2018ರ ವಿಧಾನಸಭಾ ಚುನಾವಣೆಗಿಂತ 4.5 ಪಟ್ಟು ಹೆಚ್ಚು ಹಣ ಜಪ್ತಿ: ಕೇಂದ್ರ ಚುನಾವಣಾ ಆಯೋಗ ಮಾಹಿತಿ
ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹಣ ಜಪ್ತಿ ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಗಿಂತ 4.5 ಪಟ್ಟು ಹೆಚ್ಚು ಹಣ ಸೀಜ್ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದೆ.
ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಐಟಿ ಅಧಿಕಾರಿಗಳು ಫುಲ್ ಅಲರ್ಟ್ ಆಗಿದ್ದು ರಾಜ್ಯದಲ್ಲಿ ಹಿಂದೆಂದಿಗಿಂತಲೂ ಹೆಚ್ಚು ಹಣ ಜಪ್ತಿ (cash seized) ಮಾಡಿದ್ದಾರೆ. 2018ರ ವಿಧಾನಸಭಾ ಚುನಾವಣೆಗಿಂತ 4.5 ಪಟ್ಟು ಹೆಚ್ಚು ಹಣ ಸೀಜ್ ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗದಿಂದ ಮಾಹಿತಿ ನೀಡಲಾಗಿದೆ. ಅಂದರೆ 2018ರಲ್ಲಿ ₹83.93 ಕೋಟಿ ಜಪ್ತಿ ಮಾಡಿದ್ದು, ಈ ಬಾರಿಯ 2023ರ ಚುನಾವಣೆಯಲ್ಲಿ ₹375 ಕೋಟಿ ರೂ. ವಶಕ್ಕೆಪಡೆಯಲಾಗಿದೆ. ರಾಜ್ಯದ ವಿವಿಧೆಡೆ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 375 ಕೋಟಿ ರೂ. ಹಣ, ಜಾರಿ ನಿರ್ದೇಶನಾಲಯದಿಂದ 288 ಕೋಟಿ ರೂ ಸೀಜ್ ಮಾಡಲಾಗಿದೆ.
ಆಮಿಷ ರಹಿತ ಚುನಾವಣೆ ನಡೆಸಲು ಅಧಿಕಾರಿಗಳು ಯತ್ನಿಸಿದ್ದು, ಬಂಗಾರಪೇಟೆ ಕ್ಷೇತ್ರದಲ್ಲಿ 4.04 ಕೋಟಿ ನಗದು ಜಪ್ತಿ ಮಾಡಿದ್ದಾರೆ. ಇದಲ್ಲದೇ ಕೋಟ್ಯಂತರ ಬೆಲೆಯ ಕುಕ್ಕರ್, ಸೀರೆ, ಆಹಾರ ಕಿಟ್ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಮತದಾನಕ್ಕೆ ಹಿಂದೆಂದೂ ಕೈಗೊಳ್ಳದಷ್ಟು ಭಾರೀ ಭದ್ರತೆ, ಈವರೆಗೆ ವಶಕ್ಕೆ ಪಡೆದ ನಗದು ಎಷ್ಟು ಗೊತ್ತಾ?
ಆಯೋಗದ ಅಕ್ರಮದ ಬೇಟೆ
- ಬೆಂಗಳೂರಿನಲ್ಲಿ ಇಲ್ಲಿಯವರೆಗೂ ₹13.30 ಕೋಟಿ ರೂ. ಅಕ್ರಮ ನಗದು ಸೀಜ್ ಮಾಡಿದ್ದು, ನಗರದಲ್ಲಿ 8,645 ಎಫ್ಐಆರ್ ಅನ್ನು ಆಯೋಗ ದಾಖಲು ಮಾಡಿದೆ.
- 24 ಕೋಟಿ ಮೌಲ್ಯದ 3 ಲಕ್ಷದ 51 ಸಾವಿರದ ಇನ್ನೂರ ಐವಾತ್ತೇಳು ಲೀಟರ್ ಮದ್ಯ ಸೀಜ್
- 14.4 ಕೋಟಿ ಮೌಲ್ಯದ 785 ಕೆಜಿ ಮಾದಕ ವಸ್ತು ಸೀಜ್
- ಅಕ್ರಮವಾಗಿ ಹಣ, ಮದ್ಯ, ಡ್ರಗ್ಸ್ ಸಗಿಸುತ್ತಿದ್ದ 213 ವಾಹನ ಸೀಜ್
- ಒಟ್ಟು 74.18 ಕೋಟಿ ರೂಪಾಯಿ ಮೌಲ್ಯದ ಅಕ್ರಮ ವಸ್ತು ಸೀಜ್ ಮಾಡಲಾಗಿದೆ.
ಚುನಾವಣೆ ಘೋಷಣೆ ನಂತರ ಈವರಗೆ ವಶಕ್ಕೆ ಪಡೆದ ವಸ್ತುಗಳು ಮತ್ತು ನಗದು ಎಷ್ಟು ಗೊತ್ತಾ?
ಚುನಾವಣೆ ಘೋಷಣೆ ನಂತರ ಚುನಾವಣಾಧಿಕಾರಿಗಳು ಹಾಗೂ ಪೊಲೀಸರು ಅಲ್ಲಲ್ಲಿ ಚೆಕ್ಪೋಸ್ಟ್ಗಳನ್ನು ಹಾಕಿ ತಪಾಸಣೆ ನಡೆಸಿ ಅಕ್ರಮವಾಗಿ ಅಥವಾ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ವಸ್ತುಗಳನ್ನು ಹಾಗೂ ಹಣವನ್ನು ವಶಕ್ಕೆ ಪಡೆದಿದ್ದಾರೆ. ಈವರೆಗೆ ಒಟ್ಟು 230 ಕೋಟಿ ಮೌಲ್ಯದ ವಸ್ತುಗಳನ್ನು ಹಾಗೂ 105 ಕೋಟಿ ನಗದು ವಶಕ್ಕೆ ಪಡೆಯಲಾಗಿದೆ. ಇಂದು ಮತ್ತು ನಾಳೆ ಸಹ ಹಣ ಸಾಗಾಟದ ಬಗ್ಗೆ ನಿಗಾ ಇಡಲಾಗಿದೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್: ಕೋಟಿ ಕೋಟಿ ನಗದು ಜಪ್ತಿ
ಈವರೆಗೆ 53,406 ವ್ಯಕ್ತಿಗಳ ವಿರುದ್ಧ ಬಾಂಡ್ ಓವರ್ ಮಾಡಲಾಗಿದೆ. ಭದ್ರತಾ ಪ್ರಕರಣ ಉಲ್ಲಂಘಿಸಿದ 115 ಪ್ರಕರಣ ದಾಖಲಿಸಲಾಗಿದೆ. 1.57 ಕೋಟಿ ಹಣ ಮುಟ್ಟುಗೋಲುಗೆ ಕ್ರಮ ಕೈಗೊಳ್ಳಲಾಗಿದೆ. 714 ಜನರ ವಿರುದ್ಧ ಗಡಿಪಾರು ಕ್ರಮ ಕೈಗೊಳ್ಳಲಾಗಿದೆ ಎಂದು ಅಲೋಕ್ ಕುಮಾರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ವಶಕ್ಕೆ ಪಡೆದ ಹಣ ಎಷ್ಟು ಗೊತ್ತಾ?
ಬೆಂಗಳೂರು ನಗರದಲ್ಲಿ ಚುನಾವಣೆ ಘೋಷಣೆ ನಂತರ ಈವರೆಗೆ ಒಟ್ಟು 10,93,97,005 ರೂ ನಗದು ವಶಕ್ಕೆ ಪಡೆಯಲಾಗಿದೆ ಎಂದು ಶರಣಪ್ಪ ಹೇಳಿದ್ದಾರೆ. ಈವರೆಗೆ ಒಟ್ಟು 28.5 ಕೆಜಿ ಬಂಗಾರ, 140 KG ಬೆಳ್ಳಿ, 9,72,87,071 ಮೌಲ್ಯದ ಉಚಿತ ಉಡುಗೊರೆಗಳು, 29,51,54,780 ಮೌಲ್ಯದ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ