Karnataka Elections 2023: ವಿಧಾನಸಭೆ ಚುನಾವಣೆ; ರಾಜ್ಯದ ಗಮನ ಸೆಳೆದ ಹೈವೋಲ್ಟೇಜ್ ಕ್ಷೇತ್ರಗಳಿವು
ರಾಜ್ಯದ ಹಲವು ಕ್ಷೇತ್ರಗಳು ಗಣ್ಯರ ಮುಖಾಮುಖಿ ಹಾಗೂ ಇತರ ಕಾರಣಗಳಿಂದ ಹೈವೋಲ್ಟೇಜ್ ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಅವುಗಳ ವಿವರ ಇಲ್ಲಿದೆ.
ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಗೆ (Karnataka Assembly Elections 2023) ಮತದಾನ (Voting) ಬುಧವಾರ ಬೆಳಿಗ್ಗೆ 7 ಗಂಟೆಗೆ ಆರಂಭವಾಗಲಿದೆ. ನಾಡಿದ್ದು ಶನಿವಾರ ಫಲಿತಾಂಶವೂ ಪ್ರಕಟವಾಗಲಿದೆ. ಈ ಬಾರಿ ಒಂದೇ ಹಂತದಲ್ಲಿ 224 ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದೆ. ಆಡಳಿತಾರೂಢ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ತೀವ್ರ ಪೈಪೋಟಿ ಇರುವುದು ಪ್ರಚಾರದ ಸಂದರ್ಭದಲ್ಲಿ ಹಾಗೂ ಚುನಾವಣಾಪೂರ್ವ ಸಮೀಕ್ಷೆಗಳಿಂದ ತಿಳಿದುಬಂದಿದೆ. ಈ ಮಧ್ಯೆ, ರಾಜ್ಯದ ಹಲವು ಕ್ಷೇತ್ರಗಳು ಗಣ್ಯರ ಮುಖಾಮುಖಿ ಹಾಗೂ ಇತರ ಕಾರಣಗಳಿಂದ ಹೈವೋಲ್ಟೇಜ್ ಕ್ಷೇತ್ರಗಳಾಗಿ ಪರಿವರ್ತನೆಗೊಂಡಿವೆ. ಅವುಗಳ ವಿವರ ಇಲ್ಲಿದೆ.
- ವರುಣ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿಯಿಂದ ಸಚಿವ ವಿ.ಸೋಮಣ್ಣ ಕಣದಲ್ಲಿದ್ದಾರೆ.
- ಶಿಗ್ಗಾಂವಿ ಕ್ಷೇತ್ರದಲ್ಲಿ ಬಿಜೆಪಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕಣಕ್ಕಿಳಿಸಿದ್ದರೆ, ಕಾಂಗ್ರೆಸ್ನಿಂದ ಯಾಸಿರ್ ಖಾನ್ ಪಠಾಣ್ ಕಣದಲ್ಲಿದ್ದಾರೆ.
- ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಚಿವ ಆರ್.ಅಶೋಕ್ ಸ್ಪರ್ಧೆ ಮಾಡುತ್ತಿದ್ದಾರೆ.
- ಚನ್ನಪಟ್ಟಣದಲ್ಲಿ ಜೆಡಿಎಸ್ನಿಂದ ಹೆಚ್.ಡಿ.ಕುಮಾರಸ್ವಾಮಿ, ಬಿಜೆಪಿಯಿಂದ ಸಿ.ಪಿ.ಯೋಗೇಶ್ವರ್ ಕಣದಲ್ಲಿದ್ದಾರೆ.
- ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ನಲ್ಲಿ ಕಾಂಗ್ರೆಸ್ನಿಂದ ಜಗದೀಶ ಶೆಟ್ಟರ್, ಬಿಜೆಪಿಯಿಂದ ಮಹೇಶ್ ಟೆಂಗಿನಕಾಯಿ ಅಭ್ಯರ್ಥಿಗಳಾಗಿದ್ದಾರೆ.
- ಚಾಮರಾಜನಗರ ಕ್ಷೇತ್ರದಲ್ಲಿ ವಿ.ಸೋಮಣ್ಣ, ಸಿ.ಪುಟ್ಟರಂಗಶೆಟ್ಟಿ ಕಣದಲ್ಲಿದ್ದಾರೆ.
- ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಪ್ರೀತಂಗೌಡ, ಸ್ವರೂಪ್ ಪ್ರಕಾಶ್ ಮಧ್ಯೆ ಹಣಾಹಣಿ.
- ಅರಸೀಕೆರೆ ಕ್ಷೇತ್ರ ಕಾಂಗ್ರೆಸ್ನಿಂದ ಕೆ.ಎನ್.ಶಿವಲಿಂಗೇಗೌಡ, ಜೆಡಿಎಸ್ನಿಂದ ಎನ್.ಆರ್.ಸಂತೋಷ್ ಕಣದಲ್ಲಿದ್ದಾರೆ.
- ಪುಲಕೇಶಿನಗರ ಕ್ಷೇತ್ರದಲ್ಲಿ ಅಖಂಡ ಶ್ರೀನಿವಾಸಮೂರ್ತಿ, ಎ.ಸಿ.ಶ್ರೀನಿವಾಸ ಮಧ್ಯೆ ಪೈಪೋಟಿ.
- ಬಳ್ಳಾರಿ ನಗರ ಕ್ಷೇತ್ರ ಗಾಲಿ ಸೋಮಶೇಖರ ರೆಡ್ಡಿ, ಲಕ್ಷ್ಮೀ ಅರುಣ ಮಧ್ಯೆ ಹಣಾಹಣಿ.
- ಪುತ್ತೂರು ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿಯ ಆಶಾ ತಿಮ್ಮಪ್ಪ, ಕಾಂಗ್ರೆಸ್ನ ಅಶೋಕ್ ಕುಮಾರ್ ರೈ ಹಾಗೂ ಪಕ್ಷೇತರ ಅಭ್ಯರ್ಥಿ ಅರುಣ್ ಕುಮಾರ್ ಪುತ್ತಿಲ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
- ಧಾರವಾಡ ಕ್ಷೇತ್ರದಲ್ಲಿ ವಿನಯ್ ಕುಲಕರ್ಣಿ, ಅಮೃತ್ ಅಯ್ಯಪ್ಪ ದೇಸಾಯಿ ಕಣದಲ್ಲಿದ್ದಾರೆ.
- ಚಿಕ್ಕಪೇಟೆ ಕ್ಷೇತ್ರ ಆರ್.ವಿ.ದೇವರಾಜ್, ಉದಯ್ ಗರುಡಾಚಾರ್, ಕೆಜಿಎಫ್ ಬಾಬು ಮಧ್ಯೆ ಸ್ಪರ್ಧೆ ಇದೆ.
- ಚಿತ್ತಾಪುರ ಕ್ಷೇತ್ರದಲ್ಲಿ ಪ್ರಿಯಾಂಕ್ ಖರ್ಗೆ, ಮಣಿಕಂಠ ರಾಠೋಡ್ ಮಧ್ಯೆ ಸ್ಪರ್ಧೆ ಇದೆ.
- ವಿಜಯಪುರ ಕ್ಷೇತ್ರದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್, ಅಬ್ದುಲ್ ಹಮೀದ್ ಖಾಜಾಸಾಬ್ ಮಧ್ಯೆ ಹಣಾಹಣಿ ಇದೆ.
- ಗೋಕಾಕ್ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ, ಮಹಾಂತೇಶ್ ಕಡಾಡಿ ಅಭ್ಯರ್ಥಿಗಳಾಗಿದ್ದಾರೆ.
- ಬೆಳಗಾವಿ ಗ್ರಾಮಾಂತರದಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್, ನಾಗೇಶ್ ಮನೋಳ್ಕರ್ ಸ್ಪರ್ಧಿಗಳಾಗಿದ್ದಾರೆ.
- ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ನಿಂದ ಲಕ್ಷ್ಮಣ ಸವದಿ, ಬಿಜೆಪಿಯಿಂದ ಮಹೇಶ್ ಕುಮಟಳ್ಳಿ ಕಣದಲ್ಲಿದ್ದಾರೆ.
- ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಡಾ.ಕೆ.ಸುಧಾಕರ್, ಪ್ರದೀಪ್ ಈಶ್ವರ್ ಅಯ್ಯರ್ ನಡುವೆ ಪೈಪೋಟಿ ಇದೆ.
- ಹೊಸಕೋಟೆ ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್, ಶರತ್ ಬಚ್ಚೇಗೌಡ ನಡುವೆ ಸ್ಪರ್ಧೆ ಏರ್ಪಟ್ಟಿದೆ.
- ಬಸವನಗುಡಿ ಕ್ಷೇತ್ರದಲ್ಲಿ ರವಿಸುಬ್ರಹ್ಮಣ್ಯ, ಅರಮನೆ ಶಂಕರ್, ಯು.ಬಿ.ವೆಂಕಟೇಶ್ ಮಧ್ಯೆ ಹಣಾಹಣಿ ನಡೆಯಲಿದೆ.
ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ