AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರ್​ಸಿಬಿ ಹ್ಯಾಟ್ರಿಕ್ ಕಪ್ ಗೆಲ್ಲುವುದು ಕಷ್ಟಕರ..! ಇದು ಐಪಿಎಲ್ ಇತಿಹಾಸ ನುಡಿದ ಭವಿಷ್ಯ

RCB's Back-to-Back IPL Wins: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸತತ ಎರಡನೇ ಐಪಿಎಲ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದೆ. ಆದರೆ, ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಮೂರನೇ ಟ್ರೋಫಿಗಾಗಿ ದೀರ್ಘಕಾಲ ಕಾಯಬೇಕಾಯಿತು. ಈ ಅಂಕಿಅಂಶಗಳ ಪ್ರಕಾರ, ಆರ್​ಸಿಬಿ ಕೂಡ ತನ್ನ ಮುಂದಿನ ಟ್ರೋಫಿಗಾಗಿ ನಿರೀಕ್ಷೆಗಿಂತ ಹೆಚ್ಚು ಸಮಯ ಕಾಯಬೇಕಾಗಬಹುದು ಎಂದು ಐತಿಹಾಸಿಕ ವಿಶ್ಲೇಷಣೆ ಸೂಚಿಸುತ್ತದೆ.

ಆರ್​ಸಿಬಿ ಹ್ಯಾಟ್ರಿಕ್ ಕಪ್ ಗೆಲ್ಲುವುದು ಕಷ್ಟಕರ..! ಇದು ಐಪಿಎಲ್ ಇತಿಹಾಸ ನುಡಿದ ಭವಿಷ್ಯ
Rcb
ಪೃಥ್ವಿಶಂಕರ
|

Updated on: Jun 03, 2026 | 10:48 PM

Share

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಸತತ ಎರಡನೇ ಐಪಿಎಲ್ (IPL) ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ಮೂರನೇ ತಂಡ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಒಂದು ಟ್ರೋಫಿಗಾಗಿ ಬರೋಬ್ಬರಿ 17 ವರ್ಷಗಳ ಕಾಲ ಕಾದಿದ್ದ ಆರ್​ಸಿಬಿ, ಎರಡನೇ ಟ್ರೋಫಿಯನ್ನು ಕೇವಲ ಒಂದು ವರ್ಷದಲ್ಲೇ ಗೆದ್ದುಕೊಂಡಿತು. ಇದೀಗ ಆರ್​ಸಿಬಿ ಸತತ ಮೂರನೇ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ತಂಡದ ಆಟಗಾರರು ಕೂಡ ಇದೇ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಆದರೆ ಆರ್​ಸಿಬಿ ತನ್ನ ಮೂರನೇ ಟ್ರೋಫಿಗಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು ಎಂದು ಐಪಿಎಲ್ ಇತಿಹಾಸ ಭವಿಷ್ಯ ನುಡಿದಿದೆ.

ಸತತ 2 ಪ್ರಶಸ್ತಿ ಗೆದ್ದಿದ್ದ ಸಿಎಸ್​ಕೆ, ಮುಂಬೈ

ಮೇಲೆ ಹೇಳಿದಂತೆ ಆರ್‌ಸಿಬಿಗಿಂತ ಮೊದಲು, ಕೇವಲ ಎರಡು ತಂಡಗಳು ಮಾತ್ರ ಸತತ ಎರಡು ಬಾರಿ ಐಪಿಎಲ್ ಗೆದ್ದಿವೆ. ಚೆನ್ನೈ ಸೂಪರ್ ಕಿಂಗ್ಸ್ 2010 ಮತ್ತು 2011 ರಲ್ಲಿ ಈ ಸಾಧನೆ ಮಾಡಿದ್ದರೆ, ಮುಂಬೈ ಇಂಡಿಯನ್ಸ್ 2019 ಮತ್ತು 2020 ರಲ್ಲಿ ಎರಡು ಬಾರಿ ಐಪಿಎಲ್ ಗೆದ್ದಿತ್ತು. ಈ ಎರಡು ಪ್ರಶಸ್ತಿ ಗೆಲುವಿನ ನಂತರ, ಚೆನ್ನೈ ಮತ್ತು ಮುಂಬೈನ ಮುಂದಿನ ಟ್ರೋಫಿಯ ಗೆಲುವಿಗಾಗಿ ಬಹಳ ವರ್ಷ ಕಾಯಬೇಕಾಯಿತು.

ಸಿಎಸ್​ಕೆಗೆ 7 ವರ್ಷ, ಮುಂಬೈಗೆ?

2010 ಮತ್ತು 2011 ರಲ್ಲಿ ಸತತ ಎರಡು ಪ್ರಶಸ್ತಿಗಳನ್ನು ಗೆದ್ದಿದ್ದ ಸಿಎಸ್​ಕೆ ತನ್ನ ಮುಂದಿನ ಟ್ರೋಫಿಗಾಗಿ 2018 ರವರೆಗೆ ಕಾಯಬೇಕಾಯಿತು. ಅಂದರೆ ಸಿಎಸ್​ಕೆ ತನ್ನ ಮುಂದಿನ ಪ್ರಶಸ್ತಿಗಾಗಿ ಏಳು ವರ್ಷ ಕಾಯಬೇಕಾಯಿತು. ಇತ್ತ 2019 ಮತ್ತು 2020 ರಲ್ಲಿ ಎರಡು ಬಾರಿ ಐಪಿಎಲ್ ಗೆದ್ದಿದ್ದ ಮುಂಬೈ, ತನ್ನ ಮುಂದಿನ ಪ್ರಶಸ್ತಿಗಾಗಿ ಈಗಲೂ ಕಾಯುತ್ತಲೇ ಇದೆ. ಅಂದರೆ ಮುಂಬೈ ಕೂಡ ಆರು ವರ್ಷಗಳಿಂದ ಪ್ರಶಸ್ತಿಯನ್ನು ಗೆದ್ದಿಲ್ಲ.

IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್​ಸಿಬಿಯದ್ದೇ 6 ಪಂದ್ಯಗಳು ..!

ಹ್ಯಾಟ್ರಿಕ್ ಕಪ್ ಗೆಲ್ಲುತ್ತಾ ಆರ್​ಸಿಬಿ?

ಇವು ಕೇವಲ ಅಂಕಿಅಂಶಗಳಾಗಿದ್ದು, ಇದು ಸಂಭವಿಸುವ ಸಾಧ್ಯತೆ ಎಷ್ಟರ ಮಟ್ಟಿಗೆ ಇದೆ ಎಂದು ಹೇಳಲು ಸಾಧ್ಯವಿಲ್ಲ, ಆದರೆ ಸತತ ಎರಡು ಪ್ರಶಸ್ತಿಗಳನ್ನು ಗೆದ್ದ ನಂತರದ ಮಾದರಿಯನ್ನು ನೋಡಿದರೆ, ಆರ್‌ಸಿಬಿ ತನ್ನ ಮೂರನೇ ಪ್ರಶಸ್ತಿಗಾಗಿ ಸಾಕಷ್ಟು ಸಮಯ ಕಾಯಬೇಕಾಗಬಹುದು. ಆರ್‌ಸಿಬಿ ಈ ಹಿಂದೆ 2009, 2011 ಮತ್ತು 2016 ರಲ್ಲಿ ಐಪಿಎಲ್ ಫೈನಲ್‌ನಲ್ಲಿ ಆಡಿತ್ತು, ಆದರೆ ಆ ಎಲ್ಲಾ ಪಂದ್ಯಗಳಲ್ಲಿ ಸೋತಿತ್ತು. 2025 ರಲ್ಲಿ ನಾಲ್ಕನೇ ಬಾರಿಗೆ ಫೈನಲ್ ತಲುಪಿ ಗೆಲುವು ಸಾಧಿಸಿತ್ತು. ಇದೀಗ ಈ ಆವೃತ್ತಿಯಲ್ಲೂ ತಂಡವು ಪ್ರಶಸ್ತಿಯನ್ನು ಉಳಿಸಿಕೊಳ್ಳುವಲ್ಲು ಯಶಸ್ವಿಯಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಇಂದು ಈ ರಾಶಿಯವರಿಗೆ ಹಳೆಯ ಖಾಯಿಲೆಗಳು ಮರುಕಳಿಸುವ ಸಾಧ್ಯತೆ
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಹೆಚ್​​​ಡಿಕೆ ಪಂಥಾಹ್ವಾನ, ವಿಧಾನಸೌಧಕ್ಕೆ ಆಹ್ವಾನ ಕೊಟ್ಟ ಡಿಕೆ ಶಿವಕುಮಾರ್​​
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಚೆನ್ನೈನಲ್ಲಿ ಗೀತಾ ಶಿವರಾಜ್​ಕುಮಾರ್ ಜನ್ಮದಿನ ಆಚರಿಸಿದ ಶಿವಣ್ಣ ಫ್ಯಾನ್ಸ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಕೊನೆಗೂ ಅಧಿಕಾರ ಹಂಚಿಕೆ ಗುಟ್ಟುಬಿಚ್ಚಿಟ್ಟ ಸಿಎಂ ಡಿ.ಕೆ.ಶಿವಕುಮಾರ್
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
ಲಕ್ನೋದ ಬೆಂಕಿ ಅವಘಡದ ಸ್ಥಳಕ್ಕೆ ಸಿಎಂ ಯೋಗಿ ಭೇಟಿ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
‘ನಿರ್ಮಾಪಕ ಎಜುಕೇಟೆಡ್ ಆಗಿರಬೇಕು’: ವಿವಾದಾತ್ಮಕ ಹೇಳಿಕೆಗೆ ಸತೀಶ್ ಸ್ಪಷ್ಟನೆ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
ಲಕ್ನೋದಲ್ಲಿ 14 ವಿದ್ಯಾರ್ಥಿಗಳ ಸಜೀವದಹನ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
1 ರೂಪಾಯಿಗೆ ಟಿ ಶರ್ಟ್: ಬಟ್ಟೆ ಅಂಗಡಿಗೆ ಮುಗಿಬಿದ್ದ ಗ್ರಾಹಕರು
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್
ವೈಟ್ ಟ್ಯಾಪಿಂಗ್ ಮಾಡೋದೇಕೆ?:ಅಧಿಕಾರಿಗಳಿಗೆ ಕೃಷ್ಣಭೈರೇಗೌಡ ಕ್ಲಾಸ್