Karnataka Assembly Polls; ಹನುಮ ಮತ್ತು ಬಜರಂಗ ದಳ ನಡುವೆ ಎಲ್ಲಿಯ ಸಂಬಂಧ, ಹನುಮ ನಾವು ಆರಾಧಿಸುವ ದೇವರು, ಬಜರಂಗ ದಳ ಸಂಘಟನೆ: ಡಿಕೆ ಶಿವಕುಮಾರ್
ಅವರಿಗೆ ರಾಜ್ಯದ ಮೂಲ ಸಮಸ್ಯೆಗಳ ಬಗ್ಗೆ ಮಾತಾಡುವುದು ಬೇಕಿಲ್ಲ, ಇಲ್ಲಸಲ್ಲದ ವಿಚಾರಗಳನ್ನು ಸೃಷ್ಟಿಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಇಂದು ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಡುವಾಗ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ (Congress manifesto) ಬಜರಂಗ ದಳ (Bajrang Dal) ನಿಷೇಧಿಸುವ ವಿಚಾರ ಸೇರಿಸಿದ್ದನ್ನು ಸಮರ್ಥಿಸಿಕೊಂಡರು. ಬಜರಂಗ ದಳವನ್ನು ನಿಷೇಧಿಸುವ ಮಾತಾಡಿದರೆ ಬಿಜೆಪಿ ನಾಯಕರಿಗೆ ಯಾಕೆ ಗಾಬರಿ? ಬಜರಂಗ ದಳ ಮತ್ತು ಹನುಮನ ನಡುವೆ ಎಲ್ಲಿಯ ಸಂಬಂಧ? ಅದೊಂದು ಸಂಘಟನೆಯಾದರೆ ಹನುಮ ರಾಮನ ಪರಮ ಭಕ್ತ ಮತ್ತು ನಾವೆಲ್ಲ ಆರಾಧಿಸುವ ದೇವರು, ಎಂದು ಶಿವಕುಮಾರ್ ಹೇಳಿದರು. ತಾನು ಹನುಮನ ಕಟ್ಟಾ ಭಕ್ತ ಎಂದು ಹೇಳಿದ ಅವರು, ಕಾನೂನುಬಾಹಿರ ಕೆಲಸಗಳಲ್ಲಿ ತೊಡಗುವ ಸಂಘಟನೆಗಳನ್ನು ಬ್ಯಾನ್ ಮಾಡುವ ಸಂಕಲ್ಪ ಕಾಂಗ್ರೆಸ್ ಪಕ್ಷ ಮಾಡಿಕೊಂಡಿದೆ ಎಂದರು. ಬಿಜೆಪಿ ನಾಯಕರು ವಿನಾಕಾರಣ ಬಜರಂಗ ದಳದ ಹೆಸರಲ್ಲಿ ಜನರನ್ನು ಪ್ರಚೋದಿಸುತ್ತಿದ್ದಾರೆ. ಅವರಿಗೆ ರಾಜ್ಯದ ಮೂಲ ಸಮಸ್ಯೆಗಳ ಬಗ್ಗೆ ಮಾತಾಡುವುದು ಬೇಕಿಲ್ಲ, ಇಲ್ಲಸಲ್ಲದ ವಿಚಾರಗಳನ್ನು ಸೃಷ್ಟಿಸಿಕೊಂಡು ಜನರನ್ನು ತಪ್ಪುದಾರಿಗೆಳೆಯುತ್ತಿದ್ದಾರೆ ಎಂದು ಶಿವಕುಮಾರ್ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ