Updated on: Apr 29, 2023 | 11:07 PM
IPL 2023: ಇಂಡಿಯನ್ ಪ್ರೀಮಿಯರ್ ಲೀಗ್ನ 16ನೇ ಆವೃತ್ತಿಯಲ್ಲಿ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುತ್ತಿರುವ ಮೊಹಮ್ಮದ್ ಸಿರಾಜ್ ವಿಶೇಷ ಸಾಧನೆ ಮಾಡಿದ್ದಾರೆ. ಅದು ಕೂಡ ಡಾಟ್ ಬಾಲ್ಗಳ ಮೂಲಕ ಎಂಬುದು ವಿಶೇಷ.
ಹೌದು, ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ತಂಡ ಇತರೆ ಬೌಲರ್ಗಳು ಕಳಪೆ ಪ್ರದರ್ಶನ ನೀಡಿದರೂ ಮೊಹಮ್ಮದ್ ಸಿರಾಜ್ ಮಾತ್ರ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಕಳೆದ 8 ಪಂದ್ಯಗಳಲ್ಲಿ 32 ಓವರ್ ಎಸೆದಿರುವ ಸಿರಾಜ್ ಇದುವರೆಗೆ 14 ವಿಕೆಟ್ಗಳನ್ನು ಕಬಳಿಸಿದ್ದಾರೆ.
ವಿಶೇಷ ಎಂದರೆ 32 ಓವರ್ಗಳಲ್ಲಿ ಮೊಹಮ್ಮದ್ ಸಿರಾಜ್ ಒಟ್ಟು 100 ಡಾಟ್ ಬಾಲ್ಗಳನ್ನು ಎಸೆದಿದ್ದಾರೆ. ಅಂದರೆ 192 ಎಸೆತಗಳಲ್ಲಿ ಸಿರಾಜ್ ನೂರು ಎಸೆತಗಳಲ್ಲಿ ಯಾವುದೇ ರನ್ ನೀಡಿಲ್ಲ. ಈ ಮೂಲಕ ಐಪಿಎಲ್ ಸೀಸನ್ 16 ನಲ್ಲಿ 100 ಡಾಟ್ ಬಾಲ್ ಎಸೆದ ಮೊದಲ ಬೌಲರ್ ಎನಿಸಿಕೊಂಡರು.
ಇನ್ನು 8 ಪಂದ್ಯಗಳಲ್ಲಿ 7.31 ಸರಾಸರಿಯಲ್ಲಿ 234 ರನ್ ನೀಡಿರುವ ಸಿರಾಜ್ ಒಟ್ಟು 14 ವಿಕೆಟ್ ಕಬಳಿಸಿದ್ದಾರೆ. ಈ ಮೂಲಕ ಪರ್ಪಲ್ ಕ್ಯಾಪ್ ರೇಸ್ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಮತ್ತೊಂದೆಡೆ ಗುಜರಾತ್ ಟೈಟಾನ್ಸ್ ಪರ ಮೊಹಮ್ಮದ್ ಶಮಿ ಕೂಡ ಉತ್ತಮ ದಾಳಿ ಸಂಘಟಿಸುತ್ತಿದ್ದು, 31 ಓವರ್ಗಳಲ್ಲಿ 100 ಡಾಟ್ ಬಾಲ್ ಎಸೆದಿದ್ದಾರೆ. ಅಲ್ಲದೆ 236 ರನ್ ನೀಡಿ 13 ವಿಕೆಟ್ ಕಬಳಿಸಿದ್ದಾರೆ.
ಇದೀಗ ಮೊಹಮ್ಮದ್ ಸಿರಾಜ್ (14), ರಶೀದ್ ಖಾನ್ (14), ಅರ್ಷದೀಪ್ ಸಿಂಗ್ (14), ತುಷಾರ್ ದೇಶಪಾಂಡೆ (14) ಹಾಗೂ ಮೊಹಮ್ಮದ್ ಶಮಿ (13) ಪರ್ಪಲ್ ಕ್ಯಾಪ್ ರೇಸ್ನಲ್ಲಿ ಟಾಪ್-5 ನಲ್ಲಿದ್ದಾರೆ.