ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ನಾನಲ್ಲ: ಮಣಿಕಂಠ ರಾಠೋಡ್​ಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ

ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ಅಲ್ಲ ನಾನು. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೆ ಬಿಡುವುದಿಲ್ಲ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ಗೆ ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು.

ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ನಾನಲ್ಲ: ಮಣಿಕಂಠ ರಾಠೋಡ್​ಗೆ ತಿರುಗೇಟು ನೀಡಿದ ಮಲ್ಲಿಕಾರ್ಜುನ ಖರ್ಗೆ
ಮಣಿಕಂಠ ರಾಠೋಡ್, ಮಲ್ಲಿಕಾರ್ಜುನ ಖರ್ಗೆ
Follow us
ಗಂಗಾಧರ​ ಬ. ಸಾಬೋಜಿ
|

Updated on: May 07, 2023 | 4:37 PM

ಕಲಬುರಗಿ: ಯಾರಾದ್ರೂ ಹೆದರಿಸಿದ್ರೆ, ಬೆದರಿಸಿದ್ರೆ ಬಗ್ಗುವ ಮಗ ಅಲ್ಲ ನಾನು. ನನ್ನನ್ನು ಯಾರೂ ಕೆಣಕಲ್ಲ, ಕೆಣಕಿದ್ರೆ ಉತ್ತರ ಕೊಡದೆ ಬಿಡುವುದಿಲ್ಲ ಎಂದು ಚಿತ್ತಾಪುರ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್​ಗೆ (Manikanta Rathod) ಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದರು. ಜಿಲ್ಲೆಯ ಕಮಲಾಪುರ ಪಟ್ಟಣದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ತಂದೆ ನನಗೆ ಒಂದು ಕಿವಿಮಾತು ಹೇಳಿದ್ದಾರೆ. ಒಬ್ಬನೇ ಮಗ ಇದ್ದೀಯಾ, ಧೈರ್ಯದಿಂದ ಇರು ಎಂದಿದ್ದಾರೆ. ಕಳೆದ 53 ವರ್ಷಗಳಿಂದ ನಾನು ರಾಜಕೀಯದಲ್ಲಿದ್ದೇನೆ. ನಾನು ಚಿಕ್ಕವನಿದ್ದಾಗ ತಾಯಿ, ತಂಗಿ, ಚಿಕ್ಕಪ್ಪನನ್ನು ಕಳೆದುಕೊಂಡೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿದ್ದವನು ಎಐಸಿಸಿ ಅಧ್ಯಕ್ಷನಾಗಿದ್ದೇನೆ ಎಂದು ಹೇಳಿದರು.

ದೇಶದ ಸ್ವತಂತ್ರ್ಯಕ್ಕಾಗಿ ಆರ್​ಎಸ್​ಎಸ್, ಬಿಜೆಪಿ ಹೋರಾಟ ಮಾಡಿಲ್ಲ

ರಾಜ್ಯ ಅಭಿವೃದ್ಧಿಯಾಗಬೇಕಂದ್ರೆ 40% ಸರ್ಕಾರ ತೆಗೆಯಬೇಕು. ಕಾಂಗ್ರೆಸ್ 70 ವರ್ಷದಲ್ಲಿ ಏನು ಮಾಡಿದೆ ಅಂತ ಪ್ರಧಾನಿ ಮೋದಿ ಕೇಳುತ್ತಾರೆ. ನಾವು 70 ವರ್ಷ ಏನು ಮಾಡದಿದ್ರೆ ಮೋದಿ ಪ್ರಧಾನಿ ಆಗುತ್ತಿರಲಿಲ್ಲ. ದೇಶದ ಸ್ವತಂತ್ರ್ಯಕ್ಕಾಗಿ ಆರ್​ಎಸ್​ಎಸ್, ಬಿಜೆಪಿ ಹೋರಾಟ ಮಾಡಿಲ್ಲ ಎಂದರು.

ಇದನ್ನೂ ಓದಿ: ಹೆಲ್ಮೆಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ಬೈಕ್​​ನಲ್ಲಿ ಹೊರಟ ರಾಹುಲ್​ ಗಾಂಧಿ: ಡೆಲಿವರಿ ಬಾಯ್ ಜೊತೆ ಸಂವಾದ

ಕಾಂಗ್ರೆಸ್​ಗೆ ಬೈದ್ರೆ ದೇಶದ ಅಭಿವೃದ್ಧಿಯಾಗುತ್ತಾ? 

ಆರ್​ಎಸ್​ಎಸ್​ನವರು ಸರ್ಕಾರಿ ನೌಕರಿ, ಒಳ್ಳೊಳ್ಳೆ ಹುದ್ದೆಗೆ ಹೋದರು. ಆದರೆ ಸಾಮಾನ್ಯ ಜನರು ಸ್ವತಂತ್ರ ಕ್ಕಾಗಿ ಹೋರಾಟ ಮಾಡಿದರು. ದಿನಕ್ಕೆ ನಾಲ್ಕು ನಾಲ್ಕು ಜಾಕೇಟ್ ಪ್ರಧಾನಿ ಹಾಕುತ್ತಾರೆ. ಮೋದಿ ಅವರ ಜಾಕೇಟ್ ಮಾತ್ರ ಪ್ರಸಿದ್ಧಿಯಾಗಿದೆ. ಕೇವಲ ಕಾಂಗ್ರೆಸ್​ಗೆ ಬೈದ್ರೆ ದೇಶದ ಅಭಿವೃದ್ಧಿಯಾಗುತ್ತಾ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಕಾಂಗ್ರೆಸ್​​ನವರು ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ್ದಾರೆ, ಅದು ಸುಡದೇ ಬಿಡುವುದಿಲ್ಲ ಎಂದ ಸಚಿವ ಆರ್​ ಅಶೋಕ್​​

ಕರ್ನಾಟಕ ಜನರು ನನಗೆ ಮತ ನೀಡಿ ಎಂದ ಮಲ್ಲಿಕಾರ್ಜುನ ಖರ್ಗೆ

ನಾನು ಕರ್ನಾಟಕ, ಕಲಬುರಗಿ ಮಗನಿದ್ದೇನೆ. ನಾನು ಈ ಮಣ್ಣಿನಲ್ಲಿ ಹುಟ್ಟಿದ್ದೇನೆ, ಇಲ್ಲೇ ಸಾಯುತ್ತೇನೆ. ಕರ್ನಾಟಕ ಜನರು ನನಗೆ ಮತ ನೀಡಬೇಕು. ಮೋದಿ ಗುಜರಾತ್​ನಿಂದ ಬಂದು ಹೇಗೆ ಇಲ್ಲಿ ಸುಪುತ್ರರಾಗುತ್ತಾರೆ. ಮೋದಿ ಗಲ್ಲಿಗಲ್ಲಿಗೆ ಬಂದು ಅಡ್ಡಾಡುತ್ತಿದ್ದಾರೆ. ಅವರಿಗೆ ಸೋಲಿನ ನಡುಕ ಹುಟ್ಟಿದೆ. ಒಬ್ಬ ಪ್ರಧಾನ ಮಂತ್ರಿ ಪ್ರಚಾರಕ್ಕೆ ಇಷ್ಟೊಂದು ಸಲ ಬರೋದಾ ಎಂದು ಕಿಡಿಕಾರಿದರು.

ಮಣಿಪುರದಲ್ಲಿ ಬೆಂಕಿ ಹತ್ತಿದೆ, ಕಾಶ್ಮೀರದಲ್ಲಿ ಯೋಧರು ಸತ್ತಿದ್ದಾರೆ. ಅಲ್ಲಿಗೆ ಹೋಗದೆ, ಚುನಾವಣೆಗಾಗಿ ಇಲ್ಲಿಗೆ ಬಂದಿದ್ದಾರೆ. ಪ್ರಧಾನಿ ಮೋದಿ ನಾನು ಬಡವ, ಹಿಂದುಳಿದವರು ಅಂತಾರೆ. ನಾನು ನಿಮಗಿಂತ ಬಡವ ಇದ್ದೇನೆ. ಮುಂದಿನ ಇಂಜಿನ್ ಹಳಿ ತಪ್ಪಿದೆ. ಹೀಗಾಗಿ ಹಿಂದಿನ ಇಂಜಿನ್ ಕೂಡ ಹಳಿ ತಪ್ಪಿದೆ ಎಂದು ಹೇಳಿದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ