Puttur Election 2023 Winner: ಪುತ್ತೂರಿನಲ್ಲಿ ಅಶೋಕ್ ರೈ ಗೆಲ್ಲುವು, ಅರುಣ್ ಪುತ್ತಿಲಗೆ ಎರಡನೇ ಸ್ಥಾನ, ಆಶಾ ತಿಮ್ಮಪ್ಪ ಹೀನಾಯ ಸೋಲು

ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur Assembly Constituency) ಈ ಬಾರಿ ಬಿಜೆಪಿ ವರ್ಸಸ್​ ಹಿಂದುತ್ವ ನಡುವೆ ಭಾರೀ ಪೈಪೋಟಿ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಸೋತಿದ್ದು, ಕಾಂಗ್ರೆಸ್​​ ಪುತ್ತೂರಿನಲ್ಲಿ ಗೆಲುವು ಸಾಧಿಸಿದ್ದಾರೆ.

Puttur Election 2023 Winner: ಪುತ್ತೂರಿನಲ್ಲಿ ಅಶೋಕ್ ರೈ ಗೆಲ್ಲುವು, ಅರುಣ್ ಪುತ್ತಿಲಗೆ ಎರಡನೇ ಸ್ಥಾನ, ಆಶಾ ತಿಮ್ಮಪ್ಪ ಹೀನಾಯ ಸೋಲು
ಅಶೋಕ್​ ರೈ
Follow us
ಅಕ್ಷಯ್​ ಪಲ್ಲಮಜಲು​​
|

Updated on: May 13, 2023 | 2:08 PM

ಪುತ್ತೂರು: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ  ಪ್ರಕಟಗೊಂಡಿದೆ. ಪುತ್ತೂರು ವಿಧಾನಸಭಾ ಕ್ಷೇತ್ರದಲ್ಲಿ (Puttur Assembly Constituency) ಈ ಬಾರಿ ಬಿಜೆಪಿ ವರ್ಸಸ್​ ಹಿಂದುತ್ವ ನಡುವೆ ಭಾರೀ ಪೈಪೋಟಿ ನಡೆದಿದ್ದು, ಬಿಜೆಪಿ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಸೋತಿದ್ದು, ಕಾಂಗ್ರೆಸ್​​ ಪುತ್ತೂರಿನಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನೂ ಪುತ್ತಿಲ್ಲ ಅವರು 2ನೇ ಸ್ಥಾನ ಪಡೆದುಕೊಂಡಿದ್ದಾರೆ. ಕಾಂಗ್ರೆಸ್​​​​ ಅಶೋಕ್ ರೈ ಗೆಲುವು ಸಾಧಿಸಿದ್ದಾರೆ. ಪುತ್ತೂರಿನಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಪುತ್ತೂರಿನ ಮತದಾರ ಕಾಂಗ್ರೆಸ್​​​ ಕೈಹಿಡಿದಿದ್ದಾರೆ, ಅಶೋಕ್ ರೈ ಗೆಲುವಿನ ನಗೆ ಬೀರಿದ್ದಾರೆ. ಬಿಜೆಪಿ ಎಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಿಜೆಪಿ ಎನ್ನುವ ಪರಿಸ್ಥಿತಿ ದಕ್ಷಿಣ ಕನ್ನಡದ ಪುತ್ತೂರಿನಲ್ಲಿ ಸದ್ಯದ ಸ್ಥಿತಿಯಲ್ಲಿ ಇಲ್ಲ ಎಂಬುದು ಸಾಬೀತಾಗಿದೆ. ಅರುಣ ಪುತ್ತಿಲ ಅವರು ಭಾರೀ ಪೈಪೋಟಿ ನೀಡಿದ್ದರು, ಆದರೆ ಪುತ್ತಿಲ ಅವರು ಎರಡನೇ ಸ್ಥಾನ ಪಡೆದುಕೊಂಡಿದ್ದಾರೆ. ಆಶಾ ತಿಮ್ಮಪ್ಪ ಗೌಡ ಅವರು ಸೋತಿದ್ದಾರೆ.

ಇನ್ನೂ ಪುತ್ತೂರಿನಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಆಶಾ ತಿಮ್ಮಪ್ಪ ಅವರನ್ನು ಕಣಕ್ಕೀಳಿಸಿದ್ದರು. ಆದರೆ ಅರುಣ್ ಪುತ್ತಿಲ ಅವರು ಪ್ರಬಲ ಪೈಪೋಟಿ ನೀಡಿದ ಕಾರಣ ಆಶಾ ತಿಮ್ಮಪ್ಪ ಸೋತಿದ್ದಾರೆ. ಹಿಂದು ಸಂಘಟನೆ ಮೂಲಕ ಬೆಳೆದು ಬಂದ ಅರುಣ್ ಪುತ್ತಿಲ ಅನೇಕ ಬಾರಿ ಬಿಜೆಪಿಯಿಂದ ಟಿಕೇಟ್​ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಿದ್ದರು, ಆದರೆ ಹಲವು ಗೊಂದಲಗಳಿಂದ ಅರುಣ್ ಪುತ್ತಿಲ ಅವರಿಗೆ ಟಿಕೇಟ್​ ಕೈತಪ್ಪಿತ್ತು. ಆದರೆ ಈ ಬಾರಿ ಅವರಿಗೆ ಟಿಕೇಟ್​​ ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಆದರೆ ಈ ಬಾರಿಯೂ ಟಿಕೇಟ್​ ಕೈತಪ್ಪಿದ ಕಾರಣ, ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲಬೇಕು ಎಂದು ಕಾರ್ಯಕರ್ತರ ಒತ್ತಡಕ್ಕೆ ಮಣಿದು ಪಕ್ಷೇತರ ಅಭ್ಯರ್ಥಿಯಾಗಿ ನಿಂತರು.

ಇದನ್ನೂ ಓದಿ: Holenarasipur Election 2023 Winner: ಹೊಳೆನರಸೀಪುರದಲ್ಲಿ ಎಚ್.ಡಿ. ರೇವಣ್ಣಗೆ ಅಲ್ಪಮತಗಳ ಅಂತರದ ಗೆಲುವು

ಅಶೋಕ್ ರೈ ಕೂಡ ಬಿಜೆಪಿ ಟಿಕೇಟ್​ ಆಕಾಂಕ್ಷಿಯಾಗಿದ್ದರು. ಆದರೆ ಈ ಬಾರಿ ಅವರಿಗೂ ಬಿಜೆಪಿಯಿಂದ ಟಿಕೆಟ್​​ ಸಿಗದ ಕಾರಣ ಅವರು ಕಾಂಗ್ರೆಸ್​​ನಿಂದ ಸ್ಪರ್ಧಿಸಿ ಗೆದ್ದಿದ್ದಾರೆ. ಇನ್ನೂ ಜೆಡಿಎಸ್​​ನಿಂದ ದಿವ್ಯ ಪ್ರಭಾ ಅವರು ಕೂಡ ಸೋತಿದ್ದಾರೆ.

ಚುನಾವಣೆ ಫಲಿತಾಂಶ ಲೈವ್ ಅಪ್​ಡೇಟ್​ಗೆ ಇಲ್ಲಿ ಕ್ಲಿಕ್ ಮಾಡಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಕುಡಿದು ಕಾರು ಚಲಾಯಿಸಿ ಮಹಿಳೆಯನ್ನು ಎಳೆದೊಯ್ದ ಚಾಲಕ
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಉಚ್ಛಾಟನೆಯ ಕೂಗಿನಿಂದ ಬಸನಗೌಡ ಪಾಟೀಲ್ ಯತ್ನಾಳ್ ಮೆತ್ತಗಾದರೇ?
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಪಕ್ಷದಲ್ಲಿ ಶಿಸ್ತು ವಾಪಸ್ಸಾಗಲು ಕೇಂದ್ರ ನಾಯಕರು ಮಧ್ಯಪ್ರವೇಶಿಸಬೇಕು: ಸಂಸದ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಯೊಗೇಶ್ವರ್ ಹೆಸಎಉ ಹೇಳಿದ ಕೂಡಲೇ ಕೋಪದಿಂದ ಕೆಂಡವಾದ ಕುಮಾರಸ್ವಾಮಿ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ಸಚಿವರ ಎದುರಲ್ಲೇ ಚಾಮರಾಜನಗರದ ಇಬ್ಬರು ಶಾಸಕರ ಜಗಳ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ
ನಿಖಿಲ್ ಉಪ ಚುನಾವಣೆ ಸೋಲನ್ನು ಕ್ರೀಡಾಸ್ಪೂರ್ತಿಯಿಂದ ಸ್ವೀಕರಿಸಿದ್ದಾರೆ
ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್
ಬಿಗ್​ಬಾಸ್ ರಾಜಕುಟುಂಬದ ಕತೆ ವಿಶ್ಲೇಷಣೆಗಿಳಿದ ಸುದೀಪ್
ಉಡುಪಿಯ ವಂಡ್ಸೆ ಸ್ವಚ್ಛತೆಗೆ ಮಾದರಿ ಗ್ರಾಮ: ಬಯೋಕಾನ್ ಮುಖ್ಯಸ್ಥೆ ಪ್ರಶಂಸೆ
ಉಡುಪಿಯ ವಂಡ್ಸೆ ಸ್ವಚ್ಛತೆಗೆ ಮಾದರಿ ಗ್ರಾಮ: ಬಯೋಕಾನ್ ಮುಖ್ಯಸ್ಥೆ ಪ್ರಶಂಸೆ
ರಾಮನಗರದ ಜನ ನೀಡಿದ ಪ್ರೀತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ: ನಿಖಿಲ್
ರಾಮನಗರದ ಜನ ನೀಡಿದ ಪ್ರೀತಿಗೆ ಅನುಗುಣವಾಗಿ ಕೆಲಸ ಮಾಡಿದ್ದೇವೆ: ನಿಖಿಲ್
‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?   
‘ಖಾಲಿ ಪೇಪರ್​ಗೆ ಸಹಿ ಹಾಕಿಸಿಕೊಂಡ್ರು’; ಇದೇನಾ ಝೈದ್ ಖಾನ್ ಅಸಲಿ ಮುಖ?