ಸಿದ್ದರಾಮಯ್ಯ ಒಂದು ಬಾರಿ ನನ್ನ ಜೊತೆ ವರುಣ ಕ್ಷೇತ್ರದಲ್ಲಿ ಓಡಾಡಲಿ: ಸಚಿವ ವಿ ಸೋಮಣ್ಣ ಸವಾಲ್

|

Updated on: Apr 29, 2023 | 1:43 PM

ಪ್ರಚಾರ ನಡೆಸುತ್ತಿರುವ ಸಚಿವ ವಿ ಸೋಮಣ್ಣ ಸಿದ್ದರಾಮಯ್ಯಗೆ ಸವಾಲ್ ಹಾಕಿದ್ದಾರೆ. ಹಾಗೂ ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯ ಒಂದು ಬಾರಿ ನನ್ನ ಜೊತೆ ವರುಣ ಕ್ಷೇತ್ರದಲ್ಲಿ ಓಡಾಡಲಿ: ಸಚಿವ ವಿ ಸೋಮಣ್ಣ ಸವಾಲ್
ಸಚಿವ ವಿ ಸೋಮಣ್ಣ, ಸಿದ್ದರಾಮಯ್ಯ
Follow us on

ಚಾಮರಾಜನಗರ: ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಹೈವೋಲ್ಟೇಜ್‌ ಕ್ಷೇತ್ರವಾಗಿದ್ದ ವರುಣದಲ್ಲಿ ಸೋಮಣ್ಣ ಅಖಾಡಕ್ಕೆ ಇಳಿಯುತ್ತಿದ್ದಂತೆ ಚುನಾವಣಾ ಕಾವು ಹೆಚ್ಚಾಗಿದೆ. ಸದ್ಯ ಈಗ ಚಾಮರಾಜನಗರದಲ್ಲಿ ಪ್ರಚಾರ ನಡೆಸುತ್ತಿರುವ ಸಚಿವ ವಿ ಸೋಮಣ್ಣ(V Somanna) ಸಿದ್ದರಾಮಯ್ಯಗೆ(Siddaramaiah) ಸವಾಲ್ ಹಾಕಿದ್ದಾರೆ. ಹಾಗೂ ಇದೇ ವೇಳೆ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಿದ್ದರಾಮಯ್ಯಗೆ ಸೋಮಣ್ಣ ಸವಾಲ್

ಸಿದ್ದರಾಮಯ್ಯ ಒಂದು ಬಾರಿ ವರುಣ ಕ್ಷೇತ್ರದಲ್ಲಿ ಓಡಾಡಲಿ. ಅವರ ಜೊತೆ ನಾನು ಒಬ್ಬನೇ ಬರ್ತೀನಿ, ಹೋಗೋಣ. ಅದೆಷ್ಟು ಚೆನ್ನಾಗಿ ರಸ್ತೆಗಳಿವೆ ನೋಡಲಿ. ಯಾವ ರೀತಿ ಅವ್ಯವಸ್ಥೆಯಿದೆ ನೋಡಲಿ. ಯಾವ ರೀತಿ ಜನರು ಒದ್ದಾಡ್ತಿದ್ದಾರೆ ನೋಡಲಿ. ಸಿದ್ದರಾಮಯ್ಯ ಕರೆದ್ರೆ ಹೋಗಲೂ ಸಿದ್ಧ, ಹೋಗಿ ಸುತ್ತಾಡೋಣ. ಅವರು ಮಾಡಿರುವ ಕೆಲಸ ಅವರಿಗೆ ತೃಪ್ತಿ ಕೊಟ್ಟಿದೆ ಅನ್ಸಿದ್ರೆ, ಅವರಿಗೆ ನಮಸ್ಕಾರ ಮಾಡಿ, ನಾನು ಏನೂ ಮಾತಾಡಲ್ಲ. ನಿಜಲಿಂಗಪ್ಪ, ದೇವರಾಜ ಅರಸುಗಿಂತ ಸಿದ್ದರಾಮಯ್ಯ ದೊಡ್ಡವರಲ್ಲ. ಜನರು ತೀರ್ಮಾನ ಮಾಡ್ತಾರೆ. ಹಿಂದೆ ನೀವು ಸೋತಾಗ ಮಂತ್ರಿಯಾಗಿದ್ರಷ್ಟೇ. ಇವತ್ತು ಮಾಜಿ ಸಿಎಂ, ವಿರೋಧ ಪಕ್ಷದ ನಾಯಕರಾಗಿ ನಿಂತಿದ್ದೀರಾ. ಸಿದ್ದರಾಮಯ್ಯ ಇನ್ನೊಬ್ಬರ ಮೇಲೆ ಗೂಬೆ ಕೂರಿಸೋದು ಬಿಟ್ಟು, ವಾಸ್ತಾವಾಂಶಕ್ಕೆ ಗಮನ ಕೊಟ್ರೆ ಒಳ್ಳೇಯದು ಎಂದು ಚಾಮರಾಜ‌ಗರದಲ್ಲಿ ಸಿದ್ದರಾಮಯ್ಯಗೆ ವಿ.ಸೋಮಣ್ಣ ಸವಾಲು ಹಾಕಿದ್ದಾರೆ.

ಇದನ್ನೂ ಓದಿ: Siddaramaiah Collapsed: ಕಾರು ಹತ್ತುವ ವೇಳೆ ಬಾಗಿಲ ಬಳಿ ಕುಸಿದ ಸಿದ್ದರಾಮಯ್ಯ

ವರುಣದಲ್ಲಿ ಗಲಾಟೆ ಮಾಡಿದ್ದು ಬಿಜೆಪಿಯವರು ಎಂಬ ಸಿದ್ದರಾಮಯ್ಯ ಹೇಳಿಕೆಗೆ ಸಚಿವ ಸೋಮಣ್ಣ ತಿರುಗೇಟು ನೀಡಿದ್ದಾರೆ. ನಾವೇನೂ ಕಾಲು ಕೆರೆದುಕೊಂಡು ಹೋಗಿರಲಿಲ್ಲ. ಒಂದೇ ವರ್ಗದ ಜನ ಪ್ರಚಾರಕ್ಕೆ ಅಡ್ಡಿಪಡಿಸ್ತಿದ್ದಾರೆ. ನಾವು ಪ್ರಚಾರಕ್ಕೆ ಹೋದ್ರೆ ರಸ್ತೆಗೆ ಅಡ್ಡಲಾಗಿ ನೊಗ ಇಡ್ತಾರೆ. ಅಲ್ಲಿಂದಾಚೆಗೆ ಹೋಗಬಾರದು ಅಂತಾರೆ. ನಮಗೆ ಹುಚ್ಚು ಹಿಡಿದಿದಿಯಾ ಜಗಳ ಮಾಡೋಕೆ? ಸಿದ್ದರಾಮಯ್ಯ ಹತಾಶರಾಗಿ ಈ ರೀತಿ ಮಾತಾಡ್ತಿದ್ದಾರೆ. ಯಾಕೆ ಆ ರೀತಿ ಆರೋಪ ಮಾಡಿ ಚಿಕ್ಕವರಾಗ್ತಾ ಇದ್ದಾರೋ ಗೊತ್ತಿಲ್ಲ. ನೀವೂ ಗೆಲ್ಲೊದಾದ್ರೆ ಇದೆಲ್ಲಾ ನಿಮಗೆ ಯಾಕೆ ಬೇಕು. ಪೊಲೀಸ್‌ಗೆ ಹಿಡಿದುಕೊಟ್ಟರೂ ಸಹ, ಪೊಲೀಸರು ಬಿಟ್ಟು ಕಳಿಸ್ತಾರೆ. ಅವರ ಮೇಲೆ 326 ರ ಅಡಿ ಪ್ರಕರಣ ದಾಖಲಿಸಬೇಕು. ಏನಾದ್ರೂ ಪಿತೂರಿ ಮಾಡಲಿ, ಭಗವಂತ ಚಾಮುಂಡಿ ತಾಯಿ ಇದ್ದಾರೆ, ಅಲ್ಲದೇ ಕ್ಷೇತ್ರದ ಜನರಿದ್ದಾರೆ. ನನ್ನ ಸೇವೆ ಬೇಕು ಅಂದ್ರೆ ಸಹಾಯ ಮಾಡ್ತಾರೆ. ಮಾಡ್ದೆ ಇದ್ರೆ ನಂಗೇನೂ ಬೇಜಾರು ಇಲ್ಲ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

ಇನ್ನು ಇದೇ ವೇಳೆ ಪ್ರತಾಪ್ ಸಿಂಹರಿಂದಲೇ ಗಲಾಟೆ ಯಾಗ್ತಿದೆ ಎಂಬ ವಿಚಾರಕ್ಕೆ ಸಂಬಂಧಿಸಿ ಸೋಮಣ್ಣ ಪ್ರತಿಕ್ರಿಯಿಸಿದ್ದಾರೆ. ಪ್ರತಾಪ್ ಸಿಂಹ ಜವಾಬ್ದಾರಿಯುತ ಲೋಕಸಭಾ ಸದಸ್ಯ. ಆತ ನಂಗೆ ಸಹೋದರ ಸಮಾನ, ಪಕ್ಷದ ಭವಿಷ್ಯದ ನಾಯಕ. ವಾಸ್ತವಾಂಶ ಇರೋದನ್ನು ಮಾತಾಡ್ತಾರೆ. ನಿಮ್ಮವರೇ ಜಗಳ ಮಾಡಿಸ್ತಿರೋದು, ನಿಮ್ಮವರನ್ಮುಬಿಟ್ರೆ ಬೇರೆ ಯಾರೂ ಇಲ್ಲ. ನ್ಯಾಯಸಮ್ಮತ ಚುನಾವಣೆ ನಡೆಯಲಿ, 13ನೇ ತಾರೀಖು ಜನರು ನೀಡೋ ತೀರ್ಪಿಗೆ ತಲೆಬಾಗೋಣ ಎಂದರು.

ವಿಧಾನಸಭಾ ಚುನಾವಣೆಗೆ ಸಂಬಂಧಿಸಿದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ