Kundapur Election 2023 Winner: ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಶಿಷ್ಯ ಕಿರಣ್ ಕುಮಾರ್​​ ಕೋಡ್ಗಿ ಗೆಲುವು

|

Updated on: May 13, 2023 | 2:19 PM

ಬಿಜೆಪಿ ಭದ್ರಕೋಟೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದೆ. ಕುಂದಾಪುರದಲ್ಲಿ ವಾಜಪೇಯಿ ಎಂದು ಕರೆಸಿಕೊಳ್ಳುವ ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಅವರು ಶಿಷ್ಯ ಕಿರಣ್ ಕುಮಾರ್​​ ಕೋಡ್ಗಿ ಅವರು ಭಾರೀ ಮತದಿಂದ ಗೆಲುವು ಸಾಧಿಸಿದ್ದಾರೆ.

Kundapur Election 2023 Winner: ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಶಿಷ್ಯ ಕಿರಣ್ ಕುಮಾರ್​​ ಕೋಡ್ಗಿ ಗೆಲುವು
Follow us on

ಕುಂದಾಪುರ: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದು ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟವಾಗಿದೆ, ಕುಂದಾಪುರದಲ್ಲಿ ಮತ್ತೆ ಬಿಜೆಪಿ ತೆಕ್ಕೆಗೆ ಹೋಗಿದೆ, ಕುಂದಾಪುರ ವಿಧಾನಸಭಾ ಕ್ಷೇತ್ರದಲ್ಲಿ (Kundapur Assembly Constituency) ಈ ಬಾರಿ ಮೂರು ಪಕ್ಷಗಳ ನಡುವೆ ಬಾರಿ ಪೈಪೋಟಿ ನಡೆಯುತ್ತಿದೆ. ಬಿಜೆಪಿ ಭದ್ರಕೋಟೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಿದೆ. ಕುಂದಾಪುರದಲ್ಲಿ ವಾಜಪೇಯಿ ಎಂದು ಕರೆಸಿಕೊಳ್ಳುವ ಹಾಲಾಡಿ ಶ್ರೀನಿವಾಸ್​​ ಶೆಟ್ಟಿ ಅವರು ಶಿಷ್ಯ ಕಿರಣ್ ಕುಮಾರ್​​ ಕೋಡ್ಗಿ ಅವರು ಭಾರೀ ಮತದಿಂದ ಗೆಲುವು ಸಾಧಿಸಿದ್ದಾರೆ. ಕುಂದಾಪುರದಲ್ಲಿ ಕಾಂಗ್ರೆಸ್​​ಗೆ ಭಾರೀ ಪೈಪೋಟಿ ನೀಡಿದ್ದು, ಈ ಬಾರಿ ಕುಂದಾಪುರದ ಜನ ಬಿಜೆಪಿ ಕೈಹಿಡಿದ್ದಿದ್ದಾರೆ.

ಇನ್ನೂ ಬಿಜೆಪಿ ಅಭ್ಯರ್ಥಿ ಕಿರಣ್ ಕುಮಾರ್​​ ಕೋಡ್ಗಿ ಅವರಿಗೆ ಪ್ರಬಲ ಪೈಪೋಟಿ ನೀಡಿದ ಕಾಂಗ್ರೆಸ್​​ನ ಎಂ,ದಿನೇಶ್​​ ಹೆಗ್ಡೆ ಅವರು ಸೋತಿದ್ದಾರೆ. ಕಾಂಗ್ರೆಸ್​​ ದೊಡ್ಡ ಮಟ್ಟದಲ್ಲಿ ಸಾಧನೆ ಮಾಡಿಲ್ಲ ಎಂದು ಹೇಳಲಾಗಿತ್ತು, ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿ ಬದಲಾವಣೆ ನಂತರ ಕಾಂಗ್ರೆಸ್​​ ಸ್ವಲ್ಪ ಮಟ್ಟದಲ್ಲಿ ಬಿಜೆಪಿ ಹೊಡತ ನೀಡಬಹುದು ಎಂದಿತ್ತು ಆದರೆ ಹೆಚ್ಚು ಮತಗಳಿಂದ ಕಿರಣ್ ಕುಮಾರ್​​ ಕೋಡ್ಗಿ ಗೆದ್ದಿದ್ದಾರೆ. ಜೆಡಿಎಸ್​​ನಿಂದ ರಮೇಶ್ ಕುಂದಾಪುರ ಸೋತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ