Vijaya Sankalp Yatra:ಇಂದು ಕಿತ್ತೂರಿನಲ್ಲಿ ಬಿಜೆಪಿ ಪವರ್ ಶೋ..ನಾಳೆ ಬೀದರ್​ನಲ್ಲಿ ‘ಶಾ’ಗಾಗಿ ಭರ್ಜರಿ ಗಿಫ್ಟ್​ ರೆಡಿ

|

Updated on: Mar 02, 2023 | 9:18 AM

ಇಂದು(ಮಾ.02) ಬೆಳಗಾವಿಯಲ್ಲಿ ರಾಜನಾಥ್ ಸಿಂಗ್ ಬಿಜೆಪಿ ವಿಜಯ ಸಂಕಲ್ಪ ರಥಯಾತ್ರೆಗೆ​ ಚಾಲನೆ ನೀಡಲಿದ್ದಾರೆ. ಮತ್ತೊಂದೆಡೆ ನಾಳೆ ಬೀದರ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಸಿರು ನಿಶಾನೆ ತೋರಲಿದ್ದಾರೆ.

Vijaya Sankalp Yatra:ಇಂದು ಕಿತ್ತೂರಿನಲ್ಲಿ ಬಿಜೆಪಿ ಪವರ್ ಶೋ..ನಾಳೆ ಬೀದರ್​ನಲ್ಲಿ ಶಾಗಾಗಿ ಭರ್ಜರಿ ಗಿಫ್ಟ್​ ರೆಡಿ
ಬಿಜೆಪಿ
Follow us on

ಬೆಳಗಾವಿ/ಬೀದರ್: ವಿಧಾಸಭೆ ಚುನಾವಣೆಗೆ (Karnataka Assembly Elections 2023) ದಿನಾಂಕ ಘೋಷಣೆಗೂ ಮುನ್ನ ರಾಜ್ಯ ರಾಜಕಾರಣದಲ್ಲಿ ಅಬ್ಬರ ಪ್ರಚಾರ ಶುರುವಾಗಿದೆ. ಕಾಂಗ್ರೆಸ್​, ಜೆಡಿಎಸ್ ಹಾಗೂ ಬಿಜೆಪಿ ಯಾತ್ರೆಗಳ ಮೇಲೆ ಯಾತ್ರಗಳನ್ನು ಮಾಡುತ್ತಿವೆ. ಈಗಾಗಲೇ ಬಿಜೆಪಿ ಒಂದು ಸುತ್ತಿ ಯಾತ್ರೆ ಮುಗಿಸಿದ್ದು, ಇದೀಗ ವಿಜಯ ಸಂಕಲ್ಪ (Vijaya Sankalp Yatra) ಎನ್ನುವ ಹೆಸರಿನ ಮೂಲಕ ಯಾತ್ರೆ ಶುರು ಮಾಡಿದೆ. ಇದಕ್ಕೆ ನಿನ್ನೆ(ಮಾ.1) ಮಲೆಮಹಾದೇಶ್ವರ ಬೆಟ್ಟದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಚಾಲನೆ ನೀಡಿದ್ದರು. ಇದೀಗ ಇಂದು(ಮಾ.02) ಬೆಳಗಾವಿಯಲ್ಲಿ ರಾಜನಾಥ್ ಸಿಂಗ್​ ಚಾಲನೆ ಕೊಡಲಿದ್ದಾರೆ. ಮತ್ತೊಂದೆಡೆ ನಾಳೆ ಬೀದರ್​ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಸಿರು ನಿಶಾನೆ ತೋರಲಿದ್ದಾರೆ.

ಇದನ್ನೂ ಓದಿ: Vijaya Sankalp Yatra: ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ; ವಿಜಯ ಸಂಕಲ್ಪ ಯಾತ್ರೆಗೆ ಚಾಲನೆ ನೀಡಿ ನಡ್ಡಾ ಹೇಳಿಕೆ

ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ

ಇಂದು ಕಿತ್ತೂರು ಕರ್ನಾಟಕದಲ್ಲಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಚಾಲನೆ ನೀಡಲಿದ್ದಾರೆ. ಇಂದು ಬೆಳಗ್ಗೆ 11.40 ಕ್ಕೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ರಾಜನಾಥ್ ಸಿಂಗ್, ನಂದಗಡದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಮಾಧಿ ಸ್ಥಳಕ್ಕೆ ಭೇಟಿ ಬಳಿಕ ಮಧ್ಯಾಹ್ನ12.30ಕ್ಕೆ ವಿಜಯ ಸಂಕಲ್ಪ ಯಾತ್ರೆ ಸಮಾವೇಶಕ್ಕೆ ಚಾಲನೆ ನೀಡಲಿದ್ದಾರೆ.

ರಾಜನಾಥ್ ಸಿಂಗ್ ಇಂದು ಬೆಳಗಾವಿ ಜಿಲ್ಲೆ ಎರಡು ಮತಕ್ಷೇತ್ರದಲ್ಲಿ ಪ್ರಚಾರ ಮಾಡಿ ದೆಹಲಿಗೆ ವಾಪಸ್ ಆಗಲಿದ್ದಾರೆ. ನಂತರ ರಾಜ್ಯ ನಾಯಕರಿಂದ ಪ್ರತಿ ದಿನ ಬೆಳಗ್ಗೆ, ಮಧ್ಯಾಹ್ನ ಎರಡು ಮತಕ್ಷೇತ್ರದಲ್ಲಿ ರೋಡ್ ಶೋ, ಸಂಜೆ ಮೂರನೇ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಸಮಾವೇಶ ನಡೆಯಲಿದೆ. ಹೀಗೆ ಕಿತ್ತೂರು ಕರ್ನಾಟಕದ 58 ವಿಧಾನಸಭಾ ಮತಕ್ಷೇತ್ರದಲ್ಲಿ ವಿಜಯ ಸಂಕಲ್ಪ ಯಾತ್ರೆ. ಸಂಚರಿಸಲಿದೆ.

ನಾಳೆ ಬೀದರ್​ನಲ್ಲಿ ಬಿಜೆಪಿ ಪವರ್ ಶೋ

ಬಸವೇಶ್ವರರ ಕರ್ಮ ಭೂಮಿ ಬಸವಕಲ್ಯಾಣಕ್ಕೆ ನಾಳೆ(ಮಾ.03) ಕೇಂದ್ರ ಗೃಹ ಸಚಿವ ಅಮೀತ್ ಶಾ ಆಮಿಸಲಿದ್ದು, ಬಿಜೆಪಿಯ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ನಾಳೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಬೀದರ್ ‌ಏರ್ ಬೇಸ್ ಗೆ ಮುಂಜಾನೆ 11:40ಕ್ಕೆ ಆಗಮಿಸಿ, ಬಸವಕಲ್ಯಾಣದ ಹೆಲಿಪ್ಯಾಡ್​ನಿಂದ ರಸ್ತೆಯ ಮೂಲಕ ಅನುಭವ ಮಂಟಪಕ್ಕೆ ಭೇಟಿ ನೀಡಲಿದ್ದಾರೆ. ಬಳಿಕ ವಿಜಯ ಸಂಕಲ್ಪ ರಥ ಯಾತ್ರೆಗೆ ಚಾಲನೆ ಕೊಡಲಿದ್ದಾರೆ. ನಂತರ ಅನುಭವ ಮಂಟಪದಿಂದ ಬಸವಕಲ್ಯಾಣ ತೇರು ಮೈದಾನದ ವರೆಗೆ ಅಮಿತ್ ಶಾ ರೋಡ್ ಶೋ ನಡೆಸಲಿದ್ದಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿದಂತೆ ಇತರೆ ನಾಐಕರು ಅಮಿತ್ ಶಾ ಗೆ ಸಾಥ್ ನೀಡಲಿದ್ದಾರೆ.

ಇನ್ನು ಅಮಿತ್ ಶಾ ಅವರನ್ನು ಭರ್ಜರಿಯಾಗಿ ಸ್ವಾಗತಿಸಲು ತೀರ್ಮಾನಿಸಿದ್ದು, ಅವರಿಗಾಗಿಯೇ ಬೆಳ್ಳಿ ಕಿರಿಟ ಹಾಗೂ ಬೆಳ್ಳಿ ಗದೆ ರೆಡಿಯಾಗಿದೆ. ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಶಾಗೆ ಬೆಳ್ಳಿ ಗದೆ ಮತ್ತು ಬೆಳ್ಳಿ ಕಿರಿಟ್ ತೊಡಿಸಿ ಸನ್ಮಾನಿಸಲಿದ್ದಾರೆ.