Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಕ್ರಮ

ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯ ಮಾರಟಕ್ಕೆ ಕರ್ನಾಟಕ ಚುನಾವಣಾ ಆಯೋಗ ನಿರ್ಬಂಧ ಹೇರಿದ್ದರು, ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಬೆಂಗಳೂರು ಜಿಲ್ಲಾಡಳಿತ ಸೋಮವಾರ ಕ್ರಮಕೈಗೊಂಡಿದೆ.

ಮದ್ಯ ಮಾರಾಟಕ್ಕೆ ನಿಷೇಧವಿದ್ದರೂ ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಕ್ರಮ
ಮದ್ಯ
Follow us
ಗಂಗಾಧರ​ ಬ. ಸಾಬೋಜಿ
|

Updated on: May 08, 2023 | 3:32 PM

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಮದ್ಯ (liquor) ಮಾರಟಕ್ಕೆ ಕರ್ನಾಟಕ ಚುನಾವಣಾ ಆಯೋಗ ನಿರ್ಬಂಧ ಹೇರಿದ್ದರು, ಕಾನೂನು ಉಲ್ಲಂಘಿಸಿದ 200 ಮದ್ಯದಂಗಡಿಗಳ ವಿರುದ್ಧ ಬೆಂಗಳೂರು ಜಿಲ್ಲಾಡಳಿತ ಸೋಮವಾರ ಕ್ರಮಕೈಗೊಂಡಿದೆ. ಕಾನೂನು ಉಲ್ಲಂಘಿಸಿರುವ ನಗರದ ಮದ್ಯದಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಒಂದು ವೇಳೆ ಈ ಆದೇಶವನ್ನು ಪಾಲಿಸದಿದ್ದರೆ ಲೈಸೆನ್ಸ್ ರದ್ದು ಮಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಕೆ.ಎ.ಟಿವಿ9ಗೆ ತಿಳಿಸಿದ್ದಾರೆ.

ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಸೂಚನೆ

ಇಂದು ಸಂಜೆ 6 ಗಂಟೆಯಿಂದ ಮೇ 11 ರ ಬೆಳಗ್ಗೆ 6 ಗಂಟೆಯವರೆಗೂ ಮದ್ಯ ಮಾರಟಕ್ಕೆ ನಿರ್ಬಂಧ ಹೇರಲಾಗಿದೆ. ಮೇ 8 , 9 , 10 ರಂದು ಡ್ರೈ ಡೇ ಆಚಾರಿಸುವಂತೆ ಮದ್ಯ ಮಾರಾಟದ ಅಂಗಡಿ ಮಾಲೀಕರಿಗೆ ಚುನಾವಣಾ ಆಯೋಗ ಸೂಚನೆ ನೀಡಲಾಗಿದೆ.

ಇದನ್ನೂ ಓದಿ: ಬಹಿರಂಗ ಪ್ರಚಾರಕ್ಕೆ ಇಂದು ಅಂತ್ಯ: ಮನೆ ಮನೆಗೆ ತೆರಳಿ ಮತಯಾಚನೆ, ಮದ್ಯ ಮಾರಾಟ ನಿಷೇಧ

ಅಲ್ಲದೇ ಮತ ಎಣಿಕೆಗೂ ಸಮಸ್ಯೆಯಾಗದಂತೆ ಮೇ 13 ರ ಬೆಳಗ್ಗೆ 6 ಗಂಟೆಯಿಂದ ಮೇ.14 ರ ಬೆಳ್ಳಗ್ಗೆ 6 ಗಂಟೆವರೆಗೂ ಮದ್ಯ ನಿರ್ಬಂಧಿಸಲಾಗಿದೆ. ಇದರಿಂದ ಇಂದು ಮದ್ಯದಂಗಡಿಗಳಲ್ಲಿ ಭರ್ಜರಿ ವ್ಯಾಪಾರ ವಹಿವಾಟು ನಡೆಯುವ ಸಾಧ್ಯತೆ ಇದೆ. ಹೀಗಾಗಿ ಮದ್ಯದ ಬೆಲೆಯು ದುಪ್ಪಟ್ಟಾಗಿದ್ದು, ಬೀಯರ್ ಬೆಲೆಯು ಶೇ 15 ರಿಂದ ಶೇ 20 ರಷ್ಟು ಏರಿಕೆಯಾಗಿದೆ.

ಮತದಾನದ 48 ಗಂಟೆಗಳ ಮುಂಚೆ ಬಹಿರಂಗ ಪ್ರಚಾರ ಅಂತ್ಯ

ಬಹಿರಂಗ ಪ್ರಚಾರ ಮುಗಿದ ಬಳಿಕ ಶೂನ್ಯ ಅವಧಿ ಎಂದು ಚುನಾವಣಾ ಆಯೋಗವು ಪರಿಗಣಿಸುತ್ತದೆ. ಈ ಅವಧಿಯಲ್ಲಿ ಅಭ್ಯರ್ಥಿಗಳನ್ನು ಹೊರತುಪಡಿಸಿ ಇನ್ನುಳಿದ ಯಾವುದೇ ವ್ಯಕ್ತಿಗಳು ಕ್ಷೇತ್ರದಲ್ಲಿ ಉಳಿಯುವಂತಿಲ್ಲ. ಅಬ್ಬರದ ಪ್ರಚಾರಗಳೆಲ್ಲವು ಸಂಜೆ 6 ಗಂಟೆಗೆ ಮುಗಿಯಬೇಕು. ಮಂಗಳವಾರ ಅಭ್ಯರ್ಥಿಗಳು ಮನೆ ಮನೆ ಪ್ರಚಾರ ಕೈಗೊಂಡು ಅಂದು ಸಂಜೆ 6 ಗಂಟೆ ಒಳಗೆ ಮುಗಿಸಬೇಕು. ಮತದಾನ ಮುಕ್ತಾಯವಾಗುವ 48 ಗಂಟೆಗಳ ಮುಂಚೆ ಬಹಿರಂಗ ಚುನಾವಣಾ ಪ್ರಚಾರ ಅಂತ್ಯವಾಗುತ್ತದೆ.

ಇದನ್ನೂ ಓದಿ: ಮೇ 9,10 ರಂದು ಮಾಧ್ಯಮಗಳಲ್ಲಿ ಚುನಾವಣಾ ವಿಷಯ ಪ್ರಸಾರಕ್ಕೆ ತಡೆ: ಆಯೋಗ ಆದೇಶ

ಬಹಿರಂಗ ಪ್ರಚಾರ ಮುಗಿಸಿದ ಬಳಿಕ ಸ್ಟಾರ್​ ಪ್ರಚರಕರು, ಮುಖಂಡರು ಕ್ಷೇತ್ರ ತೊರೆಯಬೇಕು. ಕ್ಷೇತ್ರದಲ್ಲಿ ಸಂಬಂಧಪಡದ ವ್ಯಕ್ತಿಗಳು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಂಜೆಯ ಬಳಿಕ ಧ್ವನಿವರ್ಧಕಗಳನ್ನು ಬಳಕೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.

ಮತಾದನಾಕ್ಕೆ 2 ದಿನ ಬಾಕಿ ಉಳಿದಿದೆ. ಮೇ.10 ರಂದು ಮತದಾನ ನಡೆಯಲಿದ್ದು, 13ರಂದು ಮತ ಎಣಿಕೆ ನಡೆಯಲಿದೆ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ