡಿ ಪತಿ) 26351 ಮತಗಳ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇನ್ನು ಬಿಜೆಪಿ ಪಕ್ಷ ಇದೆ ಮೊದಲ ಬಾರಿಗೆ ಕೊಪ್ಪಳ ಕ್ಷೇತ್ರದಲ್ಲಿ ಮಹಿಳಾ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಅವರನ್ನು ಕಣಕ್ಕಿಳಿಸಿದೆ. 2008 ರಲ್ಲಿ ಕರಡಿ ಸಂಗಣ್ಣ ಅಮರಪ್ಪ ಅವರು ಜೆಡಿಎಸ್ ಪಕ್ಷದಿಂದ ನಿಂತು ಗೆಲುವು ಸಾಧಿಸಿದ್ದರು. ಒಟ್ಟಿನಲ್ಲಿ ಕೊಪ್ಪಳ ಜನತೆ ಈ ಬಾರಿ ಪಕ್ಷ ನೋಡಿ ಮತ ಚಲಾಯಿಸುತ್ತಾರೋ, ವ್ಯಕ್ತಿ ನೋಡಿ ಮತ ಚಲಾಯಿಸುತ್ತಾರೋ ಎಂದು ಕಾದು ನೋಡಬೇಕಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 3:49 am, Sat, 13 May 23