AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್​​ ಆಯ್ತಾ SIR?

ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿದೇಶಿ ಪ್ರಜೆಗಳು ಅಕ್ರಮವಾಗಿ ಮತ ಚಲಾಯಿಸಿರುವ ಅನುಮಾನ ವ್ಯಕ್ತವಾಗಿದೆ. ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದರೂ ಭಾರತೀಯ ಮತದಾರರ ಗುರುತಿನ ಚೀಟಿ ಹೊಂದಿರುವ ಆರೋಪದ ಮೇಲೆ ಚೆನ್ನೈ ಮತ್ತು ಮಧುರೈ ವಿಮಾನ ನಿಲ್ದಾಣಗಳಲ್ಲಿ 10ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಲಾಗಿದೆ. ತಪಾಸಣೆಯ ವೇಳೆ ಪ್ರಯಾಣಿಕರ ತೋರು ಬೆರಳಿನಲ್ಲಿ ಮತದಾನ ಗುರುತಿನ ಮಸಿಯೂ ಕಂಡು ಬಂದಿರೋದು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ತಮಿಳುನಾಡು ಚುನಾವಣೆಯಲ್ಲಿ ವಿದೇಶಿಗರಿಂದ ಮತಚಲಾವಣೆ?: 10ಕ್ಕೂ ಹೆಚ್ಚು ಮಂದಿ ಬಂಧನ; ಫೇಲ್​​ ಆಯ್ತಾ SIR?
ಸಾಂದರ್ಭಿಕ ಚಿತ್ರImage Credit source: mathrubhumi.com
ಪ್ರಸನ್ನ ಹೆಗಡೆ
|

Updated on: May 15, 2026 | 12:32 PM

Share

ಚೆನ್ನೈ, ಮೇ 15: ತಮಿಳುನಾಡು (Tamil Nadu) ವಿಧಾನಸಭೆ ಚುನಾವಣಾ ಫಲಿತಾಂಶ (Election Result) ಪ್ರಕಟವಾಗಿ, ನೂತನ ಸರ್ಕಾರ ರಚನೆ ಬೆನ್ನಲ್ಲೇ ಆಘಾತಕಾರಿ ವಿಷಯವೊಂದು ಬಹಿರಂಗಗೊಂಡಿದೆ. ಎಲೆಕ್ಷನ್​​ನಲ್ಲಿ ಮತ ಚಲಾಯಿಸಿರುವ ಆರೋಪದ ಮೇಲೆ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದ ಹಲವರನ್ನು ಚೆನ್ನೈ ಮತ್ತು ಮದುರೈ ವಿಮಾನ ನಿಲ್ದಾಣಗಳಲ್ಲಿ ಅಧಿಕಾರಿಗಳು ಬಂಧಿಸಿರುವ ಬಗ್ಗೆ ವರದಿಯಾಗಿದೆ.

ಬಂಧಿತರಲ್ಲಿ ಹೆಚ್ಚಿನವರು ಶ್ರೀಲಂಕಾ ಮೂಲದವರಾಗಿದ್ದು, ಚೆನ್ನೈನಲ್ಲಿ ಕನಿಷ್ಠ 10 ಮಂದಿಯನ್ನು ಬಂಧಿಸಲಾಗಿದೆ. ಇವರಲ್ಲಿ ನಾಲ್ವರು ಮಹಿಳೆಯರೂ ಸೇರಿದ್ದಾರೆ. ಶ್ರೀಲಂಕಾದ ರಂಜಿನಿ (59), ಸರ್ಫುದೀನ್ (68), ನಿಲಾಂತಿ (44), ಜಯಂತನ್ (40), ಚಾರ್ಲಿ ಬಾಲಚಂದ್ರನ್ (48), ಚಕ್ರವರ್ತಿ ಲೋಗಪ್ರಿಯಾ (50) ಮತ್ತು ಸುನಿತಾ ಚಕ್ರವರ್ತಿ (48) ಬಂಧಿತರಾಗಿದ್ದಾರೆ. ಇನ್ನು ಯುಕೆ ಮೂಲದ ಅಯ್ಯಾದುರೈ (53), ಇಂಡೋನೇಷ್ಯಾದ ಟಿಟ್ಟಿನ್ ಮರಿಯಟ್ಟಿ (47) ಹಾಗೂ ಕೆನಡಾ ಮೂಲದ ಜಿತ್ತೇಂದ್ರನಾಥ್ (38) ಕೂಡ ಬಂಧಿತರ ಪಟ್ಟಿಯಲ್ಲಿದ್ದಾರೆ.

ಇದನ್ನೂ ಓದಿ:  ಅವನತಿಯತ್ತ ಎಐಎಡಿಎಂಕೆ; ಒಳಜಗಳದಿಂದಾಗಿ ಎಂಜಿಆರ್, ಜಯಲಲಿತಾ ಪರಂಪರೆ ಕೊನೆಯಾಗುತ್ತಾ?

ಪ್ರಯಾಣಕ್ಕೂ ಮುನ್ನ ನಡೆದ ತಪಾಸಣೆಯ ವೇಳೆ ಪ್ರಯಾಣಿಕರ ತೋರು ಬೆರಳಿನಲ್ಲಿ ಮತದಾನ ಗುರುತಿನ ಮಸಿ (indelible ink) ಕಂಡುಬಂದ ಹಿನ್ನೆಲೆಯಲ್ಲಿ ಬಂಧನ ನಡೆದಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳ ಪ್ರಕಾರ, ಶ್ರೀಲಂಕಾ ಪಾಸ್‌ಪೋರ್ಟ್‌ನಲ್ಲಿ ಪ್ರಯಾಣಿಸುತ್ತಿದ್ದ ಈ ವ್ಯಕ್ತಿಗಳ ಬಳಿ ಭಾರತದ ಚುನಾವಣಾ ಆಯೋಗ ನೀಡಿದ ಮತದಾರರ ಗುರುತಿನ ಚೀಟಿಗಳೂ ಪತ್ತೆಯಾಗಿವೆ. ವಿದೇಶಿ ಪಾಸ್‌ಪೋರ್ಟ್ ಹೊಂದಿರುವವರು ಭಾರತೀಯ ಮತದಾರರ ಗುರುತಿನ ಚೀಟಿ ಹೊಂದಿರುವುದು ಭಾರತೀಯ ಕಾನೂನು ಪ್ರಕಾರ ಅಕ್ರಮ ಎಂದು ಅಧಿಕಾರಿಗಳು ಹೇಳಿದ್ದಾರೆ. ಹೀಗಾಗಿ ಈ ದಾಖಲೆಗಳನ್ನು ಹೇಗೆ ಪಡೆದರು ಹಾಗೂ ಇತ್ತೀಚಿನ ಚುನಾವಣೆಯಲ್ಲಿ ಮತ ಚಲಾಯಿಸಲು ಅದನ್ನು ಬಳಸಲಾಗಿದೆಯೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ.

ಇನ್ನು ಒಟ್ಟು ಬಂಧಿತರ ಸಂಖ್ಯೆ ಎಷ್ಟು ಎಂಬ ನಿಖರ ಸಂಖ್ಯೆಯನ್ನು ಇನ್ನೂ ಅಧಿಕೃತವಾಗಿ ಪ್ರಕಟಿಸಲಾಗಿಲ್ಲ.ಚುನಾವಣೆಗೆ ಮುನ್ನ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ನಡೆದಿದ್ದರೂ, ವಿದೇಶಿ ನಾಗರಿಕರ ಹೆಸರುಗಳು ಮತದಾರರ ಪಟ್ಟಿಯಲ್ಲಿ ಮುಂದುವರಿದಿರುವುದು ಸಾಕಷ್ಟು ಪ್ರಶ್ನೆಗಳಿಗೆ ಕಾರಣವಾಗಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ತಮಿಳುನಾಡಿನಲ್ಲಿ ನಡೆದ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ಸುಮಾರು 74 ಲಕ್ಷ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದ್ದು, 27.5 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿತ್ತು ಎಂದು ಎನ್​​ಡಿಟಿವಿ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
Prasanna Hegde
Prasanna Hegde

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More