Tamil Nadu Cabinet Expansion: ತಮಿಳುನಾಡು ಸರ್ಕಾರದ ಸಂಪುಟ ವಿಸ್ತರಣೆ, ವಿಜಯ್ ಸಂಪುಟ ಸೇರಿದ 23 ಶಾಸಕರು, ಕಾಂಗ್ರೆಸ್ ಶಾಸಕರಿಗೂ ಸಚಿವ ಸ್ಥಾನ
ತಮಿಳುನಾಡು ರಾಜಕೀಯದಲ್ಲಿ ಇಂದು ಅತ್ಯಂತ ಐತಿಹಾಸಿಕ ಹಾಗೂ ಮಹತ್ವದ ತಿರುವು ಸಿಕ್ಕಿದೆ. ಸಿನಿಮಾ ರಂಗದಿಂದ ರಾಜಕೀಯಕ್ಕೆ ಬಂದು ಧೂಳೆಬ್ಬಿಸಿರುವ ಮುಖ್ಯಮಂತ್ರಿ ವಿಜಯ್ (TVK ಪಕ್ಷ) ತಮ್ಮ ಮೊದಲ ಪ್ರಮುಖ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ. ಮೈತ್ರಿ ಸರ್ಕಾರದ ಈ ನೂತನ ರಾಜಕೀಯ ಬೆಳವಣಿಗೆಯ ವಿವರ ಇಲ್ಲಿದೆ.

ಚೆನ್ನೈ, ಮೇ 21: ತಮಿಳುನಾಡು(Tamil Nadu) ಮುಖ್ಯಮಂತ್ರಿ ಜೋಸೆಫ್ ವಿಜಯ್ ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದಾರೆ.. ಇಂದು (ಗುರುವಾರ) ನಡೆದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲರು ಒಟ್ಟು 23 ಶಾಸಕರಿಗೆ ಸಚಿವರಾಗಿ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಈ ವಿಸ್ತರಣೆಯು ತಮಿಳುನಾಡು ರಾಜಕೀಯದಲ್ಲಿ ಹೊಸದೊಂದು ಯುಗಕ್ಕೆ ನಾಂದಿ ಹಾಡಿದೆ.
ಕಾಂಗ್ರೆಸ್‌ನ 59 ವರ್ಷಗಳ ವನವಾಸ ಅಂತ್ಯ ಈ ಸಂಪುಟ ವಿಸ್ತರಣೆಯ ಅತ್ಯಂತ ಪ್ರಮುಖ ಹೈಲೈಟ್ ಎಂದರೆ, ತಮಿಳುನಾಡಿನಲ್ಲಿ ಕಾಂಗ್ರೆಸ್ ಪಕ್ಷದ 59 ವರ್ಷಗಳ ಸುದೀರ್ಘ ರಾಜಕೀಯ ಬರಗಾಲ ಕೊನೆಗೊಂಡಿದೆ. ಬರೋಬ್ಬರಿ 59 ವರ್ಷಗಳ ನಂತರ ಕಾಂಗ್ರೆಸ್ ತಮಿಳುನಾಡಿನಲ್ಲಿ ಸರ್ಕಾರದ ಭಾಗವಾಗಿದೆ. ಕಾಂಗ್ರೆಸ್‌ನ ಒಟ್ಟು 5 ಶಾಸಕರಲ್ಲಿ ಇಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ. ಇದರೊಂದಿಗೆ ಮೈತ್ರಿಪಕ್ಷವಾದ ವಿಸಿಕೆ (VCK) ಯ ಇಬ್ಬರು ಶಾಸಕರಲ್ಲಿ ಒಬ್ಬರನ್ನು ಸಚಿವರನ್ನಾಗಿ ಮಾಡಲಾಗಿದೆ.
ಮತ್ತೊಂದು ಮಿತ್ರಪಕ್ಷವಾದ ಐಯುಎಂಎಲ್ ಕೂಡ ಸರ್ಕಾರ ಸೇರಲು ನಿರ್ಧರಿಸಿದೆಯಾದರೂ ಇಂದಿನ ಪ್ರಮಾಣ ವಚನ ಸಮಾರಂಭದಿಂದ ದೂರ ಉಳಿದಿದೆ. ತನ್ನ ಇಬ್ಬರು ಶಾಸಕರಲ್ಲಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಗೊಂದಲ ಇನ್ನೂ ಬಗೆಹರಿಯದ ಕಾರಣ, ಅಂತಿಮ ನಿರ್ಧಾರವಾದ ಬಳಿಕ ಅದರ ಶಾಸಕರು ಸಚಿವರಾಗಲಿದ್ದಾರೆ.
ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್ ಆಯ್ತಾ SIR?
ವಿಜಯ್ ಸರ್ಕಾರದ ಬಲವೇನು? ಇತ್ತೀಚಿನ ಚುನಾವಣೆಯಲ್ಲಿ ಸಿಎಂ ವಿಜಯ್ ಅವರ ಟಿವಿಕೆ (TVK) ಪಕ್ಷವು ಸ್ವಂತ ಬಲದಿಂದ 108 ಸ್ಥಾನಗಳನ್ನು ಗೆದ್ದಿತ್ತು. ಆದರೆ, ಬಹುಮತಕ್ಕೆ 118 ಶಾಸಕರ ಅಗತ್ಯವಿತ್ತು. ಹೀಗಾಗಿ ವಿಜಯ್ ಅವರು ಕಾಂಗ್ರೆಸ್, ಎಡಪಂಥೀಯರು ಮತ್ತು ಐಯುಎಂಎಲ್ ಬೆಂಬಲದೊಂದಿಗೆ ಮೈತ್ರಿ ಸರ್ಕಾರ ರಚಿಸಿದರು. ಅಷ್ಟೇ ಅಲ್ಲದೆ, ವಿಧಾನಸಭೆಯ ವಿಶ್ವಾಸಮತ ಪರೀಕ್ಷೆಯ ಸಂದರ್ಭದಲ್ಲಿ ವಿರೋಧ ಪಕ್ಷವಾದ ಎಡಿಎಂಕೆಯ (ADMK) 24 ಬಂಡಾಯ ಶಾಸಕರು ಕೂಡ ವಿಜಯ್ ಅವರ ಕೈಹಿಡಿದರು. ಹೀಗಾಗಿ ಬಹುಮತಕ್ಕಿಂತ 26 ಹೆಚ್ಚು ಅಂದರೆ ಬರೋಬ್ಬರಿ 144 ಶಾಸಕರ ಬೆಂಬಲದೊಂದಿಗೆ ವಿಜಯ್ ಸರ್ಕಾರ ಸದ್ಯ ಸುಭದ್ರವಾಗಿದೆ.
ವಿಡಿಯೋ
#WATCH | Chennai | TVK and Congress MLAs take oath as Tamil Nadu Ministers in the presence of CM Vijay and Governor Rajendra Vishwanath Arlekar
The CM has recommended to induct 23 MLAs into the Council of Ministers and the state Governor approved the recommendation made by the… pic.twitter.com/6Svw7eJZKb
— ANI (@ANI) May 21, 2026
ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖ 23 ಶಾಸಕರು
ಶ್ರೀನಾಥ್, ಕಮಲಿ ಎಸ್., ಸಿ.ವಿಜಯಲಕ್ಷ್ಮಿ, ಆರ್.ವಿ. ರಂಜಿತ್‌ಕುಮಾರ್, ವಿನೋದ್, ರಾಜೀವ್, ಬಿ.ರಾಜ್‌ಕುಮಾರ್, ವಿ.ಗಾಂಧಿರಾಜ್, ಮಥನ್ ರಾಜಾ ಪಿ, ಜೆಗದೇಶ್ವರಿ ಕೆ, ರಾಜೇಶ್ ಕುಮಾರ್ ಎಸ್, ಎಂ.ವಿಜಯ್ ಬಾಲಾಜಿ, ಲೋಗೇಶ್ ತಮಿಳ್ಸೆಲ್ವನ್ ಡಿ, ವಿಜಯ್ ತಮಿಳನ್ ಪಾರ್ತಿಬನ್, ರಮೇಶ್, ಪಿ.ವಿಶ್ವನಾಥನ್, ಕುಮಾರ್ ಆರ್, ತೆನ್ನರಸು ಕೆ, ವಿ.ಸಂಪತ್ ಕುಮಾರ್, ಮೊಹಮ್ಮದ್ ಫರ್ವಾಸ್ ಜೆ ಮತ್ತು ಡಿ. ಇಂದು. ಒಟ್ಟಾರೆಯಾಗಿ, ಈ ನೂತನ ಸಂಪುಟ ವಿಸ್ತರಣೆಯು ತಮಿಳುನಾಡಿನಲ್ಲಿ ಸಿಎಂ ವಿಜಯ್ ಅವರ ಆಡಳಿತವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ





