Karnataka Elections 2023: ಕರ್ನಾಟಕ ವಿಧಾನಸಭೆ ಚುನಾವಣೆ: ಇಲ್ಲಿವೆ ಕೆಲವು ಅಚ್ಚರಿಯ ಸಂಗತಿಗಳು

ಈ ಬಾರಿಯ ಚುನಾವಣೆ ಕೆಲವು ಅಚ್ಚರಿಯ ಅಂಶಗಳಿಗೂ ಸಾಕ್ಷಿಯಾಗಲಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯ ಕೆಲವು ಸ್ವಾರಸ್ಯಕರ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

Karnataka Elections 2023: ಕರ್ನಾಟಕ ವಿಧಾನಸಭೆ ಚುನಾವಣೆ: ಇಲ್ಲಿವೆ ಕೆಲವು ಅಚ್ಚರಿಯ ಸಂಗತಿಗಳು
ಸಾಂದರ್ಭಿಕ ಚಿತ್ರ
Follow us
Ganapathi Sharma
| Updated By: Digi Tech Desk

Updated on:May 10, 2023 | 7:29 AM

ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Elections 2023) ಮತದಾನಕ್ಕೆ (Voting) ಇನ್ನು ಕೆಲವೇ ಗಂಟೆಗಳು ಬಾಕಿ ಉಳಿದಿವೆ. ರಾಜಕೀಯ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿದ್ದು, 224 ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಭವಿಷ್ಯ ಬುಧವಾರ ಸಂಜೆ ವೇಳೆಗೆ ಮತಯಂತ್ರ ಸೇರಲಿದೆ. ಮೇ 13ರಂದು ಫಲಿತಾಂಶವೂ ಪ್ರಕಟಗೊಳ್ಳಲಿದೆ. ಈ ಮಧ್ಯೆ, ಈ ಬಾರಿಯ ಚುನಾವಣೆ ಕೆಲವು ಅಚ್ಚರಿಯ ಅಂಶಗಳಿಗೂ ಸಾಕ್ಷಿಯಾಗಲಿದೆ. ಈ ಬಾರಿಯ ವಿಧಾನಸಭೆ ಚುನಾವಣೆಯ ಕೆಲವು ಸ್ವಾರಸ್ಯಕರ ಅಂಶಗಳ ಬಗ್ಗೆ ಇಲ್ಲಿದೆ ಮಾಹಿತಿ.

17,000 ಶತಾಯುಷಿ ಮತದಾರರು

ಈ ಬಾರಿಯ ಚುನಾವಣೆಯಲ್ಲಿ ಮತದಾನ ಮಾಡುವ ಸುಮಾರು 17,000 ಮತದಾರರು 100 ವರ್ಷ ವಯಸ್ಸು ಮೇಲ್ಪಟ್ಟವರು. ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು ಚುನಾವಣಾ ದಿನಾಂಕ ಘೋಷಿಸುವ ಸಂದರ್ಭದಲ್ಲಿ ಈ ಮಾಹಿತಿ ನೀಡಿದ್ದರು. ರಾಜ್ಯದಲ್ಲಿ 80 ವರ್ಷ ಮೇಲ್ಪಟ್ಟ 12.15 ಲಕ್ಷ ಮತದಾರರಿದ್ದು, ಈ ಪೈಕಿ 16,976 ಶತಾಯುಷಿ ಮತದಾರರು ಇದ್ದಾರೆ. ಅಲ್ಲದೆ, 5.55 ಲಕ್ಷ ಅಂಗವಿಕಲ ಮತದಾರರಿದ್ದಾರೆ. ಈ ಪೈಕಿ ಅನೇಕರು ಈಗಾಗಲೇ ವೋಟ್ ಫ್ರಂ ಹೋಮ್ ಆಯ್ಕೆ ಮೂಲಕ ಮನೆಯಿಂದಲೇ ಮತದಾನ ಮಾಡಿದ್ದಾರೆ.

ಈ ಅಭ್ಯರ್ಥಿಗೆ ತನ್ನ ಕ್ಷೇತ್ರ ಪ್ರವೇಶಕ್ಕೇ ಇಲ್ಲ ಅನುಮತಿ!

ಧಾರವಾಡದಿಂದ ಸ್ಪರ್ಧಿಸಿರುವ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ನ್ಯಾಯಾಲಯದ ನಿಷೇಧದ ಹಿನ್ನೆಲೆಯಲ್ಲಿ ತಮ್ಮ ಕ್ಷೇತ್ರಕ್ಕೆ ಭೇಟಿ ನೀಡುವಂತಿಲ್ಲ. ಅವರ ಪರವಾಗಿ ಪತ್ನಿ ಶಿವಲೀಲಾ ನಾಮಪತ್ರ ಸಲ್ಲಿಸಿದ್ದಾರೆ. ಕುಲಕರ್ಣಿ ಅವರು ವಿಡಿಯೋ ಸಂದೇಶಗಳ ಮೂಲಕ ಮತದಾರರೊಂದಿಗೆ ಸಂಪರ್ಕದಲ್ಲಿದ್ದಾರೆ.

ಬಿಜೆಪಿ ಮುಖಂಡ ಮತ್ತು ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದ ಯೋಗೀಶ್ ಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಯ್ ಕುಲಕರ್ಣಿ 2020 ರ ನವೆಂಬರ್​​​ನಲ್ಲಿ ಬಂಧನಕ್ಕೊಳಗಾಗಿದ್ದರು. ನಂತರ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.

ಅಖಾಡದಲ್ಲಿರುವ ಅತಿಹಿರಿಯ ಅಭ್ಯರ್ಥಿ ಇವರೇ ನೋಡಿ

ಕಾಂಗ್ರೆಸ್‌ ಪಕ್ಷದ 92ರ ಹರೆಯದ ಶಾಮನೂರು ಶಿವಶಂಕರಪ್ಪ ಈ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅತ್ಯಂತ ಹಿರಿಯ ಅಭ್ಯರ್ಥಿಯಾಗಿದ್ದಾರೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಇವರು ಕೈಗಾರಿಕೋದ್ಯಮಿ-ರಾಜಕಾರಣಿಯಾಗಿದ್ದಾರೆ.

ಸ್ಪೀಕರ್ ಆಗಿ ದಾಖಲೆ ಮಾಡಿದವರಿವರು

ಗುಂಡ್ಲುಪೇಟೆಯಿಂದ ಏಳು ಬಾರಿ ಶಾಸಕಿಯಾಗಿರುವ ಕೆ.ಎಸ್.ನಾಗರತ್ನಮ್ಮ ವಿಧಾನಸಭೆ ಕಂಡ ಏಕೈಕ ಮಹಿಳಾ ಸ್ಪೀಕರ್. ನಾಗರತ್ನಮ್ಮ ಅವರು 1972 ಮತ್ತು 1978 ರ ಅವಧಿಯಲ್ಲಿ ಸ್ಪೀಕರ್ ಆಗಿದ್ದರು. ಶ್ರೀನಿವಾಸಪುರ ಕಾಂಗ್ರೆಸ್ ಶಾಸಕ ಕೆಆರ್ ರಮೇಶ್ ಕುಮಾರ್ ಅವರು 1994 ಮತ್ತು 1999 ರ ಅವಧಿಯಲ್ಲಿ ಒಮ್ಮೆ ಹಾಗೂ 2018 ಮತ್ತು 2019 ರ ಅವಧಿಯಲ್ಲಿ ಎರಡನೇ ಬಾರಿಗೆ ಸ್ಪೀಕರ್ ಆಗಿದ್ದರಯ. ಎರಡು ಬಾರಿ ಸ್ಪೀಕರ್ ಸ್ಥಾನವನ್ನು ಅಲಂಕರಿಸಿದ ಏಕೈಕ ನಾಯಕ ಇವರಾಗಿದ್ದಾರೆ.

ಹಲವು ಪಕ್ಷಗಳ ಶಾಸಕರನ್ನು ಆರಿಸಿದ ಕ್ಷೇತ್ರವಿದು

ಕೋಲಾರದ ಕೆಜಿಎಫ್ ಅತ್ಯಂತ ವೈವಿಧ್ಯಮಯ ವಿಧಾನಸಭೆ ಕ್ಷೇತ್ರಗಳಲ್ಲಿ ಒಂದಾಗಿದೆ. ಈ ಕ್ಷೇತ್ರದಿಂದ ವಿಭಿನ್ನ ರಾಜಕೀಯ ಸಿದ್ಧಾಂತಗಳನ್ನು ಹೊಂದಿದವರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಿಪಿಐ, ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ, ಸಿಪಿಐ(ಎಂ), ಎಐಎಡಿಎಂಕೆ, ಭಾರತೀಯ ರಿಪಬ್ಲಿಕನ್ ಪಾರ್ಟಿ, ಬಿಜೆಪಿ ಮತ್ತು ಕಾಂಗ್ರೆಸ್‌ನ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಗೆದ್ದಿದ್ದಾರೆ. ಆದಾಗ್ಯೂ, ಈ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಗಳು ಈವರೆಗೆ ಗೆಲುವು ಸಾಧಿಸಿಲ್ಲ.

ವಿಧಾನಸಭೆ ಚುನಾವಣೆ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:45 pm, Tue, 9 May 23