
ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ (Malur Assembly Constituency) ಕಾಂಗ್ರೆಸ್ ಅಭ್ಯರ್ಥಿ ಕೆವೈ ನಂಜೇಗೌಡ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕೆ.ಎಸ್.ಮಂಜುನಾಥಗೌಡ, ಜೆಡಿಎಸ್ ಅಭ್ಯರ್ಥಿ ಜಿ.ಇ.ರಾಮೇಗೌಡ ಸೋಲು ಅನುಭವಿಸಿದ್ದಾರೆ.
ಮಾಲೂರು ಕ್ಷೇತ್ರದಲ್ಲಿ ಮೂರು ಪ್ರಮುಖ ಪಕ್ಷಗಳಿಗೂ ಜನ ಮನ್ನಣೆ ನೀಡಿದ್ದಾರೆ. 1957ರಲ್ಲಿ ಕಾಂಗ್ರೆಸ್‌ನ ಎಚ್.ಸಿ.ಲಿಂಗಾರೆಡ್ಡಿ, 1962ರಲ್ಲಿ ಪಕ್ಷೇತರ ಎಸ್.ವಿ.ರಾಮೇಗೌಡ, 1967ರಲ್ಲಿ ಕಾಂಗ್ರೆಸ್‌ನ ಎಚ್.ಸಿ.ಎಲ್.ರೆಡ್ಡಿ,1972ರಲ್ಲಿ ಕಾಂಗ್ರೆಸ್‌ನ ಎ.ವಿ.ಮುನಿಸ್ವಾಮಿ, 1978ರಲ್ಲಿ ಐಎನ್‌ಸಿ(ಐ) ಪಿ.ಎನ್.ರೆಡ್ಡಿ, 1983ರಲ್ಲಿ ಕಾಂಗ್ರೆಸ್‌ನ ಎ.ನಾಗರಾಜು, 1985ರಲ್ಲಿ ಜೆಎನ್‌ಪಿ ಎಚ್.ಬಿ. ದ್ಯಾವಿರಪ್ಪ, 1989ರಲ್ಲಿ ಕಾಂಗ್ರೆಸ್ ಎ. ನಾಗರಾಜು,1994ರಲ್ಲಿ ಜನತಾದಳ ಎಚ್.ಬಿ.ದ್ಯಾವಿರಪ್ಪ, 1999ರಲ್ಲಿ ಕಾಂಗ್ರೆಸ್‌ನ ಎ.ನಾಗರಾಜು,2004, 2008ನೇ ಸಾಲಿನಲ್ಲಿ ಬಿಜೆಪಿಯ ಎಸ್.ಎನ್. ಕೃಷ್ಣಯ್ಯಶೆಟ್ಟಿ, 2013 ರಲ್ಲಿ ಜೆಡಿಎಸ್ ಕೆ.ಎಸ್.ಮಂಜುನಾಥಗೌಡ ಹಾಗೂ 2018 ರಲ್ಲಿ ಕಾಂಗ್ರೇಸ್ನ ಕೆ.ವೈ.ನಂಜೇಗೌಡ ಆಯ್ಕೆಯಾಗಿದ್ದಾರೆ. ಹೀಗಿರುವಾಗ 2023ರ ವಿಧಾನ ಸಭಾ ಚುನಾವಣೆಯಲ್ಲಿ ಮಾಲೂರು ವಿಧಾನ ಸಭಾ ಕ್ಷೇತ್ರದ ಮತದಾರರು ಕಾಂಗ್ರೆಸ್ ಅಭ್ಯರ್ಥಿ ಕೆವೈ ನಂಜೇಗೌಡ ಅವರನ್ನು ಆಯ್ಕೆ ಮಾಡಿದ್ದಾರೆ.
Published On - 5:10 pm, Sat, 13 May 23