ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್: ಕೋಟಿ ಕೋಟಿ ನಗದು ಜಪ್ತಿ

ಚುನಾವಣೆ ಹೊತ್ತಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್​​ ನಡೆದಿದ್ದು, ಧಾರವಾಡ ಸೇರಿದಂತೆ ಬೆಂಗಳೂರಿನ ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದು, ಕೋಟಿ ಕೋಟಿ ನಗದು ಸೀಜ್ ಮಾಡಿದ್ದಾರೆ.

ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್: ಕೋಟಿ ಕೋಟಿ ನಗದು ಜಪ್ತಿ
ಪ್ರಾತಿನಿಧಿಕ ಚಿತ್ರ
Follow us
ಗಂಗಾಧರ​ ಬ. ಸಾಬೋಜಿ
|

Updated on: May 08, 2023 | 5:56 PM

ಬೆಂಗಳೂರು: ಚುನಾವಣೆ ಹೊತ್ತಲ್ಲಿ ಐಟಿ ಅಧಿಕಾರಿಗಳ ಮೆಗಾ ಆಪರೇಷನ್​​ ನಡೆದಿದ್ದು, ಧಾರವಾಡ ಸೇರಿದಂತೆ ಬೆಂಗಳೂರು ನಗರದ 11 ಕ್ಷೇತ್ರಗಳಲ್ಲಿ ಐಟಿ ಅಧಿಕಾರಿಗಳು ಕಾರ್ಯಾಚರಣೆ ಮಾಡಿದ್ದು, ಕೋಟಿ ಕೋಟಿ ನಗದು ಸೀಜ್ (cash seized) ಮಾಡಿದ್ದಾರೆ. ಬೆಂಗಳೂರಿನ ಹಲವು ಕ್ಷೇತ್ರಗಳ ವ್ಯಾಪ್ತಿಯಲ್ಲಿ ಐಟಿ ಕಾರ್ಯಾಚರಣೆ ಮಾಡಿದ್ದು, ಸುಮಾರು 15.53 ಕೋಟಿ ರೂ, ನಗದು, ಹಾಗೂ 7 ಕೋಟಿ ಮೌಲ್ಯದ 10.14 ಕೆಜಿ ಚಿನ್ನಾಭರಣ ಸೀಜ್​ ಮಾಡಲಾಗಿದೆ. ಶಿವಾಜಿನಗರ ವ್ಯಾಪ್ತಿಯಲ್ಲಿ 4.77, ಆರ್​ಆರ್ ನಗರ ವ್ಯಾಪ್ತಿಯಲ್ಲಿ 3.44, ಮಲ್ಲೇಶ್ವರಂ ವ್ಯಾಪ್ತಿಯಲ್ಲಿ 3.35, ಪುಲಿಕೇಶಿನಗರ ವ್ಯಾಪ್ತಿಯಲ್ಲಿ 2.30 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ.

ಅದೇ ರೀತಿಯಾಗಿ ಶಾಂತಿನಗರ ವ್ಯಾಪ್ತಿಯಲ್ಲಿ 62.83, ಗಾಂಧಿನಗರ ವ್ಯಾಪ್ತಿಯಲ್ಲಿ 55, ಹೆಬ್ಬಾಳ, ಶಿವಾಜಿನಗರ, ಚಿಕ್ಕಪೇಟೆ ಮತ್ತು ಜಯನಗರದಲ್ಲಿ 23.50 ಲಕ್ಷ ರೂ. ನಗದು ಸೀಜ್​ ಮಾಡಲಾಗಿದೆ.

ಇದನ್ನೂ ಓದಿ: ಮುಸ್ಲಿಮರ ಮೀಸಲಾತಿ ರದ್ದುಪಡಿಸಿದ್ದಕ್ಕೆ ಸ್ಪಷ್ಟ ಕಾರಣ ನೀಡಿದ ಅಮಿತ್ ಶಾ; ಏನದು?

ಮತದಾನಕ್ಕೆ ಇನ್ನೂ ಎರಡು ದಿನಗಳಷ್ಟೇ ಬಾಕಿಯಿರುವಾಗ ಕ್ಷೇತ್ರಗಳಲ್ಲಿ ಹಣ, ಉಡುಗೊರೆಗಳ ಹಂಚಿಕೆ ಗುಮಾನಿ ನಡೆಯುತ್ತಿದ್ದು, ಈ ಬಗ್ಗೆ ಐಟಿ ಅಧಿಕಾರಿಗಳು ತೀವ್ರ ನಿಗಾ ವಹಿಸಿದ್ದರೂ ಕೋಟಿ ಕೋಟಿ ಹಣ ಸೀಜ್​ ಮಾಡಿದ್ದಾರೆ. ರಾಯಚೂರು ನಗರದ ಮೂರು ಕ್ಷೇತ್ರ ವ್ಯಾಪ್ತಿಯಲ್ಲಿ 30 ಲಕ್ಷ ರೂ. ನಗದು, ಐದು ಕೋಟಿ ಮೌಲ್ಯದ ಚಿನ್ನವನ್ನು ಐಟಿ ಇಲಾಖೆ ಜಪ್ತಿ ಮಾಡಿದೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಪ್ತನ ಮನೆ ಮೇಲೆ ಐಟಿ ದಾಳಿ 

ಧಾರವಾಡ: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಪ್ತ, ಕಾಂಗ್ರೆಸ್ ಮುಖಂಡನ ಮನೆ ಮೇಲೆ ಐಟಿ ದಾಳಿ ಮಾಡಿದ್ದು, ಪರಿಶೀಲನೆ ಮಾಡಿದ್ದಾರೆ. ವಿದ್ಯಾಗಿರಿ ಬಡಾವಣೆಯ ವಿವೇಕಾನಂದ‌ನಗರದಲ್ಲಿರುವ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಸದಸ್ಯ ಆಗಿರುವ ರಾಬರ್ಟ್ ದದ್ದಾಪುರಿ ನಿವಾಸದ ಮೇಲೆ ಐಟಿ ದಾಳಿ ಮಾಡಿದ್ದು, ಮನೆಯಲ್ಲಿ 6 ಐಟಿ ಅಧಿಕಾರಿಗಳ ತಂಡ ತಪಾಸಣೆ ನಡೆಸುತ್ತಿದ್ದಾರೆ. ಕಳೆದ ವಾರ ಮಾಜಿ ಸಚಿವ ವಿನಯ್ ಕುಲಕರ್ಣಿ ಆಪ್ತ ಸಹಾಯಕ ಪ್ರಶಾಂತ್ ಕೇಕರೆ ಮನೆ ಮೇಲೆ ಐಟಿ ದಾಳಿ ನಡೆದಿತ್ತು.

ಇದನ್ನೂ ಓದಿ: ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಕ್ರಮ

ಬಂಗಾರಪೇಟೆಯಲ್ಲಿ ₹2.54 ಕೋಟಿ ಪತ್ತೆ

ಕೋಲಾರ: ಕೋಲಾರ ಜಿಲ್ಲೆ ಬಂಗಾರಪೇಟೆಯಲ್ಲಿ ₹2.54 ಕೋಟಿ ಪತ್ತೆಯಾಗಿದ್ದ ಕೇಸ್​ಗೆ ಸಂಬಂಧಿಸಿ ಬಂಗಾರಪೇಟೆ ಕಾಂಗ್ರೆಸ್​ ಅಭ್ಯರ್ಥಿ ನಾರಾಯಣಸ್ವಾಮಿಗೆ ಕಾರಣ ಕೇಳಿ ಐಟಿ ನೋಟಿಸ್​ ನೀಡಿದೆ. ಜಿಯೋನ್​​​​​ ಹಿಲ್ಸ್​ ಗಾಲ್ಫ್ ರೆಸಾರ್ಟ್​ನ 279 ನಂಬರ್ ವಿಲ್ಲಾದಲ್ಲಿ ಹಣ ಪತ್ತೆಯಾಗಿತ್ತು. ಮತದಾರರಿಗೆ ಹಂಚಲು ತಂದಿಟ್ಟಿದ್ದ ಹಣವನ್ನು ಕೆಜಿಎಫ್ SP ಧರಣಿದೇವಿ ಜಪ್ತಿ ಮಾಡಿದ್ದರು. ಪ್ರಕರಣ ಸಂಬಂಧ ಚುನಾವಣಾಧಿಕಾರಿ ಶ್ರುತಿ ಎಫ್​ಐಆರ್ ದಾಖಲಿಸಿದ್ದರು. ಸದ್ಯ ಹಣ ಸಂಗ್ರಹದ ಮೂಲ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.

ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರಿಗೆ ಹಂಚಲೆಂದು ಜಿಯೋನ್ ಹಿಲ್ಸ್ ಗಾಲ್ಫ್ ರೆಸಾರ್ಟ್​​ನ ವಿಲ್ಲಾ ಸುಮಾರು 4.05 ಕೋಟಿ ರೂಪಾಯಿ ಹಣ ಇಟ್ಟಿದ್ದರು. ಈ ಬಗ್ಗೆ ಮಾಹಿತಿ ತಿಳಿದ ಕೆಜಿಎಫ್ ಎಸ್ಪಿ ಧರಣಿದೇವಿ ನೇತೃತ್ವದ ತಂಡ ಕಾರ್ಯಾಚರಣೆಗೆ ಇಳಿದಿದ್ದು, ವಿಲ್ಲಾದ ರೂಮ್ ನಂಬರ್-279ನಲ್ಲಿ ಬೆಡ್​​ ಮೇಲೆ 500, 200, 2 ಸಾವಿರ ರೂ. ಮುಖಬೆಲೆಯ ಕಂತೆ ಕಂತೆ ಹಣ ಸಿಕ್ಕಿತ್ತು. ಬಂಗಾರಪೇಟೆ ಪಂಚಾಯಿತಿ ಹೆಸರು, ಬೂತ್​ಗಳ ಹೆಸರು ಬರೆದು ಎನ್ವಲಪ್ ಕವರ್​ಗಳಲ್ಲಿ ಹಣ ಇಟ್ಟಿದ್ದರು.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ