ಮೈಸೂರು: ಕರ್ನಾಟಕ ಚುನಾವಣೆ (Karnataka Assembly Elections 2023) ಹಿನ್ನೆಲೆ ಮತದಾರರಿಗೆ ಹಂಚಲು ಲಕ್ಷಾಂತರ ರೂಪಾಯಿ, ಕೋಟ್ಯಾಂತರ ರೂಪಾಯಿ ಹಣ ದಾಖಲೆಗಳಿಲ್ಲದೆಯೇ ಸಾಗಾಟ ಮಾಡಲಾಗುತ್ತಿದೆ. ಕೆಲವರು ಚುನಾವಣಾಧಿಕಾರಿಗಳು ಜಪ್ತಿ ಮಾಡಬಾರದು ಎಂದು ಹಣವನ್ನು ಗೌಪ್ಯವಾಗಿ ಇಡಲಾಗುತ್ತಿದೆ. ಜಿಲ್ಲೆಯ ಹೆಚ್ಡಿ ಕೋಟೆ ತಾಲೂಕಿನ ದೇವಲಾಪುರ ಕಾಲೋನಿ ತೋಟದ ಮನೆಯೊಂದರಲ್ಲಿ ಚುನಾವಣಾಧಿಕಾರಿಗಳು ಶೋಧ ನಡೆಸಿದಾಗ 50 ಲಕ್ಷ ರೂಪಾಯಿ (Money Found) ಪತ್ತೆಯಾಗಿದೆ.
ಮತದಾರರಿಗೆ ಹಂಚಲು ಹಣ ಸಂಗ್ರಹಿಸಿಟ್ಟಿದ್ದ ಬಗ್ಗೆ ಖಚಿತ ಮಾಹಿತಿ ಪಡೆದ ಚುನಾವಣಾಧಿಕಾರಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ತೋಟದ ಮನೆಗೆ ಬಂದ ಅಧಿಕಾರಿಗಳೊಂದಿಗೆ ಸ್ಥಳೀಯರು ಮಾತಿಗಿಳಿದಿದ್ದಾರೆ. ಈ ನಡುವೆಯೂ ಶೋಧ ನಡೆಸಿದ ಅಧಿಕಾರಿಗಳು ಮನೆಯೊಳಗೆ ಬ್ಯಾಗ್ ಪತ್ತೆಯಾಗಿದ್ದು, ಇದರಲ್ಲಿ ಕಂತೆಕಂತೆ ನೋಟುಗಳು ಪತ್ತೆಯಾಗಿವೆ.
ಇದನ್ನೂ ಓದಿ: 2018ರ ವಿಧಾನಸಭಾ ಚುನಾವಣೆಗಿಂತ 4.5 ಪಟ್ಟು ಹೆಚ್ಚು ಹಣ ಜಪ್ತಿ: ಕೇಂದ್ರ ಚುನಾವಣಾ ಆಯೋಗ ಮಾಹಿತಿ
ಬ್ಯಾಗ್ನಲ್ಲಿ 50 ಲಕ್ಷ ರೂ. ಇರುವುದು ತಿಳಿದುಬಂದಿದೆ. ಇದನ್ನು ವಶಕ್ಕೆ ಪಡೆದ ಅಧಿಕಾರಿಗಳ ಕಣ್ಣು ಮನೆಯ ಪಕ್ಕದಲ್ಲೇ ಇದ್ದ ಎಂ ಸ್ಯಾಂಡ್ ರಾಶಿ ಮೇಲೆ ಬಿದ್ದಿದೆ. ಈ ರಾಶಿಯಲ್ಲಿ ಹಣ ಬಚ್ಚಿಟ್ಟಿರುವ ಸಾಧ್ಯತೆ ಹಿನ್ನೆಲೆ ಜೆಸಿಬಿ ತಂದು ಅಗೆದಿದ್ದಾರೆ. ಆದರೆ ಅಗೆದಿದ್ದೇ ಬಂತೇ ಹೊರತು ರಾಶಿಯೊಳಗೆ ಏನೂ ಸಿಕ್ಕಿಲ್ಲ. ಸದ್ಯ ಮನೆಯಲ್ಲಿ ಪತ್ತೆಯಾದ ಹಣದ ಬಗ್ಗೆ ಚುನಾವಣಾಧಿಕಾರಿಗಳು ಹೆಚ್.ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:49 pm, Tue, 9 May 23