ಬಳ್ಳಾರಿ: ವಿಧಾನಸಭೆ ಚುನಾವಣೆ(Karnataka Assembly Election)ಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಗುರುವಾರದಂದು ಬಳ್ಳಾರಿ ಜಿಲ್ಲೆಯ ಕಂಪ್ಲಿ ಕ್ಷೇತ್ರದಿಂದ ಮಂಗಳಮುಖಿಯೊಬ್ಬರು ದೇಶಪ್ರೇಮ ಪಕ್ಷದಿಂದ ನಾಮಪತ್ರ ಸಲ್ಲಿಸಿದ್ದಾರೆ. ಹೌದು ಮಂಗಳಮುಖಿಯಾಗಿರುವ ಟಿ.ರಾಮಕ್ಕ(T Ramakka) ಎಂಬುವವರೆ ನಾಮಪತ್ರ ಸಲ್ಲಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದಿದ್ದಾರೆ. ಕಂಪ್ಲಿ ತಾಲೂಕಿನ ಬಾದನಹಟ್ಟಿ ಗ್ರಾಮದವವರಾದ ಟಿ ರಾಮಕ್ಕ ವಿದ್ಯಾಭ್ಯಾಸ ಮಾಡದಿದ್ದರೂ ಎಂಎಲ್ಎ(MLA) ಆಗುವ ಕನಸು ಕಟ್ಟಿಕೊಂಡು ವಿಧಾನಸಭೆ ಚುನಾವಣೆಗೆ ಇದೀಗ ಸ್ಪರ್ಧೆ ಮಾಡಿದ್ದಾರೆ.
ದೇಶಪ್ರೇಮ ಪಕ್ಷದ ಪದಾಧಿಕಾರಿಗಳು ಹಾಗೂ ಮಂಗಳಮುಖಿಯರ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿರುವ ಟಿ ರಾಮಕ್ಕ. ತಮ್ಮ ನಾಮಪತ್ರದ ಜೊತೆಗೆ ಅಪಿಡವಿಟ್ ಸಲ್ಲಿಸಿದ್ದಾರೆ. ಕೇವಲ ಪಾನ್ ಸಂಖ್ಯೆ ಹೊಂದಿರುವ ಮಂಗಳಮುಖಿ ರಾಮಕ್ಕರ ಕೈಯಲ್ಲಿ ನಗದು 30 ಸಾವಿರ ಹಣ, 5 ಲಕ್ಷ ಮೌಲ್ಯದ 10 ತೊಲೆ ಬಂಗಾರ. 1.40 ಲಕ್ಷ ಮೌಲ್ಯದ 2 ಕೆಜಿ ಬೆಳ್ಳಿ ಹೊಂದಿದ್ದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ಖಾತೆ ಹೊಂದಿರುವುದಾಗಿ ದಾಖಲೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಈಶ್ವರಪ್ಪಗೆ ಪ್ರಧಾನಿ ದೂರವಾಣಿ ಕರೆ: ರಾಜಕೀಯ ನಡೆಗೆ ಪ್ರಶಂಸೆ ಜತೆಗೆ ಮಹತ್ವದ ಭರವಸೆ ನೀಡಿದ ಮೋದಿ
ಸಮಾಜದಲ್ಲಿ ಮಂಗಳಮುಖಿಯರಿಗೆ ಸೂಕ್ತ ಸಮಾನತೆ ಸಿಗುತ್ತಿಲ್ಲ. ಸಮಾಜ ಮಂಗಳಮುಖಿಯರಿಗೆ ಗೌರವ ನೀಡುತ್ತಿಲ್ಲ. ಇದರಿಂದಾಗಿ ಭಿಕ್ಷೆಬೇಡಿಕೊಂಡು ಜೀವನ ಸಾಗಿಸುವ ದುಸ್ಥಿತಿಯಲ್ಲಿ ನಾವಿದ್ದೇವೆ. ಹೀಗಾಗಿ ಮನನೊಂದು ಶಾಸಕಿಯಾಗುವ ಕನಸಿನಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವೆ. ನಾನು ಶಾಸಕಿಯಾದಲ್ಲಿ ಕ್ಷೇತ್ರದಲ್ಲಿನ ಸರ್ವರಿಗೂ ಸಮಾನತೆಯನ್ನು ನೀಡಿ ಬಡವರು, ನಿರ್ಗತಿಕರು, ಹಿಂದುಳಿದವರ ಏಳಿಗೆಗೆ ಶ್ರಮಿಸುತ್ತೇನೆ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಮುಂದಾಗುವ ಜತೆಗೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಟಿ ರಾಮಕ್ಕ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಂಪ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಹಾಲಿ ಶಾಸಕ ಜೆ.ಎನ್.ಗಣೇಶ್ ಹಾಗೂ ಬಿಜೆಪಿಯಿಂದ ಮಾಜಿ ಶಾಸಕ ಟಿ.ಎಚ್ ಸುರೇಶಬಾಬು. ಜೆಡಿಎಸ್ನಿಂದ ರಾಜು ನಾಯಕ್ ಸ್ಪರ್ಧೆ ಮಾಡಿದ್ದು. ಈ ಮೂವರು ಘಟಾನುಘಟಿಗಳ ಮಧ್ಯೆ ಮಂಗಳಮುಖಿಯಾಗಿರುವ ಟಿ ರಾಮಕ್ಕ ಚುನಾವಣೆಯಲ್ಲಿ ಯಾವ ರೀತಿಯಾಗಿ ಪ್ರಚಾರ ಮಾಡುತ್ತಾರೆ. ಮತದಾರರ ಬೆಂಬಲ ಪಡೆಯಲು ಎನು ಮಾಡುತ್ತಾರೆ ಎನ್ನುವುದು ಇದೀಗ ಮತದಾರರಲ್ಲಿ ಕುತೊಹಲ ಮೂಡಿಸಿದೆ.
ಇನ್ನಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ