PM Narendra Modi: ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಪ್ರಧಾನಿ ಮೋದಿ: ಇಲ್ಲಿದೆ ಮೋದಿ ಯೋಜನೆಯ ಸಂಪೂರ್ಣ ಮಾಹಿತಿ

ರಾಜಭವನದಲ್ಲಿ ಇಂದು ರಾತ್ರಿ ವಾಸ್ತವ್ಯ ಹೂಡಿರುವ ಪ್ರಧಾನಿ ನರೇಂದ್ರ ಮೋದಿ, ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದು, ಕೋಲಾರ, ಚನ್ನಪಟ್ಟಣ, ಬೇಲೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ.

PM Narendra Modi: ನಾಳೆಯೂ ಭರ್ಜರಿ ಪ್ರಚಾರ ನಡೆಸಲಿದ್ದಾರೆ ಪ್ರಧಾನಿ ಮೋದಿ: ಇಲ್ಲಿದೆ ಮೋದಿ ಯೋಜನೆಯ ಸಂಪೂರ್ಣ ಮಾಹಿತಿ
ಪ್ರಧಾನಿ ನರೇಂದ್ರ ಮೋದಿ

Updated on: Apr 29, 2023 | 9:47 PM

ಬೆಂಗಳೂರು: ಶನಿವಾರ ಬೀದರ್​ಗೆ ಆಗಮಿಸಿದ್ದ ಪ್ರಧಾನಿ ಮೋದಿ (PM Modi) ಹುಮ್ನಾಬಾದ್​, ವಿಜಯಪುರ, ಕುಡಚಿಯಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದರು. ಬಳಿಕ ಸಂಜೆ ಬೆಂಗಳೂರಿಗೆ ಆಗಮಿಸಿದ್ದು, ಮಾಗಡಿ ರಸ್ತೆಯ ನೈಸ್​ ಜಂಕ್ಷನ್​ನಿಂದ ಸುಮನಹಳ್ಳಿವರೆಗೆ ಬೃಹತ್​ ರೋಡ್​ ಶೋ ಮಾಡಿದರು. ಸದ್ಯ ರಾಜಭವನದಲ್ಲಿ ಪ್ರಧಾನಿ ಮೋದಿ ವಾಸ್ತವ್ಯ ಹೂಡಿದ್ದಾರೆ. ನಾಳೆಯೂ ಭರ್ಜರಿ ಪ್ರಚಾರ ನಡೆಸಲಿರುವ ಪ್ರಧಾನಿ ಮೋದಿ, ಭಾನುವಾರ ಬೆಳಗ್ಗೆ 10.35ಕ್ಕೆ ರಾಜಭವನದಿಂದ ಹೆಲಿಪ್ಯಾಡ್​ಗೆ ತೆರಳಲಿದ್ದಾರೆ. ಬಳಿಕ ಹಳೇ ಮೈಸೂರು ಭಾಗದಲ್ಲಿ ಪ್ರಚಾರ, ಕೋಲಾರ, ಚನ್ನಪಟ್ಟಣ, ಬೇಲೂರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ ಮೈಸೂರಿನಲ್ಲಿ ರೋಡ್​ ಶೋ ನಡೆಸಲಿದ್ದಾರೆ.

ಭಾನುವಾರದ ಪ್ರಧಾನಿ ಮೋದಿ ಯೋಜನೆ ಹೀಗಿದೆ

  • ಬೆಳಗ್ಗೆ 10.45ಕ್ಕೆ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ
  • ಬೆಳಗ್ಗೆ 10.50ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಕೋಲಾರದತ್ತ ಪ್ರಯಾಣ
  • ಬೆಳಗ್ಗೆ 11.20ಕ್ಕೆ ಕೋಲಾರ​​ ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಬೆಳಗ್ಗೆ 11.25ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದತ್ತ ಪ್ರಧಾನಿ ಪ್ರಯಾಣ
  • ಬೆಳಗ್ಗೆ 11.30ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಲಿರುವ ಪ್ರಧಾನಿ
  • ಬೆಳಗ್ಗೆ 11.30ರಿಂದ ಮಧ್ಯಾಹ್ನ 12.15ರವರೆಗೆ ಸಮಾವೇಶದಲ್ಲಿ ಭಾಗಿ
  • ಮಧ್ಯಾಹ್ನ 12.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಮಧ್ಯಾಹ್ನ 12.25ಕ್ಕೆ ಹೆಲಿಪ್ಯಾಡ್​​ ತಲುಪಲಿರುವ ಪ್ರಧಾನಿ ನರೇಂದ್ರಮೋದಿ
  • ಮಧ್ಯಾಹ್ನ 12.30ಕ್ಕೆ MI-17 ಕಾಪ್ಟರ್​​ನಲ್ಲಿ ಚನ್ನಪಟ್ಟಣದತ್ತ ಪ್ರಯಾಣ
  • ಮಧ್ಯಾಹ್ನ 1.15ಕ್ಕೆ ಚನ್ನಪಟ್ಟಣ ಹೆಲಿಪ್ಯಾಡ್​ಗೆ ಬಂದಿಳಿಯಲಿರುವ ಮೋದಿ
  • ಮಧ್ಯಾಹ್ನ 1.20ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
  • ಮಧ್ಯಾಹ್ನ 1.25ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
  • ಮಧ್ಯಾಹ್ನ 1.30ರಿಂದ 2.15ರವರೆಗೆ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಭಾಗಿ
  • ಮಧ್ಯಾಹ್ನ 2.20ಕ್ಕೆ ಸಮಾವೇಶ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಮಧ್ಯಾಹ್ನ 2.25ಕ್ಕೆ ಹೆಲಿಪ್ಯಾಡ್​ ತಲುಪಿರುವ ಪ್ರಧಾನಿ ನರೇಂದ್ರ ಮೋದಿ
  • ಮಧ್ಯಾಹ್ನ 2.30ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಬೇಲೂರಿನತ್ತ ಪ್ರಯಾಣ
  • ಮಧ್ಯಾಹ್ನ 3.30ಕ್ಕೆ ಬೇಲೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಮಧ್ಯಾಹ್ನ 3.35ಕ್ಕೆ ಹೆಲಿಪ್ಯಾಡ್​ನಿಂದ ಸಮಾವೇಶದ ಸ್ಥಳದತ್ತ ಪ್ರಯಾಣ
  • ಮಧ್ಯಾಹ್ನ 3.40ಕ್ಕೆ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಭಾಗಿ
  • ಮಧ್ಯಾಹ್ನ 3.45ರಿಂದ ಸಂಜೆ 4.30ರವರೆಗೆ ಸಾರ್ವಜನಿಕ ಸಮಾವೇಶದಲ್ಲಿ ಭಾಗಿ
  • ನಾಳೆ ಸಂಜೆ 4.35ಕ್ಕೆ ಸಮಾವೇಶದ ಸ್ಥಳದಿಂದ ಹೆಲಿಪ್ಯಾಡ್​ನತ್ತ ಪ್ರಯಾಣ
  • ಸಂಜೆ 4.40ಕ್ಕೆ ಬೇಲೂರು ಹೆಲಿಪ್ಯಾಡ್​ಗೆ​​ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 4.45ಕ್ಕೆ MI-17 ಹೆಲಿಕಾಪ್ಟರ್​​ನಲ್ಲಿ ಮೈಸೂರಿನತ್ತ ಮೋದಿ ಪ್ರಯಾಣ
  • ಸಂಜೆ 5.35ಕ್ಕೆ ಮೈಸೂರು ಹೆಲಿಪ್ಯಾಡ್​ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 5.40ಕ್ಕೆ ಹೆಲಿಪ್ಯಾಡ್​​ನಿಂದ ವಿದ್ಯಾಪೀಠ ವೃತ್ತದತ್ತ ಮೋದಿ ಪ್ರಯಾಣ
  • ಸಂಜೆ 5.45ಕ್ಕೆ ಮೈಸೂರು ವಿದ್ಯಾಪೀಠ ವೃತ್ತ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 5.45ರಿಂದ ಸಂಜೆ 6.30ರವರೆಗೆ ರೋಡ್​ ಶೋ ನಡೆಸಲಿರುವ ಪ್ರಧಾನಿ
  • ಸಂಜೆ 6.35ಕ್ಕೆ ಬನ್ನಿಮಂಟಪದ LIC ವೃತ್ತದಿಂದ ಏರ್​ಪೋರ್ಟ್​​ನತ್ತ ಮೋದಿ
  • ಸಂಜೆ 6.55ಕ್ಕೆ ಮೈಸೂರು ವಿಮಾನ ನಿಲ್ದಾಣ ತಲುಪಲಿರುವ ಪ್ರಧಾನಿ ಮೋದಿ
  • ಸಂಜೆ 7 ಗಂಟೆಗೆ ಸೇನಾ ವಿಮಾನದಲ್ಲಿ ದೆಹಲಿಯತ್ತ ಪ್ರಧಾನಿ ಮೋದಿ ಪ್ರಯಾಣ

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 9:23 pm, Sat, 29 April 23

ಗಂಗಾಧರ​ ಬ. ಸಾಬೋಜಿ

ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ರಬಕವಿ ನನ್ನೂರು. ಡಿಗ್ರಿ ಬಳಿಕ ಮನಸ್ಸು ವಾಲಿದ್ದು ಮಾಧ್ಯಮ ಕ್ಷೇತ್ರದ ಕಡೆ. ಹಾಗಾಗಿ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂಎ ಪತ್ರಿಕೋದ್ಯಮ ಪದವಿ ಮಾಡಿದೆ. ಆ ಸಂದರ್ಭದಲ್ಲಿಯೇ ಲೋಕಲ್ ಚಾನೆಲ್​ನಲ್ಲಿ ಸುದ್ದಿ ಬರವಣಿಗೆ, ಆ್ಯಂಕರಿಂಗ್​, ವೈಯಿಸ್​ ಓವರ್​, ಎಡಿಟಿಂಗ್​ ಕಲಿಕೆ. ಬಳಿಕ ಟಿವಿ6 ಸುದ್ದಿ ವಾಹಿನಿಯಲ್ಲಿ ಇಂಟರ್ನ್‌ಶಿಪ್. ನಂತರ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಬೋಧನಾ ಸಹಾಯಕನಾಗಿ ನನ್ನ ಜ್ಞಾನವನ್ನು ಇತತರಿಗೆ ಹಂಚುವ ಕೆಲಸ. ಇದೀಗ ‘ಉತ್ತಮ ಸಮಾಜಕ್ಕಾಗಿ’ ನನ್ನ ಕಾಯಕ. ಓದು, ಬರವಣಿಗೆ, ಸಿನಿಮಾ ನನ್ನ ಆಸಕ್ತಿ.

Read More
Loading...
Unable to load recommendations.
Follow Us