IPL 2026: ಅತ್ಯಧಿಕ ವೀಕ್ಷಣೆ ಕಂಡ 7 ಪಂದ್ಯಗಳಲ್ಲಿ ಆರ್ಸಿಬಿಯದ್ದೇ 6 ಪಂದ್ಯಗಳು ..!
Most Watched IPL 2026 Matches: 2026ರ ಐಪಿಎಲ್ನಲ್ಲಿ ಆರ್‌ಸಿಬಿ ಚಾಂಪಿಯನ್ ಪಟ್ಟ ಗೆದ್ದಿದೆ. ಸತತ ಎರಡನೇ ಬಾರಿಗೆ ಕಪ್ ಎತ್ತಿ ಹಿಡಿದ ಆರ್‌ಸಿಬಿ, ತನ್ನ ಭರ್ಜರಿ ಪ್ರದರ್ಶನದಿಂದ ಅಭಿಮಾನಿಗಳ ಮನ ಗೆದ್ದಿದೆ. ಜಿಯೋಹಾಟ್‌ಸ್ಟಾರ್ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ 6 ಪಂದ್ಯಗಳು ಆರ್‌ಸಿಬಿ ಆಡಿದ ಪಂದ್ಯಗಳಾಗಿವೆ. ಇದು ಆರ್‌ಸಿಬಿ ತಂಡದ ಅಗಾಧ ಜನಪ್ರಿಯತೆ ಮತ್ತು ಕ್ರಿಕೆಟ್ ಜಗತ್ತಿನಲ್ಲಿ ಅದರ ಪ್ರಭಾವವನ್ನು ಸ್ಪಷ್ಟಪಡಿಸುತ್ತದೆ.

2026ರ ಐಪಿಎಲ್ಗೆ (IPL 2026) ಅದ್ಧೂರಿ ತೆರೆಬಿದ್ದಿದೆ. ಕಳೆದ ಆವೃತ್ತಿಯಂತೆಯೇ ಈ ಆವೃತ್ತಿಯಲ್ಲೂ ಆರ್‌ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರಲ್ಲಿ ಒಂದು ವ್ಯತ್ಯಾಸವೆಂದರೆ ಕಳೆದ ಆವೃತ್ತಿಯಲ್ಲಿ ಪಂಜಾಬ್ ತಂಡ ಆರ್ಸಿಬಿಗೆ ಎದುರಾಳಿಯಾಗಿದ್ದರೆ, ಈ ಆವೃತ್ತಿಯಲ್ಲಿ ಆರ್ಸಿಬಿಗೆ ಗುಜರಾತ್ ಎದುರಾಳಿಯಾಗಿತ್ತು. ಎದುರಾಳಿ ಬದಲಾದರೂ ಆರ್ಸಿಬಿಯ ಪ್ರದರ್ಶನ ಮಾತ್ರ ಒಂದೇ ಆಗಿತ್ತು. ಫೈನಲ್ ಪಂದ್ಯದಲ್ಲಿ ಮಾತ್ರವಲ್ಲದೆ ಇಡೀ ಆವೃತ್ತಿಯಲ್ಲಿ ಆರ್‌ಸಿಬಿ ಚಾಂಪಿಯನ್ ತಂಡದಂತೆಯೇ ಪ್ರದರ್ಶನ ನೀಡಿತ್ತು. ಹೀಗಾಗಿ ಆರ್‌ಸಿಬಿ ತಂಡದ ಪಂದ್ಯಗಳಿಗೆ ಹೆಚ್ಚಿನ ಮನ್ನಣೆ ಇತ್ತು. ಇದಕ್ಕೆ ಪೂರಕವಾಗಿ ಇದೀಗ ಐಪಿಎಲ್ನ ಅಧಿಕೃತ ಪ್ರಸಾರಕರಾದ ಜಿಯೋಹಾಟ್‌ಸ್ಟಾರ್ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳ ಪೈಕಿ 6 ಪಂದ್ಯಗಳು ಆರ್‌ಸಿಬಿ ತಂಡದ ಪಂದ್ಯಗಳೇ ಇರುವುದು ಆರ್‌ಸಿಬಿ ತಂಡಕ್ಕಿರುವ ಜನಪ್ರಿಯತೆಯನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
ಆರ್ಸಿಬಿಯದ್ದೇ 6 ಪಂದ್ಯಗಳು ..!
ಜಿಯೋಹಾಟ್‌ಸ್ಟಾರ್ ಬಿಡುಗಡೆ ಮಾಡಿರುವ ಅತಿ ಹೆಚ್ಚು ವೀಕ್ಷಣೆ ಪಡೆದ 7 ಪಂದ್ಯಗಳಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ನಡುವೆ ನಡೆದ ಫೈನಲ್ ಪಂದ್ಯ ಅಗ್ರಸ್ಥಾನದಲ್ಲಿದೆ. ಎರಡನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯವಿದ್ದರೆ, ಮೂರನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ. ನಾಲ್ಕನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯವಿದ್ದರೆ, ಐದನೇ ಸ್ಥಾನದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯವಿದೆ.
ಉಳಿದಂತೆ 6ನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಸಿಎಸ್‌ಕೆ ನಡುವಿನ ಪಂದ್ಯವಿದ್ದರೆ, 7ನೇ ಸ್ಥಾನದಲ್ಲಿ ಆರ್‌ಸಿಬಿ ಹಾಗೂ ಗುಜರಾತ್ ನಡುವಿನ ಕ್ವಾಲಿಫೈಯರ್ 1 ಪಂದ್ಯವಿದೆ. ಇದರರ್ಥ ಅತಿ ಹೆಚ್ಚು ವೀಕ್ಷಣೆ ಪಡೆದ ಅಗ್ರ 7 ಪಂದ್ಯಗಳಲ್ಲಿ 5ನೇ ಸ್ಥಾನದಲ್ಲಿರುವ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್ 2 ಪಂದ್ಯವನ್ನು ಹೊರತುಪಡಿಸಿದರೆ, ಉಳಿದ 6 ಪಂದ್ಯಗಳಲ್ಲಿ ಆರ್‌ಸಿಬಿ ಆಡಿರುವ ಪಂದ್ಯಗಳೇ ಸೇರಿವೆ. ಇನ್ನು ಯಾವ ಪಂದ್ಯ ಎಷ್ಟು ವೀಕ್ಷಣೆಗಳನ್ನು ಪಡೆದುಕೊಂಡಿದೆ ಎಂಬುದನ್ನು ನೋಡುವುದಾದರೆ..
IPL 2026 Final: ಈ ಸಲನೂ ಕಪ್ ನಮ್ದು..! ಸತತ 2ನೇ ಬಾರಿಗೆ ಆರ್‌ಸಿಬಿ ಮುಡಿಗೇರಿದ ಐಪಿಎಲ್ ಕಿರೀಟ
ಅತಿ ಹೆಚ್ಚು ವೀಕ್ಷಣೆ ಕಂಡ ಟಾಪ್ 7 ಪಂದ್ಯಗಳು
- 1. ಆರ್‌ಸಿಬಿ vs ಗುಜರಾತ್ (ಫೈನಲ್) – 520 ಮಿಲಿಯನ್
- 2. ಆರ್‌ಸಿಬಿ vs ಸನ್‌ರೈಸರ್ಸ್ – (ಲೀಗ್ ಪಂದ್ಯ) 426 ಮಿಲಿಯನ್
- 3. ಆರ್‌ಸಿಬಿ vs ರಾಜಸ್ಥಾನ್ – (ಲೀಗ್ ಪಂದ್ಯ) 410 ಮಿಲಿಯನ್
- 4. ಆರ್‌ಸಿಬಿ vs ಮುಂಬೈ ಇಂಡಿಯನ್ಸ್ – (ಲೀಗ್ ಪಂದ್ಯ) 406 ಮಿಲಿಯನ್
- 5. ಗುಜರಾತ್ vs ರಾಜಸ್ಥಾನ್ (ಕ್ವಾಲಿಫೈಯರ್ 2 ಪಂದ್ಯ) – 366 ಮಿಲಿಯನ್
- 6. ಆರ್‌ಸಿಬಿ vs ಸಿಎಸ್‌ಕೆ – (ಲೀಗ್ ಪಂದ್ಯ) 355 ಮಿಲಿಯನ್
- 7. ಆರ್‌ಸಿಬಿ vs ಗುಜರಾತ್ (ಕ್ವಾಲಿಫೈಯರ್ 1 ಪಂದ್ಯ) – 355 ಮಿಲಿಯನ್
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




