Karnataka Assembly Polls; ಕಾಂಗ್ರೆಸ್ ನಾಯಕರಿಗೆ ರಾಮನೂ ಬೇಕಿಲ್ಲ ಹನುಮನೂ ಬೇಕಿಲ್ಲ: ವಿ ಸೋಮಣ್ಣ
ಕಾಂಗ್ರೆಸ್ ಪಕ್ಷದ ನಾಯಕರಿಗೆ ತಲೆ ಸರಿಯಿಲ್ಲ, ರಾಮನ ಭಕ್ತ ಅಂಜನೇಯನನ್ನೇ ಇವರು ನಿಷೇಧಿಸುತ್ತಾರೆಂದರೆ ಅದಕ್ಕೇನು ಅರ್ಥ? ಎಂದು ಸೋಮಣ್ಣ ಕೇಳಿದರು
ಚಾಮರಾಜನಗರ: ನಿನ್ನೆ ವರುಣಾದಲ್ಲಿ ಅಮಿತ್ ಶಾ (Amit Shah) ಜೊತೆ ಪ್ರಚಾರ ನಡೆಸಿದ್ದ ಸಚಿವ ವಿ ಸೋಮಣ್ಣ (V Somanna) ಇಂದು ಚಾಮರಾಜನಗರ ಕ್ಷೇತ್ರದಲ್ಲಿ ಬಿರುಸಿನಿಂದ ಪ್ರಚಾರ ನಡೆಸಿದರು. ಕ್ಷೇತ್ರದ ಸೋಮವಾರಪೇಟೆ ಮತ್ತು ರಾಮಸಮುದ್ರದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸೋಮಣ್ಣ ಪ್ರಚಾರ ನಡೆಸಿದರು. ಏತನ್ಮಧ್ಯೆ, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಅವರು, ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಬಜರಂಗ ದಳವನ್ನು (Bajrang Dal) ನಿಷೇಧಿಸುವುದನ್ನು ಸೇರಿಸಿರುವ ಬಗ್ಗೆ ಕಿಡಿಕಾರಿದರು. ಕಾಂಗ್ರೆಸ್ ಪಕ್ಷದ ನಾಯಕರಿಗೆ ತಲೆ ಸರಿಯಿಲ್ಲ, ರಾಮನ ಭಕ್ತ ಅಂಜನೇಯನನ್ನೇ ಇವರು ನಿಷೇಧಿಸುತ್ತಾರೆಂದರೆ ಅದಕ್ಕೇನು ಅರ್ಥ? ಅವರಿಗೆ ರಾಮ, ಹನುಮ ಮತ್ತು ಬೇರೆ ದೇವರುಗರು ಬೇಕಿಲ್ಲವೆಂದರೆ, ಗುಡಿಗಳಿಗೆ ಯಾಕೆ ಹೋಗುತ್ತಾರೆ, ಪೂಜೆ ಪುನಸ್ಕಾರ ಯಾಕೆ ಮಾಡುತ್ತಾರೆ, ಹಣೆಗೆ ವಿಭೂತಿ, ಕುಂಕುಮ ಹಚ್ಚೋದ್ಯಾಕೆ ಅಂತ ಸೋಮಣ್ಣ ಖಾರವಾಗಿ ಪ್ರಶ್ನಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ