Modi Bengaluru Road Show: ಬೆಂಗಳೂರಿನಲ್ಲಿ ಜನಸಾಗರದ ನಡುವೆ ಪ್ರಧಾನಿ ಮೋದಿ ರೋಡ್ ಶೋ
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಜಯಘೋಷಗಳು ಮೊಳಗಿದವು. ಮೋದಿ ರೋಡ್ ಶೋ ಫೋಟೋಗಳು ಇಲ್ಲಿವೆ.
Updated on: Apr 29, 2023 | 8:42 PM

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೃಹತ್ ರೋಡ್ ಶೋ ನಡೆಸಿದರು. ಈ ವೇಳೆ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದು, ಜಯಘೋಷಗಳು ಮೊಳಗಿದವು.

ನೈಸ್ ರೋಡ್ ಜಂಕ್ಷನ್‌ನಿಂದ ಪ್ರಧಾನಿ ಮೋದಿ ರೋಡ್ ಶೋ ಆರಂಭಿಸಿದರು.

ಸುಮಾರು 5.3 ಕಿ.ಮೀ. ವರೆಗೆ ತೆರೆದ ವಾಹನದಲ್ಲಿ ಮೋದಿ ರೋಡ್ಶೋ ನಡೆಸಿದರು.

ಬಿಜೆಪಿ ಕಾರ್ಯಕರ್ತರು ಪ್ರಧಾನಿ ಮೋದಿ ಮೇಲೆ ಹೂವಿನ ಮಳೆಗರೆದರು.

ತೆರೆದ ವಾಹನದಲ್ಲಿ ಪ್ರಧಾನಿ ಮೋದಿ ಜೊತೆ ಕೇಂದ್ರದ ಮಾಜಿ ಸಚಿವ ಡಿ.ವಿ.ಸದಾನಂದಗೌಡ, ಛಲವಾದಿ ನಾರಾಯಣಸ್ವಾಮಿ ಇದ್ದರು.

ಮೋದಿ ನೋಡಲು ರಸ್ತೆಯ ಇಕ್ಕೆಲಗಳಲ್ಲೂ ಕಾರ್ಯಕರ್ತರು, ಮಕ್ಕಳು, ವೃದ್ಧರು, ಯುವಕ, ಯುವತಿಯರು, ಗ್ರಹಿಣಿಯರು ಜಮಾಯಿಸಿದ್ದರು.

ಈಸ್ಟ್ ವೆಸ್ಟ್ ಜಂಕ್ಷನ್ ಬಳಿ ಡೊಳ್ಳು ಕುಣಿತ, ವೀರಗಾಸೆ ನೃತ್ಯ ಇತ್ಯಾದಿ ಪ್ರದರ್ಶನಗಳು ನಡೆದವು. ಸುಮನಹಳ್ಳಿವರೆಗೆ ನಡೆದ ರೋಡ್ ಶೋದಲ್ಲಿ ಮೋದಿ ಅವರು ಕಾರ್ಯಕರ್ತರತ್ತ, ಅಭಿಮಾನಿಗಳತ್ತ ಕೈಬೀಸಿದರು. ಇಲ್ಲಿಂದ ಕಾರು ಮೂಲಕ ರಾಜಭವನದತ್ತ ತೆರಳಿದರು.
























