- Kannada News Photo gallery Cricket photos IPL 2023 RCB vs LSG: Finn Allen Will Get Chance In RCB Playing 11
IPL 2023: 3 ವರ್ಷಗಳಿಂದ RCB ತಂಡದಲ್ಲಿದ್ದರೂ ಒಂದೇ ಒಂದು ಚಾನ್ಸ್ ನೀಡಿಲ್ಲ..!
IPL 2023 Kannada: ಮಧ್ಯಮ ಕ್ರಮಾಂಕದಲ್ಲಿ RCB ಸತತ ವೈಫಲ್ಯ ಅನುಭವಿಸಿದರೂ ಟೀಮ್ ಬ್ಯಾಟಿಂಗ್ ಲೈನಪ್ನಲ್ಲಿ ಮಹತ್ವದ ಬದಲಾವಣೆ ಮಾಡುತ್ತಿಲ್ಲ.
Updated on: Apr 29, 2023 | 10:08 PM

IPL 2023: ಮಾರ್ಚ್ 10, 2021...ಆರ್ಸಿಬಿ ತಂಡದಲ್ಲಿದ್ದ ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಜೋಶ್ ಫಿಲಿಪೆ ಗಾಯಗೊಂಡಿದ್ದರು. ಹೀಗಾಗಿ ಅವರು ಐಪಿಎಲ್ ಟೂರ್ನಿಯಿಂದ ಹೊರಗುಳಿಯಲು ನಿರ್ಧರಿಸಿದ್ದರು. ಅತ್ತ ನ್ಯೂಜಿಲೆಂಡ್ ಟಿ20 ಲೀಗ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಫಿನ್ ಅಲೆನ್ಗೆ ಅದೃಷ್ಟ ಖುಲಾಯಿಸಿತು. ಜೋಶ್ ಫಿಲಿಪೆ ಸ್ಥಾನದಲ್ಲಿ ನ್ಯೂಜಿಲೆಂಡ್ನ ಯುವ ಆಟಗಾರ ಆರ್ಸಿಬಿ ತಂಡಕ್ಕೆ ಆಯ್ಕೆಯಾದರು.

ಇದು ನಡೆದು ಇದೀಗ 3 ವರ್ಷಗಳೇ ಕಳೆದಿವೆ. ಅಂದರೆ 3 ಸೀಸನ್ ಐಪಿಎಲ್ ಮುಗಿದಿದೆ. ಇದಾಗ್ಯೂ ಫಿನ್ ಅಲೆನ್ಗೆ ಒಂದೇ ಒಂದು ಪಂದ್ಯವಾಡಲು ಆರ್ಸಿಬಿ ಅವಕಾಶ ನೀಡಿಲ್ಲ ಎಂಬುದೇ ಅಚ್ಚರಿ. ಅತ್ತ ಆರ್ಸಿಬಿ ಫ್ರಾಂಚೈಸಿ ಕಳೆದೆರಡು ವರ್ಷಗಳಿಂದ ಅಲೆನ್ ಅವರನ್ನು ತಂಡದಿಂದ ಕೈ ಬಿಟ್ಟಿಲ್ಲ, ಇತ್ತ ಚಾನ್ಸ್ ಅನ್ನೂ ಕೂಡ ನೀಡುತ್ತಿಲ್ಲ.

ಈ 3 ವರ್ಷಗಳ ನಡುವೆ ಫಿನ್ ಅಲೆನ್ ನ್ಯೂಜಿಲೆಂಡ್ ರಾಷ್ಟ್ರೀಯ ತಂಡದ ಪರ ಪದಾರ್ಪಣೆ ಮಾಡಿದ್ದಾರೆ. ವಿವಿಧ ಲೀಗ್ಗಳಲ್ಲೂ ಅಬ್ಬರಿಸಿದ್ದಾರೆ. ಅಲ್ಲದೆ ಕಿವೀಸ್ ತಂಡದ ಆರಂಭಿಕನಾಗಿ ಸ್ಪೋಟಕ ಇನಿಂಗ್ಸ್ ಆಡಿದ್ದಾರೆ. ಅಲ್ಲದೆ 28 ಪಂದ್ಯಗಳಲ್ಲಿ 160 ರ ಸ್ಟ್ರೈಕ್ ರೇಟ್ನಲ್ಲಿ 616 ರನ್ ಬಾರಿಸಿದ್ದಾರೆ.

ಆದರೆ ಐಪಿಎಲ್ಗೆ ಆಗಮಿಸಿದರೆ ಫಿನ್ ಅಲೆನ್ ಬೆಂಚ್ ಕಾದಿದ್ದೇ ಬಂತು. ಇದೀಗ ಆರ್ಸಿಬಿ ಪರ ಮೂರು ವರ್ಷವನ್ನು ಪೂರೈಸಿ ಮತ್ತೆ ನ್ಯೂಜಿಲೆಂಡ್ಗೆ ಮರಳಿದ್ದಾರೆ.

ಅಚ್ಚರಿ ಎಂದರೆ ಈ ಬಾರಿ ಹಲವು ಆಟಗಾರರು ವಿಫಲರಾದರೂ ಒಂದೇ ಒಂದು ಪಂದ್ಯದಲ್ಲಿ ಅಲೆನ್ಗೆ ಚಾನ್ಸ್ ನೀಡಿಲ್ಲ ಎಂಬುದು. ಅದರಲ್ಲೂ ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿ ಸತತ ವೈಫಲ್ಯ ಅನುಭವಿಸಿದರೂ ಟೀಮ್ ಬ್ಯಾಟಿಂಗ್ ಲೈನಪ್ನಲ್ಲಿ ಮಹತ್ವದ ಬದಲಾವಣೆ ಮಾಡಿಲ್ಲ. ಅಲ್ಲದೆ ಇಂಪ್ಯಾಕ್ಟ್ ಪ್ಲೇಯರ್ ಆಗಿ ಅಲೆನ್ ಅವರನ್ನು ಕಣಕ್ಕಿಳಿಸಲು ಅವಕಾಶ ಇದ್ದರೂ, ಅಂತಹ ಪ್ರಯೋಗಕ್ಕೂ ಆರ್ಸಿಬಿ ಮುಂದಾಗಿಲ್ಲ.

ಇನ್ನು 3 ಸೀಸನ್ಗಳಲ್ಲಿ RCB ಒಟ್ಟು 45 ಪಂದ್ಯಗಳನ್ನಾಡಿದೆ. ಈ 45 ಮ್ಯಾಚ್ಗಳಲ್ಲೂ ಅಲೆನ್ ಬೆಂಚ್ ಕಾದಿದ್ದೇ ಬಂತು. ಇನ್ನು ಮುಂದಿನ ಸೀಸನ್ನಲ್ಲೂ ಆರ್ಸಿಬಿ ಫಿನ್ ಅಲೆನ್ ಅವರನ್ನು ತಂಡದಲ್ಲೇ ಉಳಿಸಿಕೊಂಡರೆ ಬೆಂಚ್ ಕಾಯುವುದರಲ್ಲಿ ಅರ್ಧಶತಕ ಬಾರಿಸಿದರೂ ಅಚ್ಚರಿಪಡಬೇಕಿಲ್ಲ.

RCB ತಂಡ ಹೀಗಿದೆ: ಫಾಫ್ ಡುಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಮೈಕೆಲ್ ಬ್ರೇಸ್ವೆಲ್, ದಿನೇಶ್ ಕಾರ್ತಿಕ್, ಅನೂಜ್ ರಾವತ್, ಫಿನ್ ಅಲೆನ್, ಜೋಶ್ ಹ್ಯಾಝಲ್ವುಡ್, ಮೊಹಮ್ಮದ್ ಸಿರಾಜ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಹಿಮಾಂಶು ಶರ್ಮಾ, ರಜನ್ ಕುಮಾರ್, ಅವಿನಾಶ್ ಸಿಂಗ್, ಗ್ಲೆನ್ ಮ್ಯಾಕ್ಸ್ವೆಲ್, ವನಿಂದು ಹಸರಂಗ, ಮಹಿಪಾಲ್ ಲೋಮ್ರರ್, ಶಹಬಾಝ್ ಅಹ್ಮದ್, ಹರ್ಷಲ್ ಪಟೇಲ್, ಆಕಾಶ್ ದೀಪ್, ಡೇವಿಡ್ ವಿಲ್ಲಿ, ಸುಯಶ್ ಪ್ರಭುದೇಸಾಯಿ, ಮನೋಜ್ ಭಾಂಡಗೆ, ಸೋನು ಯಾದವ್, ವೇಯ್ನ್ ಪಾರ್ನೆಲ್, ವೈಶಾಕ್ ವಿಜಯಕುಮಾರ್.
























