Nelamangala Election Results: ನೆಲಮಂಗಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಶ್ರೀನಿವಾಸಯ್ಯ ಜಯಭೇರಿ

Nelamangala Assembly Election Result 2023 Live Counting Updates: ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್​ನಿಂದ ಡಾ.ಕೆ.ಶ್ರೀನಿವಾಸಮೂರ್ತಿ, ಕಾಂಗ್ರೆಸ್​ನಿಂದ ಶ್ರೀನಿವಾಸ್ ಹಾಗೂ ಬಿಜೆಪಿಯಿಂದ ಸಪ್ತಗಿರಿ ನಾಯಕ್‌ ಕಣದಲ್ಲಿದ್ದಾರೆ. ಮತ ಎಣಿಕೆಯ ವಿವರ ಇಲ್ಲಿದೆ.

Nelamangala Election Results: ನೆಲಮಂಗಲ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕಾಂಗ್ರೆಸ್ ಶ್ರೀನಿವಾಸಯ್ಯ ಜಯಭೇರಿ
ಜೆಡಿಎಸ್​​, ಕಾಂಗ್ರೆಸ್​

Updated on: May 13, 2023 | 2:01 PM

Nelamangala Assembly Election Result 2023: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಪ್ರಕಟಗೊಂಡಿದೆ. 20,000 ಮತಗಳ ಅಂತರದಿಂದ JDS​ ಡಾ.ಶ್ರೀನಿವಾಸಮೂರ್ತಿ ವಿರುದ್ಧ ಕಾಂಗ್ರೆಸ್​ನ ಶ್ರೀನಿವಾಸಯ್ಯಗೆ ಜಯ ಸಿಕ್ಕಿದೆ. ನೆಲಮಂಗಲ ವಿಧಾನಸಭಾ ಕ್ಷೇತ್ರದಿಂದ (Nelamangala Assembly Constituency) ಜೆಡಿಎಸ್ ಅಭ್ಯರ್ಥಿ ಡಾ.ಕೆ.ಶ್ರೀನಿವಾಸಮೂರ್ತಿ ಕಣದಲ್ಲಿದ್ದಾರೆ. ನೆಲಮಂಗಲ ಚುನಾವಣೆಯಲ್ಲಿ ಈ ಬಾರಿ ರೋಚಕತೆಯಲ್ಲಿ ಕೂಡಿದೆ. ಏಕೆಂದರೆ ಕಳೆದ ಬಾರಿ ಗೆದ್ದಂತ ಜೆಡಿಎಸ್ ಶಾಸಕ ಡಾ. ಕೆ ಶ್ರೀನಿವಾಸಮೂರ್ತಿ ಗೆ ಟಿಕೆಟ್ ಕೊಡಬಾರದು ಬೇರೆಯ ಹೊಸಮುಖಕ್ಕೆ ಟಿಕೆಟ್ ಕೊಡಬೇಕೆಂದು ಕೆಲ ಜೆಡಿಎಸ್ ಮುಖಂಡರುಗಳ ನಿರ್ಧಾರವಾಗಿತ್ತು. ಆದರೆ ಇಲ್ಲಿ ಇನ್ನೊಂದು ಸಮಸ್ಯೆ ತಲೆದೋರಿದೆ ಅದು ಬೆಮೆಲ್ ಕೃಷ್ಣಪ್ಪರವರ ಅಣ್ಣನ ಮಗ ಬೆಮೆಲ್ ಕಾಂತರಾಜು ಕಾಂಗ್ರೆಸ್ ಗೆ ಸೆರ್ಪಡೆಯಾಗಿರುವುದು ಜೆಡಿಎಸ್ ಗೆ ನುಂಲಾದರದ ತುತ್ತಾಗಿದೆ ನೆಲಮಂಗಲದಲ್ಲಿ ಜೆಡಿಎಸ್ ಕಾರ್ಯಕರ್ತರು ಮುಖಂಡರುಗಳು ಚದುರಿ ಹೋಗಿದ್ದಾರೆ. ಆದರೆ ಜೆಡಿಎಸ್‌ಗೆ ಹಾಲಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿಯವರೆ ಕಣಕ್ಕಿಳಿದಿದ್ದಾರೆ.

ಇನ್ನು ಕಾಂಗ್ರೆಸ್​ನಿಂದ ನೆಲಮಂಗಲದಲ್ಲಿ ಕಳೆದ ಬಾರಿ ನಾರಾಯಣಸ್ವಾಮಿ ಟಿಕೆಟ್ ಕೊಟ್ಟು ಸ್ಥಾನವನ್ನು ಕಳೆದುಕೊಂಡಿದ್ದು, ಈ ಬಾರಿ ಹೊಸ ಮುಖಕ್ಕೆ ಕೊಡಬೇಕೆನ್ನುವುದು ರಾಜ್ಯ ನಾಯಕರ ತಯಾರಿ ಬೆನ್ನಲ್ಲೆ ಕೆಪಿಸಿಸಿ ವೀಕ್ಷಕ ಶ್ರೀನಿವಾಸ್ ರನ್ನ ಟಿಕೆಟ್ ನೀಡಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಅದು ಏನೆ ಮಾಡಿದರು ಯಾರು ಯಾರಿಗೆ ಸಪೋರ್ಟ್ ಕೊಟ್ಟರು ಕೊಡದಿದ್ದರು ನೆಲಮಂಗಲದಲ್ಲಿ ಕಾಂಗ್ರೆಸ್‌ಗೆ ತನ್ನದೆ ಆದ ಮತ ಬ್ಯಾಂಕ್ ಇದೆ.

ಇನ್ನು ಮಾಜಿ ಶಾಸಕ ನಾಗರಾಜು ಬಿಟ್ಟರೆ ಬಿಜೆಪಿಯಲ್ಲಿ ಯಾರು ಇಲ್ಲಾ ಎನ್ನುವ ಮಾತಿತ್ತು. ಆದರೆ ಕಳೆದ ಎರಡು ಬಾರಿ ಜೆಡಿಎಸ್ ವಿರುದ್ಧ ಸ್ಪರ್ಧೆ ಮಾಡಿ ಹೀನಾಯವಾಗಿ ಸೋತಿದ್ದು, ಈಗ ಬಿಜೆಪಿಯಲ್ಲಿ ಹೊಸ ಮುಖ ಬರಬೇಕು ಎನ್ನುವುದು ಬಿಜೆಪಿಯಲ್ಲೆ ಮಾತು ಕೇಳಿ ಬಂದಿದ್ದು, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾದ ಸಪ್ತಗಿರಿ ನಾಯಕ್‌ರನ್ನ ಬಿಜೆಪಿ ಕಣಕ್ಕಿಳಿಸಿದೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ

Published On - 1:29 am, Sat, 13 May 23