AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾಲೂರು ಕ್ಷೇತ್ರದ ಮತಎಣಿಕೆ ಗೊಂದಲ: ಹೈಕೋರ್ಟ್​ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ

248 ಮತಗಳ ಅಂತರದಿಂದ ಕಾಂಗ್ರೆಸ್​ನ ಕೆ.ವೈ.ನಂಜೇಗೌಡ ಗೆಲುವು ಸಾಧಿಸಿದ ಹಿನ್ನೆಲೆ ಮರುಎಣಿಕೆಗೆ ನಿರ್ದೇಶನ ನೀಡುವಂತೆ ಕೋರಿ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಮಾಲೂರು ಕ್ಷೇತ್ರದ ಮತಎಣಿಕೆ ಗೊಂದಲ: ಹೈಕೋರ್ಟ್​ ಮೊರೆ ಹೋದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ
ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ
ಗಂಗಾಧರ​ ಬ. ಸಾಬೋಜಿ
|

Updated on: May 16, 2023 | 5:01 PM

Share

ಕೋಲಾರ: ಮಾಲೂರು ಕ್ಷೇತ್ರದ ಮತಗಳ ಮರುಎಣಿಕೆ ಕೋರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ (Manjunath Gowda) ಪರ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ. 248 ಮತಗಳ ಅಂತರದಿಂದ ಕಾಂಗ್ರೆಸ್​ನ ಕೆ.ವೈ.ನಂಜೇಗೌಡ ಗೆಲುವು ಸಾಧಿಸಿದ ಹಿನ್ನೆಲೆ ಮರುಎಣಿಕೆಗೆ ನಿರ್ದೇಶನ ನೀಡುವಂತೆ ಕೋರಿ ಮಂಜುನಾಥಗೌಡ ಮನವಿ ಮಾಡಿದ್ದಾರೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಒಂದು ರೀತಿಯಾದರೆ ಮಾಲೂರು ಕ್ಷೇತ್ರದ ಮತಎಣಿಕೆ ಮಾತ್ರ ಇಡೀ ಜಿಲ್ಲೆಯ ಹಾಗೂ ರಾಜ್ಯದ ಜನರಿಗೆ ಕುತೂಹಲಕ್ಕೆ ಕಾರಣವಾಗಿತ್ತು. ಕಾರಣ ಬಿಜೆಪಿ, ಕಾಂಗ್ರೆಸ್​ ಮತ್ತು ಜೆಡಿಎಸ್​​ ಮೂರು ಪಕ್ಷಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಆರಂಭದಲ್ಲಿ ​ಕಾಂಗ್ರೆಸ್ ಅಭ್ಯರ್ಥಿ, ನಂತರ ಬಿಜೆಪಿ ಅಭ್ಯರ್ಥಿ ಮಂಜುನಾಥಗೌಡ ನಂತರ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​ ಒಬ್ಬರಾದ ಮೇಲೆ ಒಬ್ಬರು ಮುನ್ನಡೆ ಸಾಧಿಸಿಕೊಂಡು ಬಂದಿದ್ದರು. ಆದರೆ, ಒಂದು ಹಂತದಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್​ ಕುಮಾರ್​ 1500 ದಿಂದ 2000 ಮತಗಳ ಅಂತರದಲ್ಲಿ ಸುಮಾರು ಏಳೆಂಟು ಸುತ್ತು ಮುನ್ನಡೆ ಸಾಧಿಸಿದ್ದರು.

ಇದನ್ನೂ ಓದಿ: ಮುಖ್ಯಮಂತ್ರಿ ಸ್ಥಾನ; ಪಟ್ಟುಬಿಡದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಬೆಂಬಲಿಗರು ಹೇಳೋದೇನು ನೋಡಿ

ಮರು ಎಣಿಕೆಗೆ ಆಗ್ರಹ

ಕೊನೆಯಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಕೇವಲ 248 ಮತಗಳ ಅಂತರದಲ್ಲಿ ಜಯಗಳಿಸುವ ಮೂಲಕ ಕುತೂಹಲಕ್ಕೆ ತೆರೆ ಬಿದ್ದಿತ್ತು. ಆದರೆ ಸ್ಥಳಕ್ಕೆ ಬಂದ ಬಿಜೆಪಿ ಅಭ್ಯರ್ಥಿ ಕೆ.ಎಸ್​.ಮಂಜುನಾಥಗೌಡ ಗೆಲುವಿನ ವಿರುದ್ದ ಪ್ರತಿಭಟಿಸಿ ಮರು ಎಣಿಕೆಗೆ ಆಗ್ರಹಿಸಿದ್ದರು. ಈ ವೇಳೆ ಮರುಎಣಿಕೆ ಮಾಡಿದರಾದರೂ ಬಿಜೆಪಿ ಅಭ್ಯರ್ಥಿ ಕೋರ್ಟ್​ನ ಮೊರೆ ಹೋಗುವುದಾಗಿ ಹೇಳಿದ್ದರು. ಅದರಂತೆಯೇ ಈಗ ಮಂಜುನಾಥಗೌಡ ಪರ ವಕೀಲರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆಗಿಯೇ ಆಗ್ತಾರೆ, ಒಂದಲ್ಲ ಮೂರು ಟಗರು ಅಡವಿಟ್ಟ ಮೈಸೂರಿನ ಅಭಿಮಾನಿ

ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ವಿವಿಪ್ಯಾಟ್​ಗಳನ್ನು ಅಧಿಕಾರಿಗಳು ಹಾಗೂ ಅಭ್ಯರ್ಥಿಗಳ ಸಮ್ಮುಖದಲ್ಲಿ ಎಣಿಕೆ ಮಾಡಲಾಗಿದೆ. ಅಷ್ಟಾದರೂ ಸಮಾಧಾನಗೊಳ್ಳದ ಮಂಜುನಾಥಗೌಡ ಕೋರ್ಟ್​ನ ಮೊರೆ ಹೋಗಿದ್ದಾರೆ.

ಅವರು ಎಲ್ಲಿಗೆ ಬೇಕಾದ್ರು, ಹೋಗಲಿ: ಕಾಂಗ್ರೆಸ್ ಅಭ್ಯರ್ಥಿ

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ, ಅವರು ಎಲ್ಲಿಗೆ ಬೇಕಾದ್ರು, ಹೋಗಲಿ. ಇದು ಜನರು ಕೊಟ್ಟಿರುವ ತೀರ್ಪು. ಅಲ್ಲದೆ ಈ ಬಾರಿ ಕಾಂಗ್ರೆಸ್​ ಸರ್ಕಾರ ಬಂದಿದ್ದು, ನನ್ನ ಕನಸಿನ ಮಾಲೂರು ನಿರ್ಮಾಣ ಮಾಡುವುದಾಗಿ ಹೇಳಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
ಚಡ್ಡಿಯಲ್ಲಿ ಬಂದು ಒಣಗಲು ಹಾಕಿದ್ದ ಬಟ್ಟೆಗಳನ್ನು ಕದ್ದು ಓಡಿದ ಭೂಪ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
‘ಸು ಫ್ರಮ್ ಸೋ’ ನಿರ್ದೇಶಕರಿಗೆ ತಾಯಿಯಿಂದ ಸಿಕ್ತು ಬೆಸ್ಟ್ ಪ್ರತಿಕ್ರಿಯೆ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಬಿಳಿ ಪಂಚೆ ಧರಿಸಿ ಚೋಳಪುರಂ ದೇವಸ್ಥಾನಕ್ಕೆ ಭೇಟಿ ಕೊಟ್ಟ ಪ್ರಧಾನಿ ಮೋದಿ
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಮೈಸೂರಿನಲ್ಲೇ ಡ್ರಗ್ಸ್​ ತಯಾರಿಕಾ ಘಟಕ: ಸ್ಫೋಟಕ ಅಂಶ ಬಾಯ್ಬಿಟ್ಟ ಪೆಡ್ಲರ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
ಆರಂಭಿಕನಾಗಿ ಕಣಕ್ಕಿಳಿದು 6 ಸಿಕ್ಸ್ ಸಿಡಿಸಿದ ಗ್ಲೆನ್ ಮ್ಯಾಕ್ಸ್​ವೆಲ್
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
7 ರನ್​ಗಳ ಅವಶ್ಯಕತೆ: ಪಂದ್ಯದ ಫಲಿತಾಂಶ ಬದಲಿಸಿದ 2 ಅದ್ಭುತ ಕ್ಯಾಚ್​ಗಳು
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಗೂಗಲ್ ಮ್ಯಾಪ್ ನಂಬಿ ಹೋದ ಕಾರು ಸೇತುವೆ ಮೇಲಿಂದ ಬಿತ್ತು, ಮುಂದೇನಾಯ್ತು?
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಹರಿದ್ವಾರದ ಮಾನಸ ದೇವಿ ದೇವಸ್ಥಾನದಲ್ಲಿ ಕಾಲ್ತುಳಿತ, ಆರು ಮಂದಿ ಸಾವು
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಮನೆ ಕೌಂಪೌಂಡ್ ಹಾರಿ ಬಂದು ನಾಯಿ ಹೊತ್ತೊಯ್ದ ಚಿರತೆ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ
ಟೇಕ್ ಆಫ್ ಆಗುವಾಗ ಅಮೆರಿಕನ್ ಏರ್​​ಲೈನ್ಸ್ ವಿಮಾನದಲ್ಲಿ ಬೆಂಕಿ