ಅಭಿನಯ ಚಕ್ರವರ್ತಿ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಚ್

|

Updated on: May 04, 2023 | 2:41 PM

ದೇವದುರ್ಗಕ್ಕೆ ನಟ ಸುದೀಪ್ ಆಗಮಿಸುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಲಿಪ್ಯಾಡ್​​ಗೆ ನುಗ್ಗಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದ್ದಾರೆ.

ಅಭಿನಯ ಚಕ್ರವರ್ತಿ ಸುದೀಪ್ ನೋಡಲು ಮುಗಿಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರಿಂದ ಲಾಠಿ ಚಾರ್ಚ್
ಸುದೀಪ್
Follow us on

ರಾಯಚೂರು: ಅಭಿನಯ ಚಕ್ರವರ್ತಿ, ನಟ ಸುದೀಪ್(Sudeep) ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಇಂದು ರಾಯಚೂರು ಜಿಲ್ಲೆಯ 4 ಕ್ಷೇತ್ರಗಳಲ್ಲಿ ಅಂದರೆ ದೇವದುರ್ಗ, ಲಿಂಗಸುಗೂರು, ಮಾನ್ವಿ, ಮಸ್ಕಿ ಕ್ಷೇತ್ರಗಳಲ್ಲಿ ರೋಡ್​ ಶೋ ನಡೆಸಲಿದ್ದಾರೆ. ಆದ್ರೆ ರಾಯಚೂರು ಜಿಲ್ಲೆ ದೇವದುರ್ಗಕ್ಕೆ ನಟ ಸುದೀಪ್ ಆಗಮಿಸುತ್ತಿದ್ದಂತೆ ತಮ್ಮ ನೆಚ್ಚಿನ ನಟನನ್ನು ನೋಡಲು ಅಭಿಮಾನಿಗಳು ಹೆಲಿಪ್ಯಾಡ್​​ಗೆ ನುಗ್ಗಿದ್ದಾರೆ. ಹೀಗಾಗಿ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ(Lathi Charge) ಮಾಡಿದಂತಹ ಘಟನೆ ನಡೆದಿದೆ.

ಕರ್ನಾಟಕ ವಿಧಾನಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಹಿನ್ನೆಲೆ ನಟ ಕಿಚ್ಚ ಸುದೀಪ್ ದೇವದುರ್ಗದಲ್ಲಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ಪರ ಪ್ರಚಾರಕ್ಕೆ ಆಗಮಿಸಿದ್ರು. ವಿಶೇಷ ಹೆಲಿಕಾಪ್ಟರ್ ಮೂಲಕ ರಾಯಚೂರಿಗೆ ಬಂದಿಳಿದ ಸುದೀಪ್ ನೋಡಲು ಸಾವಿರಾರು ಮಂದಿ ಬಂದಿದ್ದರು. ಹೆಲಿಪ್ಯಾಡ್ ಸುತ್ತ ಬೆಟ್ಟಗಳ ಮೇಲೆ ಕೂತು ಕಿಚ್ಚನನ್ನು ಕಣ್ತುಂಬಿಕೊಂಡ್ರು. ಈ ವೇಳೆ ಕೆಲ ಅಭಿಮಾನಿಗಳು ಬ್ಯಾರಿಕೇಡ್‌ಗಳನ್ನು ದಾಟಿ ಹೆಲಿಪ್ಯಾಡ್​​ಗೆ ನುಗ್ಗಿದ್ರು. ಆಗ ಜನಸಂದಣಿಯನ್ನು ನಿಯಂತ್ರಿಸಲು ಪೊಲೀಸರು ಮತ್ತು ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಲಾಠಿ ಚಾರ್ಜ್ ಮಾಡಿದ್ದಾರೆ.

ಇದನ್ನೂ ಓದಿ: Kichcha Sudep: ಕಿಚ್ಚ ಹೋದಲೆಲ್ಲ ಜನಸಾಗರ; ಸುದೀಪ್ ಕ್ರೇಜ್ ಹೇಗಿದೆ ನೋಡಿ..

ಇನ್ನು ದೇವದುರ್ಗ ಪಟ್ಟಣದಲ್ಲಿ ನಟ ಸುದೀಪ್ ಸುಮಾರು 2 ಕಿಮೀ ರೋಡ್ ಶೋ ನಡೆಸಿದ್ದಾರೆ. ಬಳಿಕ ಮಾತನಾಡಿದ ಸುದೀಪ್, ನಮ್ಮ ಹಿರಿಯ ಸಹೋದರ ಶಿವನಗೌಡ ನಾಯಕ್ ರನ್ನ ನಾಲ್ಕು ಸಾರಿ ಗೆಲ್ಸಿದಿರಾ ಅಂದ್ರೆ, ಅವರು ಒಳ್ಳೆಯವ್ರು ಅಂತ ಅರ್ಥ. ಎಜುಕೇಶನ್ ಲೇಔಟ್ ಮಾಡಿ ಸಕ್ಸಸ್ ಮಾಡಿರೋರು ಇವ್ರು. ನಾಲ್ಕು ಸಾರಿ ಗೆದ್ದಿದ್ದಾರೆ ಅಂದ್ರೆ ನನ್ನ ಸ್ನೇಹಿತರು ದಡ್ಡರಲ್ಲ. ಜನ ಬುದ್ದಿವಂತರು. ಇವರನ್ನ ಗೆಲ್ಲಿಸಿ. ಶಿವನಗೌಡ ನಾಯಕ್ ಬೇರೆ ಯಾರೂ ಅಲ್ಲ. ಅವ ನಮ್ಮವ. ಶಿವನಗೌಡ ಅವ್ರಿಗೆ ವೋಟ್ ಹಾಕೋದು ಒಂದೆ. ನನ್ನ ಗೆಲ್ಲಿಸೋದು ಒಂದೇ. ನಾನೊಬ್ಬ ಸಾಮಾನ್ಯ ಕಲಾವಿದ. ಸ್ವಂತ ಸರ್ಕಾರ ತೆಗೆದುಕೊಂಡು ಬನ್ನಿ ಎಂದರು.

ಮಾರ್ಗ ಮಧ್ಯೆ ಟೀ ತರಿಸಿಕೊಂಡು ಕುಡಿದ ನಟ ಸುದೀಪ್

ರಸ್ತೆ ಪಕ್ಕದ ಅಂಗಡಿಯಿಂದ ಟೀ ತರಿಸಿಕೊಂಡು ಸುದೀಪ್ ಚಹಾ ಸವಿದ್ರು. ಬಳಿಕ ಟೀ ಸೂಪರ್ ಅಂತ ಸನ್ನೆ ಮಾಡಿ ಹೇಳಿದ್ರು. ಭಾಷಣ ಮಾಡಿ ಬಿಜೆಪಿ ಅಭ್ಯರ್ಥಿ ಕೆ.ಶಿವನಗೌಡ ನಾಯಕ್ ರನ್ನ ಗೆಲ್ಲಿಸಿ ಅಂತ ಕರೆ ನೀಡಿದ್ರು.

ರಾಜ್ಯ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:38 pm, Thu, 4 May 23