ಮತ್ತೆ ಪ್ರಚಾರಕ್ಕಿಳಿದ ಪರಮೇಶ್ವರ್, ಕಲ್ಲೇಟು ಬಿದ್ದಿದ್ದ ಗ್ರಾಮದಿಂದಲೇ ಪ್ರಚಾರ ಆರಂಭ

ದುಷ್ಕರ್ಮಿಗಳು ಎಸೆದಿದ್ದ ಕಲ್ಲೇಟಿನಿಂದ ಗಾಯಗೊಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ ಅವರು ಒಂದು ವಿಶ್ರಾಂತಿ ಬಳಿಕ ಇದೀಗ ಮತ್ತೆ ಪ್ರಚಾರಕ್ಕಿಳಿದಿದ್ದಾರೆ.

ಮತ್ತೆ ಪ್ರಚಾರಕ್ಕಿಳಿದ ಪರಮೇಶ್ವರ್, ಕಲ್ಲೇಟು ಬಿದ್ದಿದ್ದ ಗ್ರಾಮದಿಂದಲೇ ಪ್ರಚಾರ ಆರಂಭ

Updated on: Apr 30, 2023 | 11:51 AM

ತುಮಕೂರು: ಕಾಂಗ್ರೆಸ್ ಅಭ್ಯರ್ಥಿ ಡಾ.ಜಿ ಪಮರೇಶ್ವರ್​ (Dr G Parameshwara)ಮತ್ತೆ ಪ್ರಚಾರಕ್ಕಿಳಿದಿದ್ದಾರೆ. ಮೊನ್ನೆ ಸಂಜೆ ತಲೆಗೆ ಕಲ್ಲೇಟು ಬಿದ್ದು ಗಾಯಗೊಂಡು ಚಿಕಿತ್ಸೆ ಪಡೆದಿದ್ದ ಪರಮೇಶ್ವರ್, ನಿನ್ನೆ ದಿನ ಪೂರ್ತಿ ವಿಶ್ರಾಂತಿ ಪಡೆದಿದ್ದು, ಇದೀಗ ಇಂದಿನಿಂದ ಮತ್ತೆ ಪ್ರಚಾರ ಆರಂಭಿಸಿದ್ದಾರೆ. ತಲೆಯಲ್ಲಿ ಬ್ಯಾಂಡಿಜ್ ಇದ್ದು, ಟೋಪಿ ಧರಿಸಿಕೊಂಡು ನಾಳೆ(ಮೇ 01) ಮಾಜಿ ಸಿಎಂ ಸಿದ್ದರಾಮಯ್ಯ ಕೊರಟಗೆರೆ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದರಿಂದ. ಕೊರಟಗೆರೆ ರಾಜೀವ ಭವನ ಆವರಣದಲ್ಲಿ ನಡೆಯಲಿರುವ ಸಾರ್ವಜನಿಕ ಸಮಾವೇಶ ಸ್ಥಳ ಪರಿಶೀಲನೆ ಮಾಡಿದರು. ಬಳಿಕ ಕಲ್ಲೇಟು ಬಿದ್ದಿದ್ದ ಗ್ರಾಮದಿಂದಲೇ ಪರಮೇಶ್ವರ್, ಮನೆ ಮನೆಗೆ ತೆರಳಿ ಪ್ರಚಾರ ಕೈಗೊಳ್ಳುತ್ತಿರುವುದು ವಿಶೇಷ.

ಇದನ್ನೂ ಓದಿ: ಪ್ರಚಾರ ವೇಳೆ ಗುಂಪಿನಲ್ಲಿದ್ದ ದುಷ್ಕರ್ಮಿಯಿಂದ ಡಾ ಜಿ ಪರಮೇಶ್ವರ್​ ಮೇಲೆ ಕಲ್ಲೆಸೆತ: ಆಸ್ಪತ್ರೆಗೆ ದಾಖಲು

ಮೊನ್ನೇ ಕೊರಟಗೆರೆ ತಾಲೂಕಿನ ಭೈರೇನಹಳ್ಳಿಯಲ್ಲಿ ಶುಕ್ರವಾರ ಪ್ರಚಾರದ ವೇಳೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಪರಮೇಶ್ವರ್​ ಅವರ ತಲೆಗೆ ಬಿದ್ದು ಗಾಯವಾಗಿತ್ತು. ಕೂಡಲೇ ಅವರ ಬೆಂಬಲಿಗರು ಸಮೀಪದ ಅಕ್ಕಿರಾಮಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರು.

ನಂತರ ಡಾ. ಜಿ. ಪರಮೇಶ್ವರ್ ತುಮಕೂರಿನ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ನಿನ್ನೆ (ಏಪ್ರಿಲ್ 29) ಇಡೀ ದಿನ ಪ್ರಚಾರವನ್ನು ಸ್ಥಗಿತಗೊಳಿಸಿ ವಿಶ್ರಾಂತಿಯಲ್ಲಿದ್ದರು. ಇದೀಗ ಇಂದಿನಿಂದ ಮತ್ತೆ ಪ್ರಚಾರಕ್ಕಿಳ್ಳಿದಿದ್ದಾರೆ. ಈ ಘಟನೆ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಘಟನೆ ಬಗ್ಗೆ ತೀವ್ರ ಖಂಡನೆಗಳು ವ್ಯ್ಕತವಾಗಿದ್ದವು.

ಘಟನೆ ಬಗ್ಗೆ ಪರಮೇಶ್ವರ್ ಹೇಳಿದ್ದೇನು?

ಘಟನೆ ಹೇಗಾಯಿತು ಎಂದು ಹೇಳಲು ಕಷ್ಟ. ಬಹುಶಃ ಯಾರೋ ದುಷ್ಕರ್ಮಿಗಳು ಕಲ್ಲು ಹಾಕಿರಬಹುದು ಅನ್ನಿಸುತ್ತದೆ. ಆದರೆ ಯಾವ ಉದ್ದೇಶಕ್ಕೆ ಹಾಕಿದರು ಎಂದು ಹೇಳಲು ಕಷ್ಟ. ನಾನು 35 ವರ್ಷಗಳಿಂದ ರಾಜಕರಣ ಮಾಡಿಕೊಂಡು ಬಂದಿದ್ದೇನೆ. ನನಗೆ ಶತ್ರುಗಳು ಕಡಿಮೆ ಇರಬಹುದು ಅಂದುಕೊಂಡಿದ್ದೇನೆ. ಒಂದು ವೇಳೆ ದ್ವೇಷ ಇದ್ದರೆ ಈ ರೀತಿ ತೀರಿಸಿಕೊಳ್ಳಬಾರದು. ಹೂನಲ್ಲಿ ಅಷ್ಟು ದೊಡ್ಡ ಕಲ್ಲು ಬರಲು ಸಾಧ್ಯವಿಲ್ಲ. ಯಾರೋ ದುಷ್ಕರ್ಮಿಗಳು ಹಾಕಿರಬಹುದು. ಈ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ತಿಳಿಸಿದ್ದೇನೆ ಎಂದಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ