ಮೈಸೂರು: ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ (Siddaramaiah) ಪರ ನಟ ಶಿವರಾಜ್ ಕುಮಾರ್ (Shiva Rajkumar) ಪ್ರಚಾರ ನಡೆಸುತ್ತಿದ್ದಾರೆ. ಈ ಬಗ್ಗೆ ಸಂಸದ ಪ್ರತಾಪ್ ಸಿಂಹ (Pratap Simha) ಅವರು ಟ್ವಿಟರ್ ಹಾಗೂ ಫೇಸ್ಬುಕ್ನಲ್ಲಿ ಶಿವಣ್ಣಗೆ ಟಾಂಗ್ ಕೊಟ್ಟಿದ್ದಾರೆ. ದಿವಂಗತ ನಟ ಪುನೀತ್ ರಾಜ್ಕುಮಾರ್ ಹೆಸರಿನಲ್ಲಿ ಸಚಿವ ಸೋಮಣ್ಣ (V Somanna) ಅವರು ಆಸ್ಪತ್ರೆ ಕಟ್ಟಿದ್ದಾರೆ. ಈ ಆಸ್ಪತ್ರೆ ಉದ್ಘಾಟನೆಗೆ ಆಗಮಿಸಿದ್ದ ರಾಘವೇಂದ್ರ ರಾಜ್ಕುಮಾರ್, ಸೋಮಣ್ಣರ ಕಾರ್ಯವನ್ನು ಶ್ಲಾಘಿಸಿದ್ದರು. ಇದನ್ನೇ ಮುಂದಿಟ್ಟುಕೊಂಡು ಪ್ರತಾಪ್ ಸಿಂಹ ಅವರು ಶಿವರಾಜ್ ಕುಮಾರ್ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
“ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನ ಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣನ ಪರವಾಗಿ ಪ್ರಚಾರಕ್ಕೆ ಇಳಿದ ಶಿವಣ್ಣ! ಅವರವರ ಭಾವ ಭಕುತಿಗೆ” ಎಂದು ಪ್ರತಾಪ್ ಸಿಂಹ ಅವರು ಟ್ವೀಟ್ ಮಾಡಿ ಸೋಮಣ್ಣ ಅವರನ್ನು ರಾಘಣ್ಣ ಹೊಗಳಿದ ವಿಡಿಯೋ ಹಾಗೂ ಶಿವಣ್ಣ ಸಿದ್ದರಾಮಯ್ಯ ಪರ ಪ್ರಚಾರ ನಡೆಸುತ್ತಿರುವ ಫೋಟೋ ಹಂಚಿಕೊಂಡಿದ್ದಾರೆ.
ಪುನೀತ್ ರಾಜಕುಮಾರ್ ಸರ್ ಹೆಸರಿನಲ್ಲಿ ಬಡವರಿಗಾಗಿ ಆಸ್ಪತ್ರೆ ಕಟ್ಟಿದ ಸೋಮಣ್ಣ, ಮನಮೆಚ್ಚಿ ಶ್ಲಾಘಿಸಿದ ರಾಘಣ್ಣ, ಸಿದ್ರಾಮಣ್ಣ ಪರವಾಗಿ ಪ್ರಚಾರಕ್ಕಿಳಿದ ಶಿವಣ್ಣ!
ಅವರವ ಭಾವ ಭಕುತಿಗೆ… pic.twitter.com/AwsuZHzmHA
— Pratap Simha (@mepratap) May 4, 2023
ಇದನ್ನೂ ಓದಿ: Karnataka Assembly Polls; ಕಾಂಗ್ರೆಸ್ ನಾಯಕರಿಗೆ ರಾಮನೂ ಬೇಕಿಲ್ಲ ಹನುಮನೂ ಬೇಕಿಲ್ಲ: ವಿ ಸೋಮಣ್ಣ
ಕೊರೋನಾದಿಂದ ಆರ್ಥಿಕತೆ ಬುಡಮೇಲಾದ ಹಿನ್ನೆಲೆ ಪುನೀತ್ ಹೆಸರಿನಲ್ಲಿ ಸೋಮಣ್ಣ ಅವರು ಉಚಿತ ಆಸ್ಪತ್ರೆ ಕಟ್ಟಲಾಗಿದೆ. ಈ ಬಗ್ಗೆ ಉದ್ಘಾಟನೆಗೆ ಆಗಮಿಸಿದ್ದ ರಾಘವೇಂದ್ರ ಅವರು ಸೋಮಣ್ಣ ಅವರ ಕಾರ್ಯ ಹೊಗಳಿದ್ದರು. 2023ರ ಈ ಕಾಲದಲ್ಲಿ ಬಡವರಿಗಾಗಿ ಇಂತಹ ಉಚಿತ ಆಸ್ಪತ್ರೆ ಯಾರು ಕಟ್ಟುತ್ತಾರೆ? ಎಷ್ಟು ಪುಣ್ಯ ಮಾಡಿದ್ದೇವೆ ನಾವು ನೀವು, ಸೋಮಣ್ಣ ಅವರಿಗೆ ಸೆಲ್ಯುಟ್ ಬಿಟ್ಟರೆ ಬೇರೆ ಏನೂ ಹೇಳಲು ಆಗಲ್ಲ ಎಂದಿದ್ದರು.
ಅಲ್ಲದೆ, ಈ ಆಸ್ಪತ್ರೆಯನ್ನು ಆಸ್ಪತ್ರೆ ಅಂತ ಭಾವಿಸಬೇಡಿ, ದೇವಸ್ಥಾನ ಅಂತ ಭಾವಿಸಿ. ಸೋಮಣ್ಣ ಅವರೆ ನಿಮ್ಮ ಈ ಕಾರ್ಯಕ್ಕೆ ಧನ್ಯವಾದ ಹೇಳಿದರೆ ತುಂಬಾ ಕಡಿಮೆಯಾಗುತ್ತದೆ. ನಿಮಗೊಂದು ಸಾಷ್ಟಾಂಗ ನಮಸ್ಕಾರ ಹಾಕಿದರೆ ಸರಿ ಅನಿಸುತ್ತದೆ ಎಂದು ರಾಘಣ್ಣ ಅವರು ಸೋಮಣ್ಣ ಅವರನ್ನು ಹೊಗಳಿಕೆಯ ಮಾತುಗಳನ್ನಾಡಿದ್ದರು.
ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ಪ್ರತಾಪ್ ಸಿಂಹ, ಡಾ.ರಾಜ್ ಕುಟುಂಬವನ್ನು ರಾಜಕೀಯ ಹೊರತಾಗಿ ನೋಡುತ್ತೇವೆ ಎಂದರು. ಶಿವಮೊಗ್ಗದಲ್ಲಿ ಯಡಿಯೂರಪ್ಪ ವಿರುದ್ಧ ಗೀತಾ ಸ್ಪರ್ಧೆ ಮಾಡಿದ್ದರು. ಆಗಲೂ ನಟ ಶಿವರಾಜ್ಕುಮಾರ್ ಪ್ರಚಾರಕ್ಕೆ ಹೋಗಿರಲಿಲ್ಲ. ಡಾ.ರಾಜ್ ಕುಟುಂಬವನ್ನು ರಾಜಕೀಯದ ಆಚೆಗೆ ನೋಡುತ್ತಾರೆ. ಶಿವಮೊಗ್ಗ ಕ್ಷೇತ್ರದಲ್ಲಿ ಗೀತಾ ಸ್ಪರ್ಧಿಸಿದಾಗಲೂ ಸರಿ ಕಾಣಲಿಲ್ಲ. ಬಿಜೆಪಿ ಸಂಸದನಾಗಿ ಈ ವಿಚಾರವನ್ನು ಹೇಳುತ್ತಿಲ್ಲ. ಗೀತಾ ಶಿವರಾಜ್ಕುಮಾರ್ ರಾಜಕೀಯ ಕುಟುಂಬದಿಂದ ಬಂದಿದ್ದು. ಅವರ ತಂದೆ ಎಸ್.ಬಂಗಾರಪ್ಪ ಕರ್ನಾಟಕದ ಸಿಎಂ ಆಗಿದ್ದವರು. ಗೀತಾ ಶಿವರಾಜ್ಕುಮಾರ್ ಪ್ರಚಾರಕ್ಕೆ ಬಂದರೆ ತಕರಾರು ಇಲ್ಲ ಎಂದರು.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Thu, 4 May 23