ಚಿಕ್ಕಮಗಳೂರು: ಕೊಡಗಿನ ತಿತಿಮತಿಯಲ್ಲಿ ನಿನ್ನೆ ಮೊಟ್ಟೆ ಎಸೆತ ಪ್ರಕರಣ ನಡೆದ ಬಳಿಕ, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಅವರು ರಂಭಾಪುರಿ ಮಠಕ್ಕೆ ಇಂದು ಭೇಟಿ ನೀಡಿದ್ದಾರೆ. ಇದೇ ಮೊದಲ ಬಾರಿಗೆ ರಂಭಾಪುರಿ ಮಠಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಂಭಾಪುರಿ ಶ್ರೀಗಳು (Rambhapuri Sri) ರುದ್ರಾಕ್ಷಿ ಮಾಲೆ ಹಾಕಿದ್ದಾರೆ (Rudraksha Chain). ಅಷ್ಟೇ ಅಲ್ಲ, ಮುಂದಿನ ಚುನಾವಣೆ ತನಕ (Karnataka Assembly Elections 2023) ಈ ಮಾಲೆಯನ್ನು ಹಾಕಿಕೊಂಡಿರಿ. ನಿಮಗೆ ಒಳ್ಳೆದಾಗುತ್ತದೆ ಎಂದೂ ರಂಭಾಪುರಿ ಶ್ರೀ ತಿಳಿಸಿದ್ದಾರೆ.
ಶೃಂಗೇರಿ ಶಾರದಾಂಬೆ ದರ್ಶನ
ಚಿಕ್ಕಮಗಳೂರು ಜಿಲ್ಲೆ ಎನ್ ಆರ್ ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿರುವ ರಂಭಾಪುರಿ ಪೀಠದ ಶ್ರೀ ಪ್ರಸನ್ನ ವೀರ ಸೋಮೇಶ್ವರ ಸ್ವಾಮೀಜಿಗಳ ಆಶೀರ್ವಾದ ಪಡೆದ ಸಿದ್ದರಾಮಯ್ಯ ಅವರು ವೀರಭದ್ರನಾಥ ಸ್ವಾಮಿ, ರೇಣುಕಾಚಾರ್ಯರ ಗದ್ದುಗೆಯ ದರ್ಶನ ಸಹ ಪಡೆದರು. ಅದಕ್ಕೂ ಮುನ್ನ ಸಿದ್ದರಾಮಯ್ಯ ಶೃಂಗೇರಿ ಶಾರದಾಂಬೆ ದರ್ಶನ ಪಡೆದರು.
Published On - 4:47 pm, Fri, 19 August 22