ವೋಟರ್ ಸ್ಲಿಪ್ ತಂದಿಲ್ಲ ಅಂತ ರಾಜಮಾತೆ ಪ್ರಮೋದಾದೇವಿಯವರನ್ನೇ ವಾಪಸ್ ಕಳಿಸಿದ ಅಧಿಕಾರಿಗಳು, ಮುಂದೇನಾಯ್ತು?

ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ವೋಟರ್ ಸ್ಲಿಪನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಯ ಬಳಿ ಬಂದಿದ್ರು. ಈ ವೇಳೆ ಚುನಾವಣಾ ಅಧಿಕಾರಿಗಳು ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ.

ವೋಟರ್ ಸ್ಲಿಪ್ ತಂದಿಲ್ಲ ಅಂತ ರಾಜಮಾತೆ ಪ್ರಮೋದಾದೇವಿಯವರನ್ನೇ ವಾಪಸ್ ಕಳಿಸಿದ ಅಧಿಕಾರಿಗಳು, ಮುಂದೇನಾಯ್ತು?
ರಾಜಮಾತೆ ಪ್ರಮೋದಾದೇವಿ

Updated on: May 10, 2023 | 10:53 AM

ಮೈಸೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಎಲ್ಲೆಡೆ ಭರ್ಜರಿ ಮತದಾನ ನಡೆಯುತ್ತಿದೆ(Karnataka Assembly Elections 2023). ಮತ ಚಲಾಯಿಸುವ ಮೂಲಕ ಮತದಾರರು ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸುತ್ತಿದ್ದಾರೆ. ಮೈಸೂರು ರಾಜಮನೆತನದ ರಾಜಮಾತೆ ಪ್ರಮೋದಾದೇವಿ(Pramoda Devi Wadiyar) ಅವರು ವೋಟರ್ ಚೀಟಿಯನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಗೆ ಆಗಮಿಸಿದ್ದು ಮತ್ತೆ ಮನೆಗೆ ತೆರಳಿ ವೋಟರ್ ಸ್ಲಿಪ್ ತೆಗೆದುಕೊಂಡು ಬಂದ ಅಪರೂಪದ ಘಟನೆ ನಡೆದಿದೆ.

ಮತದಾನ ಮಾಡಲು ಬರುವವರು ವೋಟರ್ ಐಡಿ ಜೊತೆ ವೋಟರ್ ಸ್ಲಿಪ್ ಕೂಡ ತೆಗೆದುಕೊಂಡು ಬರಬೇಕು. ಆದ್ರೆ ರಾಜಮಾತೆ ಪ್ರಮೋದಾ ದೇವಿ ಒಡೆಯರ್ ಅವರು ವೋಟರ್ ಸ್ಲಿಪನ್ನು ಮನೆಯಲ್ಲೇ ಬಿಟ್ಟು ಮತಗಟ್ಟೆಯ ಬಳಿ ಬಂದಿದ್ರು. ಈ ವೇಳೆ ಚುನಾವಣಾ ಅಧಿಕಾರಿಗಳು ಅವರಿಗೆ ಮತ ಚಲಾಯಿಸಲು ಅವಕಾಶ ನೀಡಿಲ್ಲ.

ಆಗ ಅವರು ತಮ್ಮ ಮೊಬೈಲ್‌ನಲ್ಲಿದ್ದ ಸಾಫ್ಟ್ ಕಾಪಿಯನ್ನು ತೋರಿಸಿದ್ದಾರೆ. ಆದರೆ ಇದಕ್ಕೆ ಮತಗಟ್ಟೆ ಅಧಿಕಾರಿಗಳು ಒಪ್ಪಿಗೆ ನೀಡಿಲ್ಲ. ಎಷ್ಟೇ ದೊಡ್ಡವರಾದರೂ ಕಾನೂನು ಎಲ್ಲರಿಗೂ ಒಂದೇ ಎಂದು ಈ ಮೂಲಕ ಮತಗಟ್ಟೆ ಅಧಿಕಾರಿಗಳು ಸಾರಿದ್ದಾರೆ. ಹೀಗಾಗಿ ವೋಟರ್ ಸ್ಲಿಪ್ ತರಲು ಮತಗಟ್ಟೆಯಿಂದ ಪ್ರಮೋದಾದೇವಿ ಒಡೆಯರ್ ವಾಪಸ್ ತೆರಳಿದರು. ಮತಗಟ್ಟೆಯ ಮುಂಭಾಗದಲ್ಲೇ ಕಾರಿನಲ್ಲಿ ಕುಳಿತು ನಮ್ಮವರಿಂದ ಮೊಬೈಲ್​ನಲ್ಲಿದ್ದ ಪ್ರಿನ್ಟ್ ಪಡೆದು ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಮತ ಚಲಾಯಿಸಿದರು.

ಇದನ್ನೂ ಓದಿ: Karnataka Assembly Election: ಸಾಮಾನ್ಯರ ಹಾಗೆ ಸರತಿ ಸಾಲಲ್ಲಿ ನಿಂತ ರಾಜಮಾತೆ ಪ್ರಮೋದಾದೇವಿ

ಮತದಾನದ ಬಳಿಕ ಮಾತನಾಡಿದ ಅವರು, ಮೊದಲೆಲ್ಲಾ ಪಾರ್ಟಿಯಿಂದ ಚೀಟಿ ಕೊಡುತ್ತಿದ್ದರು. ಈ ಬಾರಿ ಕಚೇರಿಯಿಂದ ಚೀಟಿ ಕೊಟ್ಟಿದ್ದಾರೆ. ಅದರಲ್ಲಿ‌ ಎಲ್ಲಾ ಮಾಹಿತಿ ಇದೆ. ಅದರ ಭರವಸೆ ಮೇಲೆ ಬೇರೆ ಚೀಟಿ ಕೊಡಲ್ಲ ಅಂತ ಬಂದಿದ್ದೆ. ಆದು ಸಾಲಲ್ಲ, ಬೇರೆ ದಾಖಲೆ ಬೇಕು ಅಂತ ಹೇಳಿದರು. ಆಫೀಸಿನಿಂದ ಬಂದ ಚೀಟಿಯಿಂದಾಗಿ ಬೇರೆ ದಾಖಲೆ ತಂದಿರಲಿಲ್ಲ. ಹಾಗಾಗಿ ಮತದಾನ‌ ತಡವಾಯ್ತು. ಸಾಫ್ಟ್ ಕಾಪಿಯಲ್ಲಿ ಹಾಕಿದ್ದಾರೆ. ಡಿಜಿಟಲ್ ಕಾಪಿ ಅಲೋ ಮಾಡಲ್ಲ ಅಂತ ಗೊತ್ತಿರಲಿಲ್ಲ. ಯುವಕರು ಮತದಾನದ ಮೂಲಕ ತಮ್ಮ ಭಾವನೆ ವ್ಯಕ್ತ ಪಡಿಸಬೇಕು. ಅಲ್ಲದೆ ನಮ್ಮ ಧ್ವನಿ ಕೇಳಲ್ಲ ಅಂದರೆ ಏನೂ ಮಾಡಲು ಆಗುವುದಿಲ್ಲ. ಅವಕಾಶ ಸಿಕ್ಕಾಗ ನಿಮ್ಮ ಭಾವನೆ ವ್ಯಕ್ತಪಡಿಸಿ. ನಿಮ್ಮ ನಿರಾಸಕ್ತಿ ಇದ್ದರು ಅದನ್ನು ಇಲ್ಲಿ ಬಂದು ವ್ಯಕ್ತಪಡಿಸಿ. ನಾನೂ ಕೂಡ ಅದೇ ಉದ್ದೇಶದಿಂದ ಮತದಾನ ಮಾಡಿದ್ದೇನೆ ಎಂದರು.

ವೋಟರ್​ ಸ್ಲಿಪ್​: ಮತಗಟ್ಟೆಗಳಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಏಜೆಂಟರುಗಳು 100 ಮೀಟರ್​​ ಅಂತರದಲ್ಲಿ ಶಿಬಿರಗಳನ್ನು ಸ್ಥಾಪಿಸಿಕೊಂಡಿರುತ್ತಾರೆ. ಅಲ್ಲಿನ ಪ್ರತಿನಿಧಿಗಳನ್ನು ಭೇಟಿ ಮಾಡಿದರೆ ಚುನಾವಣೆ ಆಯೋಗದ ಮತದಾರರ ಪಟ್ಟಿಯ ಅನುಸಾರ ನಿಮ್ಮ ವಿವರವನ್ನು ನಮೂದಿಸಿ, ಚಿಕ್ಕ ಸ್ಲಿಪ್​​ನಲ್ಲಿ ಬರೆದುಕೊಡುತ್ತಾರೆ. ಅದರಲ್ಲಿ ನಿಮ್ಮ ವಿವರದ ಜೊತೆಗೆ ಬೂತ್​​ನ ಸಂಖ್ಯೆಯನ್ನು ನಮೂದಿಸಿಕೊಡುತ್ತಾರೆ. ಅದರಂತೆ ಆ ಬೂತಿನ ಸಂಖ್ಯೆ ಬಳಿಯೇ ಹೋಗಿ ಮತದಾನ ಮಾಡಬೇಕು.

ಕರ್ನಾಟಕ ಚುನಾವಣೆ 2023 ಲೈವ್​ ಅಪ್ಡೇಟ್ಸ್​ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಕರ್ನಾಟಕ ಚುನಾವಣೆ ತಾಜಾ & ವಿಶೇಷ ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ