AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Karnataka Election 2023 Result: ಬಿಜೆಪಿ ಪರಾಜಿತ ಅಭ್ಯರ್ಥಿಗೆ ಲಘು ಹೃದಯಾಘಾತ

ಬೆಂಗಳೂರು: ವಿಜಯನಗರ (VIjayanagara Constituency) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ (BJP Candidate Raveendra ) ಅವರಿಗೆ ಲಘು ಹೃದಯಾಘಾತ ಉಂಟಾಗಿದೆ. ಮತ ಎಣಿಕೆ ಬಳಿಕ ಲಘು ಹೃದಯಾಘಾತ ಉಂಟಾಗಿದ್ದು, ಚಿಕಿತ್ಸೆ ಪಡೆದು ಬಳಿಕ ಮನೆಗೆ ಮರಳಿದ್ದಾರೆ. ಸದ್ಯ ರವೀಂದ್ರ ಅವರು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

Karnataka Election 2023 Result: ಬಿಜೆಪಿ ಪರಾಜಿತ ಅಭ್ಯರ್ಥಿಗೆ ಲಘು ಹೃದಯಾಘಾತ
ಎಚ್​ ರವೀಂದ್ರ
ಕಿರಣ್ ಹನುಮಂತ್​ ಮಾದಾರ್
|

Updated on:May 13, 2023 | 5:19 PM

Share

ಬೆಂಗಳೂರು: ವಿಧಾನಸಭೆ ಚುನಾವಣೆ ಫಲಿತಾಂಶದ ಬೆನ್ನಲ್ಲೇ ವಿಜಯನಗರ (VIjayanagara Constituency) ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರವೀಂದ್ರ (BJP Candidate Raveendra ) ಅವರಿಗೆ ಲಘು ಹೃದಯಾಘಾತ ಉಂಟಾಗಿದೆ. ಹೌದು ಮತ ಎಣಿಕೆಯಾದ ಬಳಿಕ ಅವರಿಗೆ ಲಘು ಹೃದಯಾಘಾತ ಉಂಟಾಗಿದ್ದು, ಕೂಡಲೇ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ಬಳಿಕ ಮನೆಗೆ ಮರಳಿದ್ದಾರೆ. ಸದ್ಯ ರವೀಂದ್ರ ಅವರು ಮನೆಯಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾರೆ.

ಸತತ ಮೂರು ವಿಧಾನಸಭೆ ಚುನಾವಣೆಗಳಿಂದ ಕಾಂಗ್ರೆಸ್​ನ ಭದ್ರಕೋಟೆಯಾಗಿರುವ ವಿಜಯನಗರ ವಿಧಾನಸಭೆ ಕ್ಷೇತ್ರ ಈ ಬಾರಿ ನೇರಾನೇರ ಹಣಾಹಣಿಗೆ ಸಾಕ್ಷಿಯಾಗಿತ್ತು, ಹ್ಯಾಟ್ರಿಕ್​ ಗೆಲುವುವಿನೊಂದಿಗೆ ಕ್ಷೇತ್ರದಲ್ಲಿ ಪ್ರಬಲ ಹಿಡಿತ ಸಾಧಿಸಿರುವ ಎಂ ಕೃಷ್ಣಪ್ಪ ಎದುರು ಬಿಜೆಪಿಯ ರವೀಂದ್ರರವರನ್ನ ಕಣಕ್ಕೀಳಿಸಿದ್ದರು. ಜಿದ್ದಾಜಿದ್ದಿನ ಪೈಪೋಟಿ ಬಳಿಕ ಬಿಜೆಪಿ ಅಭ್ಯರ್ಥಿ ಪರಾಭವಗೊಂಡರು. ಬಳಿಕ ಲಘು ಹೃದಯಘಾತವಾಗಿ ಆಸ್ಪತ್ರೆಗೆ ತೆರಳಿ, ಚಿಕಿತ್ಸೆ ಪಡೆದು, ಮನೆಗೆ ತೆರೆಳಿದರು.

ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:12 pm, Sat, 13 May 23