Kalghatagi Election Results: ಕಲಘಟಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ನಾಗರಾಜ ಛಬ್ಬಿಗೆ ಸವಾಲೆಸೆದ ಸಂತೋಷ್ ಲಾಡ್​​

|

Updated on: May 13, 2023 | 2:44 AM

Kalghatagi Assembly Election Result 2023 Live Counting Updates: ಕಲಘಟಗಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಸಂತೋಷ್ ಲಾಡ್​​, ಬಿಜೆಪಿಯಿಂದ ನಾಗರಾಜ ಛಬ್ಬಿ ಹಾಗೂ ಜೆಡಿಎಸ್​ನಿಂದ ವೀರಪ್ಪ ಶೀಗೆಹಟ್ಟಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಮತ ಎಣಿಕೆಯ ವಿವರ ಇಲ್ಲಿದೆ.

Kalghatagi Election Results: ಕಲಘಟಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ನಾಗರಾಜ ಛಬ್ಬಿಗೆ ಸವಾಲೆಸೆದ ಸಂತೋಷ್ ಲಾಡ್​​
ನಾಗರಾಜ್ ಛಬ್ಬಿ, ಸಂತೋಷ್ ಲಾಡ್
Follow us on

Kalghatagi Assembly Election Result 2023: ಕಲಘಟಗಿ ವಿಧಾನಸಭಾ ಕ್ಷೇತ್ರ ಎಲೆಕ್ಷನ್​ 2023 ರಿಸಲ್ಟ್: ಕರ್ನಾಟಕ ವಿಧಾನಸಭೆಯ 224 ಕ್ಷೇತ್ರಗಳಿಗೆ ಮೇ 10ರಂದು ನಡೆದಿದ್ದ ಚುನಾವಣೆಯ (Karnataka Assembly Elections) ಫಲಿತಾಂಶ ಇನ್ನು ಕೆಲವೇ ಕ್ಷಣಗಳಲ್ಲಿ ಪ್ರಕಟಗೊಳ್ಳಲಿದೆ. ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ (Kalghatagi Assembly Constituency) ಬಿಜೆಪಿ ಪಕ್ಷ ಅಭ್ಯರ್ಥಿಯಾಗಿ ನಾಗರಾಜ ಛಬ್ಬಿ ಸ್ಪರ್ಧಿಸಿದ್ದಾರೆ. ಕಾಂಗ್ರೆಸ್​​ ಟಿಕೆಟ್​ ವಂಚಿತ ನಾಗರಾಜ ಛಬ್ಬಿಗೆ ಟಿಕೆಟ್​ ನೀಡುವ ಮೂಲಕ ಮಣೆ ಹಾಕಿದ್ದು, ಕಲಘಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಒಂದು ಅವಕಾಶ ಕಲ್ಪಿಸಿದ್ದಾರೆ.

ಕಾಂಗ್ರೆಸ್​ ಪಕ್ಷದ ಅಭ್ಯರ್ಥಿಯಾಗಿ ಸಂತೋಷ್ ಲಾಡ್​​ ಕಣಕ್ಕಿಳಿದಿದ್ದಾರೆ. ಸತತ ನಾಲ್ಕನೇ ಭಾರಿಗೆ ಕಲಘಟಗಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​​ ಲಭ್ಯವಾಗಿದೆ. ಟಿಕೆಟ್​​ಗಾಗಿ ನಾಗರಾಜ ಛಬ್ಬಿ ಮತ್ತು ಸಂತೋಷ್ ಲಾಡ್​ ನಡುವೆ ತೀರ್ವ ಪೈಪೋಟಿ ಏರ್ಪಟ್ಟಿತ್ತು.

ಕಳೆದ 2018ರ ಚುನಾವಣೆಯಲ್ಲಿ ಬಿಜಿಪಿಯ ಸಿ. ಎಂ ನಿಂಬಣ್ಣವರ್​ ಗೆಲುವು ಸಾಧಿಸಿದ್ದರು. ಕಾಂಗ್ರೆಸ್​ನ ಸಂತೋಷ್​ ಲಾಡ್​ ಸುಮಾರು 25 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಇವುಗಳ ಹೊರತಾಗಿ ಪ್ರಾದೇಶಿಕ ಸಂಘಟನೆಯಾದ ಜೆಡಿಎಸ್​​​ ಕೂಡ ಕಿಂಗ್​ಮೇಕರ್​ ಆಗುವ ಗುರಿ ಹೊಂದಿದ್ದು, ವೀರಪ್ಪ ಶೀಗೆಹಟ್ಟಿ ಅವರನ್ನು ಕಣಕ್ಕಿಳಿಸಿದೆ. ಅದೇ ರೀತಿಯಾಗಿ ಮಂಜುನಾಥ ಜಕ್ಕಣ್ಣನವರ್​ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಯನ್ನಾಗಿದ್ದಾರೆ.

ಚುನಾವಣೆ ಫಲಿತಾಂಶ ಲೈವ್​ ಸುದ್ದಿ

ವಿಧಾನಸಭೆ ಚುನಾವಣೆ ತಾಜಾ ಸುದ್ದಿ